ಮಂಗಳೂರು/ಪ್ರಯಾಗ್ರಾಜ್ : 144 ವರ್ಷಕೊಮ್ಮೆ ಬರುವ ಮಹಾ ಕುಂಭ ಮೇಳ ಪ್ರಾರಂಭವಾಗಿದೆ.ಪ್ರತಿ ಹಂತದಲ್ಲೂ ಸಿದ್ಧತೆಗಳು ಪೂರ್ಣಗೊಂಡಿದೆ. ಸಂಗಮ್ ಬಳಿಯ ಸಂಪೂರ್ಣ ಪ್ರಯಾಗ್ರಾಜ್ ಪ್ರದೇಶವನ್ನು ಟೆಂಟ್ ಸಿಟಿಯನ್ನಾಗಿ ಪರಿವರ್ತಿಸಲಾಗಿದೆ. ಕೋಟಿಗಟ್ಟಲೆ ಜನರು ಸನಾತನಿ ಸಂಗಮದಲ್ಲಿ ಸ್ನಾನ ಮಾಡಲಿದ್ದಾರೆ. ಬಾಲಿವುಡ್ ತಾರೆಯರು ಕೂಡಾ ಭಾಗಿಯಾಗಿದ್ದಾರೆ. ಮೊದಲ ಬಾರಿ ನಟಿ ಅದಾ ಶರ್ಮಾ ಶಿವ ತಾಂಡವ ಸ್ತೋತ್ರವನ್ನು ಲಕ್ಷಗಟ್ಟಲೆ ಜನರ ಸಮ್ಮುಖದಲ್ಲಿ ಪಠಿಸಿದ್ದು, ಹಲವು ಬಾಲಿವುಡ್ ಕಲಾವಿದರಿಗೂ ಮಹಾಕುಂಭ ಮೇಳದ ಆಹ್ವಾನ ಕಳುಹಿಸಲಾಗಿದೆ.
ಕುಂಭದಲ್ಲಿ ಹಲವು ದಿನಗಳ ಕಾಲ ಬಾಲಿವುಡ್ ತಾರೆಯರ ಲೈವ್ ಶೋ ನಡೆಯಲಿದೆ. ಶಂಕರ್ ಮಹಾದೇವನ್ ತಂಡವು ಆರಂಭಿಕ ದಿನದಂದು ಪ್ರದರ್ಶನ ನೀಡಲಿದೆ. ಸಾಧನಾ ಸರ್ಗಮ್ ಜನವರಿ 26 ರಂದು, ಶಾನ್ ಜನವರಿ 27 ರಂದು, ರಂಜನಿ ಮತ್ತು ಗಾಯತ್ರಿ ಜನವರಿ 31 ರಂದು ಪ್ರದರ್ಶನ ನೀಡಲಿದ್ದಾರೆ. ಕೈಲಾಶ್ ಖೇರ್ ಫೆಬ್ರವರಿ 23 ರಂದು ತಮ್ಮ ಪ್ರದರ್ಶನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಫೆಬ್ರವರಿ 24 ರಂದು ಮೋಹಿತ್ ಶೋನ ಭವ್ಯ ಪ್ರದರ್ಶನದೊಂದಿಗೆ ಕುಂಭ ಕಾರ್ಯಕ್ರಮವು ಪೂರ್ಣಗೊಳ್ಳಲಿದೆ. ಈ ಬಾರಿ ಕನಿಷ್ಠ 15 ಸಾವಿರ ಕಲಾವಿದರು ಅನೇಕ ಸಂದರ್ಭಗಳಲ್ಲಿ ಕಾರ್ಯಕ್ರಮಗಳನ್ನು ಮಾಡಲಿದ್ದಾರೆ. ಹಂಸರಾಜ್ ಹನ್ಸ್, ಹರಿಹರನ್, ಕವಿತಾ ಕೃಷ್ಣಮೂರ್ತಿ ಮುಂತಾದ ತಾರೆಯರು ಕೂಡ ಕುಂಭದಲ್ಲಿ ಕಾರ್ಯಕ್ರಮಗಳಿಗೆ ಬರಲಿದ್ದಾರೆ.
ಕಾರ್ಯಕ್ರಮ ನಡೆಯುವುದು ಎಲ್ಲಿ ?
ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಕುಂಭಮೇಳ ಮೈದಾನದ ಗಂಗಾ ಪಂಗಡದಲ್ಲಿ ನಡೆಯಲಿದೆ. ಎಲ್ಲ ಭಕ್ತಾದಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಎಲ್ಲಾ ಕಾರ್ಯಕ್ರಮಗಳು ವಿವಿಧ ದಿನಗಳಲ್ಲಿ ನಡೆಯಲಿವೆ. ಕುಂಭಕ್ಕೆ ದೇಶ-ವಿದೇಶಗಳಿಂದ ಭಕ್ತರು ಆಗಮಿಸುತ್ತಿದ್ದು, ಈ ಬಾರಿ 40 ಕೋಟಿಗೂ ಅಧಿಕ ಜನ ಸ್ನಾನಕ್ಕೆ ಆಗಮಿಸಲಿದ್ದಾರೆ. ಮಹಾಕುಂಭ ಮೇಳವು ಜನವರಿ 13 ರಿಂದ ಪ್ರಾರಂಭವಾಗಿದ್ದು, ಫೆಬ್ರವರಿ 26 ರವರೆಗೆ ನಡೆಯಲಿದೆ. ಮಹಾಶಿವರಾತ್ರಿಯ ದಿನದಂದು ಮುಕ್ತಾಯಗೊಳ್ಳಲಿದೆ.