Tuesday, May 30, 2023

ಶಿವಮೊಗ್ಗ : ಸಮಾರಂಭದಲ್ಲಿ ಫೋಟೋ ತೆಗೆಯುವಾಗಲೇ ಹೃದಯಾಘಾತಕ್ಕೆ ಫೋಟೋಗ್ರಾಫರ್ ಮೃತ್ಯು..!

ಸಮಾರಂಭದಲ್ಲಿ ಫೋಟೋ ತೆಗೆಯುತ್ತಿದ್ದ ವೇಳೆ ಹೃದಯಾಘಾತದಿಂದ ಫೋಟೋಗ್ರಾಫರ್ ಸಾವನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ಸಂಭವಿಸಿದೆ.

ಶಿವಮೊಗ್ಗ : ಸಾವು ಕಳ್ಳನಂತೆ ಬರುತ್ತೆ ಎಂಬ ಮಾತು ಸತ್ಯ. ಇತ್ತೀಚಿನ ಕೋವಿಡ್ ಸಾಂಕ್ರಾಮಿಕದ ಬಳಿಕವಂತೂ ಎಲ್ಲೆಡೆ ಸಾವುಗಳು ಹೆಚ್ಚಾಗತೊಡಗಿದೆ.

ಅದರಲ್ಲೂ ವಯಸ್ಸಿನ ಭೇಧವಿಲ್ಲದೇ ಯುವ ಜನಾಂಗ ಹೃದಯಾಘಾತದಿಂದ ಹೆಚ್ಚೆಚ್ಚು ಸಾವನ್ನಪ್ಪುತ್ತಿದ್ದಾರೆ.

ಅಂತಹುದೇ ಒಂದು ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಸಮಾರಂಭದಲ್ಲಿ ಫೋಟೋ ತೆಗೆಯುತ್ತಿದ್ದ ವೇಳೆ ಹೃದಯಾಘಾತದಿಂದ ಫೋಟೋಗ್ರಾಫರ್ ಸಾವನಪ್ಪಿದ್ದಾರೆ.

ಸಾಗರ ತಾಲೂಕಿನ ಹೆಗ್ಗೋಡು ಸಮೀಪದ ಹೆಬ್ಬೆಲಿನ ಸೋಮೇಶ್ವರ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ.

ಸಾಗರ ಪಟ್ಟಣದ ರಾಮನಗರದ ಚಂದ್ರು (42) ಮೃತ ದುರ್ದೈವಿ.

ಕಾರ್ಯಕ್ರಮವೊಂದರಲ್ಲಿ ಫೋಟೊ ತೆಗೆಯುವ ವೇಳೆ ಚಂದ್ರು ಕುಸಿದು ಬಿದ್ದಿದ್ದರು.

ತಕ್ಷಣ ಅವರನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆಯಿತಾದರೂ ಆ ವೇಳೆಗೆ ಕೊನೆಯುಸಿರೆಳೆದಿದ್ದರು.

ಸಾಗರದ ಶಿಲ್ಪ ಸ್ಟುಡಿಯೋ ಮಾಲೀಕರಾಗಿದ್ದ ಚಂದ್ರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here

Hot Topics