ಬೆಳ್ತಂಗಡಿ: ಭಾರತೀಯ ಭೂ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಉಜಿರೆಯ ಶೋಭಿತ್ ಶೆಟ್ಟಿಯವರು ಮೇಜರ್ ಆಗಿ ಪದೋನ್ನತಿಗೊಂಡು ಪ್ರಸುತ್ತ ಮಣಿಪುರ ರಾಜ್ಯದ ಚಂಡೇಲ್ ಜಿಲ್ಲೆಯಲ್ಲಿ ಅಸ್ಸಾಂ ರೈಫಲ್ಸ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶೋಭಿತ್ ಶೆಟ್ಟಿ ಉಜಿರೆಯ ಓರಿಯಂಟಲ್ ಇನ್ಶೂರೆನ್ಸ್ ಕಂಪನಿಯ ನಿವೃತ್ತ ಅಭಿವೃದ್ಧಿ ಅಧಿಕಾರಿ ಉಜಿರೆಯ ಜಯಂತ ಶೆಟ್ಟಿ ಕುಂಟಿನಿ ಹಾಗೂ ಶ್ರೀಮತಿ ಜಲಜಾಕ್ಷಿ ಶೆಟ್ಟಿ ದಂಪತಿ ಪುತ್ರ.