ನೂರಾರು ನಾಯಿಗಳ ತಲೆಬುರುಡೆ ಪತ್ತೆ : ಬೆಚ್ಚಿ ಬಿತ್ತು ಹಾಸನ ಜಿಲ್ಲೆ..!
ಹಾಸನ : ಹೊಳೆನರಸೀಪುರ ತಾಲ್ಲೂಕಿನ ಸೂರನಹಳ್ಳಿ ಸಮೀಪದ ಕೊಲ್ಲಿಹಳ್ಳದ ಬಳಿ ನೂರಾರು ಶ್ವಾನಗಳ ತಲೆ ಬುರುಡೆ ಪತ್ತೆಯಾಗಿದೆ. ಇದು ಸ್ಥಳೀಯ ಜನರಲ್ಲಿ ಆತಂಕ ಮತ್ತು ಅನುಮಾನಕ್ಕೆ ಮಾಡಿಕೊಟ್ಟಿದೆ.
ಕೊಲ್ಲಿಹಳ್ಳದ ನಿರ್ಜನ ಪ್ರದೇಶದಲ್ಲಿ ರುಂಡದ ಭಾಗ ಮಾತ್ರ ಪತ್ತೆಯಾಗಿದ್ದು, ಮಾಂಸಕ್ಕಾಗಿ ಕೊಂದು ಅವುಗಳ ಬುರುಡೆಗಳನ್ನು ತಂದು ಬಿಸಾಡಿರಬಹುದು ಎಂಬ ಶಂಕೆ ಬಲವಾಗಿ ವ್ಯಕ್ತವಾಗಿದೆ.
ಕೊಲ್ಲಿ ಹಳ್ಳ ಪ್ರದೇಶದಲ್ಲಿ ನಾಯಿಗಳ ರುಂಡದ ಭಾಗ ಮಾತ್ರ ಪತ್ತೆಯಾಗಿದ್ದು, ಮಾಂಸಕ್ಕಾಗಿ ನಾಯಿಗಳನ್ನು ಕೊಲ್ಲಲಾಗಿದೆ ಎಂಬ ಅನುಮಾನ ಶುರುವಾಗಿದೆ.
ಮಾಂಸಕ್ಕಾಗಿ ನಾಯಿಗಳನ್ನು ಕೊಲ್ಲವವರು ಬುರುಡೆಗಳನ್ನು ತಂದು ಎಸೆಯಲು ಈ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
‘ಸಂಬಂಧ ಪಟ್ಟ ಇಲಾಖೆಯವರು ತನಿಖೆ ನಡೆಸಿ ಶ್ವಾನ, ಸಂಹಾರ ರಹಸ್ಯ ಬಯಲು ಮಾಡಬೇಕು’ ಎಂದು ಪ್ರಾಣಿ ಪ್ರೀಯರು ಒತ್ತಾಯಿಸಿದ್ದಾರೆ. ‘ಸ್ಥಳಕ್ಕೆ ತಜ್ಞರು ಭೇಟಿ ನೀಡಿ ತಪಾಸಣೆ ನಡೆಸಿದ್ದು, ಬುರುಡೆ ಪತ್ತೆಯಾಗಿದೆ.
ಈ ಸಂಬಂಧ ತನಿಖೆ ನಡೆಸಲಾಗುವುದು’ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.