Connect with us

ಮಂಗಳೂರಿನ ಕಂಪ್ಯೂಟರ್ ಶಿಕ್ಷಕಿಯ ಮಹತ್ವದ ಶೋಧನೆ :ರೂ. 300 ವೆಚ್ಚದಲ್ಲಿ ಮಿನಿ ಸ್ಯಾನಿಟೈಸರ್‌ ಯಂತ್ರ.. !

Published

on

ಮಂಗಳೂರಿನ ಕಂಪ್ಯೂಟರ್ ಶಿಕ್ಷಕಿಯ ಮಹತ್ವದ ಶೋಧನೆ :ರೂ. 300 ವೆಚ್ಚದಲ್ಲಿ ಮಿನಿ ಸ್ಯಾನಿಟೈಸರ್‌ ಯಂತ್ರ.. !

ಮಂಗಳೂರು: ಯಂತ್ರವನ್ನು ಮುಟ್ಟದೆ ಸ್ಯಾನಿಟೈಸರ್ ನಳ್ಳಿ ಬಳಿ ಕೈ ಇಟ್ಟರೆ ಸಾಕು ಒಂದಷ್ಟು ಸ್ಯಾನಿಟೈಸರ್ ನೇರವಾಗಿ ಕೈಗೆ ಬೀಳುವಂತಹ ಸ್ವಯಂಚಾಲಿತ ಮಿನಿ ಯಂತ್ರವನ್ನು ಮಂಗಳೂರು ಹೊರವಲಯದ ಹಳೆಯಂಗಡಿ ಬಳಿಯ ಶಾಲಾ ಶಿಕ್ಷಕಿಯೊಬ್ಬರು ರೂಪಿಸಿದ್ದಾರೆ. ಅಲ್ಲೆ ಅಪಾರ ಮೆಚ್ಚುಗೆಗೆ ಕೂಡ ಪಾತ್ರರಾಗಿದ್ದಾರೆ.

ಪಡುಪಣಂಬೂರು ಗ್ರಾಮ ಪಂಚಾಯಿತಿಯ ತೋಕೂರು ತಪೋವನದ ನಿಟ್ಟೆ ವಿದ್ಯಾ ಸಂಸ್ಥೆಯ ಡಾ.ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಕಿಯಾಗಿರುವ, ಸುರತ್ಕಲ್‌ ನಿವಾಸಿ ಜ್ಯೋತಿ ಕಿರಣ್ ಬಂಜನ್ ಎಸ್. ಈ ಯಂತ್ರವನ್ನು ಶೋಧಿಸಿದವರು. ‌ಅದಕ್ಕೆ ಅವರು ಮಾಡಿರುವ ವೆಚ್ಚ ಮಾತ್ರ ರೂ. 300 ..!

‘ಸಾರ್ವಜನಿಕವಾಗಿ ಇಟ್ಟಿರುವ ಸ್ಯಾನಿಟೈಸರ್ ಯಂತ್ರವನ್ನು ಕಾಲು ಅಥವಾ ಕೈನಿಂದ ಬಳಸಬೇಕು. ಅವುಗಳನ್ನು ಕೊರೊನಾ ಶಂಕಿತ ವ್ಯಕ್ತಿಗಳು ಕೂಡ ಬಳಸುತ್ತಾರೆ.

ಇದರಿಂದಾಗಿ ಯಾವುದೇ ರೋಗ ಲಕ್ಷಣ ಇಲ್ಲದ ವ್ಯಕ್ತಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಸಮಸ್ಯೆ ದೂರ ಮಾಡಲು ಅತಿ ಸುಲಭದಲ್ಲಿ, ಕಡಿಮೆ ಖರ್ಚಿನಲ್ಲಿ ಕೈಯಲ್ಲಿ ಮುಟ್ಟದೇ ಬಳಸುವಂತಹ ಈ ಸ್ವಯಂಚಾಲಿತ ಮಿನಿ ಸ್ಯಾನಿಟೈಸರ್ ಯಂತ್ರ ನೆರವಾಗಲಿದೆ’ ಎನ್ನುತ್ತಾರೆ ಶಿಕ್ಷಕಿ ಜ್ಯೋತಿ ಕಿರಣ್.

‘ಎಂಸಿಎ ಪದವೀಧರೆಯಾಗಿರುವ ಜ್ಯೋತಿ ಅವರು ಪ್ರತಿಭಾನ್ವಿತೆ. ಅವರ ಈ ಹೊಸ ಶೋಧನೆ ಎಲ್ಲರ ಉಪಯೋಗಕ್ಕೂ ಬರುತ್ತದೆ. ಜನರ ಆರೋಗ್ಯ ಸುರಕ್ಷತೆಗೆ ಒತ್ತು ನೀಡುತ್ತದೆ. ಅವರಿಂದ ಇನ್ನಷ್ಟು ಜನೋಪಯೋಗಿ ಶೋಧನೆಗಳು ಬೆಳಕಿಗೆ ಬರಲಿ’ ಎಂದು ಡಾ.ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಶ್ರೀಲತಾ ರಾವ್ ಶುಭ ಹಾರೈಸಿದ್ದಾರೆ.

ಒಟ್ಟಿನಲ್ಲಿ ಕೊರೊನಾದಂತಹ ಮಹಾ ಮನೆ ಒಳಗೂ ವಕ್ಕರಿಸಿದ ಈ ಪರ್ವ ಕಾಲದಲ್ಲಿ ಸಾವಿರಾರೂ ರೂಪಾಯಿ ವ್ಯಯಿಸಿ ತರುವ ಸ್ಯಾನಿಟೈಜರ್ ಯಂತ್ರ ಕೇಲವೇ ದಿನಗಳಳ್ಲಿ ಹಾಳಅಗಿ ಮೂಲೆ ಸೇರುವ ಈ ಕಾಲಘಟ್ಟದಲ್ಲಿ ಜ್ಯೋತಿ ಕಿರಣ್ ಬಂಜನ್ ನಿರ್ಮಿಸಿರುವ ಈ ಕಡಿಮೆ ಖರ್ಚಿನ ಯಂತ್ರ ನಿಜಕ್ಕೂ ಮಾದರಿಯಾಗಿದೆ.

Click to comment

Leave a Reply

Your email address will not be published. Required fields are marked *

DAKSHINA KANNADA

ತಡೆಬೇಲಿಗೆ ಡಿಕ್ಕಿ ಹೊಡೆದು ಅಂಡರ್‌ಪಾಸ್‌ ಗೆ ಉರುಳಿದ ವಾಹನ; ಹಲವರಿಗೆ ಗಾಯ

Published

on

ಮಂಗಳೂರು : ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ಎನ್ ಐ ಟಿ ಕೆ ಅಂಡರ್ ಪಾಸ್ ಬಳಿ ಬೈಕ್ ಗೆ ಬೋಲೇರೋ ಪಿಕಪ್ ಡಿಕ್ಕಿಯಾಗಿ ಬೈಕ್ ಸವಾರ ಸಹಿತ ನಾಲ್ವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಬೈಕ್ ಗೆ ಸುರತ್ಕಲ್ ಎನ್ಐಟಿಕೆ ಅಂಡರ್ ಪಾಸ್ ಬಳಿ ಬೊಲೆರೋ ಪಿಕಪ್ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೈಕ್ ಹಾಗೂ ಪಿಕಪ್ ಹೆದ್ದಾರಿ ಬದಿಯ ಅಪಘಾತ ತಡೆಗೆ ಹಾಕಿದ್ದ ತಡೆ ಬೇಲಿಗೆ ಡಿಕ್ಕಿ ಹೊಡೆದು ಸುಮಾರು 12 ಅಡಿ ಆಳದ ಅಂಡರ್ ಪಾಸ್ ಕೆಳಗಡೆ ಬಿದ್ದಿದೆ.

ಇದನ್ನೂ ಓದಿ: ಕೊಣಾಜೆ : ಸ್ಕೂಟರ್ – ಟೆಂಪೋ ನಡುವೆ ಅಪ*ಘಾತ; ಸವಾರ ಸಾವು

ಅಪಘಾತದಿಂದ ಬೈಕ್ ಸವಾರ ಸಹಿತ ಬೊಲೆರೋ ಪಿಕಪ್ ನಲ್ಲಿದ್ದ ವಾಹನದ ಚಾಲಕ ಹಾಗೂ ಪ್ರಯಾಣಿಕರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಕ್ರೇನ್ ಮೂಲಕ ಎರಡು ವಾಹನಗಳನ್ನು ತೆರವುಗೊಳಿಸಲಾಯಿತು. ಅಪಘಾತದ ಗಾಯಾಳುಗಳ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ.

Continue Reading

DAKSHINA KANNADA

ಮಂಗಳೂರು : ರಾಜೀವ್ ಗಾಂಧಿ ವಿವಿ ಪ್ರಾದೇಶಿಕ ಕೇಂದ್ರಕ್ಕೆ ಸಿಎಂ ಶಿಲಾನ್ಯಾಸ

Published

on

ಮಂಗಳೂರು : ಸುಮಾರು 50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅತ್ಯಾಧುನಿಕ ಸೌಲಭ್ಯ ಹೊಂದಿರುವ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯ ಪ್ರಾದೇಶಿಕ ಕೇಂದ್ರಕ್ಕೆ ಸಿಎಂ ಸಿದ್ಧರಾಮಯ್ಯ ಶಿಲಾನ್ಯಾಸ ನೆರವೇರಿಸಿದ್ದಾರೆ. ಮೇರಿ ಹಿಲ್‌ನಲ್ಲಿ ನಿರ್ಮಾಣವಾಗಲಿರುವ ಈ ಪ್ರಾದೇಶಿಕ ಕೇಂದ್ರ ವೈದ್ಯಕೀಯ ಶಿಕ್ಷಣ ಸಂಬಂಧಿತ ವಿಚಾರಗಳಿಗೆ ಪೂರಕವಾಗಲಿರುವ ವ್ಯವಸ್ಥೆಗಳು ಈ ಕೇಂದ್ರದಲ್ಲಿ ಇರಲಿದೆ. ಇದು ವಿದ್ಯಾರ್ಥಿಗಳಿಂದ ಹಿಡಿದು ಸಂಶೋಧನೆ ನಡೆಸುವ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ.

ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯ ಏಷ್ಯಾದಲ್ಲೇ ಅತೀ ದೊಡ್ಡ ಸಂಸ್ಥೆಯಾಗಿದ್ದು, ಮಂಗಳೂರಿನಲ್ಲಿ ನಿರ್ಮಾಣವಾಗುವ ಪ್ರಾದೇಶಿಕ ಕೇಂದ್ರ ದೇಶದಲ್ಲೇ ದೊಡ್ಡ ಕೇಂದ್ರವಾಗಲಿದೆ. ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಈ ಕೇಂದ್ರ ಸ್ಥಾಪನೆಗೆ 2024-25ರ ಬಜೆಟ್‌ನಲ್ಲಿ ಅನುದಾನ ನೀಡಲಾಗಿದ್ದು, ಈಗ ಚಾಲನೆ ನೀಡಲಾಗುತ್ತಿದೆ. ಈ ಕೇಂದ್ರ ಸ್ಥಾಪನೆ ಬಳಿಕ ಕರಾವಳಿ ಭಾಗದ ಜನರಿಗೆ ವೈದ್ಯಕೀಯ ಶಿಕ್ಷಣ ಸಂಬಂಧಿತ ವಿಚಾರವಾಗಿ ಬೆಂಗಳೂರಿಗೆ ಹೋಗುವುದು ತಪ್ಪಲಿದೆ ಎಂದು ಹೇಳಿದ್ದಾರೆ.

ಬಡವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಸಿಗುವಂತಹ ಸೌಲಭ್ಯಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಬೇಕು ಎಂಬ ಚಿಂತನೆ ಸರ್ಕಾರಕ್ಕೆ ಇದೆ. ಇದಕ್ಕೆ ಬೇಕಾದ ಎಲ್ಲಾ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ : ಆ ನಟ ಕಿಸ್ ಮಾಡಿದಕ್ಕೆ ವಾಂತಿ ಮಾಡಿಕೊಂಡಿದ್ದರಂತೆ ಸ್ಟಾರ್ ನಟಿ

ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ.ಖಾದರ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್‌, ಸಚಿವ ದಿನೇಶ್ ಗುಂಡೂರಾವ್, ಸಂಸದ ಬ್ರಿಜೇಶ್ ಚೌಟ ಸೇರಿದಂತೆ ಶಾಸಕರು ಹಾಗೂ ಪರಿಷತ್ ಸದಸ್ಯರು ಭಾಗಿಯಾಗಿದ್ದರು.

Continue Reading

FILM

ಆ ನಟ ಕಿಸ್ ಮಾಡಿದಕ್ಕೆ ವಾಂತಿ ಮಾಡಿಕೊಂಡಿದ್ದರಂತೆ ಸ್ಟಾರ್ ನಟಿ

Published

on

ಮಂಗಳೂರು/ಮುಂಬೈ : ಕೆಲವು ನಟಿಯರು ನೋ ಕಿಸ್ಸಿಂಗ್ ನೀತಿಯನ್ನು ಅನುಸರಿಸುತ್ತಾರೆ. ಈ ಬಗ್ಗೆ ಸಿನಿಮಾ ಒಪ್ಪಿಕೊಳ್ಳುವ ಮೊದಲೇ ಮಾತುಕತೆ ನಡೆಸಿರುತ್ತಾರೆ. ಇದನ್ನು ಬಾಲಿವುಡ್‌ನ ಈ ಸ್ಟಾರ್ ನಟಿ ಕೂಡ ಅನುಸರಿಸುತ್ತಿದ್ದರು.

ಆದರೆ ಆ ಒಬ್ಬ ನಟ ಬಲವಂತವಾಗಿ ಕಿಸ್ ಮಾಡಿದಕ್ಕೆ ವಾಂತಿ ಮಾಡಿ 100 ಸಲ ಮುಖ ತೊಳೆದಿದ್ದೆ ಎಂದು ಸ್ಟಾರ್ ನಟಿ ಹೇಳಿದ್ದಾರೆ.

ಬಾಲಿವುಡ್ ನಟಿ ರವೀನಾ ಟಂಡನ್ ಮೂರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿದ್ದಾರೆ. ರವಿನಾ ಟಂಡನ್ ನೋ ಕಿಸ್ಸಿಂಗ್ ನೀತಿಯನ್ನು ಅನುಸರಿಸಿದ ನಟಿಯರಲ್ಲಿ ರವೀನಾ ಟಂಡನ್ ಕೂಡ ಒಬ್ಬರು.

ಆದರೆ ಸಿನಿಮಾವೊಂದರ ಶೂಟಿಂಗ್ ವೇಳೆ ಸಹ ನಟರೊಬ್ಬರು ಆಕಸ್ಮಿಕವಾಗಿ ರವೀನಾ ಟಂಡನ್ ತುಟಿಗಳಿಗೆ ಮುತ್ತಿಟ್ಟ ಘಟನೆ ನಡೆದಿತ್ತು. ಆ ನಂತರ ಏನಾಯಿತು ಎಂಬುದನ್ನು ಸ್ವತಃ ರವೀನಾ ಅವರೇ ಹೇಳಿದ್ದಾರೆ.

ಇದನ್ನೂ ಓದಿ: ಎಲಿಮಿನೇಟ್ ಆದ ಸ್ಪರ್ಧಿಗಳ ರೀ ಎಂಟ್ರಿ; ಕುತೂಹಲ ಕೆರಳಿಸಿದ ಎಲಿಮಿನೇಷನ್

ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಈ ಬಗ್ಗೆ ರವೀನಾ ಮಾತನಾಡಿದ್ದಾರೆ. ರವೀನಾ ಟಂಡನ್ ಅವರೊಂದಿಗೆ ಒಂದು ಘಟನೆ ನಡೆದಿತ್ತಂತೆ. ಅವರ ಸಹ ನಟರೊಬ್ಬರು ತಪ್ಪಾಗಿ ಅವರನ್ನು ಚುಂಬಿಸಿದ್ದರಂತೆ. ಈ ದೃಶ್ಯವು ಸ್ಕ್ರಿಪ್ಟ್ ನ ಭಾಗವೂ ಆಗಿರಲಿಲ್ಲ. ಇದಾದ ನಂತರ ರವೀನಾ ಟಂಡನ್ ತುಂಬಾ ಅನ್‌ಕಂಫರ್ಟ್ ಫೀಲ್ ಮಾಡಿಕೊಂಡರಂತೆ.

ಆ ಬಳಿಕ ವಾಂತಿ ಕೂಡ ಮಾಡಿದರಂತೆ. 100 ಸಲ ತಮ್ಮ ಬಾಯಿ ತೊಳೆದುಕೊಂಡಿದ್ದಾರಂತೆ. ನಂತರ ಆ ನಟ ರವೀನಾ ಟಂಡನ್ ಅವರ ಬಳಿಕ ಕ್ಷಮೆಯಾಚಿಸಿದರಂತೆ. ಸಂದರ್ಶನ ಸಮಯದಲ್ಲಿ ರವೀನಾ ಟಂಡನ್ ಈ ವಿಚಾರ ಹೇಳಿದ್ದಾರೆ. ಸಿನಿಮಾಗಳಲ್ಲಿ ಕಿಸ್ ಮಾಡದಿರುವುದು ನನ್ನ ಆಯ್ಕೆ ಎಂದು ರವೀನಾ ಟಂಡನ್ ಹೇಳಿದ್ದಾರೆ.

 

Continue Reading

LATEST NEWS

Trending

Exit mobile version