Connect with us

BANTWAL

ಉಪ್ಪಿನಂಗಡಿ: ಹಿಜಾಬ್‌ ಧರಿಸಿ ಬಂದ 6 ವಿದ್ಯಾರ್ಥಿನಿಯರು ಸಸ್ಪೆಂಡ್

Published

on

ಉಪ್ಪಿನಂಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸತತ ಮನವಿಗಳ ಹೊರತಾಗಿಯೂ ಧರಿಸಿಕೊಂಡು ತರಗತಿ ಪ್ರವೇಶಿಸಿ ಉಚ್ಚನ್ಯಾಯಾಲಯದ ತೀರ್ಪನ್ನು ಉಲ್ಲಂಘಿಸಿದ 6 ಮಂದಿ ವಿದ್ಯಾರ್ಥಿನಿಯರನ್ನು ಮು೦ದಿನ ಆದೇಶದವರೆಗೆ ಪ್ರಾಂಶುಪಾಲರು ಅಮಾನತುಗೊಳಿಸಿದ್ದಾರೆ.

ಯಾವುದೇ ಕಾರಣಕ್ಕೂ ತರಗತಿಗೆ ಹಿಜಾಬ್ ಧರಿಸಿಕೊಂಡು ಬರಬಾರದೆಂಬ ಸರ್ಕಾರದ ಆದೇಶ ಹಾಗೂ ಹೈಕೋರ್ಟ್‌ ತೀರ್ಪನ್ನು ಪಾಲಿಸದೆ ಪದೇ ಪದೇ ಆದೇಶ ಉಲ್ಲಂಘಿಸುತ್ತಿದ್ದರು. ಕಾಲೇಜಿನ ಕಲಿಕಾ ವಾತಾವರಣಕ್ಕೆ ವಿರುದ್ಧವಾಗಿ ವರ್ತಿಸಿದ್ದ 6 ಮಂದಿ ವಿದ್ಯಾರ್ಥಿನಿಯರನ್ನು ಕಾಲೇಜು ಉಪನ್ಯಾಸಕರ ಸಭೆಯ ಒಮ್ಮತದ ತೀರ್ಮಾನದಂತೆ ಅಮಾನತು ಮಾಡಲಾಗಿದೆ.

ಸಿಡಿಸಿ ಸಭೆ ಮಧ್ಯೆ ಯೇ ಪ್ರಾಂಶುಪಾಲರಿಗೆ ಬುಲಾವ್: ಅನಪೇಕ್ಷಿತ ವಿದ್ಯಮಾನಗಳ ಕಾಲೇಜಿನಲ್ಲಿ ನಡೆಯುತ್ತಿರುವ ಬಗ್ಗೆ ಚರ್ಚಿಸಲು ಹಾಗೂ ಅಗತ್ಯ ಕ್ರಮ ಕೈಗೊಳ್ಳುವ ಸಲುವಾಗಿ ಮಂಗಳವಾರ ಸಂಜೆ ಕಾಲೇಜು ಅಭಿವೃದ್ಧಿ ಸಭೆಯನ್ನು ಕರೆಯಲಾಗಿತ್ತು.

ಸಭೆ ಪ್ರಾರಂಭವಾಗುತ್ತಿದ್ದ೦ತೆಯೇ ದೂರವಾಣಿ ಕರೆಯೊಂದನ್ನು ಸ್ವೀಕರಿಸಿದ ಪ್ರಾಂಶುಪಾಲ ಶೇಖ‌ರ್ ಅವರು, ಮಂಗಳೂರಿಗೆ ತೆರಳಲು ಆದೇಶ ಬಂದಿದೆ.

ತಿಳಿಸಿ ಸಭೆಯನ್ನು ಮೊಟಕುಗೊಳಿಸಿದರು. ತಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಸಭೆಗೆ ಬಂದಿದ್ದ ಸಿಡಿಸಿ ಸದಸ್ಯರು ಪ್ರಾಂಶುಪಾಲರ ನಡೆಯನ್ನು ಆಕ್ಷೇಪಿಸಿ ಪ್ರಶ್ನಿಸಿದಾಗ, ಮಂಗಳೂರು ವಿದ್ಯಾನಿಲಯದ ಜಂಟಿ ನಿರ್ದೆಶಕರು ಸಭೆಯನ್ನು ನಿಲ್ಲಿಸಿ ಬೇರೊಬ್ಬರಿಗೆ ಚಾರ್ಜ್ ಕೊಟ್ಟು ತಕ್ಷಣ ಬರಬೇಕೆಂದು ಮೌಖಿಕ ಆದೇಶ ಹೊರಡಿಸಿದ್ದಾರೆ೦ದು ತಿಳಿಸಿದರು.

ವಿದ್ಯಾರ್ಥಿಗಳ ಗುಂಪು ಘರ್ಷಣೆ: ಬುಧವಾರದಂದು ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಂದು ಕೋಮಿನ ವಿದ್ಯಾರ್ಥಿನಿಯರನ್ನು ಇನ್ನೊಂದು ಕೋಮಿನ ವಿದ್ಯಾರ್ಥಿಗಳು ಚುಡಾಯಿಸಿದಾಗ ವಿದ್ಯಾರ್ಥಿಗಳ ನಡುವೆ ಹೊಯ್ -ಕೈ ನಡೆಯಿತು.

ಪರಿಸ್ಥಿತಿ ಕೈ ಮೀರುವ ಲಕ್ಷಣ ಕಂಡು ಬಂದಾಗ ಕಾಲೇಜು ಪ್ರಾಂಶುಪಾಲರು ಪೊಲೀಸರಿಗೆ ತಿಳಿಸಿದ್ದು, ತಕ್ಷಣವೇ ಕಾಲೇಜಿಗೆ ದೌಡಾಯಿಸಿದ ಪೊಲೀಸ್ ಪಡೆ ಘರ್ಷಣೆ ನಿರತ ವಿದ್ಯಾರ್ಥಿಗಳನ್ನು ಚದುರಿಸಿ ಪರಿಸ್ಥಿತಿಯನ್ನು ವಿಶ್ವ ನಿಯಂತ್ರಿಸಿದರು.

BANTWAL

ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟರಿಗೆ ಕಾರು ಢಿಕ್ಕಿ; ಸವಾರ ದುರ್ಮರಣ

Published

on

ಬಂಟ್ವಾಳ : ಕಾರೊಂದು ಢಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರ ಗಂಭಿರ ಗಾಯಗೊಂಡು ಮೃತಪಟ್ಟ ಘಟನೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಬಂಟ್ವಾಳ ತಾಲೂಕಿನ ಪೆರಮುಗೇರು ಸತ್ತಿಕಲ್ಲು ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.

ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಕುದ್ಮಾನ್ ನಿವಾಸಿ ಅಬ್ಬಾಸ್ ಎಂಬವರ ಪುತ್ರ ಉಸ್ಮಾನ್ (24) ಮೃತರು ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಪೈಂಟರ್ ಆಗಿದ್ದ ಉಸ್ಮಾನ್ ಅವರು ತನ್ನ ಸ್ಕೂಟರ್ ನಲ್ಲಿ ಮನೆಗೆ ತೆರಳುತ್ತಿದ್ದು ಸತ್ತಿಕಲ್ಲಿನಲ್ಲಿ ರಸ್ತೆ ಬದಿಯಲ್ಲಿ ಸ್ಕೂಟರ್ ನಿಲ್ಲಿಸಿ ಮೊಬೈಲ್ ನಲ್ಲಿ ಮಾತನಾಡುತ್ತಿರುವ ವೇಳೆ ನೋಂದಣಿಯಾಗದ ಕಾರೊಂದು ಏಕಾಏಕಿ ಅವರ ಸ್ಕೂಟರ್ ಗೆ ಢಿಕ್ಕಿಯಾಗಿತ್ತು.

ಇದನ್ನೂ ಓದಿ: ಬೈಕ್‌ಗಳು ಪರಸ್ಪರ ಮು*ಖಾಮು*ಖಿ ; ಬಾಲಕಿ ಸಾ*ವು

ಈ ಸಂದರ್ಭ ಸ್ಕೂಟರ್ ನಲ್ಲಿ ಕುಳಿತಿದ್ದ ಉಸ್ಮಾನ್ ಅವರು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಘಟನೆಯಿಂದ ಕಾರು ಮತ್ತು ಬೈಕ್ ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದಿದೆ. ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

Continue Reading

BANTWAL

ಬೈಕ್‌ಗಳು ಪರಸ್ಪರ ಮು*ಖಾಮು*ಖಿ ; ಬಾಲಕಿ ಸಾ*ವು

Published

on

ಬಂಟ್ವಾಳ: ಬೈಕ್ ಗಳ ನಡುವೆ ಭೀ*ಕರ ಅ*ಪಘಾ*ತ ಸಂಭವಿಸಿ ಬೈಕ್ ನಲ್ಲಿ ಸಹ ಪ್ರಯಾಣಿಕೆಯಾಗಿದ್ದ ಬಾಲಕಿ ಮೃ*ತಪಟ್ಟ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರಾಮಲ್ ಕಟ್ಟೆ ಎಂಬಲ್ಲಿ ನಿನ್ನೆ (ಜ.14) ರಾತ್ರಿ ನಡೆದಿದೆ.

ಕುಕ್ಕಿಪಾಡಿ ಗ್ರಾಮದ ಕೊಡಂಬೆಟ್ಟು ನಿವಾಸಿ ಇಸ್ಮತ್ ಆಯಿಶಾ (13) ಮೃ*ತ ಬಾಲಕಿ ಎಂದು ಗುರುತಿಸಲಾಗಿದೆ.

ಬಾಲಕಿಯ ತಂದೆ ಬೈಕ್ ಚಾಲಕ ಅಬ್ದುಲ್ ರಹಮಾನ್ ಕೂಡ ಗಾ*ಯಗೊಂಡಿದ್ದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

ಇದನ್ನೂ ಓದಿ : ಮಂಗಳೂರು: ಕೈದಿಗಳಿಂದ ಜೈಲು ಅಧಿಕಾರಿ, ಸಿಬಂದಿಯ ಕರ್ತವ್ಯಕ್ಕೆ ಅಡ್ಡಿ

 

ರಾಮಲ್ ಕಟ್ಟೆಯಿಂದ ಹೆದ್ದಾರಿಯಲ್ಲಿ ರಾಂಗ್ ಸೈಡ್ ನಲ್ಲಿ ಬಂದ ನೆತ್ತರಕೆರೆ ನಿವಾಸಿ ರಂಜಿತ್ ಎಂಬಾತ ಬಿ.ಸಿ ರೋಡಿನ ಕಡೆಯಿಂದ ತುಂಬೆ ಕಡೆಗೆ ಸರಿಯಾದ ದಿಕ್ಕಿನಲ್ಲಿ ಬರುತ್ತಿದ್ದ ಬೈಕ್ ಗೆ ಡಿ*ಕ್ಕಿ ಹೊಡೆದಿದ್ದಾನೆ. ರಂಜಿತ್ ಗೆ ಕೂಡ ಗಾ*ಯವಾಗಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.

ಅ*ಪಘಾ*ತ ನಡೆದ ರಭಸಕ್ಕೆ ಬೈಕ್ ಸಂಪೂರ್ಣ ಜ*ಖಂಗೊಂಡಿದೆ. ಘಟನಾ ಸ್ಥಳಕ್ಕೆ ಪಾಣೆಮಂಗಳೂರು ಟ್ರಾಫಿಕ್ ಎಸ್.ಐ ಸುತೇಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading

BANTWAL

ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಸಾಧಾರಣ ಮಳೆ

Published

on

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ನಿನ್ನೆ ಸಂಜೆ ಮತ್ತು ರಾತ್ರಿ ಮಳೆಯಾಗಿದ್ದು, ಕೆಲವೆಡೆ ಮಳೆಗಾಲದಂತೆ ಜೋರಾಗಿ ಮಳೆಯಾಗಿದೆ.

ಬೆಳ್ತಂಗಡಿ,ಸುಳ್ಯ ತಾಲೂಕಿನಲ್ಲಿ ಮಳೆಯಿಂದಾಗಿ ರೈತರು ಒಣ ಹಾಕಿದ್ದ ಅಡಿಕೆಗಳು ಒದ್ದೆಯಾಗಿ ನಷ್ಟ ಉಂಟಾಗಿದೆ. ಬಂಟ್ವಾಳದಲ್ಲಿ ಸಾಧಾರಣ ಮಳೆಯಾಗಿದ್ದು, ಮೆಲ್ಕಾರಿನಲ್ಲಿ ನಡೆಯುತ್ತಿದ್ದ ಕಟೀಲು ಯಕ್ಷಗಾನ ಬಯಲಾಟ ವೀಕ್ಷಣೆ ಮಾಡುತ್ತಿದ್ದವರು ಎದ್ದು ಮಳೆಯಿಂದ ರಕ್ಷಣೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಮಂಗಳೂರಿಗೆ ಆಗಮಿಸಲಿದ್ದಾರೆ ಡಾಲಿ ಚಾಯ್ ವಾಲ

ಮಂಗಳೂರು ಸುತ್ತಮುತ್ತ ಕೂಡಾ ಮಳೆಯಾಗಿದ್ದು ,ಉಳ್ಳಾಲದಲ್ಲಿ ಅರ್ಧಗಂಟೆಗೂ ಅಧಿಕ ಕಾಲ ಮಳೆ ಸುರಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮಧ್ಯ ಪಾಕಿಸ್ತಾನ ಮತ್ತು ಪಶ್ಚಿಮ ರಾಜಸ್ಥಾನದಲ್ಲಿ ಉಂಟಾದ ಹವಾಮಾನ ವೈಪರೀತ್ಯದಿಂದ ಈಶಾನ್ಯ ಅರೇಬಿಯನ್ ಸಮುದ್ರದಿಂದ ಪಶ್ಚಿಮ ಮಾರುತ ಬೀಸುತ್ತಿರುವುದು ಈ ಮಳೆಗೆ ಕಾರಣ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Continue Reading

LATEST NEWS

Trending

Exit mobile version