Connect with us

LATEST NEWS

ಉಡುಪಿಯಲ್ಲೊಂದು ‘ಕಾಂತಾರ’ವನ್ನೇ ಹೋಲುವ ಪವಾಡ-ಕೋಲಕ್ಕೆ ಕೋರ್ಟ್‌ನಿಂದ ತಡೆಯಾಜ್ಞೆ ತಂದ ವ್ಯಕ್ತಿ ಕುಸಿದು ಬಿದ್ದು ಸಾವು..!

Published

on

ಪಡುಬಿದ್ರಿ: ಉಡುಪಿ ಜಿಲ್ಲೆಯ ಪಡುಬಿದ್ರಿಯ ಪಡುಹಿತ್ಲು ಜಾರಂದಾಯ ದೈವಸ್ಥಾನದಲ್ಲಿ ಕಾಂತಾರ ಕತೆಯನ್ನು ಹೋಲುವ ಘಟನೆ ಸಂಭವಿಸಿದೆ.

500 ವರ್ಷ ಇತಿಹಾಸ ಇರುವ ಈ ದೈವಸ್ಥಾನದ ವಿರುದ್ಧ ಮೊದಲ ಬಾರಿ ವ್ಯಕ್ತಿಯೊಬ್ಬರು ಕೋರ್ಟ್ ಮೆಟ್ಟಿಲೇರಿದ್ದು, ಅವರು ತಡೆಯಾಜ್ಞೆ ತಂದ ಮರುದಿನವೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇದೇನು ದೈವ ಶಕ್ತಿಯೋ ಎಂದು ಊರವರು ಆಡುತ್ತಿದ್ದಾರೆ.


ಪಡುಬಿದ್ರಿಯ ಪಡುಹಿತ್ಲು ಜಾರಂದಾಯ ದೈವಸ್ಥಾನ ಊರ ಸಮಸ್ತರಿಗೆ ಭಕ್ತಿ ಮತ್ತು ನಂಬಿಕೆಯ ಮೂಲವಾಗಿತ್ತು. ವರ್ಷಕ್ಕೊಮ್ಮೆ ಇಲ್ಲಿ ವಿಜೃಂಭಣೆಯ ನೇಮೋತ್ಸವ ನಡೆಯುತ್ತಿದ್ದು ಊರವರು ಭಾಗಿಯಾಗುತ್ತಾರೆ.

ಈ ದೈವಸ್ಥಾನ ನೋಡಿಕೊಳ್ಳಲು ಪಡುಹಿತ್ಲು ಜಾರಂದಾಯ ಬಂಟ ಸೇವಾ ಸಮಿತಿ ಇದೆ. ಈ ಸಮಿತಿಯಲ್ಲಿ ಪ್ರಕಾಶ್ ಶೆಟ್ಟಿ ಅಧ್ಯಕ್ಷರಾಗಿದ್ದರು. ಸಮಿತಿ ಬದಲಾದಾಗ ಪ್ರಕಾಶ್ ಶೆಟ್ಟಿ ಸಹಜವಾಗಿ ಅಧಿಕಾರ ಕಳೆದುಕೊಂಡಿದ್ದಾರೆ.

ಮೃತ ಜಯ ಪೂಜಾರಿ

ಬಳಿಕ ಅವರು ಐವರ ಪ್ರತ್ಯೇಕ ಟ್ರಸ್ಟ್ ರಚಿಸಿ ಸಾನದ ಮನೆಯ ಗುರಿಕಾರ ಜಯ ಪೂಜಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ದೈವಸ್ಥಾನ ತಮಗೆ ಸೇರಿದ್ದು ಎಂದು ಹಕ್ಕು ಸ್ಥಾಪಿಸಲು ಯತ್ನಿಸಿದ್ದಾರೆ. ನೇಮೋತ್ಸವ ನಡೆಸಲು ಜಾರಂದಾಯ ದೈವಸ್ಥಾನ ಸಮಿತಿ ಜನವರಿ 7 ರಂದು ಕೋಲ ನಡೆಸಲು ತೀರ್ಮಾನಿಸುತ್ತದೆ.


ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವ ಜಯ ಪೂಜಾರಿ ಮತ್ತು ಪ್ರಕಾಶ್ ಶೆಟ್ಟಿ‌ ಕೋಲಕ್ಕೆ ತಡೆಯಾಜ್ಞೆ ತರುತ್ತಾರೆ.

ಡಿಸೆಂಬರ್ 23ಕ್ಕೆ ತಡೆಯಾಜ್ಞೆ ತಂದ ಜಯ ಪೂಜಾರಿ, ಡಿಸೆಂಬರ್ 24 ರಂದು ಹಠಾತ್ ಕುಸಿದು ಬಿದ್ದು ಸಾವನ್ನಪ್ಪುತ್ತಾರೆ. ಪ್ರಕರಣವನ್ನು ಕೈಗೆತ್ತಿಕೊಂಡ ವಕೀಲ ಬಿ. ನಾಗರಾಜ್ ತಡೆಯಾಜ್ಞೆ ತೆರವು ಮಾಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ದೈವಸ್ಥಾನ ಪರ ವಕೀಲ ನಾಗರಾಜ್ ಬಿ. ‘ಸಮಿತಿಯಿಂದ ಪ್ರಕಾಶ್ ಪೂಜಾರಿ ಅವರಿಗೆ ಯಾವುದೇ ಅಧಿಕಾರವನ್ನು ಕೊಟ್ಟಿಲ್ಲ. ತಾನು ಹೇಳಿದಂತೆ ನುಡಿ ಕೊಡಬೇಕು ಎಂದು ದೈವ ನರ್ತಕ ಭಾಸ್ಕರ್ ಬಂಗೇರ ಅವರನ್ನು ಬೆದರಿಸುತ್ತಿದ್ದಾರೆ. ಬೇರೆ ಬೇರೆ ರೀತಿಯಲ್ಲಿ ಕಿರುಕುಳ ನೀಡುತ್ತಾರೆ. ಇದೀಗ ನಮ್ಮ ಸಮಿತಿಯ ವತಿಯಿಂದ ಜ.13ರಂದು ಕೋಲ ನಡೆಸುವುದಾಗಿ ತೀರ್ಮಾನಿಸಿದ್ದೇವೆ.


ಇನ್ನು ದೈವನರ್ತಕ ಭಾಸ್ಕರ್ ಬಂಗೇರ ಅವರು ಮಾತನಾಡಿ ‘ಜಾರಂದಾಯ ದೇವಸ್ಥಾನದಲ್ಲಿ ನಾನು ನರ್ತಕನಾಗಿ ಕೆಲಸ ಮಾಡುತ್ತಿದ್ದೇನೆ. ಅಲ್ಲಿ ನನ್ನ ಮಾವ ಕೊಟ್ಟ ಆದೇಶದಂತೆ ನಾನು ನನ್ನ ಕೆಲಸವನ್ನು ನಿಷ್ಠೆಯಲ್ಲಿ ಮಾಡುತ್ತಿದ್ದೇನೆ. ಆದರೆ ಪ್ರಕಾಶ್ ಅವರು ನಾನು ನಿನಗೆ ಹಣ ಕೊಡ್ತೇನೆ.

ನಾವು ಹೇಳಿದ ಹಾಗೆಯೇ ನುಡಿ ಕೊಡಬೇಕು ಎಂದು ಬೆದರಿಕೆಯಿಟ್ಟಿದ್ದಾರೆ. ಆದರೆ ನಾನು ಜಾರಂದಾಯ ದೈವಕ್ಕೆ ಸರಿಯಾಗಿ, ಈ ಊರಿಗೆ ಪರವಾಗಿ ನಾನು ನನ್ನ ಕೆಲಸ ಮಾಡೋದು. ನನಗೆ ಹಣ ಬೇಡ ಎಂದಾಗ ನೀನು ಹೇಗೆ ಕೋಲ ಕಟ್ಟುತ್ತಿ ನಾನೂ ನೋಡ್ತೇನೆ ಅಂತ ಬೆದರಿಕೆ ಹಾಕಿದ್ದಾರೆ’ ಎಂದು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.

ಜನವರಿ 7ಕ್ಕೆ ನಡೆಯಬೇಕಿದ್ದ ನೇಮೋತ್ಸವವನ್ನು ದೈವಸ್ಥಾನ‌ ಸಮಿತಿ‌ಜಯ ಪೂಜಾರಿ ದೈವದೀನರಾದ ಕಾರಣಕ್ಕೆ ಮುಂದೂಡಿದೆ.

ಆದರೆ ಹಠ ಬಿಡದ ಪ್ರಕಾಶ್ ಶೆಟ್ಟಿ ಮತ್ತು ತಂಡ ಜಯ ಪೂಜಾರಿಯವರ ಉತ್ತರಕ್ರಿಯೆಯ ದಿನವಾದ ಜ.7 ರಂದೇ ಕಾಲಾವಧಿ ನೇಮೋತ್ಸವ ಮಾಡಲು ಹೊರಟಿದೆ.

ಆದರೆ ಇದೀಗ ದೈವ ನೇಮೋತ್ಸವ ಮಾಡದೆ ಇರಲು ದೇವಸ್ಥಾನದ ಟ್ರಸ್ಟ್ ನಿರ್ಧಾರ ಕೈಗೊಂಡಿದೆ.

ದೇವಸ್ಥಾನದ ಮುಂದೆ ನಿಂತು ಪ್ರಾರ್ಥನೆ ಸಲ್ಲಿಸಿದ ಟ್ರಸ್ಟ್ ಮುಖಂಡರು, ಕಾನೂನು ತೀರ್ಮಾನದ ನಂತರ ಮುಂದಿನ ನಿರ್ಧಾರ ಮಾಡಲು ತೀರ್ಮಾನಿಸಿದ್ದಾರೆ.

ಒಟ್ಟಿನಲ್ಲಿ ದೈವದ ನೇಮೋತ್ಸವ ದೈವೇಚ್ಛೆಯಂತೆಯೇ ನಡೆಯಲಿ ಎನ್ನುವುದು ಭಕ್ತರ ಆಶಯ.

LATEST NEWS

ಕೇರಳದಲ್ಲಿ ಬಹಿರಂಗವಾಗಿ ಕಾಣಿಸಿದ ನಕ್ಸಲರ ತಂಡ; ಚುನಾವಣೆ ಬಹಿಷ್ಕಾರಕ್ಕೆ ಕರೆ

Published

on

ಕೇರಳ : ವಯನಾಡು ಜಿಲ್ಲೆಯ ಕಂಬಮಲೆ ಅರಣ್ಯ ಹಾಗೂ ಮಕ್ಕಿಮಲೆ ಅರಣ್ಯದಲ್ಲಿ ನಕ್ಸಲರು ಇದ್ದಾರೆ ಅನ್ನೋ ಅನುಮಾನ ಬಲವಾಗಿತ್ತು. ಹೀಗಾಗಿ ಕೇರಳದ ನಕ್ಸಲ್ ನಿಗ್ರಹ ತಂಡ ನಿರಂತರ ಕೂಂಬಿಂಗ್ ನಡೆಸಿತ್ತು. ಆದ್ರೆ, ನಕ್ಸಲರ ಸುಳಿವು ಪತ್ತೆಯಾಗದ ಕಾರಣ ಕೂಂಬಿಂಗ್ ನಿಲ್ಲಿಸಲಾಗಿತ್ತು. ಆದ್ರೆ, ಇದೀಗ ಲೋಕಸಭಾ ಚುನಾವಣೆ ವೇಳೆ ಮತ್ತೆ ನಕ್ಸಲರು ಗ್ರಾಮದಲ್ಲಿ ಕಾಣಿಸಿಕೊಂಡಿದ್ದಾರೆ.


ಚುನಾವಣೆ ಬಹಿಷ್ಕರಿಸಲು ಸೂಚನೆ :

ಮಾವೋವಿಸ್ಟ್ ಜಿಂದಾಬಾದ್ ಎಂಬ ಘೋಷಣೆ ಕೂಗಿ ಗ್ರಾಮಕ್ಕೆ ಎಂಟ್ರಿ ಕೊಟ್ಟು ನಾಲ್ವರ ತಂಡ ಚುನಾವಣೆಗೆ ಬಹಿಷ್ಕಾರ ಮಾಡುವಂತೆ ಕರೆ ನೀಡಿದ್ದಾರೆ. ಗ್ರಾಮಸ್ಥರ ಜೊತೆ ಮಾತನಾಡಿ ಕಳೆದ ನಲುವತ್ತು ವರ್ಷದಿಂದ ಕಂಬಮಲೆ ಅರಣ್ಯ ತಪ್ಪಲಿನ ಜನರ ಸಮಸ್ಯೆಯನ್ನು ಸರ್ಕಾರ ಗಮನಿಸಿಲ್ಲ. ಇಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕರ ಕಷ್ಟ ಸರ್ಕಾರ ಅರ್ಥ ಮಾಡಿಕೊಂಡಿಲ್ಲ. ಹೀಗಾಗಿ ಎಲ್ಲರೂ ಚುನಾವಣೆ ಬಹಿಷ್ಕಾರ ಮಾಡಿ ಎಂದು ಕರೆ ನೀಡಿದ್ದಾರೆ.

ಈ ತಂಡದಲ್ಲಿ ಕೇರಳ ರಾಜ್ಯಕ್ಕೆ ಬಹಳಷ್ಟು ವರ್ಷಗಳಿಂದ ತಲೆ ಮರೆಸಿಕೊಂಡಿರುವ ನಕ್ಸಲರು ಇದ್ದರು ಅನ್ನೋ ಮಾಹಿತಿಯನ್ನು ಸ್ಥಳೀಯರು ನೀಡಿದ್ದಾರೆ. ಕಂಬಮಲೆ ಎಂಬ ಪ್ರದೇಶದಲ್ಲಿ ಟೀ ಎಸ್ಟೇಟ್ ಇದ್ದು, ಇಲ್ಲಿನ ಕೂಲಿ ಕಾರ್ಮಿಕರ ಜೊತೆ ನಕ್ಸಲರು ಮಾತುಕತೆ ನಡಿಸಿದ ವಿಡಿಯೋ ಈಗ ಪೊಲೀಸರಿಗೆ ಲಭ್ಯವಾಗಿದೆ.

ಇದನ್ನೂ ಓದಿ : ಖತರ್ನಾಕ್ ಕಳ್ಳನನ್ನು ಬಂಧಿಸಿದ ಕೋಟ ಪೊಲೀಸರು; ‘ನನ್ನ ಬಗ್ಗೆ ಮಾಹಿತಿ ಬೇಕಾದ್ರೆ ಯೂಟ್ಯೂಬ್ ನೋಡಿ’ ಎಂದ ಖದೀಮ!

ವಿಡಿಯೋ ಮಾಡುತ್ತಿರುವುದು ಗಮನಕ್ಕೆ ಬಂದರೂ ಏನೂ ಮಾತನಾಡದೆ ಶಸಸ್ತ್ರರಾಗಿದ್ದ ನಕ್ಸಲರು ಮಕ್ಕಿಮಲೆ ಕಾಡಿನೊಳಗೆ ಹೋಗಿ ಕಣ್ಮರೆ ಆಗಿದ್ದಾರೆ.

 

Continue Reading

bangalore

ರಾಜ್ಯದ ಎಂಟು ಜಿಲ್ಲೆಗಳಲ್ಲಿ ಮಳೆಯಾಗಲಿದೆ: ಹವಾಮಾನ ಇಲಾಖೆ ಮುನ್ಸೂಚನೆ

Published

on

ಬೆಂಗಳೂರು : ಬಿಸಿಲಿನ ಉರಿಗೆ ಜನರು ಬೆಂದು ಹೋಗಿದ್ದಾರೆ. ವರುಣ ಕೃಪೆ ತೋರಯ್ಯ ಎಂದು ಬೇಡಿಕೊಳ್ಳುತ್ತಿದ್ದಾರೆ. ಈ ನಡುವೆ ಅಲ್ಲಲ್ಲಿ ಮಳೆಯಾಗಿದ್ರೂ ಸೂರ್ಯ ತಾಪವೇನೂ ಕಮ್ಮಿಯಾಗಿಲ್ಲ. ಇದೀಗ 8 ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

heavy rain
ಎಲ್ಲೆಲ್ಲಿ ಮಳೆ ?
ರಾಜ್ಯದ ಜನತೆ ಮಳೆರಾಯನಿಗಾಗಿ ಕಾಯುತ್ತಿದ್ದಾರೆ. ಹವಾಮಾನ ಇಲಾಖೆ ಕೆಲವು ಜಿಲ್ಲೆಗಳಿಗೆ ಶುಭ ಸುದ್ದಿ ನೀಡಿದೆ. ಏಪ್ರಿಲ್ 24ರಂದು ಬಾಗಲಕೋಟೆ, ಬೆಳಗಾವಿ, ಬೀದರ್, ಮೈಸೂರು, ಕೊಡಗು, ಹಾಸನ ಸೇರಿ 8 ಜಿಲ್ಲೆಗಳಲ್ಲಿ ಕೆಲವೆಡೆ ಮಳೆ ಬೀಳಬಹುದು ಎಂದು ಹೇಳಿದೆ.

ತಾಪಮಾನ ಹೆಚ್ಚಳ :
ಭಾರತೀಯ ಹವಾಮಾನ ಇಲಾಖೆ ದೇಶದ ಹಲವು ಭಾಗಗಳಲ್ಲಿ ಬಿಸಿಲಿನ ತಾಪ ತೀವ್ರವಾಗಲಿದೆ ಎಂದು ಕೂಡ ಮಾಹಿತಿ ನಡಿದೆ. ಅದರಲ್ಲೂ ಪೂರ್ವ ಮತ್ತು ದಕ್ಷಿಣ ಭಾರತದ ಹೆಚ್ಚಿನ ಭಾಗಗಳಲ್ಲಿ ಶಾಖದ ಅಲೆಗಳು ಹೆಚ್ಚಲಿವೆ ಎಂದಿದೆ. ಏಪ್ರಿಲ್ 25 ರ ವರೆಗೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ. ಏಪ್ರಿಲ್ 27 ರ ವರೆಗೆ ಈ ಪ್ರದೇಶಗಳಲ್ಲಿ ಉಷ್ಣಾಂಶ 2 ರಿಂದ 2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ : ಖತರ್ನಾಕ್ ಕಳ್ಳನನ್ನು ಬಂಧಿಸಿದ ಕೋಟ ಪೊಲೀಸರು; ‘ನನ್ನ ಬಗ್ಗೆ ಮಾಹಿತಿ ಬೇಕಾದ್ರೆ ಯೂಟ್ಯೂಬ್ ನೋಡಿ’ ಎಂದ ಖದೀಮ!

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಏಪ್ರಿಲ್ 6 ರಂದು ರಾಜಧಾನಿಯಲ್ಲಿ ಗರಿಷ್ಠ 37.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಎಂಟು ವರ್ಷಗಳಲ್ಲಿ ಅತಿ ಹೆಚ್ಚು ಎಂದು ವರದಿಯಾಗಿದೆ.

ಮುಂದಿನವಾರ ನಗರದಲ್ಲಿ ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

Continue Reading

LATEST NEWS

ಖತರ್ನಾಕ್ ಕಳ್ಳನನ್ನು ಬಂಧಿಸಿದ ಕೋಟ ಪೊಲೀಸರು; ‘ನನ್ನ ಬಗ್ಗೆ ಮಾಹಿತಿ ಬೇಕಾದ್ರೆ ಯೂಟ್ಯೂಬ್ ನೋಡಿ’ ಎಂದ ಖದೀಮ!

Published

on

ಕೋಟ : ಈತ ಅಂತಿಂಥ ಕಳ್ಳನಲ್ಲ..ಖತರ್ನಾಕ್ ಕಳ್ಳ! ಇತ್ತೀಚೆಗೆ ಕೇರಳದಿಂದ ಭಾರೀ ಮೊತ್ತದ ಚಿನ್ನಾಭರಣವನ್ನು ಕಳ್ಳತನ ಮಾಡಿ ಬಿಹಾರಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಉಡುಪಿ ಜಿಲ್ಲೆಯ ಕೋಟ ಪೊಲೀಸರ ಅತಿಥಿಯಾಗಿದ್ದಾನೆ. ಬಿಹಾರ ಮೂಲದ ಮಹಮ್ಮದ್ ಇರ್ಫಾನ್‌ ಬಂಧಿತ ಆರೋಪಿ. ಬ್ರಹ್ಮಾವರ ತಾಲೂಕು ಕೋಟ ಮೂರ್ಕೈನಲ್ಲಿ ಶನಿವಾರ ರಾತ್ರಿ ಕೋಟ ಪೊಲೀಸರು ನಡೆಸಿದ ಕಾರ್ಯಾಚರಣೆ ಸಂದರ್ಭ ಈತ ಬಲೆಗೆ ಬಿದ್ದಿದ್ದಾನೆ. ವಿಚಾರಣೆ ವೇಳೆ ಈತನ ಕರಾಮತ್ತು ಕೇಳಿ ಪೊಲೀಸರೇ ಶಾಕ್ ಗೊಳಗಾಗಿದ್ದಾರೆ.


‘ಕೋಟಿ’ ಮೇಲೆ ಕಣ್ಣು:

ಇರ್ಫಾನ್ ಸಾಮಾನ್ಯ ಕಳ್ಳನಲ್ಲ. ಈತನ ವಿರುದ್ಧ 13 ರಾಜ್ಯಗಳಲ್ಲಿ ಹಲವಾರು ಕಳ್ಳತನ ಆರೋಪಗಳಿವೆ. ಇದರ ಜತೆಗೆ ಹಲವಾರು ಕುತೂಹಲಕಾರಿ ವಿಷಯಗಳು ಹೊರಬಿದ್ದಿವೆ. ಈತ ಈಗಾಗಲೇ ಹಲವು ಬಾರಿ ಪೊಲೀಸರ ಅತಿಥಿಯಾಗಿದ್ದು, ಸಿನಿಮಾ ನಟರು, ರಾಜಕಾರಣಿಗಳು, ಗುತ್ತಿಗೆದಾರರು ಸೇರಿದಂತೆ ಅತ್ಯಂತ ಶ್ರೀಮಂತರ ಮನೆಗಳನ್ನೇ ಹೊಂಚುಹಾಕಿ ಕಳ್ಳತನ ಮಾಡುತ್ತಿದ್ದ.

ಒಮ್ಮೆ ಕಣ್ಣಿಟ್ಟರೆ ಸಾಕು! ಎಷ್ಟೇ ದಿನಗಳಾದರೂ ಕಾದು ತನ್ನ ಕೈಚಳಕ ತೋರುತ್ತಿದ್ದ. ಹೆಚ್ಚಿನ ಬಾರಿ ಓರ್ವನೇ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದ ಹಾಗೂ ಪ್ರತಿ ಬಾರಿಯೂ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣಗಳನ್ನೇ ಲಪಟಾಯಿಸುತ್ತಿದ್ದ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಬ್ಯಾಗ್ ಪರಿಶೀಲಿಸಿದ ಕಸ್ಟಮ್ಸ್ ಅಧಿಕಾರಿಗಳಿಗೆ ಶಾಕ್; ಅದರಲ್ಲಿತ್ತು 10 ಅನಕೊಂಡಾ!

‘ನನ್ನ ಬಗ್ಗೆ ಯೂಟ್ಯೂಬ್ ನೋಡಿ’ ಎಂದ ಖದೀಮ :

ಕೋಟ್ಯಂತರ ರೂಪಾಯಿ ಕಳವುಗೈದು ಬಂಧಿಸಲ್ಪಟ್ಟ ಇರ್ಫಾನ್ ವಿಚಾರಣೆಗಿಳಿದ ಪೊಲೀಸರಿಗೆ ಆತನ ಹೇಳಿಕೆ ಅಚ್ಚರಿ ಹುಟ್ಟಿಸಿತ್ತು. ‘ ನನ್ನ ಬಗ್ಗೆ ಮಾಹಿತಿ ಬೇಕಾದರೆ ಯೂಟ್ಯೂಬ್‌ನಲ್ಲಿ ಮಹಮ್ಮದ್ ಇರ್ಫಾನ್ ರೋಬಿನ್‌ಹುಡ್ ಎಂದು ಸರ್ಚ್ ಮಾಡಿ’ ಎಂದಿದ್ದನಂತೆ ಈ ಖದೀಮ. ಯೂಟ್ಯೂಬ್‌ನಲ್ಲಿ ಸರ್ಚ್ ಮಾಡಿದಾಗ ಈತನ ಬಗ್ಗೆ ಇರುವ ಹತ್ತಾರು ವೀಡಿಯೋಗಳು ಸಿಕ್ಕಿವೆ. ಅದರಲ್ಲಿ ಕಳ್ಳತನ ಹಾಗೂ ಕೋಟ್ಯಂತರ ರೂ. ಮೊತ್ತವನ್ನು ಜನರಿಗೆ ಹಂಚುವ ಕುರಿತು ವಿಚಾರಗಳಿವೆ. ಇವೆಲ್ಲವನ್ನು ನೋಡಿದ ಪೊಲೀಸರಿಗೆ ಶಾಕ್ ಆಗಿದ್ದು ಸುಳ್ಳಲ್ಲ.

Continue Reading

LATEST NEWS

Trending