ಮಂಗಳೂರು/ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 11’ ಪ್ರಾರಂಭವಾಗಿ 50 ಕ್ಕೂ ಹೆಚ್ಚು ದಿನಗಳಾಗಿವೆ. ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿ, ವಾರಂತ್ಯದಲ್ಲಿ ಕಿಚ್ಚ ಸುದೀಪ್ ಅವರ ಮುಂದೆ ಕಣ್ಣಿರು ಹಾಕಿ ಮನೆಯಿಂದ ಹೊರಗೆ ಕಳುಹಿಸುವಂತೆ ಕೇಳಿಕೊಂಡಿದ್ದಾರೆ.
ತೆಲುಗು ಬಿಗ್ ಬಾಸ್ ಸೀಸನ್ 8ರಲ್ಲಿ ರೆಬಲ್ ಆಗಿ ಮಿಂಚಿದ್ದ ಶೋಭಾ ಶೆಟ್ಟಿಗೆ ಕನ್ನಡ ಬಿಗ್ ಬಾಸ್ ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ರೆಬಲ್ ಆಗಿ ಎಂಟ್ರಿ ಕೊಟ್ಟಿದ್ದ ಶೋಭಾ ಇಲ್ಲಿ ಸಂಪೂರ್ಣವಾಗಿ ಸೈಲೆಂಟ್ ಆಗಿದ್ದಾರೆ.
ಈ ವಾರ ಶೋಭಾ ಶೆಟ್ಟಿ ನಾಮಿನೇಟ್ ಆಗಿದ್ದರು. ಆದರೆ ಜನ ವೋಟ್ ಮಾಡಿ ಅವರನ್ನು ಉಳಿಸಿದ್ದಾರೆ. ಆದರೆ ಶೋಭಾ ಶೆಟ್ಟಿಗೆ ಮನೆಯಲ್ಲಿ ಉಳಿದುಕೊಳ್ಳಲು ಇಷ್ಟವಿಲ್ಲ. ಹೀಗೆಂದು ಸುದೀಪ್ ಮುಂದೆ ಹೇಳಿಕೊಂಡಿರುವ ಶೋಭಾ ಶೆಟ್ಟಿ ಕೈ ಮುಗಿದು ಸುದೀಪ್ ಎದುರು ಅಂಗಲಾಚಿದ್ದು, ತಾನು ಮನೆಯಿಂದ ಹೊರಗೆ ಹೋಗಬೇಕು ಎಂದು ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: ಸ್ಪೋಟಕ ಅರ್ಧಶತಕ ಸಿಡಿಸಿದ ಆರ್‌ಸಿಬಿ ಹುಡುಗ !
ಆರಂಭದಲ್ಲಿ ಶೋಭಾ ಶೆಟ್ಟಿಗೆ ಬುದ್ದಿವಾದ ಹೇಳಿದ ಸುದೀಪ್ ‘ಅರ್ಥ ಮಾಡಿಕೊಳ್ಳಿ, ಯಾಕೆ ನೀವು ಒಳಗೆ ಹೋಗಿದ್ರಿ? ನಿಮ್ಮನ್ನು ಸೇಫ್ ಮಾಡಿದರಲ್ಲ ಮತದಾರರು, ಅವರಿಗೆ ನೀವು ಅನ್ಯಾಯ ಮಾಡುತ್ತಿದ್ದೀರಿ’ಎಂದು ಹೇಳಿದರು. ಏನೇ ಆದರೂ ತಾನೂ ಮನೆಗೆ ಹೋಗಲೇಬೇಕು ಎಂದು ಒತ್ತಾಯ ಮಾಡಿದರು. ಕೊನೆಗೆ ಶೋಭಾ ಶೆಟ್ಟಿ ಮಾತುಗಳಿಗೆ ಕೋಪಗೊಂಡ ಸುದೀಪ್ ಬಿಗ್ ಬಾಸ್ ಮನೆ ಬಾಗಿಲು ಓಪನ್ ಮಾಡಿಸಿದ್ದಾರೆ.
ಶೋಭಾ ಕಣ್ಣಿರು ಹಾಕುತ್ತಾ’ನನಗೆ ಕಂಟಿನ್ಯೂ ಮಾಡೋಕೆ ಆಗಲ್ಲ ಅಂತ ಅನಿಸುತ್ತಿದೆ ಸರ್. ಇಲ್ಲಿಂದ ಹೊರಗೆ ಹೋದ ಮೇಲೆ ಪೇಸ್ ಮಾಡುವುದು ಹೇಗಂತ ಗೊತ್ತಾಗುತ್ತಿಲ್ಲ. ಆಡಬೇಕು, ಇರಬೇಕೆಂದು ಅನಿಸುತ್ತಿದೆ. ಆದರೆ ಭಯವಾಗುತ್ತಿದೆ ಎಂದಿದ್ದಾರೆ.
ಶೋಭಾ ಶೆಟ್ಟಿ ಮನೆಗೆ ಹೋಗಿದ್ದಾರೋ ಇಲ್ಲವೋ ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಮಂಗಳೂರು/ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 11’ ರೋಚಕ ಘಟ್ಟ ತಲುಪುತ್ತಿದೆ.
ಈಗಾಗೀ ಸ್ಪರ್ಧಿಗಳ ನಡುವೆ ಸದ್ಯ ಬಿಗ್ ಬಾಸ್ ಮನೆ ಎರಡು ಟಿವಿ ವಾಹಿನಿಗಳಾಗಿ ಪರಿವರ್ತನೆ ಆಗಿದೆ. ಎರಡು ವಾಹಿನಿಗಳ ಉದ್ಯೋಗಿಗಳು ಎದುರಾಳಿಗಳಿಗೆ ಟಕ್ಕರ್ ನೀಡುವ, ಕಾಲೆಳೆಯುವ ಟಾಸ್ಕ್ ಜೋರಾಗಿ ನಡೆಯುತ್ತಿದೆ.
ಇದರ ನಡುವೆ ದೊಡ್ಮನೆಯಲ್ಲಿ ನಾಮಿನೇಷನ್ ಕಾವು ಜೋರಾಗಿದೆ. ಬಿಗ್ ಬಾಸ್ ಇಂದು ನಾಮಿನೇಷನ್ ಗೆ ಸಂಬಂಧಿಸಿದ ಟಾಸ್ಕ್ ನೀಡಿದ್ದಾರೆ. ಈ ಸಲದ ನಾಮಿನೇಷನ್ ಪ್ರಕ್ರಿಯೆ ವಿಭಿನ್ನವಾಗಿದ್ದು, ಮನೆಯಲ್ಲಿ ಇರಲು ಯೋಗ್ಯತೆ ಇಲ್ಲದ ಸದಸ್ಯರನ್ನು ಆರಿಸಿ, ಬೆನ್ನಿಗೆ ಚೂರಿಯನ್ನು ಚುಚ್ಚಬೇಕು ಎಂಬ ಟಾಸ್ಕ್ ನೀಡಲಾಗಿದೆ.
ಈ ಟಾಸ್ಕ್ ನಲ್ಲಿ ಎಲ್ಲಾ ಸ್ಪರ್ಧಿಗಳು ಮಂಜು ಬೆನ್ನಿಗೆ ಚುರಿ ಚುಚ್ಚಿದ್ದಾರೆ. ಎಂಟು ಮಂದಿ ಸ್ಪರ್ಧಿಗಳ ಚೂರಿಗಳು ಮಂಜು ಬೆನ್ನಿಗೆ ಬಿದ್ದಿದೆ. ಮಂಜು ಅವರಿಗೆ ಐಶ್ವರ್ಯ ಚೂರಿ ಚುಚ್ಚುವ ವೇಳೆ ನೀಡಿರುವ ಕಾರಣ, ಮಂಜು ಅವರನ್ನು ಕೆರಳಿಸುವಂತೆ ಮಾಡಿದೆ.
ಇಬ್ಬರು ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ನೀವು ಮಾನಸಿಕವಾಗಿ ನನ್ನನ್ನು ಕುಗ್ಗಿಸಲು ನೋಡಿದ್ರೆ, ನಾನು ಕುಗ್ಗುವಂತಹ ಮಗಳೇ ಅಲ್ಲ. ಅದು ಏನೇನು ಚುಚ್ಚಿ ಮಾತನಾಡ್ತಿರೋ ಆಡಿ ಎಂದು ಐಶ್ವರ್ಯ ಸವಾಲ್ ಹಾಕಿದ್ದಾರೆ.
ಅದಕ್ಕೆ ಮಂಜು ಅವರು ಯಾವ ರೀತಿ ಕೌಂಟರ್ ನೀಡುತ್ತಾರೆ ? ಅದು ಅಲ್ಲದೆ ಇವರಿಬ್ಬರ ನಡುವೆ ಬೆಂಕಿ ಹೊತ್ತಿಕೊಳ್ಳಲು ನಿಜವಾದ ಕಾರಣ ಏನು ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಬಿಗ್‌ಬಾಸ್ 11 ಮನೆಯೊಳಗೆ ಸಖತ್ ಸೌಂಡ್ ಮಾಡುತ್ತಿರುವ ಸ್ಪರ್ಧಿ ಚೈತ್ರಾ ಕುಂದಾಪುರ ಅವರು ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಶಾಕಿಂಗ್ ಬೆಳವಣಿಗೆಯಲ್ಲಿ ಚೈತ್ರಾ ಕುಂದಾಪುರ ಅವರು ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಿರುವ ಘಟನೆ ನಡೆದಿದೆ. ನಟಿ ಶೋಭಾ ಶೆಟ್ಟಿ ಅವರು ದೊಡ್ಮನೆಯಿಂದ ಹೊರ ಬಂದ ಬೆನ್ನಲ್ಲೇ ಈ ಘಟನೆ ನಡೆದಿದೆ.
ಚೈತ್ರಾ ಕುಂದಾಪುರ ಅವರು ಕೇಸ್ ಸಂಬಂಧವಾಗಿ ವಿಚಾರಣೆಗೆ ಹಾಜರಾಗಲು ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಿದ್ದರು. ಈಗ ಚೈತ್ರಾ ಕುಂದಾಪುರ ಅವರ ಕೇಸ್ ವಿಚಾರಣೆಯನ್ನು ಜನವರಿ 13ಕ್ಕೆ ಮುಂದೂಡಲಾಗಿದ್ದು ಅವರು ಮತ್ತೆ ಬಿಗ್‌ಬಾಸ್ ಮನೆಗೆ ಹೋಗಲಿದ್ದಾರೆ ಎನ್ನಲಾಗಿದೆ.
ಕನ್ನಡದ ನಟಿ ಶೋಭಾ ಶೆಟ್ಟಿ ಅವರು ‘ಬಿಗ್ ಬಾಸ್ ಕನ್ನಡ 11’ರ ಆಟಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ತಮ್ಮ ಸ್ವತಃ ನಿರ್ಧಾರದಿಂದ ದೊಡ್ಮನೆಯಿಂದ ನಟಿ ಹೊರಬಂದಿದ್ದಾರೆ. ಬಿಗ್ ಬಾಸ್‌ನಿಂದ ಹೊರಬಂದು ಸುದೀಪ್‌ಗೆ ನಟಿ ಸುದೀರ್ಘವಾಗಿ ಪತ್ರ ಬರೆದಿದ್ದಾರೆ. ಇದೀಗ ನಟಿಯ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.
ನನ್ನ ಪ್ರೀತಿಯ ಕನ್ನಡಿಗರೇ, ನನ್ನ ಬಿಗ್ ಬಾಸ್ ಪಯಣ ಮುಗಿದಿದೆ. ಆಟದ ಮೇಲೆ ಗಮನ ಕೊಡಲು ಆರೋಗ್ಯ ಸಹಕರಿಸುತ್ತಿಲ್ಲ, ಮುನ್ನಡೆಯುವ ಇಚ್ಛೆಯಿದ್ದರೂ ದೇಹ ಮುಂದುವರಿಯಲು ಬಿಡುತ್ತಿಲ್ಲ. ಯಾರನ್ನೂ ಯಾವುದನ್ನೂ ನಾನು ಹಗುರವಾಗಿ ತೆಗೆದುಕೊಂಡಿಲ್ಲ, ಜೀವನದ ಜವಬ್ದಾರಿಗಳಿಗೆ ಆರೋಗ್ಯವನ್ನು ಕಾಪಾಡಿಕೊಂಡು ಮುನ್ನಡೆಯುವ ಸಲುವಾಗಿ ನನ್ನ ಈ ನಿರ್ಧಾರ. ಇದೆಲ್ಲದರ ಮಧ್ಯೆ ನೀವು ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಅಭಾರಿಯಾಗಿದ್ದೀನಿ, ತಿಳಿದೋ ತಿಳಿಯದೆಯೋ ನನ್ನಿಂದ ಯಾರಿಗಾದರೂ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದಿದ್ದಾರೆ.
ನನ್ನ ಜನರಿಗೆ, ಕಲರ್ಸ್ ಕನ್ನಡ ತಂಡಕ್ಕೆ, ಹಾಗು ನನ್ನ ಪ್ರೀತಿಯ ಕಿಚ್ಚ ಸುದೀಪ್ ಸರ್ ನಿಮಗೆ ಧನ್ಯವಾದಗಳು. ಹೊಸ ಹುರುಪಿನೊಂದಿಗೆ ನಿಮ್ಮನ್ನು ರಂಜಿಸಲು, ನಿಮ್ಮ ಪ್ರೀತಿಯನ್ನು ಮತ್ತೆ ಪಡೆಯಲು ಮತ್ತೊಂದು ರೂಪದಲ್ಲಿ ಮತ್ತೆ ನಿಮ್ಮ ಮುಂದೆ ಖಂಡಿತಾ ನಾನು ಬರುವೆ. ಇಂತಿ ಪ್ರೀತಿಯ, ಶೋಭಾ ಶೆಟ್ಟಿ ಎಂದು ಸುದೀರ್ಘ ಪತ್ರ ಬರೆದಿದ್ದಾರೆ. ಇನ್ನೂ ಬಹುತೇಕ ಅಭಿಮಾನಿಗಳಿಗೆ ನಟಿ ನಿರ್ಧಾರ ನೋವುಂಟು ಮಾಡಿದೆ. ಬಿಗ್ ಬಾಸ್ ಬಿಟ್ಟು ಬರಬಾರದಿತ್ತು ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.
ತೆಲುಗಿನ ಬಿಗ್‌ಬಾಸ್ ಸೀಸನ್ 7ರಲ್ಲಿ ಸಖತ್ ಸೌಂಡು ಮಾಡಿದ್ದ ಶೋಭಾ ಶೆಟ್ಟಿ ಕೊನೆಯವರೆಗೂ ಪ್ರೀತಿ ಗಳಿಸಿ ಉಳಿದುಕೊಂಡಿದ್ದರು. ಆದರೆ ಕನ್ನಡದಲ್ಲಿ ಅವರ ಆಟ ನಡೆಯಲೇ ಇಲ್ಲ. ತೆಲುಗಿನ ವೀಕ್ಷಕರ ಅಭಿರುಚಿ ಮತ್ತು ಕನ್ನಡ ವೀಕ್ಷಕರ ಅಭಿರುಚಿ ವಿಭಿನ್ನವಾಗಿದೆ ಎಂದು ಶೋಭಾ ಅವರ ಮನಸ್ಸಿಗೆ ಅನಿಸಿತೋ ಗೊತ್ತಿಲ್ಲ. ಆದರೆ ಅನಾರೋಗ್ಯದ ಕಾರಣವನ್ನು ನೀಡಿ, ಶೋಭಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ.