Connect with us

    BIG BOSS

    ಅಂದುಕೊಂಡ ದಿನವೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಶಿಶಿರ್

    Published

    on

    ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಶಿಶಿರ್ ಅವರು ಎಲಿಮಿನೇಟ್ ಆಗಿದ್ದಾರೆ. 11 ವಾರಗಳ ಕಾಲ ಸ್ಪರ್ಧೆ ಮಾಡಿದ ಅವರು ಇತ್ತೀಚೆಗೆ ಡಲ್ ಆಗಿದ್ದರು. ‘ಮೊದಲ ಮೂರು ವಾರಗಳ ಕಾಲ ಇದ್ದ ಶಿಶಿರ್ ಈಗಲೂ ಇದ್ದಿದ್ದರೆ ಅವರು ಎಲಿಮಿನೇಟ್ ಆಗುತ್ತಿರಲಿಲ್ಲ’ ಎಂದು ಮನೆಯಲ್ಲಿ ಇದ್ದವರೇ ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದು ವಿಶೇಷ ಎಂದರೆ, ಶಿಶಿರ್ ಅವರು ತಾವು ಅಂದುಕೊಂಡ ದಿನವೇ ದೊಡ್ಮನೆಯಿಂದ ಹೊರ ಬಂದಿದ್ದಾರೆ.

    ಶಿಶಿರ್ ಅವರಿಗೆ ಡಿಸೆಂಬರ್ 14 ಜನ್ಮದಿನ. ಈ ವಿಚಾರವನ್ನು ಅವರು ಈ ಮೊದಲೇ ಹಂಚಿಕೊಂಡಿದ್ದರು. ಅಲ್ಲದೆ, ಬರ್ತ್​ಡೇ ದಿನದವರೆಗೆ ತಾವು ಇರಬೇಕು ಎಂದು ಅಭಿಪ್ರಾಯಪಟ್ಟಿದ್ದರು. ‘ಡಿಸೆಂಬರ್ 14 ನನ್ನ ಜನ್ಮದಿನ. ಅಲ್ಲಿಯವರೆಗೆ ನಾನು ಬಿಗ್ ಬಾಸ್ ಮನೆಯಲ್ಲಿ ಇರಲೇಬೇಕು ಎಂಬ ಆಸೆ ಇದೆ. ಬಿಗ್ ಬಾಸ್ ಮನೆಯಲ್ಲಿ ನನ್ನ ಜನ್ಮದಿನ ಈ ವರ್ಷ ಆಚರಣೆ ಮಾಡಿಕೊಳ್ಳಬೇಕು ಎಂದಿದೆ’ ಎಂಬುದಾಗಿ ಶಿಶಿರ್ ಹೇಳಿದ್ದರು.

    ಶಿಶಿರ್ ಅವರು ಅಂದುಕೊಂಡಂತೆ ಬಿಗ್ ಬಾಸ್ ಮನೆಯಲ್ಲೇ ಬರ್ತ್​ಡೇ ಆಚರಿಸಿಕೊಂಡರು. ಸುದೀಪ್ ಅವರು ಶಿಶಿರ್​ಗೆ ಕೇಕ್ ಕಳುಹಿಸಿಕೊಟ್ಟರು. ಅಷ್ಟೇ ಅಲ್ಲ, ತಾವು ಈ ಮೊದಲು ಬಳಸಿದ್ದ ಕೋಟ್​ನ ಗಿಫ್ಟ್ ಆಗಿ ಶಿಶಿರ್​ಗೆ ನೀಡಿದ್ದರು. ಈ ಖುಷಿಯ ದಿನವೇ ಶಿಶಿರ್ ಔಟ್ ಆಗಿದ್ದಾರೆ.

    ಭಾನುವಾರದ ಎಪಿಸೋಡ್ ಒಂದು ದಿನ ಮೊದಲು ಅಂದರೆ ಶನಿವಾರವೇ ಶೂಟ್ ಆಗುತ್ತದೆ. ಕಳೆದ ವಾರವೂ ಹಾಗೆಯೇ ಆಗಿದೆ. ಡಿಸೆಂಬರ್ 15ರ ಎಪಿಸೋಡ್ ಡಿಸೆಂಬರ್ 14ರಂದೇ ಶೂಟ್ ಆಗಿತ್ತು. ಹೀಗಾಗಿ, ಶಿಶಿರ್ ಅವರು ಬರ್ತ್​ಡೇ ದಿನಾಂಕದಂದೇ ಎಲಿಮಿನೇಟ್ ಆದಂತೆ ಆಗಿದೆ.

    ಶಿಶಿರ್ ಅವರು ಆರಂಭದಲ್ಲಿ ಸಾಕಷ್ಟು ಶ್ರಮ ಹಾಕಿದ್ದರು. ಬರುಬರುತ್ತಾ ಅವರು ಡಲ್ ಆದರು. ಇತ್ತೀಚೆಗೆ ಅವರು ದೊಡ್ಮನೆಯಲ್ಲಿ ಹೆಚ್ಚು ಕಾಣಿಸಿಕೊಂಡಿರಲಿಲ್ಲ. ‘ಮನೆಯಲ್ಲಿ ಎಲ್ಲರೂ ಟಾರ್ಗೆಟ್ ಮಾಡಿ ಶಿಶಿರ್​ನ ಕಳುಹಿಸಿದ್ದಾರೆ’ ಎಂದು ಐಶ್ವರ್ಯಾ ಅವರು ಮಾತನಾಡಿಕೊಂಡಿದ್ದಾರೆ.

    Click to comment

    Leave a Reply

    Your email address will not be published. Required fields are marked *

    BIG BOSS

    ಚೈತ್ರಾಗೆ ಗೇಟ್ ಪಾಸ್ ಕೊಡಲು ಮುಂದಾದ ಮನೆಮಂದಿ ?

    Published

    on

    ಮಂಗಳೂರು/ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 11’ ಈಗಾಗಲೇ 80 ದಿನಗಳನ್ನು ಪೂರೈಸಿದೆ. ಈ ವಾರದ ಸೂಪರ್ ಸಂಡೇ ಕೂಡ ಎಂದಿನಂತೆ ಸ್ಪೆಷಲ್ ಆಗಿರಲಿದೆ. ಅದರಲ್ಲೂ ಬಿಗ್ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಅವರನ್ನು ಮನೆಯಿಂದ ಹೊರಗಟ್ಟಿಯೇ ಸಿದ್ದ ಎಂದು ಮನೆಮಂದಿ ನಿರ್ಧರಿಸಿದಂತಿದೆ.

    ಭಾನುವಾರದ ಎಪಿಸೋಡ್ ನಲ್ಲಿ ಈ ವಾರದ ಟಾಸ್ಕ್ ಗಳ ಬಗ್ಗೆ ಕಿಚ್ಚನ ಪಂಚಾಯ್ತಿ ಮುಂದುವರಿದಿದ್ದು, ಬಿಗ್ ಬಾಸ್ ಮನೆಗೆ ಕಸದ ಬುಟ್ಟಿ ಬಂದಿದೆ.

    ಸೂಪರ್ ಸಂಡೇ ಶೋನಲ್ಲಿ ಕಿಚ್ಚ ಸುದೀಪ್ ಅವರು ಮನೆಯ ಸದಸ್ಯರಿಗೆ ಒಂದು ಸ್ಪೆಷಲ್ ಟಾಸ್ಕ್ ನೀಡಿದ್ದಾರೆ. ನಿಮ್ಮ ಪ್ರಕಾರ ಬಿಗ್ ಬಾಸ್ ಮನೆಯ ಕಸ ಯಾರೆಂದು ತಿಳಿಸಿ, ಅವರ ಫೋಟೋವನ್ನು ಮೂಟೆಗೆ ಅಂಟಿಸಿ ಕಸದ ಬುಟ್ಟಿಗೆ ಹಾಕಬೇಕು ಎಂದಿದ್ದಾರೆ ಈ ಆಟದಲ್ಲಿ ಬಿಗ್ ಬಾಸ್ ಮನೆಯ ಬಹುತೇಕ ಎಲ್ಲಾ ಸದಸ್ಯರು ಚೈತ್ರಾ ಚಿತ್ರವನ್ನು ಕಸದ ಬ್ಯಾಗಿಗೆ ಅಂಟಿಸಿ ಅದನ್ನು ಕಸದ ಡಬ್ಬಿಗೆ ಹಾಕಿದ್ದಾರೆ.

    ಇದನ್ನೂ ಓದಿ: ತೆಲಂಗಾಣ ಸರ್ಕಾರದಿಂದ ಟಾಲಿವುಡ್‌ಗೆ ಭಾರೀ ದೊಡ್ಡ ಹೊಡೆತ !!

    ಭವ್ಯ, ಮೋಕ್ಷಿತಾ, ರಜತ್, ಐಶ್ವರ್ಯಾ, ಗೌತಮಿ, ಹನುಮಂತ ಎಲ್ಲರೂ ಚೈತ್ರಾ ಕುಂದಾಪುರ ಅವರನ್ನೇ ಕಸದ ಬುಟ್ಟಿಗೆ ಹಾಕಿದ್ದಾರೆ. ಇದಕ್ಕೆ ಪ್ರತಿಯೊಬ್ಬರು ಸೂಕ್ತವಾದ ಕಾರಣಗಳನ್ನ ನೀಡಿದ್ದು, ಚೈತ್ರಾ ಅವರ ಕಣ್ಣು ನಿಜಕ್ಕೂ ಕೆಂಪಗಾಗಿಸಿದೆ.

    ಐಶ್ವರ್ಯಾ ಅವರು ಚೈತ್ರಾ ಅವರಿಗೆ ನೀವು ಮುಖವಾಡ ಕಳಚುತ್ತೇನೆ ಎಂದಿದ್ದೀರಿ. ಆದರೆ ಅವರೇ ಒಂದು ವೇಷ ತೊಟ್ಟುಕೊಂಡು ಆಟ ಆಡುತ್ತಿದ್ದಾರೆ ಎಂದಿದ್ದಾರೆ. ಹನುಮಂತು ಕೂಡ ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಅನ್ನೋ ಹಂಗೆ ಚೈತ್ರಕ್ಕ ಈ ಮನೆಯನ್ನೇ ಕೆಡಿಸಿಬಿಟ್ಟಿದ್ದಾಳೆ ಎಂದು ಖಡಕ್ ಡೈಲಾಗ್ ಹೇಳಿದ್ದಾರೆ.

    ಮೋಕ್ಷಿತಾ ಅವರು, ಕಳಪೆ ಬಂತು ಅಂದ್ರೆ ಚೈತ್ರಾ ಫುಲ್ ಹುಷಾರು ತಪ್ಪುತ್ತಾರೆ. ವೀಕೆಂಡ್‌ನಲ್ಲಿ ಫುಲ್ ಡಲ್ ಆಗಿರುತ್ತಾರೆ. ಮತ್ತೆ ರಾತ್ರಿ ಇಮಿಡಿಯೇಟ್ ಆಗಿ ಚಾರ್ಜ್ ಆಗ್ತಾರೆ. ಫೈರ್ ಬ್ರಾಂಡ್ ಈಸ್ ಬ್ಯಾಕ್ ಅಂತಾರೆ ಇದು ಹೇಗೆ ಅನ್ನೋದು ಗೊತ್ತಿಲ್ಲ ಎಂದಿದ್ದಾರೆ. ಇನ್ನು ಈ ಡೌವ್‌ಗಳನ್ನ ಬಿಟ್ಟು ಮನೆ ಕಡೆ ಹೋಗೋದು ಒಳ್ಳೆಯದು ಎಂದು ಚೈತ್ರಾ ಅವರಿಗೆ ರಜತ್ ಖಡಕ್ ಗೇಟ್‌ ಪಾಸ್ ಕೊಟ್ಟಿದ್ದಾರೆ.

    ಮನೆಯ ಸದಸ್ಯರು ಎಲ್ಲರೆದುರು ತಮ್ಮನ್ನು ಕಸಕ್ಕೆ ಹೋಲಿಸಿರುವುದನ್ನು ಕಂಡು ಚೈತ್ರಾಗೆ ಆಘಾತ ಉಂಟುಮಾಡಿದೆ.

    Continue Reading

    BIG BOSS

    BBK11: ಆಟದ ದಿಕ್ಕು, ದಾರಿ ತಪ್ಪಿಸಿದ್ರಾ ಚೈತ್ರಾ ಕುಂದಾಪುರ? ಕಿಚ್ಚ ಸುದೀಪ್​ ಖಡಕ್ ಕ್ಲಾಸ್‌!

    Published

    on

    ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11, 14ನೇ ವಾರಕ್ಕೆ ಕಾರಲಿಡಲು ಸಜ್ಜಾಗಿ ನಿಂತಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​ ಮನೆಗೆ ಕಿಚ್ಚ ಸುದೀಪನ ಎಂಟ್ರಿಯಾಗಿದೆ. ಇಡೀ ವಾರ ಬಿಗ್​​ಬಾಸ್​ ಮನೆಯಲ್ಲಿ ಏನೆಲ್ಲಾ ಆಯ್ತು, ಯಾರದ್ದು ಸರಿ, ಯಾರದ್ದು ತಪ್ಪು ಅಂತ ಕ್ಲಾಸ್​ ತೆಗೆದುಕೊಳ್ಳೋದಕ್ಕೆ ಕಿಚ್ಚ ಸುದೀಪ್​ ಅವರು ರೆಡಿಯಾಗಿದ್ದಾರೆ.

    ಇನ್ನೂ ಈ ವಾರದಲ್ಲಿ ಬಿಗ್​ಬಾಸ್​ ಮನೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಹೀಗಾಗಿ ಕಿಚ್ಚ ಸುದೀಪ್​ ಅವರು ಬಿಗ್​ಬಾಸ್​​ ಮನೆಗೆ ಎಂಟ್ರಿ ಕೊಡುತ್ತಲೇ ಓರ್ವ ಸ್ಪರ್ಧಿಯ ಉಸ್ತುವಾರಿ ಬಗ್ಗೆ ಮಾತಾಡುತ್ತಾ ಬಂದಿದ್ದಾರೆ. ಉಸ್ತುವಾರಿಗಳು ಜವಾಬ್ದಾರಿಗಳನ್ನು ಮರೆತು ಆಟದ ದಾರಿಯನ್ನು ತಪ್ಪುಸುತ್ತಿದ್ದಾರೆ. ಮಾತಿನ ಮಿತಿಗಳು ಮಿರುತ್ತಾ ಹೋಗುತ್ತಿವೆ ಖಡಕ್​ ಡೈಲಾಂಗ್​ ಹೊಡೆದಿದ್ದಾರೆ.

    ಇನ್ನೂ, ಮೊನ್ನೆ ಬಿಗ್​​ಬಾಸ್​ ಮನೆಯಲ್ಲಿ ಸ್ಪರ್ಧಿಗಳ ನಡುವಿನ ಕಿತ್ತಾಟ ಜೋರಾಗಿತ್ತು. ತೀವ್ರ ಪೈಪೋಟಿಯಿಂದಾಗಿ ಜಿದ್ದಿಗೆ ಬಿದ್ದವರಂತೆ ಸ್ಪರ್ಧಿಗಳು ಕಚ್ಚಾಡಿಕೊಳ್ತಿದ್ದರು. ಇದರಿಂದ ಟಾಸ್ಕ್​ ಪೂರ್ಣಗೊಳಿಸೋದೇ ಇಡೀ ಮನೆ ಮಂದಿ ಕೈಚಲ್ಲಿ ಕುಳಿತುಕೊಂಡಿದ್ದರು. ಇದನ್ನು ನೋಡಿದ ಬಿಗ್​ಬಾಸ್​ ಟಾಸ್ಕ್ ಅನ್ನು ಅರ್ಧಕ್ಕೆ​ ರದ್ದು ಮಾಡಿದ್ದರು.

    ಇದರಿಂದ ಕೆಲವು ಸ್ಪರ್ಧಿಗಳು ಚೈತ್ರಾ ಕುಂದಾಪುರ ಮೇಲೆ ಬೇಸರ ಹೊರ ಹಾಕಿದ್ದರು. ಚೈತ್ರಾ ಕುಂದಾಪುರ ಪದೇ ಪದೇ ಆಟದ ಮಧ್ಯೆ ಫೌಲ್ ಕೊಟ್ಟಿದ್ದಕ್ಕೆ, ಹಾಗೂ ಇಬ್ಬರು ಉಸ್ತುವಾರಿಗಳು ಸರಿಯಾದ ನಿರ್ಧಾರಕ್ಕೆ ಬರದಿದ್ದ ಕಾರಣಕ್ಕೆ ಟಾಸ್ಕ್​ ಅರ್ಧಕ್ಕೆ ನಿಲ್ಲುವಂತೆ ಆಗಿತ್ತು. ಇದೇ ವಿಚಾರ ಬಗ್ಗೆ ಇಂದು ಕಿಚ್ಚ ಸುದೀಪ್​ ಮಾತಾಡಲಿದ್ದಾರೆ. ಚೈತ್ರಾ ಕುಂದಾಪುರಗೆ ಮತ್ತೆ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ.

    Continue Reading

    BIG BOSS

    ಬಿಗ್​ಬಾಸ್​ ಮನೆಯಲ್ಲಿ ದೆವ್ವ, ಭೂತಗಳ ಓಡಾಟ

    Published

    on

    ವೀಕೆಂಡ್​ ಟೆನ್ಷನ್​​ನಲ್ಲಿರೋ ಬಿಗ್​ಬಾಸ್​ ಮಂದಿ ಬೆಚ್ಚಿಬಿದ್ದ ಘಟನೆಯೊಂದು ನಡೆದಿದೆ. ಒಂದು ಕ್ಷಣ ದೊಡ್ಮನೆಯಲ್ಲಿ ದೆವ್ವ ಭೂತಗಳು ಬಂದ ರೀತಿಯಲ್ಲಿ ಸ್ಪರ್ಧಿಗಳು ಗಾಬರಿಯಾಗಿದ್ದು, ಎಲ್ಲರೂ ಕಿರುಚಾಡಿಕೊಂಡಿದ್ದಾರೆ.

    ಅಷ್ಟಕ್ಕೂ ಅಲ್ಲಿ ಆಗಿದ್ದೇನು..?

    ಅಡುಗೆ ಮನೆಯಲ್ಲಿ ಗೌತಮಿ ಜಾಧವ್ ಅವರು ಲಟ್ಟಣಿಗೆ ಹಿಡಿದು ಚಪಾತಿ ಮಾಡುತ್ತಿರುತ್ತಾರೆ. ಈ ವೇಳೆ ಅಲ್ಲಿ ಅಗೋಚರ ದೃಶ್ಯ ಕಾಣಿಸಿದೆ. ಇದರಿಂದ ಗಾಬರಿಯಾದ ಗೌತಮಿ ಅದೇ ಅಲ್ಲಿ ಯಾರು ಎಂದಿದ್ದಾರೆ. ಅಲ್ಲಿಂದ ಓಡಿ ಬಂದ ಗೌತಮಿ, ಭಯದಿಂದ ಮೋಕ್ಷಿತಾರನ್ನು ಹಿಡಿದುಕೊಂಡು ನಿಲ್ಲುತ್ತಾರೆ. ಆಗ ಮೋಕ್ಷಿತಾ ಕೂಡ ಬೆಚ್ಚಿಬಿದ್ದಾರೆ. ಅದೇ ವೇಳೆ ವಿಕಾರವಾದ ಮುಖವೊಂದು ಕಾಣಿಸಿಕೊಂಡಿದೆ. ಆಗ ಉಗ್ರಂ ಮಂಜು ಕೂಡ ಬೆಚ್ಚಿಬಿದ್ದು ಜೋರಾಗಿ ಕಿರುಚಿಕೊಂಡಿದ್ದಾರೆ. ನಂತರ ಅದರ ಅಸಲಿ ಕತೆ ರಿವೀಲ್ ಆಗಿದೆ.

    ಅಸಲಿ ಕತೆ ಏನು..?

    ದೆವ್ವನೂ ಅಲ್ಲ. ಭೂತನೂ ಅಲ್ಲ. ಕಲರ್ಸ್ ಕನ್ನಡದಲ್ಲಿ ‘ನೂರು ಜನ್ಮಕ್ಕೂ’ ಎಂಬ ಹೊಸ ಧಾರಾವಾಹಿ ಬರ್ತಿದೆ. ಆ ತಂಡ ಬಿಗ್​ಬಾಸ್​ ಮನೆಗೆ ಲಗ್ಗೆ ಇಟ್ಟಿದೆ. ಧಾರಾವಾಹಿಯಯಲ್ಲಿ ನಾಯಕನ ಮೇಲೆ ಆತ್ಮವೊಂದು ದ್ವೇಷ ಕಾರುತ್ತಿದೆ. ಈ ಆತ್ಮಕ್ಕೆ ನಾಯಕನ ಮೇಲೆ ಯಾಕೆ ದ್ವೇಷವಿರುತ್ತದೆ? ರಾಯರ ಅಪ್ಪಟ ಭಕ್ತೆಯಾಗಿರುವ ನಾಯಕಿ ಆ ಆತ್ಮದಿಂದ ತನ್ನ ಪ್ರೀತಿಯನ್ನು ಹೇಗೆ ರಕ್ಷಿಸಿಕೊಳ್ಳುತ್ತಾಳೆ? ಆ ಆತ್ಮಕ್ಕೂ ಹಾಗೂ ನಾಯಕನಿಗೂ ಏನು ಸಂಬಂಧ? ನಾಯಕನ ತಪ್ಪೇನು? ಅನ್ನೋದೇ ಧಾರಾವಾಹಿ ಕಥೆ ಆಗಿದೆ.

    ಹೀರೋ ಆಗಿ ಗೀತಾ ಸೀರಿಯಲ್ ಖ್ಯಾತಿಯ ಧನುಷ್ ಗೌಡ ಕಂಬ್ಯಾಕ್ ಮಾಡಿದ್ದಾರೆ. ನಾಯಕಿಯಾಗಿ ಶಿಲ್ಪಾ ಕಾಮತ್ ನಟಿಸುತ್ತಿದ್ದಾರೆ. ಆತ್ಮದ ಪಾತ್ರವನ್ನು ಚಂದನಾ ಗೌಡ ಬಣ್ಣ ಹಚ್ಚಿದ್ದಾರೆ. ಅಂತೆಯೇ ಬಿಗ್​ಬಾಸ್​ ಮನೆಯಲ್ಲಿ ಆತ್ಮರೂಪದಲ್ಲಿ ಚಂದನಾ ಗೌಡ ಅವರ ಮುಖ ಕಾಣಿಸಿದೆ. ಇದನ್ನು ನೋಡಿ ಸ್ಪರ್ಧಿಗಳು ಬೆಚ್ಚಿಬಿದ್ದಿದ್ದಾರೆ.

    Continue Reading

    LATEST NEWS

    Trending