Connect with us

    LATEST NEWS

    ಆರ್‌ಸಿಬಿಗೆ ಆಘಾತ; ಕೈಕೊಟ್ಟ ಸ್ಟಾರ್ ಪ್ಲೇಯರ್

    Published

    on

    ಮಂಗಳೂರು/ಮುಂಬೈ : ವುಮೆನ್ಸ್ ಪ್ರೀಮಿಯರ್ ಲೀಗ್ 2025ರ ಋತುವಿನ ಆರಂಭಕ್ಕೆ ಕೆಲವೇ ದಿನಗಳಿರುವಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡಕ್ಕೆ ಅನಿರೀಕ್ಷಿತ ಆಘಾತ ಎದುರಾಗಿದೆ. ತಂಡದ ಸ್ಟಾರ್ ಆಲ್‌ರೌಂಡರ್ ಇಡೀ ಟೂರ್ನಿಯಿಂದಲೇ ದೂರ ಉಳಿಯುವುದಾಗಿ ತಿಳಿಸಿದ್ದಾರೆ.

    ವುಮೆನ್ಸ್ ಪ್ರೀಮಿಯರ್ ಲೀಗ್‌ನ ಮೂರನೇ ಆವೃತ್ತಿ ಫೆಬ್ರವರಿ 14 ರಿಂದ ಶುರುವಾಗಲಿದೆ. ವಡೋದರಾದ ಕೊಟಂಬಿ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಣಕ್ಕಿಳಿಯಲಿದೆ. ಆದರೆ ಈ ಬಾರಿಯ ಟೂರ್ನಿಗೆ ಆರ್‌ಸಿಬಿ ಆಟಗಾರ್ತಿ ಸೋಫಿ ಡಿವೈನ್ ಅಲಭ್ಯರಾಗಲಿದ್ದಾರೆ.

    ಇದನ್ನೂ ಓದಿ: ಗೂಗಲ್ ಮ್ಯಾಪ್ ಅವಾಂತರ: ನೇಪಾಳಕ್ಕೆ ಹೋಗಬೇಕಿದ್ದ ಫ್ರಾನ್ಸ್ ಪ್ರವಾಸಿಗರಿಬ್ಬರು ತಲುಪಿದ್ದು ಎಲ್ಲಿಗೆ ?

    ನ್ಯೂಜಿಲೆಂಡ್ ತಂಡದ ನಾಯಕಿ ಸೋಫಿ ಡಿವೈನ್ ಈ ವರ್ಷದ ಸಂಪೂರ್ಣ ಋತುವಿಗೆ ಹೊರಗುಳಿಯಲಿದ್ದಾರೆ. ಅಲ್ಲದೆ ಡಿವೈನ್ ದೇಶೀಯ ಕ್ರಿಕೆಟ್‌ನಿಂದಲೂ ಸ್ವಲ್ಪ ಸಮಯದವರೆಗೆ ದೂರ ಉಳಿಯಲು ನಿರ್ಧರಿಸಿದ್ದಾರೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ದೃಢಪಡಿಸಿದೆ.

    ಆದರೆ, ಸೋಫಿಯ ಈ ನಿರ್ಧಾರಕ್ಕೆ ಕಾರಣವನ್ನು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಬಹಿರಂಗಪಡಿಸಿಲ್ಲ. ಇದು ನಿಜಕ್ಕೂ ಆರ್‌ಸಿಬಿಗೆ ದೊಡ್ಡ ಹಿನ್ನಡೆಯಾಗಿದೆ. ಏಕೆಂದರೆ ಕಳೆದ ವರ್ಷ ಆರ್‌ಸಿಬಿ WPL ಪ್ರಶಸ್ತಿಯನ್ನು ಗೆಲ್ಲುವಲ್ಲಿ ಡಿವೈನ್ ಪ್ರಮುಖ ಪಾತ್ರ ವಹಿಸಿದ್ದರು.

    ಸೋಫಿ ಡಿವೈನ್ ಕಳೆದ ಎರಡು ಸೀಸನ್‌ಗಳಲ್ಲಿ ಆರ್‌ಸಿಬಿ ಪರ ಆರಂಭಿಕಳಾಗಿ ಕಣಕ್ಕಿಳಿದಿದ್ದರು. ಈ ವೇಳೆ 18 ಇನಿಂಗ್ಸ್ ಆಡಿರುವ ಅವರು 2 ಅರ್ಧಶತಕಗಳೊಂದಿಗೆ ಒಟ್ಟು 402 ರನ್ ಕಲೆಹಾಕಿದ್ದಾರೆ. ಹಾಗೆಯೇ ಬೌಲಿಂಗ್‌ನಲ್ಲಿ 9 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಸೋಫಿ ಡಿವೈನ್ ಹೊರಗುಳಿದಿರುವ ಕಾರಣ ಆರ್‌ಸಿಬಿ ಬದಲಿ ಆಲ್‌ರೌಂಡರ್‌ ಆಟಗಾರ್ತಿಯನ್ನು ಆಯ್ಕೆ ಮಾಡಬೇಕಿದೆ.

    Click to comment

    Leave a Reply

    Your email address will not be published. Required fields are marked *

    BIG BOSS

    ಕಿಚ್ಚ ಸುದೀಪ್ ಜೊತೆ ಬಿಗ್‌ಬಾಸ್ ಧ್ವನಿ ಪ್ರದೀಪ್ ಬಡೆಕ್ಕಿಲ ವಿದಾಯ

    Published

    on

    ಹಲವು ಬದಲಾವಣೆಗಳಿಗೆ ಬಿಗ್ ಬಾಸ್ ಕನ್ನಡ 11ರ ಈ ಸೀಸನ್ ಸಾಕ್ಷಿಯಾಗಿದೆ. ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ ಇದು ತಮ್ಮ ಕೊನೆಯ ಸೀಸನ್ ಎಂದು ಈಗಾಗಲೇ ಘೋಷಿಸಿದ್ದಾರೆ.

    ಈ ಸೀಸನ್ ಶುರುವಾಗುವ ಮುನ್ನ ಸುದೀಪ್ ಬಿಗ್ ಬಾಸ್ ನಿರೂಪಣೆ ಮಾಡುತ್ತಾರೋ ಎಂಬುದು ದೊಡ್ಡ ಪ್ರಶ್ನೆ ಆಗಿತ್ತು. ಆದರೆ ಈ ಸೀಸನ್ ನಲ್ಲಿ ಸುದೀಪ್ ನಿರೂಪಣೆ ಮಾಡುವುದಾಗಿ ಬಿಗ್ ಬಾಸ್ ಪ್ರೋಮೋದ ಮೂಲಕ ತಿಳಿದುಬಂದಿತ್ತು.

    ಕಳೆದ ವಾರ ಕಿಚ್ಚನ ಪಂಚಾಯಿತಿ ಬಳಿಕ ತಮ್ಮ ಕೊನೆಯ ಪಂಚಾಯಿತಿ ಎಂದು ಕಿಚ್ಚ ಸುದೀಪ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಜತೆಗೆ ಬಿಗ್ ಬಾಸ್ ಅಭಿಮಾನಿಗಳು ಇದಕ್ಕೆ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.

    ಆದರೆ ಇದೀಗ ಇನ್ನೊಂದು ಶಾಕ್ ಕೊಟ್ಟಿದ್ದು ಕಿಚ್ಚ ಸುದೀಪ್ ವಿದಾಯದೊಂದಿಗೆ ಬಿಗ್ ಬಾಸ್ ಧ್ವನಿಯೂ ವಿದಾಯ ಹೇಳಲಿದೆ. ಹೌದು, ಬಿಗ್ ಬಾಸ್ ಹಾಗೂ ಕಲರ್ಸ್ ಕನ್ನಡ ಹಾಗೂ ನಮ್ಮ ಮೆಟ್ರೋಗೆ ಧ್ವನಿ ನೀಡಿದ್ದ ಬಡೆಕ್ಕಿಲ ಪ್ರದೀಪ್ ಮನೆಮಾತಾಗಿದ್ದಾರೆ.

    ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಧ್ವನಿಯಾಗಿಯೂ ಪ್ರದೀಪ್ ಅವರೇ ಇದ್ದಾರೆ ಎಂದು ಎಲ್ಲರೂ ಹೇಳುವುದು ಹೌದು. ಹೀಗಾಗಿ ಬಿಗ್ ಬಾಸ್ ಧ್ವನಿ ಎನ್ನಲಾಗುವ ಪ್ರದೀಪ್ ಅವರು ಕೂಡ ಬೆಂಗಳೂರನ್ನು ತೊರೆಯಲಿದ್ದು, ಕಿಚ್ಚ ಸುದೀಪ್ ವಿದಾಯದೊಂದಿಗೆ ಬಿಗ್ ಬಾಸ್ ಧ್ವನಿಯೂ ವಿದಾಯ ಹೇಳಲಿದೆ.

    ಬಡೆಕ್ಕಿಲ ಪ್ರದೀಪ್ ಅವರು ಈಗಾಗಲೇ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, ತಾವು ಅನಿವಾರ್ಯ ಕಾರಣಗಳಿಂದಾಗಿ ಹುಟ್ಟೂರು ಪುತ್ತೂರಿಗೆ ಮರಳುತ್ತಿರುವುದಾಗಿ ತಿಳಿಸಿದ್ದಾರೆ.

    Continue Reading

    DAKSHINA KANNADA

    ತಡರಾತ್ರಿಯಲ್ಲಿ ಆಕಸ್ಮಿಕ ಅಗ್ನಿ ಅವಘಡ; ಜಪ್ಪಿನಮೊಗರು ಬಳಿ ಹೊತ್ತಿ ಉರಿದ ಅಂಗಡಿ

    Published

    on

    ಮಂಗಳೂರು : ಭಾನುವಾರ ಮಧ್ಯರಾತ್ರಿ 12 ಗಂಟೆಯ ಸುಮಾರಿಗೆ ಜಪ್ಪಿನ ಮೊಗರು ಬಳಿಯ ಅಂಗಡಿಯೊಂದು ಹೊತ್ತಿ ಉರಿದ ಘಟನೆ ಸಂಭವಿಸಿದೆ.

    ಜಪ್ಪಿನ ಮೊಗರು ಬಳಿಯ ಗ್ಲಾಸ್ ಸೆಂಟರ್ ಒಂದರಲ್ಲಿ ಕಾಣಿಸಿಕೊಂಡ ಬೆಂಕಿ ಕೆಲವೇ ಕ್ಷಣದಲ್ಲಿ ಇಡೀ ಅಂಗಡಿಯನ್ನು ಬಸ್ಮ ಮಾಡಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಬೆಂಕಿ ನಂದಿಸಲು ಮುಂದಾಗಿದ್ದು, ಅಗ್ನಿ ಶಾಮಕದಳಕ್ಕೂ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಕಡಲ್ಕೊರೆತ ತಡೆಗಾಗಿ ವಿಷ್ಣು ಸಹಸ್ರನಾಮ ಪಠಣ

    ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸ್ಥಳೀಯರ ನೆರವಿನೊಂದಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಅಗ್ನಿ ಅವಘಡಕ್ಕೆ ಶಾರ್ಟ್ ಸರ್ಕ್ಯುಟ್ ಕಾರಣ ಅಂತ ಹೇಳಲಾಗಿದ್ದು, ಈ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಾಗಿದೆ.

    ಅಗ್ನಿಯ ಕೆನ್ನಾಲಿಗೆ ಸುಟ್ಟು ಕರಕಲಾದ ಗ್ಲಾಸ್ ಸೆಂಟರ್‌ನಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿದೆ.

    Continue Reading

    LATEST NEWS

    ರಾಜ್ಯದಲ್ಲಿ ತೀವ್ರ ಚಳಿ ಜೊತೆಗೆ 3 ದಿನ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ.!

    Published

    on

    ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚಳಿ ಹೆಚ್ಚಾಗಿದ್ದು, ಜನವರಿ 30 ರಿಂದ ಮೂರು ದಿನ ಬೆಂಗಳೂರು ಸೇರಿದಂತೆ ರಾಜ್ಯದ ಹಲವಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಜನವರಿ 30ರಂದು ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ರಾಮನಗರ, ಜನವರಿ 31 ಹಾಗೂ ಫೆಬ್ರವರಿ 1ರಂದು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬಾಗಲಕೋಟೆ, ಗದಗ, ಧಾರವಾಡ, ವಿಜಯಪುರ, ಹಾವೇರಿ, ಮೈಸೂರು, ಮಂಡ್ಯ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಕೊಡಗು, ಕೋಲಾರ, ಬೆಂಗಳೂರು, ಚಾಮರಾಜನಗರ, ರಾಮನಗರ ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಪ್ರಸ್ತುತ ಒಳನಾಡಿನಲ್ಲಿ ಚಳಿಯ ಪ್ರಮಾಣ ಹೆಚ್ಚುತ್ತಿದೆ. ಉತ್ತರ ಒಳನಾಡಿನ ವಿಜಯಪುರದಲ್ಲಿ ಕಳೆದ 24 ಗಂಟೆಗಳಲ್ಲಿ 11.8 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು. ಇದನ್ನು ಹೊರತುಪಡಿಸಿದರೆ ಉತ್ತರ ಒಳನಾಡಿನ ಹಾವೇರಿ 12, ಬೀದರ್ 13, ಗದಗ 13.4, ಬೆಂಗಳೂರು 14, ರಾಯಚೂರು 15, ಬೆಳಗಾವಿ ವಿಮಾನ ನಿಲ್ದಾಣ 15 ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬಾಗಲಕೋಟೆ, ಬೆಳಗಾವಿ, ಬೀದ‌ರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಚಳಿ ಇರಲಿದೆ. ದಕ್ಷಿಣ ಒಳನಾಡಿನಲ್ಲಿ ಅಲ್ಪ ಪ್ರಮಾಣದಲ್ಲಿ ಚಳಿಯ ವಾತಾವರಣ ಇರಲಿದೆ.

    Continue Reading

    LATEST NEWS

    Trending