Connect with us

LATEST NEWS

ಗ್ರಾಹಕರಿಗೆ ಶಾಕ್ : ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ದರ ಹೆಚ್ಚಳ

Published

on

ಮಂಗಳೂರು/ನವದೆಹಲಿ : ವಾಣಿಜ್ಯ ಬಳಕೆಯ ಸಿಲಿಂಡರ್ ಗ್ರಾಹಕರಿಗೆ ಶಾಕ್ ಆಗಿದೆ. ಹೌದು, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು 39ರೂ.ನಷ್ಟು ಹೆಚ್ಚಿಸಿವೆ.

14 ಕೆಜಿ ಗೃಹಬಳಕೆಯ ಗ್ಯಾಸ್​ ಸಿಲಿಂಡರ್​ನ ಬೆಲೆಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಭಾನುವಾರ(ಸೆ.1) ದೆಹಲಿಯಲ್ಲಿ ವಾಣಿಜ್ಯ ಎಲ್​ಪಿಜಿ ಸಿಲಿಂಡರ್​ ಬೆಲೆ 39ರೂ.ಗಳಷ್ಟು ಹೆಚ್ಚಾಗಿದೆ.

ಜುಲೈನಲ್ಲಿ ಪ್ರತಿ ಸಿಲಿಂಡರ್‌ಗೆ 30 ರೂ., ಜೂನ್‌ನಲ್ಲಿ 69.50 ಮತ್ತು ಮೇನಲ್ಲಿ 19 ರೂ. ಹೆಚ್ಚಳವಾಗಿತ್ತು. ಎಲ್‌ಪಿಜಿ ಬೆಲೆಗಳಲ್ಲಿನ ಹಠಾತ್ ಹೆಚ್ಚಳವು ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳಿಂದ ಹಿಡಿದು ಸಣ್ಣ-ಪ್ರಮಾಣದ ಕೈಗಾರಿಕೆಗಳ ವರೆಗೆ ವಿವಿಧ ವಲಯಗಳ ವ್ಯವಹಾರಗಳ ಮೇಲೆ ಪರಿಣಾಮ ಬೀರಲಿದೆ.

ಇಂದಿನಿಂದ ಅಂದರೆ, ಸೆಪ್ಟೆಂಬರ್ 1 ರಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ 1691.50 ರೂ.ಗೆ ಲಭ್ಯವಾಗಲಿದೆ. ಹೊಸ ದರಗಳ ಪ್ರಕಾರ, ಇಂದಿನಿಂದ ವಾಣಿಜ್ಯ ಸಿಲಿಂಡರ್ ಬೆಲೆ 39 ರೂ. ಈಗ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 1691.50 ರೂ. ಆಗಿದೆ.

ಇದನ್ನೂ ಓದಿ : ಕೇರಳದಲ್ಲಿ ‘ಮೀಟೂ’ ಗದ್ದಲ..! ಧ್ವನಿ ಎತ್ತಿದ ಟಾಲಿವುಡ್‌ನ ಸಮಂತಾ..!!

ಎಲ್ಲಿ ಎಷ್ಟು?

ಮುಂಬೈನಲ್ಲಿ ಇದರ ಬೆಲೆ 1644 ರೂ. ಈ ಮೊದಲು ಈ ಸಿಲಿಂಡರ್ ಮುಂಬೈನಲ್ಲಿ 1605 ರೂ.ಗೆ ಲಭ್ಯವಿತ್ತು. ಕೋಲ್ಕತ್ತಾದಲ್ಲಿ ಈ ಸಿಲಿಂಡರ್ ಬೆಲೆ 1764.50 ರೂ.ನಿಂದ 1802.50 ರೂ.ಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಈ ಸಿಲಿಂಡರ್ ಈಗ 1855 ರೂ.ಗೆ ಲಭ್ಯವಾಗಲಿದೆ. ಈ ಹಿಂದೆ ಚೆನ್ನೈನಲ್ಲಿ 19 ಕೆಜಿ ಸಿಲಿಂಡರ್ 1817 ರೂ.ಗೆ ಮಾರಾಟವಾಗಿತ್ತು. ಆಗಸ್ಟ್‌ನಲ್ಲಿ ಎಲ್‌ಪಿಜಿ ಗ್ಯಾಸ್‌ನ ಬೆಲೆಯನ್ನು ಹೆಚ್ಚಿಸಲಾಗಿತ್ತು.  8.50 ರೂಪಾಯಿ ಏರಿಕೆ ಮಾಡಲಾಗಿತ್ತು.  ಆದರೆ, ಈ ಬಾರಿ 39 ರೂಪಾಯಿ ಹೆಚ್ಚಿಸಲಾಗಿದೆ.

DAKSHINA KANNADA

ಮಂಗಳೂರು : ಬ್ಯಾಡ್ಮಿಂಟನ್ ಕೋರ್ಟ್‌ನಲ್ಲೇ ಕು*ಸಿದುಬಿದ್ದು ವಿದ್ಯಾರ್ಥಿ ಸಾ*ವು

Published

on

ಮಂಗಳೂರು: ಫ್ರೆಂಡ್ಸ್ ಜೊತೆ ಆಡುತ್ತಿದ್ದ ವೇಳೆ ಖಾಸಗಿ ಕಾಲೇಜಿನ ವಿದ್ಯಾರ್ಥಿಯೊಬ್ಬ ಕುಸಿದು ಬಿದ್ದು ಸಾ*ವನ್ನಪ್ಪಿದ ಘಟನೆ ಮಂಗಳೂರಿನ ಫಳ್ನೀರ್‌ನಲ್ಲಿ ನಿನ್ನೆ (ಜ.15) ನಡೆದಿದೆ.

ಮೂಲತಃ ಅಡ್ಡೂರಿನ ನಿವಾಸಿಯಾಗಿದ್ದು, ಪ್ರಸ್ತುತ ಅತ್ತಾವರ ಐವರಿ ಟವರ್‌ನಲ್ಲಿ ವಾಸವಿದ್ದ ಶಹೀಮ್ (20) ಮೃ*ತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

ಇಸನದನೂ ಓದಿ : ಬಾಲಿವುಡ್‌ ನಟ ಸುದೀಪ್ ಪಾಂಡೆ ವಿಧಿವಶ

ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆಯುತ್ತಿದ್ದ ಶಹೀಮ್ ಗೆಳೆಯರೊಂದಿಗೆ ಶಟಲ್ ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಏಕಾಏಕಿ ಕೋರ್ಟ್‌ನಲ್ಲೇ ಕು*ಸಿದು ಬಿ*ದ್ದಿದ್ದಾನೆ. ತಕ್ಷಣವೇ ಅವನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅದಾಗಲೇ ಶಹೀಮ್ ಮೃ*ತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

Continue Reading

FILM

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಮಾ*ರಣಾಂತಿಕ ಹ*ಲ್ಲೆ

Published

on

ಮಂಗಳೂರು/ಮುಂಬಯಿ : ಮುಂಜಾನೆ 2 ಗಂಟೆ ವೇಳೆ ಮನೆಗೆ ಕಳ್ಳರು ನುಗ್ಗಿ ಬಾಲಿವುಡ್‌ ನಟ ಸೈಫ್ ಅಲಿ ಖಾನ್ ಮೇಲೆ ಚಾ*ಕುವಿನಿಂದ ಹ*ಲ್ಲೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

ತಕ್ಷಣವೇ ನಟನನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ದ*ರೋಡೆಕೋರರ ವ್ಯಕ್ತಿಯ ವಿರುದ್ಧ ಬಾಂದ್ರಾ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಮುಂಜಾನೆ 2 ಗಂಟೆಗೆ ಸೈಫ್ ಅಲಿಖಾನ್ ಮನೆಗೆ ದ*ರೋಡೆಕೋರರು ಪ್ರವೇಶಿಸಿದ ವೇಳೆ, ಸೈಫ್ ಮತ್ತು ಅಪರಿಚಿತ ವ್ಯಕ್ತಿಗಳ ನಡುವೆ ಮಾ*ರಾಮಾರಿ ನಡೆದಿದೆ. ಬಳಿಕ ಸೈಫ್ ಮೇಲೆ ಹ8ರಿತವಾದ ಆ*ಯುಧದಿಂದ ಹ*ಲ್ಲೆ ಮಾಡಿದ್ದಾನೆ. ದಾ*ಳಿ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಸೈಫ್ ಅವರ ಕುತ್ತಿಗೆಯಲ್ಲಿ 10 ಸೆಂ.ಮೀ ಗಾ*ಯವಾಗಿದ್ದು, ಕೈ ಮತ್ತು ಬೆನ್ನಿಗೂ ಗಾ*ಯವಾಗಿದೆ.

ಮುಂಬೈನ ಬಾಂದ್ರಾದಲ್ಲಿರುವ ಸೈಫ್‌ ಆಲಿ ಖಾನ್‌ ಮನೆಯಲ್ಲಿ ಮನೆಮಂದಿ ಜೊತೆ ಮಲಗಿದ್ದ ಈ ದುರ್ಘಟನೆ ನಡೆದಿದೆ. ಈ ಸಮಯ ಮನೆಯವರೆಲ್ಲಾ ಎಚ್ಚರಗೊಂಡಿದ್ದು, ಈ ಘಟನೆಯ ತನಿಖೆಗೆ ವಿಶೇಷ ಪೊಲೀಸರ ತಂಡ ರಚನೆ ಆಗಿದೆ. ಮನೆಯ ಸುತ್ತಮುತ್ತ ಇರುವ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಯುತ್ತಿದೆ. “ಕಳ್ಳರು 2-3 ಬಾರಿ ಹ*ಲ್ಲೆ ಮಾಡಿದ್ದು,ಮುಂಬೈ ಕ್ರೈಮ್‌ ಬ್ರ್ಯಾಂಚ್‌ ಈ ಕುರಿತು ತನಿಖೆ ಮಾಡುತ್ತಿದೆ. ನಟನಿಗೆ ಆ*ರು ಗಾಯವಾಗಿದ್ದು, ಎರಡು ಕಡೆ ತುಂಬಾ ಗಂ*ಭೀರ ಗಾ*ಯವಾಗಿದೆ” ಎಂದು ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. “ಸೈಫ್‌ ಆಲಿಖಾನ್‌ನ ಬೆನ್ನಿನ ಭಾಗದಲ್ಲಿ ಕಳ್ಳರು ಚಾ*ಕು ಇ*ರಿದಿದ್ದು, ದೊಡ್ಡ ಗಾ*ಯವೇ ಆಗಿದೆ. ಬೆನ್ನು ಮೂಳೆಗೆ ತೊಂ*ದರೆ ಉಂಟಾಗಿದ್ದು ಶಸ್ತ್ರಚಿಕಿತ್ಸೆಯ ಅಗತ್ಯವಿದೆ” ಎಂದು ವೈದ್ಯರು ತಿಳಿಸಿದ್ದಾರೆ,

Continue Reading

LATEST NEWS

ಒಂದೇ ಬಾರಿಗೆ 45 ಮಂದಿ ರೌಡಿ ಶೀಟರ್‌ಗಳು ವಿವಿಧ ಜಿಲ್ಲೆಗಳಿಗೆ ಗಡಿಪಾರು ಮಾಡಿ ಆದೇಶ

Published

on

ಮಂಗಳೂರು/ಹುಬ್ಬಳ್ಳಿ : ಹುಬ್ಬಳ್ಳಿ- ಧಾರವಾಡದ 45 ಮಂದಿ ಅಪರಾಧಿಗಳನ್ನು ವಿವಿಧ ಜಿಲ್ಲೆಗೆ ಆರು ತಿಂಗಳ ಕಾಲ ಗಡೀಪಾರು ಮಾಡಿ ಪೊಲೀಸ್ ಆಯುಕ್ತ ಎನ್‌. ಶಶಿಕುಮಾರ್ ಆದೇಶಿಸಿದ್ದಾರೆ.

ಕೊಲೆ, ಕೊಲೆಯತ್ನ, ಸುಲಿಗೆ, ದರೋಡೆ, ಕಳ್ಳತನ, ಹಲ್ಲೆ, ದೊಂಬಿ, ಮಾನಭಂಗ ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದವರನ್ನು ಗುರುತಿಸಿ 45 ಜನರನ್ನು ಬೀದರ್, ಕಲಬುರಗಿ, ಯಾದಗಿರಿ, ಚಾಮರಾಜನಗರ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಗಡಿಪಾರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿದರೆ ಹೆಚ್ಚು ಲಾಭ ಆಮಿಷ; ಇಬ್ಬರು ಆರೋಪಿಗಳ ಸೆರೆ

ಹುಬ್ಬಳ್ಳಿ-ಧಾರವಾಡ ಜಿಲ್ಲೆಯನ್ನು ಅಪರಾಧ ಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ಇನ್ನೂ ಹಲವರನ್ನು ಗಡಿಪಾರು ಮಾಡಲು ಯೋಜಿಸಲಾಗಿದೆ. ಕೆಲವರು ನ್ಯಾಯಾಂಗ ವಶದಲ್ಲಿದ್ದು, ಇನ್ನು ಕೆಲವರು ತಲೆಮರೆಸಿಕೊಂಡಿದ್ದಾರೆ. ಅವರನ್ನು ಪತ್ತೆ ಮಾಡಿ ಪಟ್ಟಿ ಸಿದ್ದಪಡಿಸಲಾಗುವುದು. ಕೆಲವರ ಮೇಲೆ ಗೂಂಡಾ ಕಾಯ್ದೆ ಪ್ರಕರಣ ದಾಖಲಿಸಲು ಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಹಿಂದೆ ಎನ್. ಶಶಿಕುಮಾರ್ ಮಂಗಳೂರು ಪೊಲೀಸ್ ಆಯುಕ್ತರಾಗಿ ಕೆಲಸ ಮಾಡಿದ್ದರು.

Continue Reading

LATEST NEWS

Trending

Exit mobile version