ಮುಂಬೈ ಸಪ್ಟೆಂಬರ್ 12: ಕೊರೊನಾ ನಡುವೆ ಬಾಲಿವುಡ್ ಗೆ ಈ ವರ್ಷ ಸಂಕಟಗಳ ವರ್ಷವಾಗಿ ಪರಿಣಮಿಸಿದೆ. ಅತಿ ಚಿಕ್ಕ ವಯಸ್ಸಿನ ನಟರು ಸೇರಿದಂತೆ ಬಾಲಿವುಡ್ ಈ ವರ್ಷ ಅನೇಕ ದಿಗ್ಗಜರನ್ನು ಕಳೆದುಕೊಂಡಿದೆ. ಅಲ್ಲದೆ ಡ್ರಗ್ಸ್ ದಂಧೆ ಸೇರಿದಂತೆ ಅನೇಕ ಸಮಸ್ಯೆಗಳು ಬಾಲಿವುಡ್ ನಲ್ಲಿ ಎದುರಾಗಿದೆ.
ಈ ನಡುವೆ ಬಾಲಿವುಡ್ ನ ಖ್ಯಾತ ಗಾಯಕಿ ಅನುರಾಧಾ ಪೌಡ್ವಾಲ್ ಅವರ ಪುತ್ರ ಆದಿತ್ಯ ಪೌಡ್ವಾಲ್ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 35 ವರ್ಷ ವಯಸ್ಸಾಗಿತ್ತು. ಮಾಹಿತಿಯ ಪ್ರಕಾರ, ಆದಿತ್ಯ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. ಅನೇಕ ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದಿತ್ಯ ಪೌಡ್ವಾಲ್ ಅವರ ತಾಯಿ ಅನುರಾಧಾ ಪೌಡ್ವಾಲ್ ಪ್ರಸಿದ್ಧ ಹಾಡುಗಾರ್ತಿ. ಅನೇಕ ಭಕ್ತಿಗೀತೆಗಳನ್ನು ಹಾಡಿದ್ದಾರೆ.