Home ಪ್ರಮುಖ ಸುದ್ದಿ ಲಾಕ್ ಡೌನ್ ಗೆ ಮನೆಯಲ್ಲಿದ್ದು ಬೋರಾದ ಮೆಗಾಸ್ಟಾರ್ ಗಳು ಮಾಡಿದ್ದೇನು.?

ಲಾಕ್ ಡೌನ್ ಗೆ ಮನೆಯಲ್ಲಿದ್ದು ಬೋರಾದ ಮೆಗಾಸ್ಟಾರ್ ಗಳು ಮಾಡಿದ್ದೇನು.?

ಲಾಕ್ ಡೌನ್ ಗೆ ಮನೆಯಲ್ಲಿದ್ದು ಬೋರಾದ ಮೆಗಾಸ್ಟಾರ್ ಗಳು ಮಾಡಿದ್ದೇನು.?

ಕೋವಿಡ್ 19 ನ ವ್ಯಾಪಕ ಹರಡುವಿಕೆಯನ್ನು ತಡೆಯಲು ದೇಶ  ಸಂಪೂರ್ಣ ಲಾಕ್ ಡೌನ್ ಆಗಿದೆ. ಇಡೀ ದೇಶದಲ್ಲಿ ಚಟುವಟಿಕೆ ಸ್ಥಬ್ದಗೊಂಡಿದೆ.

ಜನ ರಸ್ತೆಗಿಳಿಯದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸಿನಿಮಾ ಕ್ಷೇತ್ರ ಕೂಡ ಇದಕ್ಕೆ ಹೊರತಾಗಿಲ್ಲ. ಚಿತ್ರರಂಗದಲ್ಲೂ ಚಟುವಟಿಕೆಗಳು ನಿಂತುಹೋಗಿದ್ದು ನಟ ನಟಿಯರು ಮನೆಗಳಲ್ಲಿ ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

ಆದರೂ ಈ ಸಂಕಷ್ಟದ  ಸಮಯಲ್ಲಿ ಒಂದು ಚಲನಚಿತ್ರ ನಿರ್ಮಾಣವಾಗಿದೆ. ಬಹುತೇಕ ನಟ, ನಟಿಯರು ಲಾಕ್ಡೌನ್ ದಿನಗಳನ್ನು ವಿವಿಧ ಚಟುವಟಿಕೆಗಳಲ್ಲಿ ನಿರತರಾಗುವ ಮೂಲಕ ಎಂಜಾಯ್ ಮಾಡುತ್ತಿದ್ದಾರೆ.

ಆದರೆ ಕೆಲವರು ಲಾಕ್ಡೌನ್ ಆಗಿದೆ ಏನು ಮಾಡುವುದು, ಕೆಲಸವಿಲ್ಲದೆ ಕಾಲ ಕಳೆಯಬೇಕಿದೆ ಬೇಜಾರು ಎಂದು ಹೇಳಿಕೊಳ್ಳುತ್ತಿರುತ್ತಾರೆ.

ಇದಕ್ಕೆ ಸೆಡ್ಡು ಹೊಡೆಯುವಂತೆ ಮಲ್ಟಿ ಸ್ಟಾರ್ ಗಳು ಸೇರಿ ಕಿರು ಚಿತ್ರ ರಚಿಸಿದ್ದು, ಇದರಲ್ಲಿ ಬಹುತೇಕ ಎಲ್ಲ ಮೆಗಾ ಸ್ಟಾರ್ಗಳು ನಟಿಸಿದ್ದಾರೆ.

ಹೌದು ದೇಶಕ್ಕೆ ತೀರ ಹೊಸ ವಿದ್ಯಮಾನವಾಗಿರುವ ಈ ಲಾಕ್ಡೌನ್ ದಿನಗಳ ಕುರಿತು ಈ ಸಿನಿಮಾ ಬೆಳಕು ಚೆಲ್ಲಿದೆ.

ಜೊತೆಗೆ ಈ ಸಂದರ್ಭದಲ್ಲಿ ಜಾಗೃತಿ ಮೂಡಿಸುವುದು ಹೇಗೆ ? ಎಲ್ಲರೂ ಹೇಗೆ ಸಂಪರ್ಕದಲ್ಲಿರಬಹುದು.? ಒಬ್ಬರೇ ಕೂತು ಏನೆಲ್ಲ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

 

ವಿಶೇಷವೆಂದರೆ ಒಂದೇ ಕಡೆ ಸೇರದೆ ಹಲವು ಸ್ಟಾರ್ ನಟರು ತಮ್ಮ ತಮ್ಮ ಮನೆಗಳಿಂದಲೇ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಆದರೆ ಚಿತ್ರದಲ್ಲಿ ಎಲ್ಲಿಯೂ ಇದು ಸ್ವಲ್ಪವೂ ಗಮನಕ್ಕೆ ಬರುವುದಿಲ್ಲ. ಆ ರೀತಿಯಲ್ಲಿ ಶಾರ್ಟ್ ಫಿಲ್ಮ್ ಅಚ್ಚುಕಟ್ಟಾಗಿ  ನಿರ್ಮಿಸಲಾಗಿದೆ.

ಕೇವಲ ಬಾಲಿವುಡ್ ಕಲಾವಿದರು ಮಾತ್ರ ಈ ಸಿನಿಮಾದಲ್ಲಿ ಆ್ಯಕ್ಟ್ ಮಾಡಿಲ್ಲ ಬದಲಿಗೆ ಕನ್ನಡ, ತೆಲುಗು, ತಮಿಳು, ಮಲಯಾಳಿ, ಸೇರಿದಂತೆ ಹಲವು ಭಾಷೆಗಳ ಸ್ಟಾರ್ ನಟರು ಅವರ ಮಾತೃ ಭಾಷೆಗಳಲ್ಲೇ ಮಾತನಾಡುವ ಮೂಲಕ ಚಿತ್ರಕ್ಕೆ ಕಳೆ ತುಂಬಿದ್ದಾರೆ.

ಈ ಮೂಲಕ ಜಾಗೃತಿ ಜೊತೆಗೆ ಮನರಂಜನೆಯನ್ನೂ ನೀಡಿದ್ದು, ಈ ರೀತಿಯೂ ಸಿನಿಮಾ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಲೊಕೇಶನ್ ಹೊರತುಪಡಿಸಿದರೆ ಉಳೆದೆಲ್ಲ ನಟರ ನಟನೆ ಅದ್ಭುತವಾಗಿ ಮೂಡಿ ಬಂದಿದ್ದು, ಆರಂಭದಲ್ಲಿ ಅಮಿತಾಭ್ ಬಚ್ಚನ್ ಅವರು ಕನ್ನಡಕ ಹುಡುಕುವುದರಿಂದ ಸಿನಿಮಾ ಪ್ರಾರಂಭವಾಗುತ್ತದೆ.

ಇದೇ ಎಳೆಯನ್ನು ಇಟ್ಟುಕೊಂಡು ಇತರ ಕಲಾವಿದರು ಸಹ ಅಮಿತಾಬ್ ಬಚ್ಚನ್ ಅವರ ಕನ್ನಡಕವನ್ನು ಹುಡುಕಲು ಮುಂದಾಗುತ್ತಾರೆ.

ಇದು ಕೇವಲ ಕನ್ನಡಕ ಹುಡುಕುವ ಸಿನಿಮಾ ಅನ್ನಿಸಬಹುದು. ಆದರೆ ಲಾಕ್ಡೌನ್ನ ಇಂತಹ ಪರಿಸ್ಥಿತಿಯಲ್ಲಿ ಹೊಸ ಭರವಸೆ ಮೂಡಿಸಿದೆ.

ಒಂದು ವೇಳೆ ಲಾಕ್ಡೌನ್ ಹೆಚ್ಚು ದಿನಗಳ ಕಾಲ ಮುಂದುವರಿದರೆ ಹೇಗೆ ಎಂಬ ಪ್ರಶ್ನೆ ಕಾಡಿದಾಗ ಕಲಾವಿದರು, ತಂತ್ರಜ್ಞರು ಈ ಸಿನಿಮಾ ನೆನೆಸಿಕೊಂಡು ತಮ್ಮದೇ ಶೈಲಿಯಲ್ಲಿ ಈ ರೀತಿಯ ಸಿನಿಮಾಗಳನ್ನು ಮಾಡಬಹುದಾಗಿದೆ ಎಂದು ಈ ಸಿನೆಮಾ ತೋರಿಸಿಕೊಟ್ಟಿದೆ.

ಜೊತೆಯಲ್ಲಿ ಮನೆಯಲ್ಲೇ ಕುಳಿತು ಬೋರ್ ಹೊಡೆಸುವಾಗ ಏನಾದರೂ ಮಾಡಬೇಕು ಎಂದುಕೊಂಡವರಿಗೆ ಈ ಸಿನಿಮಾ ಒಂದು ಆಶಾಕಿರಣವಾಗಿದೆ.

ಅಂದಹಾಗೆ ಈ ಚಿತ್ರಕ್ಕೆ ‘ಫ್ಯಾಮಿಲಿ’ ಎಂದು ಹೆಸರಿಡಲಾಗಿದ್ದು, ಪ್ರಸೂನ್ ಪಾಂಡೆ ನಿರ್ದೇಶಿಸಿದ್ದಾರೆ.

ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರ ವಹಿಸಿದರೆ, ಚಂದನವನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಬಾಲಿವುಡ್ ನಟರಾದ ರಣಬೀರ್ ಕಪೂರ್, ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ, ದಿಲಿತ್ ದೋಸಂಜ್, ತಮಿಳಿನಿಂದ ರಜನಿಕಾಂತ್,

ಮಲಯಾಳಂನಿಂದ ಮೋಹನ್ ಲಾಲ್ ಹಾಗೂ ಮಮ್ಮೂಟಿ, ತೆಲುಗಿನಿಂದ ಚಿರಂಜೀವಿ, ಬೆಂಗಾಳಿಯಿಂದ ಪ್ರೊಸೆಂಜಿತ್ ಚಟರ್ಜಿ, ಮರಾಠಿಯಿಂದ ಸೋನಾಲಿ ಕುಲ್ಕರ್ಣಿಯವರು ನಟಿಸಿದ್ದಾರೆ.

ಇನ್ನು ಸಿನಿಮಾದ ಕೊನೆಯಲ್ಲಿ ಅಮಿತಾಬ್ ಮಾತನಾಡಿದ್ದಾರೆ , ಸಿನಿಮಾ ಉದ್ಯಮ ಯಾವತ್ತೂ ಒಂದೇ, ನಾವೆಲ್ಲರೂ ಒಂದೇ ಕುಟುಂಬದವರು.

ನಮ್ಮ ಕುಟುಂಬದ ಹಿಂದೆ ಇನ್ನೊಂದು ದೊಡ್ಡ ಪರಿವಾರವಿದೆ. ಅವರು ಯಾವಾಗಲೂ ನಮಗಾಗಿ ಕೆಲಸ ಮಾಡುತ್ತಿರುತ್ತಾರೆ ಅವರೇ ಸಿನಿಮಾ ಕೆಲಸಗಾರರು, ದಿನಗೂಲಿ ನೌಕರರು.

ಲಾಕ್ಡೌನ್ನ ಈ ಸಮಯದಲ್ಲಿ ಕೆಲಸವಿಲ್ಲದೆ ಅವರು ಸಂಕಷ್ಟದಲ್ಲಿದ್ದಾರೆ. ನಾವೆಲ್ಲರೂ ಸೇರಿ ಅವರೊಂದಿಗೆ ನಿಲ್ಲಬೇಕಿದೆ.

ಅವರಿಗೂ ಸಹಾಯ ಮಾಡಬೇಕಿದೆ ಎಂದು ಕೇಳಿಕೊಂಡಿದ್ದಾರೆ. ಅಲ್ಲದೆ ಯಾರೂ ಭಯಭೀತರಾಗಬೇಡಿ, ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಎಂಬ  ಸಂದೇಶವನ್ನೂ ನೀಡಿದ್ದಾರೆ.

- Advertisment -

RECENT NEWS

ಉಡುಪಿ ಕೊರೊನಾಘಾತ ಒಂದೇ ದಿನ 83 ಪ್ರದೇಶ ಸೀಲ್ ಡೌನ್

ಜಿಲ್ಲೆಯಲ್ಲಿ ಈವರೆಗೆ 201 ಪ್ರದೇಶಗಳು ಸೀಲ್ ಡೌನ್ ಉಡುಪಿ ಜೂ.5: ಉಡುಪಿಯಲ್ಲಿ ಇಂದು ದಾಖಲಾದ 204 ಕೊರೊನಾ ಪ್ರಕರಣಗಳಿಂದಾಗಿ ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 83 ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ. ರಾಜ್ಯದಲ್ಲೇ...

ಪ್ರಧಾನಿ ದೇಶದ ಜನರಿಗೆ ಬರೆದಿರೋ “ನೀವು ಪ್ರೇರಕರು ನಾನು ಸೇವಕ” ಪತ್ರದ ಸಾರಾಂಶ ಹಾಗು ಸಾಧನೆ ಹಂಚಿದ ಕಟೀಲ್

“ನೀವು ಪ್ರೇರಕರು ನಾನು ಸೇವಕ” ಪತ್ರದ ಸಾರಾಂಶ ಹಾಗು ಪ್ರಧಾನಿಗಳ ಸಾಧನೆಯ ಸಾರಾಂಶ ಮನೆಮನೆಗೆ ಹಂಚಿದ ಸಂಸದ ಕಟೀಲ್ ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ...

ಕಡಬಕ್ಕೂ ವಕ್ಕರಿಸಿದ ಮಹಾಮಾರಿ ಕೊರೊನಾ ವೈರಸ್.. ಶಿಕ್ಷಕನಿಗೆ ಪಾಸಿಟಿವ್

45 ವರ್ಷದ ಶಿಕ್ಷಕನಿಗೆ ಕೊರೊನಾ ಪಾಸಿಟಿವ್: ಆತಂಕದಲ್ಲಿ ಕಡಬ ಜನತೆ ಕಡಬ: ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ಮಹಾಮಾರಿ ಇದೀಗ ಕಡಬಕ್ಕೂ ಕಾಲಿಟ್ಟಿದೆ. ಕಡಬದ 42 ವರ್ಷದ ಶಿಕ್ಷಕರೋರ್ವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಈಗಾಗಲೇ...

ದೇಶದಲ್ಲಿ ಕೊರೊನಾ ಹಂಚಲು ತಬ್ಲಿಘಿಗಳಿಂದ ವ್ಯವಸ್ಥಿತ ಷಡ್ಯಂತ್ರ ನಡೆದಂತಿದೆ: ಸಂಸದೆ ಶೋಭಾ ಗಂಭೀರ ಆರೋಪ..!

ಬೆಂಗಳೂರು ಸ್ಲಂಗಳಿಗೆ ತಬ್ಲಿಘಿಗಳು ಸೋಂಕು ಪಸರಿಸಿದರು: ಸಂಸದೆ ಶೋಭಾ ಕರಂದ್ಲಾಜೆ ಕಿಡಿ ಉಡುಪಿ: ಶಾಂತವಾಗಿದ್ದ ಉಡುಪಿ ಜಿಲ್ಲೆಯಲ್ಲಿ ದೆಹಲಿ ಮತ್ತು ಮಹಾರಾಷ್ಟ್ರದಿಂದ ಕೊರೊನಾ ಹಬ್ಬಿದೆ. ಬೆಂಗಳೂರು ಸ್ಲಂಗಳಿಗೆ ತಬ್ಲಿಘಿಗಳು ಸೋಂಕು ಪಸರಿಸಿದರು ಎಂದು ಉಡುಪಿ-ಚಿಕ್ಕಮಗಳೂರು...