Wednesday, May 18, 2022

ಸುಳ್ಯ: ಅಂಗಡಿಗೆ ಬಂದ ಗ್ರಾಹಕನಿಗೆ ಮಾಲಕನಿಂದ ಹಲ್ಲೆ- ದೂರು ದಾಖಲು

ಸುಳ್ಯ: ಬೆಳ್ಳಿಯ ಚೈನಿಗೆ ಲೇಪನ ಮಾಡಲು ಬಂದ ಗ್ರಾಹಕನೊಬ್ಬನಿಗೆ ಅಂಗಡಿ ಮಾಲಕನೇ ಕಬ್ಬಿಣದ ಪೈಪಿನಿಂದ ಹೊಡೆದು ಗಾಯಗೊಳಿಸಿದ ಘಟನೆ ಸುಳ್ಯದಲ್ಲಿ ನಿನ್ನೆ ನಡೆದಿದೆ.


ಗಾಯಗೊಂಡ ಗ್ರಾಹಕರನ್ನು ಗೋಪಾಲ ಶೇಟ್ ಕೆ (47) ಎಂದು ಗುರುತಿಸಲಾಗಿದೆ.
ಗೋಪಾಲ ಶೇಟ್ ಕೆ ಡಿ. 23ರಂದು ಪರಿಚಯದ ಸುಳ್ಯ ಕಸಬಾ ಗ್ರಾಮದ ಜ್ಯೂನಿಯರ್ ಕಾಲೇಜು ರಸ್ತೆಯ ಹತ್ತಿರ ಇರುವ ಚಿನ್ನ, ಬೆಳ್ಳಿ ಕೋಟಿಂಗ್ ಅಂಗಡಿಗೆ ಬೆಳ್ಳಿಯ ಚೈನಿಗೆ ಲೇಪನ ಮಾಡಿಸಲು ಹೋಗಿದ್ದರು.
ಇದೇ ಸಮಯ ಅಂಗಡಿಗೆ 2 ಜನ ಮಹಿಳಾ ಗಿರಾಕಿಗಳು ಬಂದಿದ್ದನ್ನು ಕಂಡು ಮಾಲೀಕನು ಗೋಪಾಲ ಶೇಟ್ ಬಳಿ ನಿಮ್ಮ ಕೆಲಸ ಮತ್ತೆ ಮಾಡಿಕೊಡುತ್ತೇನೆ ಬದಿಯಲ್ಲಿ ನಿಲ್ಲಿ ಎಂದು ಹೇಳಿದಾಗ ಇಬ್ಬರಿಗೂ ಮಾತಿನ ಚಕಮಕಿ ನಡೆದಿತ್ತು. ಇದಾದ ನಂತರ ಗೋಪಾಲ್‌ ಅವರ ಚೈನಿಗೆ ಲೇಪನ ಮಾಡಿಸಿದ ನಂತರದಲ್ಲಿ
‘ನಾನು ಮೊದಲು ಬಂದರೂ ಕೂಡಾ ನನ್ನ ಕೆಲಸವನ್ನು ಮಾಡದೇ ನಾನು ನಿಮ್ಮ ಮಾಮೂಲಿ ಗಿರಾಕಿಯಾಗಿದ್ದರೂ ಸಹಾ ಬದಿಗೆ ನಿಲ್ಲಿಸಿ’ದ್ದ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಕೋಪಗೊಂಡ ಅಂಗಡಿ ಮಾಲಕ ಕೈಯಿಂದ ದೂಡಿ ಅಂಗಡಿಯ ಒಳಗಿದ್ದ ಕಬ್ಬಿಣದ ಪೈಪಿನಿಂದ ಹೊಡೆಯಲು ಬಂದಾಗ ಗೋಪಾಲ್‌ ಎಡಕೈಯನ್ನು ಅಡ್ಡ ಹಿಡಿದಿದ್ದಾರೆ.
ಘಟನೆಯಿಂದ ಎಡ ಕೈ ಬೆರಳಿಗೆ, ತುಟಿಗೆ ಮತ್ತು ಹಲ್ಲಿಗೆ ರಕ್ತಗಾಯವಾಗಿದ್ದು, ನಂತರ ಸ್ಥಳೀಯರು ಗಲಾಟೆ ಬಿಡಿಸಿದ್ದಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics

ಛೀ ಅಸಹ್ಯ: ಮಂಗಳೂರಿನಲ್ಲಿ ಗುದನಾಳದಲ್ಲಿಟ್ಟು ಸಾಗಿಸುತ್ತಿದ್ದ ಚಿನ್ನ ವಶಕ್ಕೆ

ಮಂಗಳೂರು: ಬೈಂದೂರಿನ ಪ್ರಯಾಣಿಕನೋರ್ವ ಬಹರೈನ್‌ನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಸೋಮವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ.ಪ್ರಯಾಣಿಕನೋರ್ವ 736 ಗ್ರಾಂ ಚಿನ್ನವನ್ನು ಗುದನಾಳದಲ್ಲಿಟ್ಟು ಸಾಗಿಸುತ್ತಿದ್ದ ವೇಳೆ ಅಧಿಕಾರಿಗಳು ಪತ್ತೆ...

ಕಾಂಗ್ರೆಸ್‌ ಪಕ್ಷಕ್ಕೆ ‘ಕೈ’ ಕೊಟ್ಟ ಹಾರ್ದಿಕ್‌ ಪಟೇಲ್‌: ಟ್ವಿಟ್ಟರ್‌ನಲ್ಲಿ ಘೋಷಣೆ

ಅಹಮದಾಬಾದ್‌: ಕಾಂಗ್ರೆಸ್‌ ಯುವ ಮುಖಂಡ ಹಾಗೂ ಗುಜರಾತ್‌ನ ಪಾಟಿದಾರ್‌ ಸಮುದಾಯದ ನಾಯಕ ಹಾರ್ದಿಕ್‌ ಪಟೇಲ್‌ ಕಾಂಗ್ರೆಸ್‌ ಪಕ್ಷಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ.ಪಾಟಿದಾರ್ ಸಮುದಾಯದ ಪ್ರಭಾವಿ ನಾಯಕ ನರೇಶ್ ಪಟೇಲ್ ಅವರನ್ನು ಭೇಟಿಯಾಗಿಮಾತುಕತೆ ನಡೆಸಿದ...

MRPL ಉದ್ಯೋಗಿ ನಾಪತ್ತೆ: ಪ್ರಕರಣ ದಾಖಲು

ಸುರತ್ಕಲ್: ಎಂಆರ್‌ಪಿಎಲ್‌ನಲ್ಲಿ ಎಂಜಿನಿಯರ್ ಆಗಿದ್ದ ಸಕಲೇಶಪುರ ಮೂಲದ ಕಾಟಿಪಳ್ಳ ಶಾರದಾ ನಗರ ನಿವಾಸಿ ರಾಘವೇಂದ್ರ ಕೆ.ಆರ್ (52) ಎಂಬವರು ಮೇ 16ರಿಂದ ನಾಪತ್ತೆಯಾಗಿದ್ದಾರೆ.'ಫ್ಲೀಸ್ ತನ್ನನ್‌ನು ಹುಡುಕಬೇಡಿ' ಎಂದು ಚೀಟಿ ಬರೆದಿಟ್ಟು ಹೋಗಿದ್ದಾರೆ.ಹೋಗುವಾಗ ಬಟ್ಟೆ,...