Connect with us

LATEST NEWS

ತಂದೆ, ತಾಯಿ, ತಂಗಿಯನ್ನು ಕೊಂದ ಪಾಪಿ ಮಗ…ಯಾಕಾಗಿ ಕೊಲೆ ಮಾಡಿದ್ದ..?

Published

on

ರಾಜಸ್ಥಾನ: ಮಗನೊಬ್ಬ ರಾತ್ರಿ ವೇಳೆ ಮಲಗಿದ್ದ ತನ್ನ ಅಪ್ಪ, ಅಮ್ಮ ಹಾಗೂ ಸಹೋದರಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ಭೀಕರ ಘಟನೆ ರಾಜಸ್ಥಾನದ ನಾಗೌರ್​​ನಲ್ಲಿ ನಡೆದಿದೆ.

ದಿಲೀಪ್ ಸಿಂಗ್ (45), ಇವರ ಪತ್ನಿ ರಾಜೇಶ ಕನ್ವರ್ (40), ಮಗಳು ಪ್ರಿಯಾಂಕ (15) ಕೊಲೆಯಾದವರು. ಮೋಹಿತ್ (20) ಕೊಲೆ ಮಾಡಿದ ಆರೋಪಿ. ಮೋಹಿತ್ ಡಿ. 30ರ ಮಧ್ಯೆ ರಾತ್ರಿ ಮಲಗಿದ್ದ ತನ್ನ ತಂದೆ, ತಾಯಿ ಹಾಗೂ ತಂಗಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 31 ರಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಮಾನಸಿಕ ಅಸ್ವಸ್ಥ ಅನ್ನೋದು ಹೇಳಲಾಗಿದೆ. ಅಲ್ಲದೇ ಇವರ ಕುಟುಂಬ ಕೌಟುಂಬಿಕ ಕಲಹ ಎದುರಿಸುತ್ತಿದ್ದ ಅನುಮಾನ ಕೂಡ ಶುರುವಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು, ಪೊಲೀಸರು ಬಂಧನಕ್ಕೂ ಮೊದಲೇ ಆರೋಪಿ ಕೊಲೆ ಮಾಡಿರೋದಾಗಿ ಒಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ.

LATEST NEWS

ತೆಂಗಿನಕಾಯಿ ತುರಿಯುವಾಗ ಮೈಮೇಲಿನ ಶಾಲು ಗ್ರೈಂಡರ್‌ಗೆ ಸಿಲುಕಿ ಮೈಮುನಾ ಮೃ*ತ್ಯು

Published

on

ಕಾಸರಗೋಡು: ತೆಂಗಿನಕಾಯಿ ತುರಿಯುತ್ತಿದ್ದ ಸಂದರ್ಭ ಮೈಮೇಲಿನ ಸಾಲು ಗ್ರೈಂಡರ್‌ಗೆ ಸಿಲುಕಿ ಕತ್ತು ಬಿಗಿದು ಗೃಹಿಣಿ ಮೃ*ತಪಟ್ಟ ಘಟನೆ ಉಪ್ಪಳದಲ್ಲಿ ನಡೆದಿದೆ.

ಉಪ್ಪಳಗೇಟ್ ಅಪ್ಪಾಗಲ್ಲಿ ನಿವಾಸಿ ಇಬ್ರಾಹಿಂ ಎಂಬುವವರ ಪತ್ನಿ ಮೈಮುನಾ (17) ಮೃ*ತಪಟ್ಟ ಮಹಿಳೆ.

ಗ್ರೈಂಡರ್‌ನ ಟಾಪ್ ನಲ್ಲಿ ತೆಂಗಿನಕಾಯಿ ತುರಿಯುವ ಉಪಕರಣವಿದ್ದು, ಅದರಲ್ಲಿ ತೆಂಗಿನಕಾಯಿ ತುರಿಯುತ್ತಿದ್ದ ಸಂದರ್ಭ ಕುತ್ತಿಗೆಯಲ್ಲಿ ಧರಿಸಿದ್ದ ಶಾಲು ಗ್ರೈಂಡರ್‌ಗೆ ಸಿಕ್ಕಿ ಹಾಕಿಕೊಂಡಿದೆ. ಗ್ರೈಂಡರ್‌ ಶಾಲನ್ನು ಎಳೆದುಕೊಂಡಿದ್ದು, ಮಹಿಳೆಯ ಕುತ್ತಿಗೆಯನ್ನು ಗಟ್ಟಿಯಾಗಿ ಬಿಗಿದುಕೊಂಡಿದ್ದು ಅವರು ಜೋರಾಗಿ ಕಿರುಚಿಕೊಂಡಿದ್ದಾರೆ.

ತಕ್ಷಣ ಅವರ ನೆರವಿಗೆ ಧಾವಿಸಿದ ಮನೆಯವರು ಕೂಡಲೇ ಅವರನ್ನು ಉಪ್ಪಳದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಂದ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ. ಬಳಿಕ ಮೃ*ತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿ ಮರ*ಣೋ*ತ್ತರ ಪರೀಕ್ಷೆ ನಡೆಸಲಾಯಿತು.

ಮೃ*ತರ ಪತಿ ಇಬ್ರಾಹಿಂ ಪೂಣದಲ್ಲಿ ವ್ಯಾಪಾರಿಯಾಗಿದ್ದಾರೆ. ಮೃ*ತರು ಪತಿ, ಮಕ್ಕಳಾದ ಸಾಬಿತ್, ಸಫ, ಸಾವಿಲ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗ*ಲಿದ್ದಾರೆ. ಘಟನೆ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Continue Reading

LATEST NEWS

ಕಾರ್ಕಳ : ಪತಿ ತೀ*ರಿದ ನೋ*ವಿನಿಂದ ಆತ್ಮಹ*ತ್ಯೆ ಮಾಡಿಕೊಂಡ ಪತ್ನಿ

Published

on

ಕಾರ್ಕಳ:ಪತಿ ಅ*ಗಲಿಕೆಯ ನೋ*ವಿನಿಂದ ಅಂಗನವಾಡಿ ಟೀಚರ್ ಬಾವಿಗೆ ಹಾರಿ ಆ*ತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಮಿಯ್ಯಾರು ಕುಂಟಿಬೈಲ್ ಮಂಜಡ್ಕ ಎಂಬಲ್ಲಿ ನಡೆದಿದೆ. ಸೌಮ್ಯ(39) ಆ*ತ್ಮಹ*ತ್ಯೆ ಮಾಡಿಕೊಂಡ ಮಹಿಳೆ.

ಮಿಯ್ಯಾರು ಚರ್ಚ್ ಬಳಿಯ ಅಂಗನವಾಡಿಯಲ್ಲಿ ಟೀಚರ್ ಆಗಿ ಕಳೆದ 15 ವರ್ಷಗಳಿಂದ ಸೌಮ್ಯ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಪತಿ ಒಂದು ತಿಂಗಳ ಹಿಂದೆ ಮೃ*ತಪಟ್ಟಿದ್ದರು. ಇದರಿಂದ ಮಾ*ನಸಿಕವಾಗಿ ನೊಂದಿದ್ದ ಸೌಮ್ಯ, ಮನೆ ಸಮೀಪದ ಬಾವಿಗೆ ಹಾರಿ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : Watch Video: ಜ್ಯೂಸ್ ಹೆಸರಿನಲ್ಲಿ ವಿಷ ಕುಡಿಸುತ್ತಿದ್ದಾರೆ ಇವರು:; ಎಚ್ಚರ ತಪ್ಪಿದರೆ ನಿಮ್ಮ ಜೀವಕ್ಕೇ ಗ್ಯಾರಂಟಿ ಇಲ್ಲ!

ಮೃ*ತದೇಹವನ್ನು ಕಾರ್ಕಳ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಶ*ವಗಾರದಲ್ಲಿ ಇರಿಸಲಾಗಿದೆ. ಮೃ*ತ  ಸೌಮ್ಯ ಇಬ್ಬರು ಹೆಣ್ಣು ಮಕ್ಕಳನ್ನು ಅ*ಗಲಿದ್ದಾರೆ.

Continue Reading

LATEST NEWS

ಮದುವೆಯಾಗಿ ಉಳಿದ ಹಣದಿಂದ ಶಾಲೆಗೆ ಶುದ್ಧ ನೀರಿನ ಯಂತ್ರ ವಿತರಣೆ !!

Published

on

ಮಂಗಳೂರು/ ಹಾಸನ : ಇಂಜಿನಿಯರ್ ವಧು ಶಿವಕುಮಾರ್ ಮತ್ತು ಮಂಡ್ಯ ನಿವಾಸಿ ಸಂಗೀತಾ ಅವರು ನವೆಂಬರ್​ 11 ರಂದು ಸರಳ ವಿವಾಹವಾಗುವ ಮೂಲಕ ರೂ. 5 ಲಕ್ಷಕ್ಕೂ ಹೆಚ್ಚು ಹಣವನ್ನು ಉಳಿಸಿದ ಗಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ನಡೆದಿದೆ.

ಅತ್ಯಂತ ಅದ್ದೂರಿ

ಮತ್ತು ಆಡಂಭವಾಗಿ ಮದುವೆಯಾಗುವ ಈ ಕಾಲದಲ್ಲಿ, ಇಲ್ಲೊಂದು ಜೋಡಿ ಸರಳ ಮದುವೆಯಾಗಿದ್ದಾರೆ. ಜೊತೆಗೆ ತಮಗೆ ಬಂದ ಹಣದಿಂದ ವಿಶೇಷ ಕೊಡುಗೆ ಕೂಡ ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ನವಜೋಡಿ ಉಳಿಸಿದ 5 ಲಕ್ಷಕ್ಕೂ ಹೆಚ್ಚಿನ ಹಣದಿಂದ 26 ಶಾಲೆಗೆ ಶುದ್ಧ ನೀರಿನ ಯಂತ್ರ ನಿಡುವ ಮೂಲಕ ಸಮಾಜ ಸೇವೆ ಗೈದಿದ್ದಾರೆ. ಈ ಸತ್ಕಾರ್ಯಕ್ಕೆ ನವಜೋಡಿಗೆ ರೈತಪರ ಹೋರಾಟಗಾರರಾದ ತಾತ ಹೊ.ತಿ.ಹುಚ್ಚಪ್ಪ ಪ್ರೇರಣೆ ಎಂದು ಹೇಳಿದ್ದಾರೆ.

ಹೊನ್ನವಳ್ಳಿ ಗ್ರಾಮದಲ್ಲಿ ಹೊ.ತಿ.ಹುಚ್ಚಪ್ಪ ತಾತ ದತ್ತು ಪಡೆದಿದ್ದ ಶಾಲೆ ಸೇರಿದಂತೆ ತಾಲೂಕಿನ ಕಸಬ ಹೋಬಳಿಯ 26 ಶಾಲೆಗಳಿಗೆ ಉಚಿತವಾಗಿ ಶುದ್ಧ ನೀರಿನ ಯಂತ್ರವನ್ನು ನೀಡಿದ್ದಾರೆ.

Continue Reading

LATEST NEWS

Trending

Exit mobile version