Thursday, March 4, 2021

ರಾಷ್ಟ್ರ ವಿರೋಧಿ ಸಂಘಟನೆ ಪಿಎಫ್‌ಐ ಹಣ ರಾಮ ಮಂದಿರಕ್ಕೆ ಅಗತ್ಯವಿಲ್ಲವೆಂದ ಶೋಭಾ ಕರಂದ್ಲಾಜೆ..!

ರಾಷ್ಟ್ರ ವಿರೋಧಿ ಸಂಘಟನೆ ಪಿಎಫ್‌ಐ ಹಣ ರಾಮ ಮಂದಿರಕ್ಕೆ ಅಗತ್ಯವಿಲ್ಲವೆಂದ ಶೋಭಾ ಕರಂದ್ಲಾಜೆ..!

ಉಡುಪಿ : ರಾಮ ಮಂದಿರ ನಿರ್ಮಿಸಲು ನಮಗೆ ಪಿಎಫ್‌ಐ ಹಣದ ಅಗತ್ಯವಿಲ್ಲ ಎಂದು ಸಂಸದೆ ಶೋಭಾ ಕೆರಂದ್ಲಾಜೆ ಕಿಡಿಕಾರಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು ಪಿಎಫ್ಐ ಕಾರ್ಯಕರ್ತರ ಬಳಿ ನಮ್ಮ ಕಾರ್ಯಕರ್ತರು ಹಣ ಕೇಳಲು ಹೋಗಿಲ್ಲ.ಪಿಎಫ್‌ಐ ರಾಷ್ಟ್ರ ವಿರೋಧಿ ಸಂಘಟನೆ.

ಪಿಎಫ್‌ಐ ನಮ್ಮ ಆರ್‌ಎಸ್‌ಎಸ್ ಸ್ವಯಂಸೇವಕರನ್ನು ಕೊಲೆ ಮಾಡಿದೆ.

ರಾಮ ಮಂದಿರದ ಬಗ್ಗೆ ಪಿಎಫ್ ಐ ಗೆ ಮಾತನಾಡುವ ಹಕ್ಕಿಲ್ಲ.

ಪಿಎಫ್‌ಐ ಅನ್ನು ನಿಷೇಧಿಸಲು ನಾನು ಕೇಂದ್ರ ಮತ್ತು ರಾಜ್ಯ ಸರ್ಕಾರದೊಂದಿಗೆ ಮಾತುಕತೆ ಮಾಡಿದ್ದೇನೆ. ಪಿಎಫ್‌ಐ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಗೃಹ ಸಚಿವಾಲಯ ತನಿಖೆ ನಡೆಸುತ್ತಿದೆ.

ಒಮ್ಮೆ ತನಿಖೆ ಮುಗಿದ ನಂತರ ಅದನ್ನು ನಿಷೇಧಿಸಲಾಗುವುದು ಎಂದರು. ಕೇರಳದಲ್ಲಿ ಆರ್ ಎಸ್ ಎಸ್ ಗೆ ಅವಮಾನಿಸಿ ಪಿಎಫ್‌ಐ‌ ಮೆರವಣಿಗೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶೋಭಾ, ಪಿಎಫ್ ಐ ಆಯುಧಗಳನ್ನು ಹಿಡಿದುಕೊಂಡು ಮೆರವಣಿಗೆ ನಡೆಸುತ್ತಿದೆ.

ಪಿಎಫ್‌ಐ ರಾಷ್ಟ್ರ ವಿರೋಧಿ ಸಂಸ್ಥೆ ಎಂದು ಕೇರಳ ಸರ್ಕಾರಕ್ಕೆ ತಿಳಿದಿದೆ.ತಿಳಿದಿದ್ದರೂ ಮುಸ್ಲಿಂ ರ ವೋಟ್ ಪಡೆಯಲು ಪಿಎಫ್ ಐ ಗೆ ಅನುಮತಿ ನೀಡಿ ಓಲೈಕೆ ಮಾಡುತ್ತಿದೆ ಎಂದು ದೂರಿದ್ದಾರೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...