Connect with us

kerala

ದಿ*ಢೀರ್ ಹ*ಚ್ಚಿಕೊಂಡ ಬೆಂ*ಕಿ; ಆರು ಅಂಗಡಿಗಳು ಅ*ಗ್ನಿಗಾ*ಹುತಿ !!

Published

on

ಕಾಸರಗೋಡು: ಆರು ಅಂಗಡಿಗಳಿಗೆ ದಿ*ಢೀರನೆ ಬೆಂ*ಕಿ ಹೊ*ತ್ತಿಕೊಂಡು ಉ*ರಿದ ಘಟನೆ ಶನಿವಾರ (ಡಿ.21) ತಡರಾತ್ರಿ ಪೆರ್ಲ ಬಳಿ ನಡೆದಿದೆ.

ಪೆರ್ಲ ಪೇಟೆಯಲ್ಲಿ ಇರುವಂತಹ ಪೂಜಾ ಫ್ಯಾನ್ಸಿ , ಗೋಪಿನಾಥ್ ಪೈ ಕ್ಲೋತ್ ಸೆಂಟರ್, ಪತ್ರಿಕಾ ವಿತರಣಾ ಮಳಿಗೆ, ಪ್ರವೀಣ್ ಆಟೋ ಮೊಬೈಲ್, ಸಾದತ್ ಸ್ಟೋರ್, ಗೌತಮ್ ಕೋಲ್ಡ್ ಹೌಸ್ ಮೊದಲಾದವು ಸಂಪೂರ್ಣ ಅ*ಗ್ನಿಗಾ*ಹುತಿಯಾಗಿರುವ ಅಂಗಡಿಗಳು ಎಂದು ಗುರುತಿಸಲಾಗಿದೆ.

 

ಇದನ್ನೂ ಒದಿ : ಮೊಹಾಲಿ ಕಟ್ಟಡ ಕು*ಸಿತ ಪ್ರಕರಣ; ಎರಡು ಸಾ*ವು, ಹಲವರು ಕಟ್ಟಡದಡಿ ಇರುವ ಶಂಕೆ !!

 

ಮೂರು ಗಂಟೆಗೂ ಅಧಿಕ ಸಮಯದ ಬಳಿಕ ಬೆಂ*ಕಿಯನ್ನು ನಂದಿಸಲಾಯಿತು. ಶಾ*ರ್ಟ್ ಸ*ರ್ಕ್ಯೂಟ್ ಬೆಂ*ಕಿ ಅ*ನಾಹುತಕ್ಕೆ ಕಾರಣ ಎಂದು ಶಂಕಿಸಲಾಗಿದೆ. ರಾತ್ರಿ 12ಗಂಟೆ ಸುಮಾರಿಗೆ ಘಟನೆ ನಡೆದಿದ್ದು , ಉಪ್ಪಳ ಕಾಸರಗೋಡಿನಿಂದ ಆಗಮಿಸಿದ ಐದು ಅ*ಗ್ನಿಶಾಮಕ ದಳದ ಸಿಬ್ಬಂದಿ‌ ಹಾಗೂ ಸ್ಥಳೀಯರ ಸಹಕಾರದಿಂದ ಬೆಂ*ಕಿಯನ್ನು ನಂದಿಸಿ ಹೆಚ್ಚಿನ ಅ*ನಾಹುತ ತಪ್ಪಿಸಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

kerala

ರಜೆ ನೀಡಲಿಲ್ಲವೆಂದು ಆ*ತ್ಮಹ*ತ್ಯೆಗೆ ಶರಣಾದ ಪೊಲೀಸ್ ಪೇದೆ !!

Published

on

ಮಂಗಳೂರು/ಮಲಪ್ಪುರಂ: ಕೇರಳ ಪೊಲೀಸರ ವಿಶೇಷ ಕಾರ್ಯಾಚರಣೆ ಗ್ರೂಪ್‌ಗೆ ಸೇರಿದ ಕಮಾಂಡೋ ಗುಂಡು ಹಾರಿಸಿಕೊಂಡು ಆ*ತ್ಮಹ*ತ್ಯೆ ಮಾಡಿಕೊಂಡ ಘಟನೆ ಮಲಪ್ಪುರಂ ಜಿಲ್ಲೆಯ ಅರೀಕೋಡ್‌ನಲ್ಲಿರುವ ಪೊಲೀಸ್ ಕ್ಯಾಂಪ್‌ನಲ್ಲಿ ಭಾನುವಾರ (ಡಿ.15) ರಾತ್ರಿ ನಡೆದಿದೆ.

ನಕ್ಸಲ್ ಚಟುವಟಿಕೆಯನ್ನು ಭೇದಿಸುವ ಕ್ಯೂಬಿಂಗ್ ಕಾರ್ಯಚರಣೆಯಲ್ಲಿ ಸಕ್ರಿಯರಾಗಿದ್ದ ವಿನೀತ್ (35) ಮೃ*ತ ಪೊಲೀಸ್ ಪೇದೆ ಎಂದು ಗುರುತಿಸಲಾಗಿದೆ.

ಭಾನುವಾರ ರಾತ್ರಿ ವಿನೀತ್ ತನ್ನ ಗರ್ಭಿಣಿ ಪತ್ನಿಯ ಜೊತೆಗಿರಲು ಉನ್ನತ ಅಧಿಕಾರಿಗಳ ಬಳಿ ರಜೆಗೆ ಮನವಿ ಮಾಡಿಕೊಂಡಿದ್ದಾರೆ. ಆದರೆ ರಜೆ ನೀಡಲು ನಿರಾಕರಿಸಿದ ಹಿನ್ನಲೆ ಕೆಲಸದ ಒತ್ತಡವನ್ನು ತಾಳಲಾರದೆ ತನ್ನ ಸರ್ವಿಸ್ ರೈ*ಫಲ್‌ನಿಂದ ಗುಂ*ಡು ಹಾ*ರಿಸಿಕೊಂಡು ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ವಿಪರೀತ ಕೆಲಸದ ಒತ್ತಡದಿಂದ ಆ*ತ್ಮಹ*ತ್ಯೆ ಮಾಡಿಕೊಂಡ ಕೇರಳ ಪೊಲೀಸ್ ಸಿಬ್ಬಂದಿಗಳ ಪಟ್ಟಿಗೆ ವಿನೀತ್ ಸಾ*ವು ಸೇರ್ಪಡೆಯಾಗಿದೆ. ಅಂದಾಜಿನ ಪ್ರಕಾರ, ಸುಮಾರು 90 ಪೊಲೀಸರು ಇದೇ ರೀತಿ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ.

ವಿನೀತ್ ನಕ್ಸಲರನ್ನು ಹಿಂಬಾಲಿಸುವ ಕಾರ್ಯಾಚರಣೆಯನ್ನು ನಿರ್ವಹಿಸುವ ವಿಶೇಷ ಕಾರ್ಯಾಚರಣೆ ಗುಂಪಿನ ಕಮಾಂಡೋ ಆಗಿದ್ದರು. ವಯನಾಡ್ ಮೂಲದವರಾದ ಅವರು ಕಳೆದ 45 ದಿನಗಳಿಂದ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದು, ರಜೆಗಾಗಿ ಮಾಡಿದ್ದ ಮನವಿಯನ್ನು ನಿರಾಕರಿಸಿದ ಹಿನ್ನಲೆ ದುರ್ಘಟನೆ ಸಂಭವಿಸಿದೆ. ವಿನೀತ್ ಒತ್ತಡವನ್ನು ಸಹಿಸಲಾಗದೆ ದುಡಿಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಪ್ರಾ*ಣಪಕ್ಷಿ ಹಾರಿಹೋಗಿತ್ತು.

Continue Reading

kerala

ಪ್ರೀತಿಸಿ, ಓಡಿಹೋಗಿ ಮದುವೆ; ಪತಿ ಮನೆಯಲ್ಲಿಯೇ ನೇ*ಣಿಗೆ ಶರಣಾದ ನವವಧು

Published

on

ಮಂಗಳೂರು/ಕೇರಳ: ಮನೆಯವರ ಮಾತು ವಿರೋಧಿಸಿ ಕೇರಳ ಮೂಲದ ಯುವಕನ ಜೊತೆಗೆ ಮದುವೆಯಾಗಿದ್ದ ಮಹಿಳೆಯೊಬ್ಬಳು ಆ*ತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದ ತಿರುವನಂತಪುರಂ ಜಿಲ್ಲೆಯ ಪಾಲೋಡ್‌ನ ಇಳವಟ್ಟಂನಲ್ಲಿ ನಡೆದಿದೆ.

ಇಂದುಜಾ (25) ಆ*ತ್ಮಹತ್ಯೆಗೆ ಶರಣಾದ ನವವಿವಾಹಿತೆ.

‘ಮಗಳ ಸಾ*ವಿಗೆ ಆಕೆಯ ಗಂಡ ಹಾಗೂ ಕುಟುಂಬವೇ ಕಾರಣ’ ಎಂದು ಮೃ*ತಳ ಪೋಷಕರು ಆರೋಪಿಸಿದ್ದಾರೆ. ಪಾಲೋಡ್ ಇಟಿಂಜಾರ್ ಕೊಳಚಲ್ ಕೊನ್ನಮೂಡ್ ಮೂಲದ ಇಂದುಜಾಗಂಡನ ಮನೆಯಲ್ಲಿಯೇ ಶ*ವವಾಗಿ ಪತ್ತೆಯಾಗಿದ್ದಾರೆ. ಇಂದುಜಾ ಅಭಿಜಿತ್‌ ಎಂಬ ಯುವಕನನ್ನು ಪ್ರೀತಿ ಮಾಡುತ್ತಿದ್ದು, ಇವರಿಬ್ಬರ ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಪೋಷಕರು ಎಷ್ಟೇ ಬುದ್ಧಿವಾದ ಹೇಳಿದರೂ ಅವರ ಮಾತು ಕೇಳದೆ ಮನೆ ಬಿಟ್ಟು ಓಡಿ ಹೋಗಿ ದೇವಸ್ಥಾನದಲ್ಲಿ ಮದುವೆಯಾಗಿದ್ದಳು. ಬಳಿಕ ಇಂದುಜಾ ಪೋಷಕರು ಸುಮ್ಮನಾಗಿದ್ದರು. ‘ಮದುವೆಯಾಗಿ ಅಭಿಜಿತ್‌ ಮನೆಗೆ ಹೋದ ಇಂದುಜಾಗೆ ಪತಿಯ ಮನೆಯಲ್ಲಿ ನಿತ್ಯವೂ ನರಕಯಾತನೆ ಶುರುವಾಗಿತ್ತು. ಮಾನಸಿಕ ಕಿರುಕುಳ, ಬೆದರಿಕೆಯನ್ನು ಗಂಡನ ಮನೆಯವರು ಹಾಕುತ್ತಿದ್ದರು’ ಎಂಬ ಆರೋಪ ಕೇಳಿ ಬಂದಿದೆ. ಇಂದುಜಾ ಆ*ತ್ಮಹತ್ಯೆ ಮಾಡಿಕೊಳ್ಳುವಂತಹ ಹೇಡಿಯಲ್ಲ. ಮನೆಯ ಎರಡನೇ ಮಹಡಿಯಲ್ಲಿರುವ ಅಭಿಜಿತ್‌ ಮಲಗುವ ಕೋಣೆಯ ಕಿಟಕಿಯಿಂದ ನೇ*ಣು ಬಿಗಿದ ಸ್ಥಿತಿಯಲ್ಲಿ ಶ*ವ ಪತ್ತೆಯಾಗಿದ್ದು, ಅಭಿಜಿತನ್ನು ಬಂಧಿಸಲು ಒತ್ತಾಯಿಸಿದ್ದಾರೆ.

ಎರಡು ವರ್ಷ ಪ್ರೀತಿ ಮಾಡಿ ಮದುವೆಯಾಗಿದ್ದ ಈಕೆಗೆ ಆಕೆಯ ಪ್ರೀತಿಸಿದ ಗಂಡನೇ ಆಕೆಯ ಜೊತೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಇಂದುಜಾ ಖಾಸಗಿ ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಿದ್ದು, ಅಭಿಜಿತ್‌ ಖಾಸಗಿ ವಾಹನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಘಟನೆ ನಡೆದ ಸಮಯದಲ್ಲಿ ಅಭಿಜಿತ್‌ ಅಜ್ಜಿ ಮಾತ್ರ ಮನೆಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇಂದುಜಾ ತಾಯಿ, ಹಾಗೂ ಸಹೋದರನ ಜೊತೆ ಫೋನನಲ್ಲಿ ಮಾತನಾಡುತ್ತಿದ್ದಳು ಎಂದು ಆಕೆಯ ಗಂಡನ ಮನೆಯವರು ಹೇಳಿದ್ದಾರೆ. ಈಕೆ ತನ್ನ ಗಂಡನ ಮನೆಯವರ ಕಿ*ರುಕುಳ, ಬೆ*ದರಿಕೆ ಕುರಿತು ತಾಯಿಯ ಬಳಿ ಹೇಳುತ್ತಿದ್ದಳು. ಮಗಳ ಸಾ*ವಿನಲ್ಲಿ ಅನೇಕ ಅನುಮಾನಗಳಿದ್ದು, ಸೂಕ್ತ ತನಿಖೆಯನ್ನು ಮಾಡಬೇಕೆಂದು ಮೃ*ತಳ ಪೋಷಕರು ಒತ್ತಾಯ ಮಾಡಿದ್ದಾರೆ.

ಅಭಿಜಿತ್‌ ಮಧ್ಯಾಹ್ನ ಮನೆಗೆ ಊಟ ಮಾಡಲು ಬಂದಾಗ ಇಂದುಜಾ ಕಿಟಕಿಯಲ್ಲಿ ನೇ*ಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾಳೆ. ಕೂಡಲೇ ಆಕೆಯನ್ನು ನೆಡುಮಂಗಾಡ್‌ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆಯನ್ನು ಉಳಿಸಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Continue Reading

kerala

ಕಾಸರಗೋಡು: ಅನಿವಾಸಿ ಉದ್ಯಮಿಯ ಕೊ*ಲೆ ಪ್ರಕರಣ ; ಆರೋಪಿಗಳ ಬಂಧನ

Published

on

ಕಾಸರಗೋಡು: ಒಂದೂವರೆ ವರ್ಷಗಳ ಹಿಂದೆ ಕಾಸಗೋಡು ಜಿಲ್ಲೆಯ ಬೇಕಲ ಠಾಣಾ ವ್ಯಾಪ್ತಿಯ ಅನಿವಾಸಿ ಉದ್ಯಮಿ ಪೂಚಕ್ಕಾಡ್ ನ ಎಂ.ಸಿ ಅಬ್ದುಲ್ ಗಫೂರ್ ಹಾಜಿ (55) ಅವರು ನಿಗೂಢವಾಗಿ ಸಾ*ವನ್ನಪ್ಪಿದ ಪ್ರಕರಣವು, ಕೊ*ಲೆ ಪ್ರಕರಣ ಎಂಬುದಾಗಿ ಸಾಬೀತಾಗಿದ್ದು, ಈ ಬಗ್ಗೆ ಮೂವರು ಮಹಿಳೆಯರು ಸೇರಿದಂತೆ ನಾಲ್ವರನ್ನು ವಿಶೇಷ ತನಿಖಾ ತಂಡ ಬಂಧಿಸಿದೆ. ಮೇಲ್ಪರಂಬ ಕುಳಿಕುನ್ನುವಿನ ಶಮೀಮಾ (38), ಆಕೆಯ ಪತಿ ಉಬೈದ್ (40), ಪೂಚಕ್ಕಾಡ್ ನ ಅನ್ಸಿಫಾ (34) ಮತ್ತು ಮಧೂರಿನ ಆಯಿಷಾ (40) ಬಂಧಿತ ಆರೋಪಿಗಳು.

ಚಿನ್ನಾಭರಣಗಳನ್ನು ದ್ವಿಗುಣಗೊಳಿಸುವುದಾಗಿ ನಂಬಿಸಿ ವಾಮಾಚಾರದ ಹೆಸರಲ್ಲಿ ಸುಮಾರು 596 ಪವನ್ ಚಿನ್ನಾಭರಣಗಳನ್ನು ಲಪಾಟಿಯಿಸಿದ ಪ್ರಕರಣ ಇದಾಗಿದೆ. ಚಿನ್ನಾಭರಣ ಲಪಟಾಯಿಸಿದ ವಿಷಯ ಗೊಯತ್ತಾಗುತ್ತಿದ್ದಂತೆ ಅವುಗಳನ್ನು ಮರಳಿಸುವಂತೆ ಗಫೂರ್ ಹಾಜಿ ಹೇಳಿದ್ದು, ಈ ಕಾರಣಕ್ಕಾಗಿ ಕೊ*ಲೆ ನಡೆಸಿರುವುದಾಗಿ ತನಿಖಾ ತಂಡ ತಿಳಿಸಿದೆ. 2023 ರ ಏಪ್ರಿಲ್ 14 ರಂದು ಕೊ*ಲೆ ನಡೆದಿತ್ತು. ಕೃ*ತ್ಯ ನಡೆದ ದಿನ ಗಫೂರ್ ಹಾಜಿ ಮಾತ್ರ ಮನೆಯಲ್ಲಿದ್ದರು. ಪತ್ನಿ ಮತ್ತು ಮಕ್ಕಳು ಸಂಬಂಧಿಕರ ಮನೆಗೆ ತೆರಳಿದ್ದರು. ಮರಳಿ ಬಂದಾಗ ಗಫೂರ್ ಮನೆಯ ಮೂಲೆಯಲ್ಲಿ ಮೃ*ತಪಟ್ಟ ಸ್ಥಿತಿಯಲ್ಲಿ *ಪತ್ತೆಯಾಗಿದ್ದರು. ಅಸಹಜ ಸಾ*ವು ಎಂದು ಪತ್ನಿ, ಮಕ್ಕಳು, ಸಂಬಂಧಿಕರು ನಂಬಿದ್ದರು. ಇದರಿಂದ ಮೃ*ತದೇಹವನ್ನು ದಫನ ಮಾಡಲಾಗಿತ್ತು. ಕೆಲ ದಿನಗಳ ಬಳಿಕ ಗಮನಿಸಿದಾಗ ಮನೆಯಿಂದ 596 ಪವನ್ ಚಿನ್ನಾಭರಣ ನಾ*ಪತ್ತೆಯಾಗಿರುವುದು ಮನೆಯವರ ಗಮನಕ್ಕೆ ಬಂದಿದೆ. ಈ ಬಗ್ಗೆ ಅಬ್ದುಲ್ ಗಫೂರ್ ಅವರ ಪುತ್ರ ಅಹ್ಮದ್ ಮುಸಮ್ಮಿಲ್ ಬೇಕಲ ಠಾಣಾ ಪೊಲೀಸರಿಗೆ ಹಾಗೂ ಮುಖ್ಯಮಂತ್ರಿಗೆ ದೂರು ನೀಡಿದ್ದರು .ಗಫೂರ್ ಹಾಜಿ ಅವರ ಕೊ*ಲೆಯ ಬಳಿಕ ನಾ*ಪತ್ತೆಯಾಗಿರುವ 596 ಪವನ್ ಆಭರಣಗಳ ವಶಕ್ಕೆ ತನಿಖಾ ತಂಡ ಪ್ರಕ್ರಿಯೆ ಆರಂಭಿಸಿದೆ. ಕೆಲವು ಚಿನ್ನಾಭರಣವನ್ನು ಮೂವರು ಆಭರಣ ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ತನಿಖೆ ಚುರುಕುಗೊಳಿಸಿದೆ.

ದೂರಿನ ಹಿನ್ನಲೆಯಲ್ಲಿ ಬೇಕಲ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. 2023 ಎಪ್ರಿಲ್ 27ರಂದು ಗಫೂರ್ ಹಾಜಿ ಮೃ*ತದೇಹವನ್ನು ಸ*ಮಾಧಿಯಿಂದ ಹೊರತೆಗೆದು ಮ*ರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಮ*ರಣೋತ್ತರ ಪರೀಕ್ಷೆಯಲ್ಲಿ ತಲೆಗೆ ಗಾ*ಯವಾಗಿರುವುದು ಕಂಡು ಬಂದಿತ್ತು. ಇದರಿಂದ ಕೊ*ಲೆ ಎಂಬುದು ಸ್ಪಷ್ಟಗೊಂಡಿತ್ತು. ತನಿಖಾ ತಂಡವು ಮನೆಯವರು, ಕುಟುಂಬಸ್ಥರು, ನಾಗರಿಕರು ಹಾಗೂ ಕ್ರಿಯಾ ಸಮಿತಿ ಸೇರಿದಂತೆ 40ಕ್ಕೂ ಅಧಿಕ ಮಂದಿಯನ್ನು ವಿಚಾರಣೆಗೊಳಪಡಿಸಿತ್ತು. ತನಿಖೆ ವೇಳೆ ಶಮೀಮಾಳ ಸಹಚರರ ಬ್ಯಾಂಕ್ ಖಾತೆಗೆ ಭಾರೀ ಮೊತ್ತದ ಹಣ ಜಮೆ ಆಗಿರುವುದು ಪೊಲೀಸ್ ತನಿಖೆಯಿಂದ ಪತ್ತೆಯಾಗಿದೆ. ಮೃತ ಗಫೂರ್ ಹಾಜಿ ಮತ್ತು ಶಮಿಮಾಳ ನಡುವೆ ನಡೆದ ವಾಟ್ಸಾಪ್ ಸಂದೇಶಗಳು ಪೊಲೀಸರಿಗೆ ಲಭಿಸಿವೆ. ಶಮೀಮಾ ಗಫೂರ್‌ ಹಾಜಿ ಅವರಿಂದ ಈ ಹಿಂದೆ 10 ಲಕ್ಷ ರೂ. ನಗದು ಮತ್ತು ಚಿನ್ನಾಭರಣಗಳನ್ನು ಪಡೆದಿದ್ದರು ಎಂದು ತನಿಖೆಯಿಂದ ತಿಳಿದುಬಂದಿದ್ದು, ಹಲವು ಪುರಾವೆಗಳು ಪೊಲೀಸರಿಗೆ ಲಭಿಸಿವೆ.

Continue Reading

LATEST NEWS

Trending

Exit mobile version