Home ಪ್ರಮುಖ ಸುದ್ದಿ ಕೇರಳ ಬುಡಕಟ್ಟು ಯುವತಿಯ ಸಾಧನೆ: ಅಸಿಸ್ಟೆಂಟ್ ಕಲೆಕ್ಟರ್ ಆಗಿ ಶ್ರೀಧನ್ಯಾ ಇತಿಹಾಸ

ಕೇರಳ ಬುಡಕಟ್ಟು ಯುವತಿಯ ಸಾಧನೆ: ಅಸಿಸ್ಟೆಂಟ್ ಕಲೆಕ್ಟರ್ ಆಗಿ ಶ್ರೀಧನ್ಯಾ ಇತಿಹಾಸ

ಕೇರಳ ಬುಡಕಟ್ಟು ಯುವತಿಯ ಸಾಧನೆ: ಅಸಿಸ್ಟೆಂಟ್‌ ಕಲೆಕ್ಟರ್ ಆಗಿ‌ ಶ್ರೀಧನ್ಯಾ ಇತಿಹಾಸ

ಕೇರಳ: ಪ್ರತಿಭೆ ಎಂಬುದು ಯಾರೊಬ್ಬರ ಸೊತ್ತಲ್ಲ. ಸಾಧಿಸುವ ಛಲ, ಶ್ರದ್ಧೆ, ನಿಷ್ಠೆ, ಶಿಸ್ತು ಇದ್ದರೆ ಯಾರೂ ಬೇಕಾದರೂ ಸಾಧನೆ ಮಾಡಬಹುದು.

ಇದಕ್ಕೆ ಕೇರಳದ ಈ ಯುವತಿಯ ಸಾಧನೆಯೇ ಉತ್ತಮ ನಿದರ್ಶನವಾಗಿದೆ. ಮನೆಯಲ್ಲಿ ಬಡತನವಿದ್ದರೂ ಈಕೆ ತಂದೆ, ತಾಯಿಯ ಪ್ರೋತ್ಸಾಹದಿಂದಾಗಿ ಕಠಿಣ ಅಭ್ಯಾಸ ನಡೆಸಿ ಎಲ್ಲರೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾಳೆ.

ಹೌದು…  ಬುಡಕಟ್ಟು ಸಮುದಾಯದ ಈ ಯುವತಿ ಪ್ರಪ್ರಥಮವಾಗಿ ಅಸಿಸ್ಟೆಂಟ್ ಕಲೆಕ್ಟರ್ ಆಗಿ ಎಲ್ಲರ ಚಪ್ಪಾಳೆ ಗಿಟ್ಟಿಸಿದ್ದಾರೆ.

ಕಿಟಕಿ ಬಾಗಿಲುಗಳಿಲ್ಲದ, ಮಾಸಲು ಗೋಡೆಯ, ಮುರುಕಲು ಮನೆಯ ಹುಡುಗಿ, ಮನ್ ರೇಗಾದಲ್ಲಿ ದಿನಗೂಲಿ ಮಾಡಿ ಬದುಕುವ ಗೂನು ಬಾಗಿದ ಮೈಯ ಅಪ್ಪ ಅಮ್ಮನ ಮುದ್ದು ಮಗಳು.

ಅತ್ಯಂತ ತಳಸ್ತರದ ಕುರಿಚಿಯ ಬುಡಕಟ್ಟಿನ ಮೊದಲ ಹುಡುಗಿ ಈಗಷ್ಟೇ ಕೋಝಿಕೋಡ್ ಜಿಲ್ಲೆಯ ಅಸಿಸ್ಟೆಂಟ್ ಕಲೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

ಶ್ರೀ ಧನ್ಯಾ ಸುರೇಶ್..3ನೇ ಪ್ರಯತ್ನದಲ್ಲಿ IAS ಪೂರ್ಣಗೊಳಿಸಿದ್ದರು!. ಈಗ ಮಸ್ಸೂರಿಯಲ್ಲಿ ತರಬೇತಿ ಮುಗಿಸಿ ಬಂದು ಅಧಿಕಾರ ಸ್ವೀಕರಿಸಿದ್ದಾರೆ.

ವಯನಾಡ್ ಜಿಲ್ಲೆಯಲ್ಲಿರುವ ಕಾಡು ಮಧ್ಯದ ಅವರ ಮನೆಗೆ ರಸ್ತೆಯು ಇಲ್ಲ. ಈಗಲೂ ಅರ್ಧ ಕಿ.ಮೀ. ಕಾಲ್ನಡಿಗೆಯಲ್ಲೇ ಸಾಗಬೇಕು.

IAS ಮುಖ್ಯ ಸಂದರ್ಶನಕ್ಕೆ ದೆಹಲಿಗೆ ಹೊರಟಾಗ ಧನ್ಯಾರಲ್ಲಿ ದುಡ್ಡೇ ಇರಲಿಲ್ಲ, ಊರವರು, ಹಿತೈಷಿಗಳೆಲ್ಲ 40,000 ಒಟ್ಟು ಸೇರಿಸಿ ಕೊಟ್ಟಿದ್ದರು.

ಅವರು ಓದಿದ್ದು ಮಲಯಾಳಂ ಮಾಧ್ಯಮ ಶಾಲೆಯಲ್ಲಿ. ಪ್ರಾಣಿ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಮಲಯಾಳಂನಲ್ಲೇ IAS ಬರೆದು ಪಾಸ್ ಆಗಿ ಇದೀಗ ತನ್ನ ಸಮುದಾಯದಲ್ಲೇ ಯಾರೂ ಈವರೆಗೆ ಮಾಡದ ಸಾಧನೆ ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ… 

- Advertisment -

RECENT NEWS

ದಕ್ಷಿಣ ಅಸ್ಸಾಂನ ಬರಾಕ್ ಕಣಿವೆಯಲ್ಲಿ ಭೂಕುಸಿತ: 20ಕ್ಕೂ ಅಧಿಕ ಮಂದಿ ಜೀವಂತ ಸಮಾಧಿ..

ದಕ್ಷಿಣ ಅಸ್ಸಾಂನ ಬರಾಕ್ ಕಣಿವೆಯಲ್ಲಿ ಭೂಕುಸಿತ: 20ಕ್ಕೂ ಅಧಿಕ ಮಂದಿ ಜೀವಂತ ಸಮಾಧಿ.. ಗುವಾಹಟಿ: ದಕ್ಷಿಣ ಅಸ್ಸಾಂನ ಬರಾಕ್​ ಕಣಿವೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಮಹಿಳೆಯರು, ಮಕ್ಕಳು ಸೇರಿ 20ಕ್ಕೂ ಹೆಚ್ಚು ಜನ...

ಲಾಕ್ ಡೌನ್ ನಿಯಮ ಗಾಳಿಗೆ ತೂರಿ ಸೈಂಟ್ ಮೇರಿಸ್ ದ್ವೀಪದಲ್ಲಿ ಪಾರ್ಟಿ ಮಾಡಿದವರ ವಿರುದ್ಧ ತನಿಖೆ..

ಲಾಕ್ ಡೌನ್ ನಿಯಮ ಗಾಳಿಗೆ ತೂರಿ ಸೈಂಟ್ ಮೇರಿಸ್ ದ್ವೀಪದಲ್ಲಿ ಪಾರ್ಟಿ ಮಾಡಿದವರ ವಿರುದ್ಧ ತನಿಖೆ.. ಉಡುಪಿ: ಕೋವಿಡ್- 19 ಲಾಕ್ ಡೌನ್ ನಿಯಮ ಉಲ್ಲಂಘಿಸಿ, ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಮೇ 9ರಂದು...

ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯ ವತಿಯಿಂದ ನೂತನ ಮನೆ ಹಸ್ತಾಂತರ

ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯ ವತಿಯಿಂದ ನೂತನ ಮನೆ ಹಸ್ತಾಂತರ ಬೆಳ್ತಂಗಡಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯ ಇದರ ವತಿಯಿಂದ ಬೆಳ್ತಂಗಡಿ ತಾಲೂಕಿನ ಬೆದ್ರಬೆಟ್ಟುವಿನಲ್ಲಿ ನಿರ್ಮಿಸಲಾದ ಮನೆಯ ಕೀಲಿ ಕೈ ಹಸ್ತಾಂತರ...

ದಿಟ್ಟ ಕ್ರಮಗಳಿಂದ ಸರಕಾರವನ್ನು ತಟ್ಟಿ ಕೇಳಿದ್ದ ಹಿರಿಯ ಕೆಎಎಸ್ ಅಧಿಕಾರಿ ಕೆ.ಮಥಾಯಿ ಸೇವೆಯಿಂದ ನಿವೃತ್ತಿ

ದಿಟ್ಟ ಕ್ರಮಗಳಿಂದ ಸರಕಾರವನ್ನು ತಟ್ಟಿ ಕೇಳಿದ್ದ ಹಿರಿಯ ಕೆಎಎಸ್ ಅಧಿಕಾರಿ ಕೆ.ಮಥಾಯಿ ಸೇವೆಯಿಂದ ನಿವೃತ್ತಿ ಬೆಂಗಳೂರು: ಹಲವಾರು ದಿಟ್ಟ ಕ್ರಮಗಳಿಂದ ಸರಕಾರವನ್ನು ಹಲವು ಬಾರಿ ಎದುರು ಹಾಕಿಕೊಂಡಿದ್ದ ಹಿರಿಯ ಕೆಎಎಸ್ ಅಧಿಕಾರಿ ಕೆ.ಮಥಾಯಿ ಅವರು...