DAKSHINA KANNADA
ಮುಳುಗುತ್ತಾ ಮಂಗಳೂರು – ಉಡುಪಿ; ಅಧ್ಯಯನ ಏನು ಹೇಳುತ್ತೆ!?
ಮಂಗಳೂರು : ಮಳೆಗಾಲ ಅಂದ್ರೆ ಎಲ್ಲೆಡೆ ಹಸಿರ ಉಸಿರು. ಬಿರು ಬೇಸಗೆಯಿಂದ ಬೇಸತ್ತ ಜನರಿಗೆ ಮಳೆರಾಯ ತಂಪೆರೆವ ಸಮಯ. ಅದರಲ್ಲೂ ಕರಾವಳಿ ಅಂದ್ರೆ ಉಡುಪಿ – ಮಂಗಳೂರಿನಲ್ಲಂತೂ ಬಿಸಿಲ ತಾಪ ಹೇಳತೀರದು. ವರ್ಷದಿಂದ ವರ್ಷಕ್ಕೆ ತಾಪಮಾನ ಏರಿಕೆಯಾಗುತ್ತಿದೆ. ಬರದ ಬರೆಯೂ ಈ ಬಾರಿ ತೀವ್ರವಾಗಿತ್ತು. ಮಳೆ ಯಾವಾಗ ಬರುತ್ತಪ್ಪಾ ಅಂತ ಕಾದವರ ಮುಂದೆ ಅಂತೂ ವರುಣ ಪ್ರತ್ಯಕ್ಷವಾಗಿದ್ದ. ಈ ಬಾರಿ ಮೆಲ್ಲನೆ ಬಂದು ನಿಲ್ಲದೇ, ಸ್ವಲ್ಪ ಹೆಚ್ಚೇ ಅಬ್ಬರಿಸಿದ್ದಾನೆ.
ಕರ್ನಾಟಕದ ಹಲವು ಭಾಗಗಳು ಮಳೆಗೆ ನಲುಗಿವೆ. ಕರಾವಳಿಯೂ ಅಬ್ಬರಿಸಿ ಬೊಬ್ಬಿರಿಗೆ ಮಳೆಗೆ ಅಸ್ತವ್ಯಸ್ತಗೊಂಡಿತ್ತು. ಹಲವರು ಮನೆ – ಮಠ ಕಳೆದುಕೊಂಡರು. ಪ್ರಾ*ಣ ಬಿಟ್ಟರು. ಇದೀಗ ಶಾಕಿಂಗ್ ವಿಚಾರವೊಂದನ್ನು ಹೊಸ ಅಧ್ಯಯನವೊಂದು ನೀಡಿದೆ. ಮಳೆಗಾಲದಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡು, ಕಡಲ ತಡಿಯ ಮನೆಗಳನ್ನು ಕಬಳಿಸುತ್ತಾ ಸಾಗೋದು ಇತ್ತೀಚೆಗಿನ ವರ್ಷಗಳಲ್ಲಿ ನಡೆಯುತ್ತಿದೆ. ಆದರೆ, ಸಮುದ್ರ ಪ್ರತಿ ಮಳೆಗಾಲದಲ್ಲೂ ತನ್ನ ವ್ಯಾಪ್ತಿ ವಿಸ್ತರಿಸುತ್ತಿರೋದು ಗೊತ್ತಾ!? ಹೌದು, ಸಮುದ್ರದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಪಶ್ಚಿಮ ಕರಾವಳಿ ಕಡಲ ತೀರದ ನಗರಗಳು ಅಪಾಯದಲ್ಲಿವೆ ಎಂದು ಈ ಹಿಂದೆಯೇ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದರು. ಇದೀಗ ಬೆಂಗಳೂರಿನ ವಿಜ್ಞಾನಿಗಳ ತಂಡ ಮತ್ತೊಂದು ಅಧ್ಯಯನ ಮಾಡಿದೆ.
2040 ರ ವೇಳೆಗೆ ಕರಾವಳಿ ಜಿಲ್ಲೆಗಳ ಶೇಕಡಾ 5 ರಷ್ಟು ಭೂಭಾಗವನ್ನು ಸಮುದ್ರ ತನ್ನ ತೆಕ್ಕೆಗೆ ಎಳೆದುಕೊಳ್ಳಲಿದೆ ಎಂದು ಅಧ್ಯಯನದ ವರದಿ ಹೇಳಿದೆ.
ಆಪತ್ತಿನ ಕರೆಗಂಟೆ :
ಬೆಂಗಳೂರಿನ ಸೆಂಟರ್ ಫಾರ್ ಸ್ಟಡಿ ಆಫ್ ಸೈನ್ಸಸ್ ಎಂಬ ಚಿಂತಕರ ಚಾವಡಿ ಈ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿದೆ. ಹವಾಮಾನ ಬದಲಾವಣೆ ಮತ್ತು ಸಮುದ್ರ ತೀರದಲ್ಲಿ ಮಾನವನ ಹಸ್ತಕ್ಷೇಪದಿಂದ ಕಡಲು ಅಬ್ಬರಿಸುತ್ತಿದೆ. ಇದು ಭವಿಷ್ಯದ ಆಪತ್ತಿನ ಕರೆಗಂಟೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ನೀರಿನ ಮಟ್ಟ ಏರಿಕೆಯಿಂದ ಸಮುದ್ರದ ನೀರು ಜನವಸತಿ ಅಥವಾ ಕೃಷಿ ಭೂಮಿಗಳಿಗೆ ನುಗ್ಗಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಸಮುದ್ರದ ನೀರಿನ ಮಟ್ಟ ಏರಿಕೆಯ ಈ ಹಿಂದಿನ ಅಂಕಿ ಅಂಶಗಳು ಮತ್ತು ಸದ್ಯದಲ್ಲಿ ನಡೆಯುತ್ತಿರುವ ಬದಲಾವಣೆಯನ್ನು ಊಹಿಸಿ ವಿಜ್ಞಾನಿಗಳು ಈ ಅಧ್ಯಯನ ಮಾಡಿದ್ದಾರೆ.
ಇದನ್ನೂ ಓದಿ : ಛೇ! ತಾನೇ ಸಾಕಿದ ಬೆಕ್ಕು ಕಚ್ಚಿ ಮಹಿಳೆ ಸಾ*ವು
ದಕ್ಷಿಣ ಕನ್ನಡ, ಉಡುಪಿಯ ಜೊತೆಗೆ ಕೇರಳ, ಗೋವಾ, ಮಹಾರಾಷ್ಟ್ರದ ಪಶ್ಚಿಮ ಕರಾವಳಿಯಲ್ಲೂ ಹಲವು ಬದಲಾವಣೆಯಾಗಲಿದೆ ಎಂದೂ ಹೇಳಿದ್ದಾರೆ. ಮುಂಬೈ, ಪಾಂಡಿಚೇರಿ ಮತ್ತು ತೂತುಕುಡಿಯ ಭೂಭಾಗ ಹತ್ತು ಶೇಕಡಾಗಿಂತ ಅಧಿಕ ಸಮುದ್ರ ಪಾಲಾಗಬಹುದು ಎಂಬ ಬಗ್ಗೆಯೂ ವರದಿಯಲ್ಲಿ ಉಲ್ಲೇಖವಾಗಿದೆ.
DAKSHINA KANNADA
ಅಡವಿಯಲ್ಲಿ ಮಾನವನನ್ನು ಹೋಲುವ ದೈತ್ಯ ಪ್ರಾಣಿ ಪತ್ತೆ..!?
ಮಂಗಳೂರು (ನ್ಯೂಯಾರ್ಕ್ ಪೋಸ್ಟ್ ವರದಿ ) : ಉತ್ತರ ಅಮೆರಿಕಾದ ಜಾನಪದ ಹಿನ್ನಲೆಯುಳ್ಳ ಮನುಷ್ಯನನ್ನು ಹೋಲುವ ದೊಡ್ಡ ಪಾದದ ಜೀವಿಯನ್ನು ಕಾಡಿನಲ್ಲಿ ನೋಡಿರುವುದಾಗಿ ಬಹಳಷ್ಟು ಜನ ಹೇಳಿಕೊಂಡಿದ್ದರು. ಆದ್ರೆ ಇದುವರೆಗೂ ಇದನ್ನು ಅಧಿಕೃತವಾಗಿ ಒಪ್ಪಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದ್ರೆ ಇದೀಗ ವ್ಯಕ್ತಿಯೊಬ್ಬರು ತಾನು ಓಕ್ಲಾಹಾಮಾದ ಲಾಟನ್‌ನಲ್ಲಿರುವ ಪ್ಯಾರಲಲ್ ಅಡವಿಯಲ್ಲಿ ಈ ಪ್ರಾಣಿಯನ್ನು ನೋಡಿದ್ದಾಗಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿರುವ ವ್ಯಕ್ತಿ ಇದು ನನ್ನ ಜೀವನದ ಭಯಾನಕ ಕ್ಷಣ ಎಂದು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ನ್ಯೂಯಾರ್ಕ್ ಪೋಸ್ಟ್ ಈ ಕುರಿತಾದ ಒಂದು ವರದಿಯನ್ನು ಪ್ರಕಟಿಸಿದ್ದು, ಅದರಲ್ಲಿ ಈ ದೊಡ್ಡ ಪಾದದ ಪ್ರಾಣಿ ಕಂಡು ಬಂದ ಬಗ್ಗೆ ಬರೆಯಲಾಗಿದೆ. ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ದೈತ್ಯಾಕಾರದ ಮಾನವನನ್ನು ಹೋಲುವ ಪ್ರಾಣಿಯೊಂದು ಮರದ ಬುಡದಲ್ಲಿ ಕುಳಿತು ಅಲ್ಲಿನ ಹೂವನ್ನು ಕೀಳುತ್ತಿರುವ ದೃಶ್ಯ ಸೆರೆಯಾಗಿದೆ. ಕೇವಲ ಒಂಬತ್ತು ಸೆಕೆಂಡ್ ಮಾತ್ರ ಈ ದೃಶ್ಯ ಕಂಡು ಬಂದಿದೆ. ಇಷ್ಟೇ ಅಲ್ಲದೆ ನ್ಯೂಯಾರ್ಕ್ ಪೋಸ್ಟ್ ಈ ಹಿಂದೆ ಇಂತಹ ಪ್ರಾಣಿ ಕಂಡು ಬಂದ ಕ್ಷಣ ಹಾಗೂ ಅದರ 16 ಇಂಚಿನ ಪಾದದ ಹೆಜ್ಜೆ ಗುರುತಿನ ಚಿತ್ರವನ್ನು ಪೋಸ್ಟ್ ಮಾಡಿದೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯನ್ನು ಹುಟ್ಟು ಹಾಕಿದ್ದು, ನಿಜವಾಗಿಯೂ ಇಂತಹ ಒಂದು ಜೀವಿ ಇದೆಯಾ ಎಂಬ ಗೊಂದಲ ಸೃಷ್ಟಿಸಿದೆ. ಅನೇಖರು ಅಮೆರಿಕಾದ ಪೌರಾಣಿಕ ಹಿನ್ನಲೆ ಉಳ್ಳ ಜನಪದಲ್ಲಿ ಸೇರಿಕೊಂಡಿರುವ ಈ ಜೀವಿ ಈಗಲೂ ಇದೆ ಎಂದು ವಾದ ಮಂಡಿಸಿದ್ದಾರೆ. ಇನ್ನೂ ಕೆಲವರು ಇದೊಂದು ಅಸ್ಪಷ್ಟ ವಿಡಿಯೋ ಆಗಿದ್ದು ಇದು ನಂಬಿಕೆಗೆ ಅರ್ಹವಾಗಿಲ್ಲ ಎಂದಿದ್ದಾರೆ. ಹಾಗೇ ಇನ್ನೂ ಕೆಲವರು ನಾವೂ ಇದನ್ನು ನೋಡಿದ್ದು, ದೃಶ್ಯ ಸೆರೆ ಹಿಡಿದಿಲ್ಲ ಎಂದಿದ್ದಾರೆ.
ಮನುಷ್ಯಂತೆ ದೇಹ ರಚನೆ ಹೊಂದಿರುವ ದೈತ್ಯಾಕಾರದ ಮೈಮೇಲೆ ರೋಮಗಳನ್ನು ಹೊಂದಿರುವ ಜೀವಿ ಇಂದಿಗೂ ಅರಣ್ಯ ಪ್ರದೇಶದಲ್ಲಿ ಇದೆ ಎಂದು ಅಮೆರಿಕಾದ ಜನರು ನಂಬಿಕೆ ಇಟ್ಟುಕೊಂಡಿದ್ದಾರೆ. ಈ ಜೀವಿಯ ಬಗ್ಗೆ ಅನೇಕ ಕಥೆಗಳಿದ್ದು, ಇದಕ್ಕೆ ವೈಜ್ಞಾನಿಕ ಪುರಾವೆಗಳೂ ಸಿಕ್ಕಿದೆ ಎಂದು ಹೇಳಾಗಿದೆ. ಆದ್ರೆ ಈಗ ಹರಿದಾಡುತ್ತಿರುವ ಈ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿದೆ.
ವಿಡಿಯೋ ವೀಕ್ಷಿಸಲು ಕ್ಲಿಕ್ ಮಾಡಿ :
DAKSHINA KANNADA
ಕಡಬ : ಕಾರು – ಬೈಕ್ ನಡುವೆ ಅಪಘಾ*ತ; ಸವಾರ ಸಾ*ವು
ಕಡಬ : ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಮೃ*ತಪಟ್ಟಿರುವ ಘಟನೆ ಕಡಬದಲ್ಲಿ ನಡೆದಿದೆ. ಕಡಬ ಹಳೆ ಸ್ಟೇಷನ್ ನಿವಾಸಿ, ಕಡಬ ಸಿ.ಎ. ಬ್ಯಾಂಕ್ ಮಾಜಿ ಉದ್ಯೋಗಿ ಹಸೈನಾರ್(57) ಮೃ*ತ ಬೈಕ್ ಸವಾರ.
ಹಸೈನಾರ್ ತನ್ನ ಮನೆಯಿಂದ ಕಡಬ ಕಡೆಗೆ ಸಾಗುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಕಾರು ಡಿ*ಕ್ಕಿ ಹೊಡೆದಿದೆ. ಪರಿಣಾಮ ಗಂಭೀ*ರ ಗಾ*ಯಗೊಂಡ ಹಸೈನಾರ್ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : 200 ಅಡಿ ಕಂದಕಕ್ಕೆ ಬಿದ್ದ ಮದುವೆ ದಿಬ್ಬಣದ ಬಸ್; 30 ಕ್ಕೂ ಅಧಿಕ ಮಂದಿ ಸಾವು
ಅಪಘಾ*ತದ ದೃಶ್ಯ ಸ್ಥಳೀಯ ಇಂಡಸ್ಟ್ರೀಸ್ ವೊಂದರ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
BANTWAL
ಅಕ್ರಮ ಮರಳು ಅಡ್ಡೆಗೆ ದಾಳಿ; 20 ಬೋಟ್ ವಶಕ್ಕೆ
ಬಂಟ್ವಾಳ: ತುಂಬೆ, ಮಾರಿಪಳ್ಳ ಭಾಗದ ನೇತ್ರಾವತಿ ನದಿಯಲ್ಲಿ ದೋಣಿ ಮೂಲಕ ನಡೆಯುತ್ತಿದ್ದ ಅಕ್ರಮ ಮರಳು ಅಡ್ಡೆಗೆ ಶುಕ್ರವಾರ ದ.ಕ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಬಂಟ್ವಾಳ ಕಂದಾಯ ಇಲಾಖೆಯ ಅಧಿಕಾರಿಗಳ ತಂಡ ದ.ಕ ಜಿಲ್ಲಾಧಿಕಾಗಳ ಆದೇಶದಂತೆ 20 ಬೋಟ್‌ಗಳನ್ನು ವಶಪಡಿಸಿಕೊಂಡಿದ್ದರು. ಅಧಿಕಾರಿಗಳ ದಾಳಿಯ ವೇಳೆ ಮರಳುಗಾರಿಕೆ ನಡೆಸುತ್ತಿದ್ದ ಕಾರ್ಮಿಕರು ಪಲಾಯನಗೈದಿದ್ದಾರೆಂದು ವರದಿಯಾಗಿದೆ.
ದೋಣಿಗಳನ್ನು 4ರಂತೆ ಜೋಡಸಿಕೊಂಡು 5 ತಂಡಗಳ ಮೂಲಕ ನದಿಯಲ್ಲೇ ಮಂಗಳೂರಿನ ಅಡ್ಯಾರ್‌ವರೆಗೆ ಸಾಗಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಶಕ್ಕೆ ಒಪ್ಪಿಸಲಾಗಿದೆ. ಬೋಟ್‌ನಲ್ಲಿ ಯಾವುದೇ ರೀತಿಯ ಮರಳು ಪತ್ತೆಯಾಗಿಲ್ಲ. ಮರಳುಗಾರಿಕೆಲ್ಲಿ ತೊಡಗಿದ್ದವರು ಯಾರು, ಬೋಟ್‌ಗಳು ಯಾರಿಗೆ ಸಂಬಂಧಟ್ಟದ್ದು ಎಂಬುವುದರ ಕುರಿತು ಅಧಿಕಾರಿಗಳ ತನಿಖೆಯ ಬಳಿಕ ತಿಳಿದುಬರಬೇಕಷ್ಟೇ.
ಸಾಕಷ್ಟು ಸಮಯದಿಮದ ಕೇಳಿ ಬರುತ್ತಿದ್ದ ಆರೋಪ:
ದೋಣಿಗಳ ಸಹಾಯದಿಂದ ನದಿಯಲ್ಲಿ ಉತ್ತರ ಭಾರತದ ಕಾರ್ಮಿಕರನ್ನು ಬಳಸಿಕೊಂಡು ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ಅರೋಪ ಸಾಕಷ್ಟು ಸಮಯದಿಂದ ಕೇಳಿ ಬರುತ್ತಿದ್ದವು. ಈ ಹಿನನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ದಾಳಿ ನಡೆಸಿ ಆಕ್ರಮವನ್ನು ಮಟ್ಟ ಹಾಕುವಂತೆ ಗಣಿ ಇಲಾಖೆಗೆ ಆದೇಶವನ್ನು ನೀಡಿದ್ದರು.
ಗಣಿ ಇಲಾಖೆಯ ಉಪನಿರ್ದೇಶಕಿ ಕೃಷ್ಣವೇಣಿ, ಬಂಟ್ವಾಳ ತಹಶೀಲ್ದಾರ್ ಅರ್ಚನಾ ಡಿ. ಭಟ್, ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಹಿರಿಯ ಭೂ ವಿಜ್ಞಾನಿ ಗಿರಿಶ್ ಮೋಹನ್, ಭೂ ವಿಜ್ಞಾನಿ ಮಹಾದೇಶ್ವರ, ಬಂಟ್ವಾಳ ಕಂದಾಯ ನಿರೀಕ್ಷಕ ಜನಾರ್ಧನ್ ಜೆ., ಗ್ರಾಮಕರಣಿಕರು, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
- BIG BOSS6 days ago
ಭ್ರಷ್ಟರ ವಿರುದ್ಧ ಗುಡುಗಿದ ಸ್ಪರ್ಧಿ ಲಾಯರ್ ಜಗದೀಶ್ಗೆ ಕಿಚ್ಚ ವಾರ್ನಿಂಗ್..!
- BIG BOSS6 days ago
BBK11 ವೇದಿಕೆಗೆ ಬರುತ್ತಿದ್ದಂತೆ ರೀಲ್ಸ್ ಸ್ಟಾರ್ ಮೇಲೆ ಕೋಪಗೊಂಡ ಕಿಚ್ಚ: ಇಂತವರನ್ನ ಏಕೆ ಕರೆಸಿದ್ರಿ ಎಂದು ಗರಂ?
- LATEST NEWS5 days ago
Watch Video: ಕೋಚಿಂಗ್ ಸೆಂಟರ್ನಲ್ಲಿ ವಿದ್ಯಾರ್ಥಿನಿಯೊಂದಿಗೆ ಬಯಾಲಜಿ ಶಿಕ್ಷಕನ ರೊಮ್ಯಾನ್ಸ್
- BIG BOSS6 days ago
ಚೈತ್ರಾ ಕುಂದಾಪುರಗೆ ಮೊದಲ ದಿನವೇ ಹೊಸ ಬಿರುದು ಕೊಟ್ಟ ಲಾಯರ್ ಜಗದೀಶ್
Pingback: ಚಿಕನ್ ಕರಿ ಕೇಳಿದ್ದಕ್ಕೆ ಗಂಡನನ್ನು ಇಟ್ಟಿಗೆಯಿಂದ ಹೊಡೆದು ಕೊಂ*ದ ಪತ್ನಿ! - NAMMAKUDLA NEWS - ನಮ್ಮಕುಡ್ಲ ನ್ಯೂಸ್