Home ಪ್ರಮುಖ ಸುದ್ದಿ ಬಂಟ್ವಾಳದ ವೀರಕಂಭದಲ್ಲಿ ಬೆಂಕಿಗಾಹುತಿಯಾದ ಅಂಗಡಿ

ಬಂಟ್ವಾಳದ ವೀರಕಂಭದಲ್ಲಿ ಬೆಂಕಿಗಾಹುತಿಯಾದ ಅಂಗಡಿ

ಬಂಟ್ವಾಳದ ವೀರಕಂಭದಲ್ಲಿ ಬೆಂಕಿಗಾಹುತಿಯಾದ ಅಂಗಡಿ..!

ಬಂಟ್ವಾಳ : ತಾಲೂಕಿನ ವೀರಕಂಭ ಎಂಬಲ್ಲಿ ರಸ್ತೆ ಬದಿಯಲ್ಲಿರುವ ಹಮೀದ್ ಎಂಬವರ ವಾಣಿಜ್ಯ ಕಟ್ಟಡ ಹಾಗೂ ಮನೆ ಇರುವ ಜಾಗದಲ್ಲಿ ಬುಧವಾರ ರಾತ್ರಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಬಂಟ್ವಾಳ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು.

ಪಂಚಾಯಿತಿ ಕಟ್ಟಡ ಎದುರು ರಸ್ತೆ ಬದಿ ಅವರ ಮನೆ ಹಾಗೂ ಅಂಗಡಿ ಇದ್ದು, ಮಳಿಗೆಯಲ್ಲಿ ಬೆಂಕಿ ಉರಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ಗಮನಕ್ಕೆ ತಂದಿದ್ದು, ಕೂಡಲೇ ಅಗ್ನಿಶಾಮಕದಳ, ವಿಟ್ಲ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಹಮೀದ್ ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.

ಸ್ಥಳದಲ್ಲಿದ್ದ ಸ್ಥಳೀಯರು ಹಾಗೂ ಅಗ್ನಿಶಾಮಕದಳ ಕೂಡಲೇ ಕ್ರಮ ಕೈಗೊಂಡ ಕಾರಣ ಬೆಂಕಿ ನಂದಿಸಲು ಸಹಕಾರಿಯಾಗಿದ್ದು, ವಿಟ್ಲ ಎಸ್ಸೈ ವಿನೋದ್ ಮತ್ತು ಸಿಬ್ಬಂದಿ ಬಂದೋಬಸ್ತ್ ನಡೆಸಿ, ಬೆಂಕಿ ನಂದಿಸಲು ಸಹಕರಿಸಿದರು. ನಷ್ಟದ ಪ್ರಮಾಣ ಹಾಗೂ ಅಗ್ನಿ ಅನಾಹುತಕ್ಕೆ ಕಾರಣ ಇನ್ನಷ್ಟೇ ತಿಳಿಯಬೇಕಿದೆ.

ವಿಡಿಯೋಗಾಗಿ

 

RECENT NEWS

ಮಂಗಳೂರಿನಲ್ಲಿ ಅಮಾಯಕ ಯುವಕನ ಪ್ರಾಣ ತೆಗೆದ ಸರಕಾರಿ ಅಧಿಕಾರಿ ವಿರುದ್ಧ ಕ್ರಮವಿಲ್ಲವೇ..??

ಮಂಗಳೂರಿನಲ್ಲಿ ಅಮಾಯಕ ಯುವಕನ ಪ್ರಾಣ ತೆಗೆದ ಸರಕಾರಿ ಅಧಿಕಾರಿ ವಿರುದ್ಧ ಕ್ರಮವಿಲ್ಲವೇ..?? ಮಂಗಳೂರು : ಇಂದು ಶನಿವಾರ ಮದ್ಯಾಹ್ನದಂದು ಹೊಸ ಕಾರು ಖರೀದಿಸಿದ ಸೋಮೇಶ್ವರ ಪುರಸಭಾ ಅಧಿಕಾರಿ ಕೃಷ್ಣ ಅವರ ಮೋಜು ಮಸ್ತಿನ ಧಾವಂತಕ್ಕೆ...

ಪ್ರೀತಿಸಿ ಮದುವೆಯಾಗಿದ್ದಕ್ಕೆ ಪ್ರತಿಕಾರ-ರಾಯಚೂರಿನಲ್ಲಿ ಯುವತಿ ಸಂಬಂಧಿಕರಿಂದ ನಾಲ್ವರ ಬರ್ಬರ ಕೊಲೆ..!

ಪ್ರೀತಿಸಿ ಮದುವೆಯಾಗಿದ್ದಕ್ಕೆ ಪ್ರತಿಕಾರ-ರಾಯಚೂರಿನಲ್ಲಿ ಯುವತಿ ಸಂಬಂಧಿಕರಿಂದ ನಾಲ್ವರ ಬರ್ಬರ ಕೊಲೆ..! ರಾಯಚೂರು: ಪ್ರೀತಿಸಿ ಮದುವೆಯಾದ ಕಾರಣಕ್ಕೆ ಯುವತಿಯ ಸಂಬಂಧಿಕರು ಯುವಕನ ಕಡೆಯ ನಾಲ್ವರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ರಾಯಚೂರಿನ ಸಿಂಧನೂರಿನ ಸುಕಾಲಪೇಟೆಯಲ್ಲಿ...

ಬೆಂಗಳೂರಿನಲ್ಲಿ ನಿಯಂತ್ರಣಕ್ಕೆ ಬಾರದ ಕೊರೊನಾ ಜುಲೈ 14 ರಿಂದ ಒಂದು ವಾರ ಬೆಂಗಳೂರು ಲಾಕ್​ಡೌನ್..!

ಬೆಂಗಳೂರಿನಲ್ಲಿ ನಿಯಂತ್ರಣಕ್ಕೆ ಬಾರದ ಕೊರೊನಾ ಜುಲೈ 14 ರಿಂದ ಒಂದುವಾರ ಬೆಂಗಳೂರು ಲಾಕ್​ಡೌನ್..! ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಕೈಮೀರಿ ಹರಡುತ್ತಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಕೊರೊನಾ ಮಿತಿಮೀರಿದೆ. ಈ ಹಿನ್ನೆಲೆಯಲ್ಲಿ...

ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ತಂಡದ ಕಾರ್ಯಾಚರಣೆ : ವಿಕಾಸ್ ದುಬೆ ಸಹಚರರ ಬಂಧನ..!

ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ತಂಡದ ಕಾರ್ಯಾಚರಣೆ : ವಿಕಾಸ್ ದುಬೆ ಸಹಚರರ ಬಂಧನ..! ಮುಂಬೈ : ಉತ್ತರ ಪ್ರದೇಶ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಕುಖ್ಯಾತ ರೌಡಿಶೀಟರ್‌ ವಿಕಾಸ್‌ ದುಬೆಯ ಸಹಚರರರನ್ನು ಮುಂಬೈ ಪೊಲಿಸರು...
error: Content is protected !!