ಮೀರತ್: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಕಾರಿನ ಮೇಲೆ ಗುಂಡಿನ ದಾಳಿಯಾಗಿದೆ. ಉತ್ತರಪ್ರದೇಶದ ಮೀರತ್‌ನಲ್ಲಿರುವ ಕಿಥೌರ್ನಲ್ಲಿ ಚುನಾವಣೆ
ಸಂಬಂಧ ಸಮಾರಂಭವೊಂದರಲ್ಲಿ ಪಾಲ್ಗೊಂಡು ವಾಪಸ್ ದೆಹಲಿಗೆ ತೆರಳುತ್ತಿದ್ದಾಗ, ದೆಹಲಿ-ಮೀರತ್ ಎಕ್ಸ್ಪ್ರೆಸ್ ವೇನಲ್ಲಿ, ಛಜರ್ಸಿ ಟೋಲ್ ಪ್ಲಾಜಾ ಬಳಿ ಘಟನೆ ನಡೆದಿದೆ ಎಂದು ಓವೈಸಿ ತಿಳಿಸಿದ್ದಾರೆ.’
ನಾನು ಕಿಥೌರ್ನಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮ ಮುಗಿಸಿ ವಾಪಸ್ ಹೋಗುತ್ತಿದ್ದೆ. ಛಜರ್ಸಿ ಟೋಲ್ ಪ್ಲಾಜಾ ಬಳಿ ಇಬ್ಬರು ಅಪರಿಚಿತರು ನನ್ನ ವಾಹನದ ಮೇಲೆ 3-4 ಸುತ್ತು ಗುಂಡು ಹಾರಿಸಿದರು. ಆದರೆ ಅವರು ಒಟ್ಟು 4 ಜನ ಇದ್ದರು.
ಗಾಡಿಗೆ ಗುಂಡು ಬಿದ್ದಿದೆ. ಟೈಯರ್ಗೂ ಗುಂಡು ತಗುಲಿದ ಪರಿಣಾಮ ಅದು ಪಂಕ್ಚರ್ ಆಯಿತು. ಬಳಿಕ ನಾನು ಇನ್ನೊಂದು ವಾಹನದಲ್ಲಿ ದೆಹಲಿಗೆ ಹೋದೆ ಎಂದು ಓವೈಸಿ ಎಎನ್ಐ ವರದಿ ಮಾಡಿದೆ.