ಚಿಕ್ಕಮಗಳೂರು : ಚಿಕ್ಕಮಗಳೂರಿನ ಶೃಂಗೇರಿ ಬಾಲಕಿ ಮೇಲೆ ನಡೆದ ಗ್ಯಾಂಗ ರೇಪ್ ಪ್ರಕರಣದಲ್ಲಿ ಸ್ಫೋಟಕ ವಿಚಾರ ಬಯಲಾಗಿದೆ. ಸದ್ಯ ತನಿಖೆ ನಡೆಸುತ್ತಿರುವ ಪೊಲೀಸರೇ ಈ ಮಾಹಿತಿಯಿಂದ ಅಘಾತಕೊಳಗಾಗಿದ್ದಾರೆ.
ಹೆತ್ತ ತಾಯಿಯೇ ಮಗಳನ್ನು ಕಾಮುಕರಿಗೆ ಒಪ್ಪಿಸಿದ ಘನಘೋರ ಸತ್ಯವನ್ನು ಪೊಲೀರು ಬಯಲಿಗೆಳೆದಿದ್ದಾರೆ.
ಅಷ್ಟಕ್ಕೂ ಸತತ 5 ತಿಂಗಳಿಂದ ಒಂದು ವಿಡಿಯೋ ಇಟ್ಕೊಂಡು ಆ ಬಾಲಕಿಯೊಬ್ಬಳನ್ನ ಬ್ಲಾಕ್ ಮೇಲ್ ಮಾಡಿ ಕಾಮದಾಹ ತೀರಿಸಿಕೊಂಡಿದ್ದರು ಕಿರಾತಕರು.
ಮೊದಲು ಈ ವಿಚಾರ ಗೊತ್ತಿದ್ದರೂ ಕಾಂಚಾಣದ ಆಸೆಗೆ ಪ್ರಕರಣವನ್ನ ಮುಚ್ಚಿ ಹಾಕೋ ಯತ್ನ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು.
ಆದ್ರೆ ಯಾವುದೇ ರಾಜಿಗೆ ಬಗ್ಗದೇ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ದೂರು ದಾಖಲಿಸಿದ್ದರು.
ಪ್ರಕರಣದ ತನಿಖಾಧಿಕಾರಿಯಾಗಿದ್ದ ಸರ್ಕಲ್ ಇನ್ಸ್ಪೆಕ್ಟರ್ ಕರ್ತವ್ಯ ಲೋಪ ಎಸಗಿರೋದು ಕಂಡುಬಂದ ಹಿನ್ನೆಲೆಯಲ್ಲಿ ಸಸ್ಪೆಂಡ್ ಮಾಡಲಾಯ್ತು.
ಇನ್ನೂ ಸಬ್ ಇನ್ಸ್ ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದವರನ್ನ ಬೇರೆಡೆಗೆ ವರ್ಗಾವಣೆ ಮಾಡಲಾಯ್ತು.ಆಗ ತನಿಖೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಹೆಗಲೇರಿತ್ತು.
ಮೊದಲಿಗೆ ಬಾಲಕಿ ಚಿಕ್ಕಮ್ಮ ಅಂತಾ ಹೇಳಿಕೊಂಡಿದ್ದ ಮಹಿಳೆ ಈ ನೀಚಕೃತ್ಯದ ರೂವಾರಿ ಅನ್ನೋದು ಗೊತ್ತಾಯಿತು. ಹಣದಾಸೆಗೆ ಬಾಲಕಿಯನ್ನ ಹೆದರಿಸಿ, ಕಾಮ ಕ್ರೌಯಕ್ಕೆ ದೂಡಿ, ಲಕ್ಷಗಟ್ಟಲೇ ಹಣ ಪಡೆದಿರೋದು ತನಿಖೆಯಿಂದ ಗೊತ್ತಾಯಿತು.
ಇದೀಗ ಚಿಕ್ಕಮ್ಮ ಅಂತಾ ಹೇಳಿಕೊಂಡಿದ್ದ ಮಹಿಳೆ ನಿಜಕ್ಕೂ ಬಾಲಕಿಯ ಚಿಕ್ಕಮ್ಮ ಅಲ್ಲ ಅವಳು ಸಂತ್ರಸ್ತೆಯ ಹೆತ್ತಮ್ಮ ಅನ್ನೋ ಸತ್ಯ ಪೊಲೀಸ್ ತನಿಖೆಯಿಂದ ಹೊರಬಿದ್ದಿದೆ.ಹಾವೇರಿ ಜಿಲ್ಲೆ ಮೂಲದವರಾಗಿರೋ ಮಹಿಳೆ ಅಲ್ಲೇ ಮದುವೆಯಾಗಿದ್ದಳು.
ಆಗ ಜನಿಸಿದ ಮಗುವೇ ಇದೀಗ ಅತ್ಯಾಚಾರಕ್ಕೆ ಒಳಗಾದ ಬಾಲಕಿ. ಬಳಿಕ ಗಂಡನನ್ನು ಬಿಟ್ಟು ಶೃಂಗೇರಿಗೆ ಬಂದ ಮಹಿಳೆ ಮತ್ತೊಂದು ಮದುವೆಯಾದ್ಳು. ಈ ವೇಳೆ ತನಗೆ ಮಗು ಇದೆ ಅನ್ನೋ ವಿಚಾರವನ್ನ ಎಲ್ಲೂ ಕೂಡ ಬಾಯಿ ಬಿಟ್ಟಿರಲಿಲ್ಲ. ಕೊನೆಗೆ ಎರಡನೇ ಗಂಡನನ್ನ ಕೂಡ ಬಿಟ್ಟು ಬಾಲಕಿ ಜೊತೆ ಪತ್ಯೇಕವಾಗಿ ವಾಸ ಮಾಡತೊಡಗಿದ್ದಳು.
ಈ ವೇಳೆ ಪ್ರಮುಖ ಆರೋಪಿಗಳಾಗಿರೋ ಅಭಿ, ಯೋಗೇಶ್ ಜೊತೆ ಸೇರಿ ಮಗಳ ನಗ್ನ ವಿಡಿಯೋ ಮಾಡಿಟ್ಟುಕೊಂಡು ಸತತ ಅತ್ಯಾಚಾರದ ಕೂಪಕ್ಕೆ ತಳ್ಳಿದ್ದಳು ಎನ್ನಲಾಗಿದೆ.
ಹೀಗೆ ಬಾಲಕಿ ಮೇಲೆ ಎರಗಿದ ಬರೋಬ್ಬರಿ 32 ಮಂದಿಯನ್ನ ಪೊಲೀಸರು ಈಗಾಗಲೇ ಬಂಧಿಸಿ ಜೈಲಿಗಟ್ಟಿದ್ದಾರೆ.
ಒಟ್ನಲ್ಲಿ ಮಗಳ ಬಾಳು ಹಸನಾಗಿಸಲು ಶ್ರಮಿಸಬೇಕಿದ್ದ ಸಂತ ತಾಯಿಯೇ ಇಂತಹ ನೀಚ ಕೃತ್ಯ ಎಸಗಿರುವುದು ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ. ಮೊದಲೇ ಅಪ್ಪನನ್ನ ಕಳೆದುಕೊಂಡಿದ್ದ ಬಾಲಕಿ ಈಗ ಅಮ್ಮನಿಂದ್ಲೂ ದೂರವಾಗಿ ಬದುಕಬೇಕಾಗಿ ಬಂದಿದ್ದು ಮಾತ್ರ ವಿಪರ್ಯಾಸ.