Connect with us

    LATEST NEWS

    ವಿನೇಶ್ ಫೋಗಟ್‌ಗೆ ಬೆಳ್ಳಿ ಪದಕದ ನಿರೀಕ್ಷೆ; ಮನವಿ ಅಂಗೀಕರಿಸಿದ ನ್ಯಾಯಾಲಯ

    Published

    on

    OLYMPIC: ಪ್ಯಾರಿಸ್ ಒಲಿಂಪಿಕ್ಸ್‌ನ ಫೈನಲ್ ಪ್ರವೇಶಿಸಿದ್ರೂ ಅನರ್ಹತೆಗೆ ಒಳಗಾಗಿರುವ ವಿನೇಶ್ ಫೋಗಟ್‌ ಅವರಿಗೆ ಬೆಳ್ಳಿ ಪದಕ ಗೆಲ್ಲುವ ಅವಕಾಶಕ್ಕೆ ಮರು ಜೀವ ಬಂದಿದೆ. ಅನರ್ಹತೆಯ ವಿರುದ್ಧ ವಿನೇಶ್ ಫೋಗಟ್‌ ಮಾಡಿದ ಮನವಿಯನ್ನು ಸಿಎಎಸ್‌ (Court of Arbitration for Sport) ಅಂಗೀಕರಿಸಿದೆ.

    ಸಿಎಎಸ್‌ ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ (IOC) ಕೇಳಿಕೊಂಡಲ್ಲಿ ವಿನೇಶ್ ಫೋಗಟ್ ಅವರಿಗೆ ಬೆಳ್ಳಿ ಪದಕ ಸಿಗುವ ಅವಕಾಶ ಒದಗಲಿದೆ. ಮಹಿಳೆಯರ 50 ಕೆಜಿ ವಿಭಾಗದಲ್ಲಿ ಮೂರು ಗೆಲುವುಗಳ ನಂತರ ಫೋಗಟ್‌ ಫೈನಲ್‌ ಪ್ರವೇಶಿಸಿದ್ದರು. ಈ ಮೂಲಕ ಒಲಿಂಪಿಕ್ಸ್ ಫೈನಲ್ ನಲ್ಲಿ ಭಾರತದ ಮೊದಲ ಚಿನ್ನದ ಭರವಸೆಯನ್ನು ಹೆಚ್ಚಿಸಿದ್ದರು.

    ವಿನೇಶ್ ಫೋಗಟ್ ಗೆ 4 ಕೋಟಿ ರೂ. ಬಹುಮಾನ: ಬೆಳ್ಳಿ ಪದಕ ವಿಜೇತೆ ಮಾದರಿಯಲ್ಲಿ ಗೌರವಿಸಲು ಮುಂದಾದ ಸರ್ಕಾರ

    ಆದ್ರೆ ಬುಧವಾರ ಫೈನಲ್ ಹಣಾಹಣಿಯ ಗಂಟೆಗಳ ಮೊದಲು 100 ಗ್ರಾಂ ತೂಕ ಹೆಚ್ಚಿದೆ ಎಂಬ ಕಾರಣ ನೀಡಿ ಪಂದ್ಯದಿಂದ ಅವರನ್ನು ಅನರ್ಹಗೊಳಿಸಲಾಗಿತ್ತು. ಈ ವಿಚಾರವಾಗಿ ಆರ್ಬಿಟ್ರೇಷನ್ ನ್ಯಾಯಾಲಯದ ಮೊರೆ ಹೋಗಿದ್ದರು. ಅವರ ಮನವಿಯನ್ನು ನ್ಯಾಯಾಲಯ ಅಂಗೀಕರಿಸಿದ ಕಾರಣ ಬೆಳ್ಳಿ ಪದಕ ಸಿಗುವ ನಿರೀಕ್ಷೆ ಮೂಡಿಸಿದೆ.

    DAKSHINA KANNADA

    ಅಡವಿಯಲ್ಲಿ ಮಾನವನನ್ನು ಹೋಲುವ ದೈತ್ಯ ಪ್ರಾಣಿ ಪತ್ತೆ..!?

    Published

    on

    ಮಂಗಳೂರು (ನ್ಯೂಯಾರ್ಕ್‌ ಪೋಸ್ಟ್‌ ವರದಿ ) : ಉತ್ತರ ಅಮೆರಿಕಾದ ಜಾನಪದ ಹಿನ್ನಲೆಯುಳ್ಳ ಮನುಷ್ಯನನ್ನು ಹೋಲುವ ದೊಡ್ಡ ಪಾದದ ಜೀವಿಯನ್ನು ಕಾಡಿನಲ್ಲಿ ನೋಡಿರುವುದಾಗಿ ಬಹಳಷ್ಟು ಜನ ಹೇಳಿಕೊಂಡಿದ್ದರು. ಆದ್ರೆ ಇದುವರೆಗೂ ಇದನ್ನು ಅಧಿಕೃತವಾಗಿ ಒಪ್ಪಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದ್ರೆ ಇದೀಗ ವ್ಯಕ್ತಿಯೊಬ್ಬರು ತಾನು ಓಕ್ಲಾಹಾಮಾದ ಲಾಟನ್‌ನಲ್ಲಿರುವ ಪ್ಯಾರಲಲ್ ಅಡವಿಯಲ್ಲಿ ಈ ಪ್ರಾಣಿಯನ್ನು ನೋಡಿದ್ದಾಗಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿರುವ ವ್ಯಕ್ತಿ ಇದು ನನ್ನ ಜೀವನದ ಭಯಾನಕ ಕ್ಷಣ ಎಂದು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.


    ನ್ಯೂಯಾರ್ಕ್‌ ಪೋಸ್ಟ್‌ ಈ ಕುರಿತಾದ ಒಂದು ವರದಿಯನ್ನು ಪ್ರಕಟಿಸಿದ್ದು, ಅದರಲ್ಲಿ ಈ  ದೊಡ್ಡ ಪಾದದ ಪ್ರಾಣಿ ಕಂಡು ಬಂದ ಬಗ್ಗೆ ಬರೆಯಲಾಗಿದೆ. ಪೋಸ್ಟ್‌ ಮಾಡಿರುವ ವಿಡಿಯೋದಲ್ಲಿ ದೈತ್ಯಾಕಾರದ ಮಾನವನನ್ನು ಹೋಲುವ ಪ್ರಾಣಿಯೊಂದು ಮರದ ಬುಡದಲ್ಲಿ ಕುಳಿತು ಅಲ್ಲಿನ ಹೂವನ್ನು ಕೀಳುತ್ತಿರುವ ದೃಶ್ಯ ಸೆರೆಯಾಗಿದೆ. ಕೇವಲ ಒಂಬತ್ತು ಸೆಕೆಂಡ್ ಮಾತ್ರ ಈ ದೃಶ್ಯ ಕಂಡು ಬಂದಿದೆ. ಇಷ್ಟೇ ಅಲ್ಲದೆ ನ್ಯೂಯಾರ್ಕ್‌ ಪೋಸ್ಟ್ ಈ ಹಿಂದೆ ಇಂತಹ ಪ್ರಾಣಿ ಕಂಡು ಬಂದ ಕ್ಷಣ ಹಾಗೂ ಅದರ 16 ಇಂಚಿನ ಪಾದದ ಹೆಜ್ಜೆ ಗುರುತಿನ ಚಿತ್ರವನ್ನು ಪೋಸ್ಟ್ ಮಾಡಿದೆ.

    ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯನ್ನು ಹುಟ್ಟು ಹಾಕಿದ್ದು, ನಿಜವಾಗಿಯೂ ಇಂತಹ ಒಂದು ಜೀವಿ ಇದೆಯಾ ಎಂಬ ಗೊಂದಲ ಸೃಷ್ಟಿಸಿದೆ. ಅನೇಖರು ಅಮೆರಿಕಾದ ಪೌರಾಣಿಕ ಹಿನ್ನಲೆ ಉಳ್ಳ ಜನಪದಲ್ಲಿ ಸೇರಿಕೊಂಡಿರುವ ಈ ಜೀವಿ ಈಗಲೂ ಇದೆ ಎಂದು ವಾದ ಮಂಡಿಸಿದ್ದಾರೆ. ಇನ್ನೂ ಕೆಲವರು ಇದೊಂದು ಅಸ್ಪಷ್ಟ ವಿಡಿಯೋ ಆಗಿದ್ದು ಇದು ನಂಬಿಕೆಗೆ ಅರ್ಹವಾಗಿಲ್ಲ ಎಂದಿದ್ದಾರೆ. ಹಾಗೇ ಇನ್ನೂ ಕೆಲವರು ನಾವೂ ಇದನ್ನು ನೋಡಿದ್ದು, ದೃಶ್ಯ ಸೆರೆ ಹಿಡಿದಿಲ್ಲ ಎಂದಿದ್ದಾರೆ.


    ಮನುಷ್ಯಂತೆ ದೇಹ ರಚನೆ ಹೊಂದಿರುವ ದೈತ್ಯಾಕಾರದ ಮೈಮೇಲೆ ರೋಮಗಳನ್ನು ಹೊಂದಿರುವ ಜೀವಿ ಇಂದಿಗೂ ಅರಣ್ಯ ಪ್ರದೇಶದಲ್ಲಿ ಇದೆ ಎಂದು ಅಮೆರಿಕಾದ ಜನರು ನಂಬಿಕೆ ಇಟ್ಟುಕೊಂಡಿದ್ದಾರೆ. ಈ ಜೀವಿಯ ಬಗ್ಗೆ ಅನೇಕ ಕಥೆಗಳಿದ್ದು, ಇದಕ್ಕೆ ವೈಜ್ಞಾನಿಕ ಪುರಾವೆಗಳೂ ಸಿಕ್ಕಿದೆ ಎಂದು ಹೇಳಾಗಿದೆ. ಆದ್ರೆ ಈಗ ಹರಿದಾಡುತ್ತಿರುವ ಈ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿದೆ.

    ವಿಡಿಯೋ ವೀಕ್ಷಿಸಲು ಕ್ಲಿಕ್‌ ಮಾಡಿ :

    Continue Reading

    LATEST NEWS

    VIRAL VIDEO: ತಾಯಿಯೊಂದಿಗೆ ಎಂಟು ತಿಂಗಳ ಕಂದಮ್ಮನ ಶ್ರೀ ಕೃಷ್ಣ ದಾಮೋದರಾಷ್ಟಕಂ ಪಠಣ

    Published

    on

    ಮಂಗಳೂರು: ಪುಟ್ಟ ಕಂದಮ್ಮಗಳ ಜೊತೆ ತುಸು ಘಳಿಗೆ ಇದ್ದರೂ ಸಿಗುವ ಖುಷಿಯೇ ಬೇರೆ. ಮುಗ್ಧ ಮನಸ್ಸುಗಳು ನಿಸ್ವಾರ್ಥದಿಂದ ಆಡುವ ಪ್ರತಿಯೊಂದು ತೊದಲು ಮಾತನ್ನು ಕೇಳುವಾಗ ಕಿವಿಗೆ ಇಂಪೆನಿಸುತ್ತದೆ. ಮಕ್ಕಳ ಮುದ್ದಾದ ವಿಡಿಯೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ತಾಯಿಯೊಂದಿಗೆ ಎಂಟು ತಿಂಗಳ ಮಗುವೊಂದು ಶ್ರೀ ಕೃಷ್ಣ ದಾಮೋದರಾಷ್ಟಕಂ ಪಠಿಸಿದ್ದು, ಸಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ.

    ಅರ್ಜುನನ ಪುತ್ರ ಅಭಿಮನ್ಯು ತಾಯಿಯ ಗರ್ಭದಲ್ಲಿರುವಾಗಲೇ ಚಕ್ರವ್ಯೂಹವನ್ನು ಭೇದಿಸುವ ಕಲೆಯನ್ನು ತಂದೆಯಿಂದ ಕಲಿತಿರುತ್ತಾನೆ. ಅಂತೆಯೇ ಈ ಮಗು ತಾಯಿಯಿಂದ ಶ್ರೀ ಕೃಷ್ಣ ದಾಮೋದರಾಷ್ಟಕಂ ಅನ್ನು ಕಲಿತಿದೆ ಎನ್ನುವ ಸಾಲುಗಳೊಂದಿಗೆ ಈ ವಿಡಿಯೋವನ್ನು Vaidik Gyaan ಹೆಸರಿನ ಖಾತೆಯಲ್ಲಿ  ಹಂಚಿಕೊಳ್ಳಲಾಗಿದೆ. ಶ್ರೀ ಕೃಷ್ಣ ದಾಮೋದರಾಷ್ಟಕಂ ಶ್ಲೋಕ ಪಠಿಸುತ್ತಿರುವಾಗ ಅದರ ಕೊನೆಯ ಪದವನ್ನು ಮಗುವು ಮುದ್ದಾಗಿ ಉಚ್ಚರಿಸುತ್ತಿದೆ.
    ಸಮಾಜಿಕ ಜಾಲತಾಣದಲ್ಲಿ ಅಧಿಕ ವೀಕ್ಷಣೆ ಕಂಡಿದ್ದು. ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಮಗುವಿನ ಈ ಆಧ್ಯಾತ್ಮಕ ಸಾಧನೆಯನ್ನು ಒಬ್ಬರು ಹೊಗಳಿದ್ದಾರೆ. ಮತ್ತೊಬ್ಬರು, ಜೈ ಸನಾತನ ಧರ್ಮ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ‘ಮಗುವಿನ ಬಾಯಿಂದ ಶ್ರೀ ಕೃಷ್ಣ ದಾಮೋದರಾಷ್ಟಕಂ ಪಠಣ ಕೇಳುವುದೇ ಕಿವಿಗೆ ಇಂಪು’ ಎಂದಿದ್ದಾರೆ.

     

    watch this video : 

    Continue Reading

    LATEST NEWS

    ಪ್ರೀತಿಸಿ ಮಂಗಳಮುಖಿಯನ್ನು ಮದುವೆಯಾದ ಯುವಕ

    Published

    on

    ಆಂಧ್ರಪ್ರದೇಶ: ಯುವಕನೊಬ್ಬ ಮಂಗಳಮುಖಿಯನ್ನು ಮೂರು ವರ್ಷಗಳಿಂದ ಪ್ರೀತಿಸಿ ಮದುವೆಯಾಗಿರುವ ಘಟನೆ ಆಂಧ್ರಪ್ರದೇಶದ ಎನ್.ಟಿಆರ್ ಜಿಲ್ಲೆಯಲ್ಲಿ ನಡೆದಿದೆ.

    ವಿಸ್ಸನ್ನಪೇಟೆ ನಿವಾಸಿ ನಂದು ಮತ್ತು ಎಂಕೂರಿನ ತೃತೀಯಲಿಂಗಿ ನಕ್ಷತ್ರಾ ಮದುವೆಯಾದ ನವ ಜೋಡಿ. ಸದ್ಯ ಇವರಿಬ್ಬರ ಮದುವೆಯ ಫೋಟೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

    ತೃತೀಯಲಿಂಗಿ ಸಮುದಾಯದ ಪ್ರತಿನಿಧಿಗಳ ಸಮ್ಮುಖದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಇತ್ತೀಚಿಗಷ್ಟೇ ಮದುವೆ ನಡೆದಿದೆ.  ನಾನು ಮಂಗಳಮುಖಿಯನ್ನು ಮದುವೆಯಾಗುವುದು ನನ್ನ ಕುಟುಂಬದವರಿಗೆ ಇಷ್ಟವಿಲ್ಲ. ಆದರೆ ನಾವಿಬ್ಬರು ಸುದೀರ್ಘ ಚರ್ಚೆ ನಡೆಸಿ ಮದುವೆಯಾಗಲು ನಿರ್ಧರಿಸಿದೆವು.

    Continue Reading

    LATEST NEWS

    Trending