ಹೊಸ ವರ್ಷಾರಂಭಕ್ಕೆ ಗ್ರಾಹಕರಿಗೆ ಶಾಕಿಂಗ್ ಸುದ್ದಿ: ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆ..!
ನವದೆಹಲಿ: ಜನವರಿ ತಿಂಗಳಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಅನಿಲ ಬೆಲೆಯನ್ನು Deಬಿಡುಗಡೆ ಮಾಡಿವೆ. ಡಿಸೆಂಬರ್ ತಿಂಗಳಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಕಂಪನಿಗಳು ಎರಡು ಪಟ್ಟು ಹೆಚ್ಚಿಸಿ 100ರೂ ಏರಿಸಿತ್ತು.
ಇದೀಗ ಸಬ್ಸಿಡಿ ರಹಿತ ಅಡುಗೆ ಅನಿಲದ ಬೆಲೆ ದೆಹಲಿಯಲ್ಲಿ (14.2ಕೆ.ಜಿ)ಯ ಪ್ರತಿ ಸಿಲಿಂಡರ್ಗೆ 694 ರೂಪಾಯಿಗೆ ಮಾರಾಟವಾಗುತ್ತಿದೆ.ಜನವರಿ ಮೊದಲ ದಿನದಂದು ತೈಲ ಕಂಪನಿಗಳು ಸಿಲಿಂಡರ್ ಬೆಲೆಯನ್ನು (ಎಚ್ ಪಿಸಿಎಲ್, ಬಿಪಿಸಿಎಲ್, ಐಒಸಿ)ಗಳು 56ರೂಪಾಯಿಯಷ್ಟು ಹೆಚ್ಚಿಸಿದೆ.
ದೆಹಲಿಯಲ್ಲಿ 19 ಕೆಜಿ ಎಲ್ ಪಿಜಿ ಅಡುಗೆ ಸಿಲಿಂಡರ್ ಬೆಲೆ 1,332 ರೂ.ನಿಂದ 1,349 ರೂ.ಗೆ ಏರಿಕೆಯಾಗಿದೆ. 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 17 ರೂ. ಆಗಿದೆ. 14.2 ಕೆಜಿ ಸಿಲಿಂಡರ್ ಬೆಲೆ 694 ರೂಪಾಯಿ.ಆಗಿದೆ.
ಕೋಲ್ಕತ್ತಾದಲ್ಲಿ 19 ಕೆಜಿ ಎಲ್ ಪಿಜಿ ಎಲ್ ಪಿಜಿ ಸಿಲಿಂಡರ್ ಬೆಲೆ 1,387.50 ರೂ.ನಿಂದ 1,410 ರೂ.ಗೆ ಏರಿಕೆಯಾಗಿದೆ. ಸಿಲಿಂಡರ್ ಬೆಲೆ 22.50 ರೂ.ಗೆ ಏರಿಕೆಯಾಗಿದೆ. ಇಲ್ಲಿ ಗೃಹಬಳಕೆಯ ಅನಿಲದ ಬೆಲೆ 720.50 ರೂ.ಆಗಿದೆ.
ಮುಂಬೈನಲ್ಲಿ 19 ಕೆಜಿ ಎಲ್ ಪಿಜಿ ಎಲ್ ಪಿಜಿ ಸಿಲಿಂಡರ್ ಬೆಲೆ 1,280.50 ರೂಪಾಯಿಯಿಂದ 1,297.50 ರೂ.ಗೆ ಏರಿಕೆಯಾಗಿದೆ. ಸಿಲಿಂಡರ್ ಬೆಲೆ 17 ರೂ. ಏರಿಕೆಯಾಗಿದೆ. 14.2 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 694 ರೂ. ಏರಿಕೆಯಾಗಿದೆ.
ಚೆನ್ನೈನಲ್ಲಿ 19 ಕೆಜಿ ಎಲ್ ಪಿಜಿ ಎಲ್ ಪಿಜಿ ಸಿಲಿಂಡರ್ ಬೆಲೆ 1,446.50 ರೂ.ನಿಂದ 1,463.50 ರೂ.ಗೆ ಏರಿಕೆಯಾಗಿದೆ. ಸಿಲಿಂಡರ್ ಬೆಲೆ 17 ರೂ.ಗೆ ಏರಿಕೆಯಾಗಿದೆ. 14.2 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 710 ರೂ ಇದೆ.