Connect with us

    LATEST NEWS

    ಸುಖ ದಾಂಪತ್ಯ ಜೀವನಕ್ಕೆ ಸರಳ ಸೂತ್ರಗಳು ಇಲ್ಲಿದೆ

    Published

    on

    ವೈವಾಹಿಕ ಜೀವನ ಎಂದ ಮೇಲೆ ಸಮಸ್ಯೆಗಳು ಸಾಮಾನ್ಯ. ಆದರೆ ಅದನ್ನೆಲ್ಲಾ ಸಹಿಸಿಕೊಂಡು ಹೊಂದಿಕೊಂಡು ಹೋಗಬೇಕು. ಕೋಪ ಇದ್ದರೂ ತಾಳ್ಮೆ ಮಾತ್ರ ಬೆಟ್ಟದಷ್ಠಿರಬೇಕು. ಮದುವೆಯ ನಂತರ ಜೀವನ ಚೆನ್ನಾಗಿರಲು ನಮ್ಮಲ್ಲಿಯೇ ಕೆಲವೊಂದು ಬದಲಾವಣೆಗಳು ಅಗತ್ಯ. ಆ ಕೆಲವೊಂದು ಸರಳ ನಿಯಮಗಳನ್ನು ನಾವು ಪಾಲಿಸಿದ್ದೇ ಆದಲ್ಲಿ ವೈವಾಹಿಕ ಜೀವನ ಬಹಳ ಸುಂದರವಾಗಿರುತ್ತದೆ.

    ಎಲ್ಲಾ ವಿಷಯದಲ್ಲೂ ಪರಸ್ಪರ ಬೆಂಬಲಿಸಿ ಒಬ್ಬರಿಗೊಬ್ಬರು ಸಲಹೆ ನೀಡುತ್ತಾ ಇರಬೇಕು. ಉತ್ತಮ ಕೇಳುಗರಾಗಿ ಮತ್ತು ಉತ್ತಮ ಮಾತುಗಾರರಾಗಿ ಇರಬೇಕು. ಅಂದರೆ, ಬೇಸರದ ಸಮಯದಲ್ಲೂ, ಸಂತೋಷದ ಸಮಯದಲ್ಲೂ ಒಬ್ಬರಿಗೊಬ್ಬರು ಸಾಥ್ ನೀಡಿ ಬೆನ್ನೆಲುಬಂತಿರಬೇಕು. ಸಂಗಾತಿ ಜೊತೆ ಏನಾದರೂ ಭಿನ್ನಾಭಿಪ್ರಾಯ ಉಂಟಾದಲ್ಲಿ ಅದನ್ನು ತುಂಬಾ ದಿನಗಳವರೆಗೆ ಮುಂದುವರೆಸಿಕೊಂಡು ಹೋಗದೆ ಅಂದೇ ಮರೆತು ಮುಂದುವರೆಯಬೇಕು, ಜೀವನದಲ್ಲಿ ಏರಿಳಿತಗಳು ಸಾಮಾನ್ಯ. ಇದರ ಹೊರತಾಗಿಯೂ ಸಂಬಂಧದಲ್ಲಿ ಬದ್ಧರಾಗಿದ್ದು ಜೀವನದ ಪರೀಕ್ಷೆಯಲ್ಲಿ ಗೆಲ್ಲೋದಕ್ಕೆ ಪ್ರಯತ್ನ ಪಡುತ್ತಿರಬೇಕು. ಸಂಗಾತಿ ಜೊತೆ ವ್ಯವಹಾರ, ಕೆಲಸ, ಸಂಬಳದ ಬಗ್ಗೆ ಮುಕ್ತವಾಗಿ ಮಾತನಾಡಬೇಕು. ಉಳಿತಾಯ, ಹೂಡಿಕೆ, ಖರ್ಚು ಇವೆಲ್ಲವುಗಳ ಬಗ್ಗೆ ಮಾತನಾಡಿದ್ದೇ ಆದಲ್ಲಿ ಅನಗತ್ಯ ಒತ್ತಡದಿಂದ ಪಾರಾಗಬಹುದು.

    ಮದುವೆಯೊಂದಿಗೆ ಬರುವ ಜವಾಬ್ದಾರಿಗಳು ಪ್ರೀತಿಯನ್ನು ಕಡಿಮೆ ಮಾಡುವಂತೆ ಇರಬಾರದು. ಅವಾಗವಾಗ ಸಣ್ಣ ಸಣ್ಣ ಸರ್ಪ್ರೈಸ್ ನೀಡುತ್ತಾ ಕಿಸ್, ಡೇಟ್ ನೈಟ್, ಸಣ್ಣ ಟ್ರಿಪ್ ಮಾಡುತ್ತಿರಬೇಕು. ಸಂಬಂಧ ಗಟ್ಟಿಯಾಗಿರಬೇಕು ಅಂದರೆ ಅದರಲ್ಲಿ ನಗುವಿಗೂ ಜಾಗಬೇಕು. ಹಾಗಾಗಿ ಒಬ್ಬರನ್ನೊಬ್ಬರು ಕಾಲೆಳೆಯುತ್ತಾ, ಜೋಕ್ಸ್ ಮಾಡಿ ನಗುತ್ತಾ ಇದ್ದರೆ ಜೀವನದಲ್ಲಿ ತುಂಬಾನೆ ಖುಷಿಯಾಗಿರಬಹುದು. ಪ್ರತೀ ಕ್ಷಣ ಮಾತನಾಡುವಾಗ ಸಭ್ಯ ಭಾಷೆ ಬಳಸಿ ಗೌರವಯುತವಾಗಿರಿಸಿಕೊಳ್ಳುವುದು ಸಂಬಂಧದಲ್ಲಿ ತುಂಬಾನೆ ಮುಖ್ಯ. ಒಬ್ಬರನ್ನು ಅವಮಾನಿಸಿದರೆ ಅಥವಾ ನೋಯಸಿದರೆ ಸಂಬಂಧ ಹಳಸಿ ಹೋಗಬಹುದು. ಹಾಗೆಯೇ ಜಗಳವಾಡಿದ ನಂತರ ಅಥವಾ ಪರಸ್ಪರ ವಾದಿಸಿದ ನಂತರ ಕೋಪದಲ್ಲಿ ಮಲಗಬಾರದು. ವಿಷಯಗಳನ್ನು ಆರಾಮವಾಗಿ ಕೂತು ಚರ್ಚಿಸಿ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಸ್ವಾರಿ ಕೇಳಿ ಮಲಗಬೇಕು, ಇದರಿಂದ ಸಂಬಂಧ ಮತ್ತೂ ಗಟ್ಟಿಯಾಗಿರುತ್ತದೆ.

    International news

    ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳ ಗುಂಡಿಕ್ಕಿ ಹ*ತ್ಯೆ

    Published

    on

    ಮಂಗಳೂರು/ಟೆಹ್ರಾನ್ : ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳನ್ನು ಗುಂಡಿಕ್ಕಿ ಹ*ತ್ಯೆ ಮಾಡಿರುವ ಘಟನೆ ಟೆಹ್ರಾನ್‌ನಲ್ಲಿ ಇಂದು (ಶನಿವಾರ) ನಡೆದಿದೆ.

    ಈ ಘಟನೆಯಲ್ಲಿ ಮತ್ತೋರ್ವ ನ್ಯಾಯಮೂರ್ತಿ ಗಾಯಗೊಂಡಿದ್ದಾರೆ ಎಂದು ನ್ಯಾಯಾಂಗದ ‘ಮಿಜಾನ್’ ಸುದ್ದಿ ವೆಬ್‌ಸೈಟ್ ವರದಿ ಮಾಡಿದೆ. ಆಯತುಲ್ಲಾ ಮೊಹಮ್ಮದ್ ಮೊಘಿಶೆ ಹಾಗೂ ಅಲಿ ರಝನಿ ಹ*ತ್ಯೆಗೀಡಾದ ನ್ಯಾಯಮೂರ್ತಿಗಳು.

    ಸುಪ್ರೀಂ ಕೋರ್ಟ್‌ನ ಹೊರಗೆ ನ್ಯಾಯಮೂರ್ತಿಗಳ ಮೇಲೆ ಗುಂಡಿನ ದಾಳಿ ನಡೆಸಿದ ದಾಳಿಕೋರ ಬಳಿಕ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಘಟನೆಯಲ್ಲಿ ನ್ಯಾಯಮೂರ್ತಿಯೊಬ್ಬರ ಅಂಗರಕ್ಷಕ ಕೂಡ ಗಾಯಗೊಂಡಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಹ*ತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

    ಇದನ್ನೂ ಓದಿ: ಅಮೆರಿಕ ಗಡಗಡ… ಒಳಾಂಗಣದಲ್ಲಿ ಟ್ರಂಪ್ ಪ್ರಮಾಣವಚನ

    ನ್ಯಾಯಾಧೀಶರನ್ನು ಗುರಿಯಾಗಿಸಿಕೊಂಡು ದಾಳಿಗಳು ಅಪರೂಪವಾಗಿದ್ದರೂ, ಕಳೆದ ವರ್ಷ ಇರಾನ್‌ನ ಶ್ರೀಮಂತ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಹಲವಾರು ಗುಂಡಿನ ದಾಳಿಗಳು ನಡೆದಿವೆ.

    ಏಪ್ರೀಲ್ 2023ರಲ್ಲಿ, ಅಬ್ಬಾಸ್‌ಅಲಿ ಸೊಲೈಮನಿ ಎಂದು ಗುರುತಿಸಲಾದ ಪ್ರಬಲ ಧರ್ಮಗುರುವನ್ನು ಕೂಡ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

    ಕಳೆದ ಅಕ್ಟೋಬರ್‌ನಲ್ಲಿ, ಕಜೆರೌನ್‌ನಲ್ಲಿ ಶುಕ್ರವಾರದ ಪ್ರಾರ್ಥನೆಯ ನೇತೃತ್ವ ವಹಿಸಿದ ಶಿಯಾ ಮುಸ್ಲಿಂ ಬೋಧಕನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು.

    Continue Reading

    LATEST NEWS

    ಆರ್.ಜಿ.ಕರ್ ವಿದ್ಯಾರ್ಥಿನಿಯ ಅತ್ಯಾ*ಚಾರ, ಕೊ*ಲೆ ಪ್ರಕರಣ; ನ್ಯಾಯಾಲಯದಿಂದ ಮಹತ್ವದ ತೀರ್ಪು

    Published

    on

    ಮಂಗಳೂರು/ಕೊಲ್ಕತ್ತಾ : ಆರ್.ಜಿ.ಕರ್ ವೈದ್ಯಕೀಯ ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾ*ಚಾರ ಹಾಗೂ ಕೊ*ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಜಯ್ ರಾಯ್ ತಪ್ಪಿತಸ್ಥ ಎಂದು ಕೋರ್ಟ್ ಮಹತ್ವದ ತೀರ್ಪು ನೀಡಿದೆ.

    ಸಿಯಾಲ್ದಾ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಅನಿರ್ಬನ್ ದಾಸ್ ಶನಿವಾರ(ಜ.18)ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಸೋಮವಾರ(ಜ.20) ಪ್ರಕಟಿಸಲಿದ್ದಾರೆ.

    2024ರ ಆಗಸ್ಟ್ 9 ರಂದು ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಮೇಲೆ ಅತ್ಯಾ*ಚಾರ ನಡೆಸಿ, ಹ*ತ್ಯೆ ಮಾಡಲಾಗಿತ್ತು. ಈ  ಪ್ರಕರಣಕ್ಕೆ ಇಡೀ ದೇಶದಾದ್ಯಂತ ಭಾರಿ ಆಕ್ರೋಶ ಕೇಳಿ ಬಂದಿತ್ತು. ದೇಶದ ಬಹುತೇಕ ಭಾಗಗಳಲ್ಲಿ ವೈದ್ಯರು ಮುಷ್ಕರ ನಡೆಸಿದ್ದರು. ಆಗಸ್ಟ್ 10 ರಂದು ಸಂಜಯ್ ರಾಯ್‌ನನ್ನು ಬಂಧಿಸಲಾಯಿತು.

    ಇದನ್ನೂ ಓದಿ : WATCH : ಆ ಒಂದು ರೀಲ್ಸ್‌ನಿಂದ ಗಿನ್ನಿಸ್ ದಾಖಲೆ ಬರೆದ ಕೇರಳದ ಯುವಕ

    ಕೊಲ್ಕತ್ತಾ ಹೈಕೋರ್ಟ್ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತ್ತು. ಆರೋಪಿಗೆ ಗ*ಲ್ಲು ಶಿಕ್ಷೆ ಆಗಬೇಕು ಎಂದು ಸಿಬಿಐ ವಾದಿಸಿದೆ. ಪ್ರಕರಣದ ವಿಚಾರಣೆ ನವೆಂಬರ್ 12 ರಂದು ಆರಂಭವಾಗಿತ್ತು. ಒಟ್ಟು 50 ಸಾಕ್ಷಿಗಳ ಹೇಳಿಕೆಗಳನ್ನು ಪಡೆಯಲಾಗಿದೆ. ಆರೋಪಿಯ ವಿಚಾರಣೆ ಜ.9ರಂದು ಕೊನೆಗೊಂಡಿತ್ತು.

    Continue Reading

    LATEST NEWS

    ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಭಾರತ ತಂಡ ಪ್ರಕಟ

    Published

    on

    ಮಂಗಳೂರು/ಮುಂಬೈ : ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲಿರುವ ಭಾರತದ 15 ಸದಸ್ಯರ ಕ್ರಿಕೆಟ್ ತಂಡವನ್ನು ಬಿಸಿಸಿಐ ಶನಿವಾರ ಪ್ರಕಟಿಸಿದೆ.

    ಚಾಂಪಿಯನ್ಸ್ ಟ್ರೋಫಿ ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ, 15 ಸದಸ್ಯರ ಈ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದು, ಉಪನಾಯಕರಾಗಿ ಶುಭ್‌ಮನ್ ಗಿಲ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಆಸ್ಟ್ರೇಲಿಯಾ ವಿರುದ್ದದ ಕೊನೆಯ ಟೆಸ್ಟ್ ಪಂದ್ಯದ ವೇಳೆ ಫಿಟ್‌ನೆಸ್ ಸಮಸ್ಯಗೆ ಒಳಗಾಗಿದ್ದ ಜಸ್‌ಪ್ರೀತ್ ಬುಮ್ರಾ ಅವರನ್ನು ಚಾಂಪಿಯನ್ಸ್ ಟ್ರೋಫಿಗಾಗಿ ಆಯ್ಕೆ ಮಾಡಲಾಗಿದೆ.

    ಇದನ್ನೂ ಓದಿ: ಖ್ಯಾತ ಡಾಲಿ ಚಾಯ್‌ವಾಲ ಮಂಗಳೂರಿಗೆ ಆಗಮನ

    ಚಾಂಪಿಯನ್ಸ್ ಟ್ರೋಫಿಯು ಫೆ. 19ರಿಂದ ಆರಂಭವಾಗಲಿದ್ದು, ಪಾಕಿಸ್ತಾನವು ಆತಿಥ್ಯ ವಹಿಸಿದೆ. ಫೈನಲ್ ಮಾರ್ಚ್ 9ಕ್ಕೆ ನಡೆಯಲಿದೆ. ಭಾರತವು ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.

    ಚಾಂಪಿಯನ್ಸ್ ಟ್ರೋಫಿಗೆ ಭಾರತದ ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್‌ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಬ್ ಪಂತ್, ರವೀಂದ್ರ ಜಡೇಜಾ.

    Continue Reading

    LATEST NEWS

    Trending