LATEST NEWS
ಅಮೇರಿಕಾದಲ್ಲಿ ಮೂರು ಸ್ಪಾಗಳ ಮೇಲೆ ಗುಂಡಿನ ದಾಳಿ: 8 ಮಂದಿ ದಾರುಣ ಸಾವು..!
Published
4 years agoon
By
Adminಜಾರ್ಜಿಯಾ: ಅಮೆರಿಕದ ಜಾರ್ಜಿಯಾದಲ್ಲಿ ಗುಂಡಿನ ದಾಳಿ ನಡೆದಿದೆ. ಇಲ್ಲಿನ ಮೂರು ಪ್ರತೇಕ ಸ್ಥಳಗಳಲ್ಲಿ ಬಂದೂಕುದಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಮಹಿಳೆಯರು ಸೇರಿ ಒಟ್ಟು 8 ಮಂದಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಬಂದೂಕು ಹೊಂದಿದ್ದ ಅಪರಿಚಿತರು ಈಶಾನ್ಯ ಅಟ್ಲಾಂಟಾದ ಎರಡು ಸ್ಪಾಗಳ ಮೇಲೆ ಗುಂಡು ಹಾರಿಸಿದ್ದಾರೆ ಮತ್ತು ಚೆರೋಕೀ ಕೌಂಟಿ ಸ್ಪಾದಲ್ಲಿ ನಾಲ್ಕು ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ಚೆರೋಕೀ ಕೌಂಟಿ ಮಸಾಜ್ ಪಾರ್ಲರ್ನಲ್ಲಿ ಗುಂಡಿನ ದಾಳಿ ಮಾಡುತ್ತಿದ್ದ ಶಂಕಿತ ಬಂದೂಕುಧಾರಿ ವುಡ್‌ಸ್ಟಾಕ್‌ನ ರಾಬರ್ಟ್ ಆರನ್ ಲಾಂಗ್ (21) ಎಂಬ ಯುವಕ ಬಂಧನಕ್ಕೊಳಗಾಗಿದ್ದಾನೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅಟ್ಲಾಂಟಾ ಪೊಲೀಸ್ ಮುಖ್ಯಸ್ಥ ರೊಡ್ನಿ ಬ್ರ್ಯಾಂಟ್ ಅವರು, ಈಶಾನ್ಯ ಅಟ್ಲಾಂಟಾ ಸ್ಪಾಗಳ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆಂದು ಎಂದು ಸ್ಪಷ್ಟಪಡಿಸಿದ್ದಾರೆ.
ಗೋಲ್ಡ್ ಮಸಾಜ್ ಸ್ಪಾದಲ್ಲಿ ದರೋಡೆ ನಡೆಯುತ್ತಿದೆ ಎಂಬ ಮಾಹಿತಿ ಬಂದಿತ್ತು. ಕೂಡಲೇ ಸ್ಥಳಕ್ಕೆ ಭೇಟಿ ನೀಡುತ್ತಿದ್ದ ವೇಳೆ ದಾರಿ ಮಧ್ಯೆ ಕರೆಯೊಂದು ಬಂದಿತ್ತು. ದಾರಿ ಮಧ್ಯೆ ವ್ಯಕ್ತಿಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ ಎಂದು ಕರೆಯಲ್ಲಿ ಹೇಳಿಲಾಗಿತ್ತು. ಆಗ ಸ್ಥಳಕ್ಕೆ ಭೇಟಿ ನೀಡಿದಾಗ ವ್ಯಕ್ತಿ ಮೃತಪಟ್ಟಿದ್ದ ಎಂದು ಬ್ರ್ಯಾಂಟ್ ತಿಳಿಸಿದ್ದಾರೆ.
ಗೋಲ್ಡ್ ಸ್ಪಾದಲ್ಲಿ ಮೂರು ಜನರು ಮೃತಪಟ್ಟಿದ್ದಾರೆ. ಮತ್ತೊಬ್ಬರು ಪೀಡ್‌ಮಾಂಟ್ ರಸ್ತೆಯ 19 ಬ್ಲಾಕ್‌ನಲ್ಲಿರುವ ಅರೋಮಾಥೆರಪಿ ಸ್ಪಾದ ನಡು ಬೀದಿಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
DAKSHINA KANNADA
ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಳಿ ದುರಂತ
Published
4 minutes agoon
10/01/2025By
NEWS DESK3ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ ನಿಲ್ದಾಣ ಜಂಕ್ಷನ್ ಬಳಿ ಬೈಕ್ ಗೆ ತಡೆರಹಿತ ಬಸ್ ಡಿಕ್ಕಿಯಾಗಿ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯಗೊಂಡವರನ್ನು ಮುಲ್ಕಿ ಅಂಚೆ ಕಚೇರಿಯ ಅಂಚೆಪಾಲಕ ಕೊಲ್ಲೂರು ನಿವಾಸಿ ಪಾಂಡುರಂಗ ರಾವ್ ಎಂದು ಗುರುತಿಸಲಾಗಿದೆ. ಗಾಯಾಳು ಪಾಂಡುರಂಗ ರಾವ್ ತಮ್ಮ ಬೈಕ್ ನಲ್ಲಿ ರಾಷ್ಟ್ರೀಯ ಹೆದ್ದಾರಿ ಮುಲ್ಕಿ ಜಂಕ್ಷನ್ ಬಳಿ ಹೆದ್ದಾರಿ ಕ್ರಾಸ್ ಮಾಡುತ್ತಿದ್ದಾಗ ಉಡುಪಿ ಕಡೆಯಿಂದ ಸರ್ವಿಸ್ ರಸ್ತೆಯಲ್ಲಿ ಬಂದ ತಡೆರಹಿತ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ: ಅಕ್ರಮ ಮರಳು ಅಡ್ಡೆಯ ಮೇಲೆ ಪೊಲೀಸರ ದಾಳಿ
ಅಪಘಾತದ ಸಂದರ್ಭ ಸಮಾರ ಪಾಂಡುರಂಗ ರಾವ್ ರವರ ತಲೆಗೆ, ಕಾಲಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದ ಭೀಕರ ದೃಶ್ಯ ಸ್ಥಳೀಯ ಅಂಗಡಿ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
LATEST NEWS
ಮಕರ ಸಂಕ್ರಾಂತಿ ಪ್ರಯುಕ್ತ ಬೆಂಗಳೂರು – ಕರಾವಳಿ ವಿಶೇಷ ರೈಲು ಸಂಚಾರ
Published
12 minutes agoon
10/01/2025ಕುಂದಾಪುರ: ವಾರಾಂತ್ಯದ ಸರಣಿ ರಜೆ ಹಾಗೂ ಮಕರ ಸಂಕ್ರಮಣದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಉಡುಪಿ-ಕುಂದಾಪುರ ಮತ್ತು ಕಾರವಾರಕ್ಕೆ ಇಂದು (ಜ.10) ಮಧ್ಯಾಹ್ನ ಬೆಂಗಳೂರಿನಿಂದ ವಿಶೇಷ ರೈಲು ಸಂಚರಿಸಲಿದೆ.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ ಮನವಿಯಂತೆ ವಿಶೇಷ ರೈಲಿನ ವ್ಯವಸ್ಥೆ ಮಾಡಿದ್ದಾರೆ.
ಇದನ್ನೂ ಓದಿ : ಮಂಗಳೂರು : ಖಾಸಗಿ ಬಸ್ ಪ್ರಯಾಣ ದರ ಏರಿಕೆ
ಬೆಂಗಳೂರಿನ ಬೈಯ್ಯಪ್ಪನಹಳ್ಳಿಯ ವಿಶ್ವೇರಯ್ಯ ಟರ್ಮಿನಲ್‌ನಿಂದ ಜ.10ರ ಮಧ್ಯಾಹ್ನ 1ಕ್ಕೆ ಹೊರಡಲಿದ್ದು, ಪಡೀಲ್ ಬೈಪಾಸ್ ಮೂಲಕ ರಾತ್ರಿ 12ಕ್ಕೆ ಉಡುಪಿ, 1 ಗಂಟೆಗೆ ಕುಂದಾಪುರಕ್ಕೆ ಬಂದು, ಬಳಿಕ ಕಾರವಾರ ಕಡೆಗೆ ಸಂಚರಿಸಲಿದೆ. ಈ ರೈಲು ಜ. 11ರಂದು ಮಧ್ಯಾಹ್ನ 12 ಗಂಟೆಗೆ ಕಾರವಾರದಿಂದ ಬೆಂಗಳೂರಿಗೆ ಸಂಚರಿಸಲಿದೆ.
ಉಡುಪಿ : ಉಡುಪಿ ಜಿಲ್ಲೆಯ ಮಣಿಪಾಲ ಪೊಲೀಸ್ ಠಾಣೆಯ ಮುಂದೆ ಗುರುವಾರ ಎರಡು ದೋಣಿಗಳು ಪ್ರತ್ಯಕ್ಷವಾಗಿ ಜನರಿಗೆ ಅಚ್ಚರಿ ಮೂಡಿಸಿದೆ.
ಸಾಮಾನ್ಯವಾಗಿ ಜಪ್ತಿ ಮಾಡಿದ ವಾಹನಗಳನ್ನು ನಿಲ್ಲಿಸುವ ಜಾಗದಲ್ಲಿ ಈ ದೋಣಿಗಳನ್ನು ನಿಲ್ಲಿಸಲಾಗಿರುವುದು ಜನರ ಕುತೂಹಲಕ್ಕೆ ಕಾರಣವಾಗಿತ್ತು. ಅಸಲಿ ವಿಚಾರ ಗೊತ್ತಾದ ಮೇಲೆ ಜನರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಸಲಿಗೆ ಮಣಿಪಾಲ ಠಾಣಾ ವ್ಯಾಪ್ತಿಯ ಹಿರೇಬೆಟ್ಟು ಎಂಬಲ್ಲಿ ಅಕ್ರಮ ಮರಳುಗಾರಿಕೆ ನಡೆಸುವ ಖಚಿತ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದರು. ಕವನ್ ಶೆಟ್ಟಿ ಎಂಬವರ ಮೇಲೆ ಅಕ್ರಮ ಮರಳುಗಾರಿಕೆ ಆರೋಪ ಇದ್ದು, ಹಿಟಾಚಿ ಬಳಸಿ ದೋಣಿಯ ಮೂಲಕ ಮರಳು ಸಂಗ್ರಹ ಮಾಡಲಾಗುತ್ತಿತ್ತು.
ಇದನ್ನೂ ಓದಿ: ಪುತ್ತೂರು : ಕಾಲೇಜು ವಿದ್ಯಾರ್ಥಿನಿ ನೇ*ಣಿಗೆ ಶರಣು; ಕಾರಣ ನಿಗೂಢ
ಸ್ಥಳಕ್ಕೆ ದಾಳಿ ನಡೆದ ಸಂದರ್ಭದಲ್ಲಿ ಆರೋಪಿಗಳು ಎಸ್ಕೇಪ್ ಆಗಿದ್ದು, ಪೊಲೀಸರು ಇಲ್ಲಿದ್ದ ಎಲ್ಲವನ್ನೂ ಜಪ್ತಿ ಮಾಡಿದ್ದಾರೆ. ಇದರಲ್ಲಿ ಹಿಟಾಚಿ ಹಾಗೂ ದೋಣಿ ಕೂಡಾ ಸೇರಿದ್ದು, ಅದನ್ನೂ ಕೂಡಾ ತಂದು ಠಾಣೆಯ ಮುಂದಿಟ್ಟಿದ್ದಾರೆ.