ನಿಷೇಧಿತ PFI ಸಂಘಟನೆಯ ಅಂಗ ಸಂಸ್ಥೆ CFI ಸೇರುವಂತೆ ಶಿವಮೊಗ್ಗದ ಶಿಕಾರಿಪುರ ತಾಲೂಕಿನ ಶಿರಾಳ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೋಡೆಗಳಲ್ಲಿ ಈ ಬರಹಗಳು ಕಾಣಿಸಿಕೊಂಡಿವೆ.
ಶಿವಮೊಗ್ಗ : ನಿಷೇಧಿತ PFI ಸಂಘಟನೆಯ ಅಂಗ ಸಂಸ್ಥೆ CFI ಸೇರುವಂತೆ ಶಿವಮೊಗ್ಗದ ಶಿಕಾರಿಪುರ ತಾಲೂಕಿನ ಶಿರಾಳ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೋಡೆಗಳಲ್ಲಿ ಈ ಬರಹಗಳು ಕಾಣಿಸಿಕೊಂಡಿವೆ.
ಶಿರಾಳಕೊಪ್ಪ ಪಟ್ಟಣದ 9 ಸ್ಥಳಗಳಲ್ಲಿ ಸಿ ಎಫ್ ಐ ಗೆ ಸೇರಿ ಎನ್ನುವ ಗೋಡೆ ಬರಹ ಬರೆದಿದ್ದಾರೆ.
ಪೊಲೀಸರಿಗೆ ಗಸ್ತಿನ ಸಮಯದಲ್ಲಿ ಗೋಡೆ ಬರಹ ಕೇಸ್ ಪತ್ತೆಯಾಗಿದ್ದು ಕೂಡಲೇ ಗೋಡೆ ಬರಹ ಅಳಿಸಿ ಹಾಕಿದ್ದಾರೆ.
ಹಳ್ಳೂರು ಕೇರಿ ಭೋವಿ ಕಾಲೋನಿ, ಸಣ್ಣ ಬ್ಯಾಡದ ಕೇರಿ ದೊಡ್ಡ ಬ್ಯಾಂಡದ ಕೇರಿ ಹಾಗೂ ಹಿರೇಕೆರೂರು ರಸ್ತೆ ಭಾಗದಲ್ಲಿ ಗಸ್ತು ಮಾಡುತ್ತಿದ್ದರು. ಈ ಸಂದರ್ಭ ಈ ಬರಹಗಳು ಕಾಣಿಸಿವೆ.
ಶಿರಾಳಕೊಪ್ಪ ಟೌನ್ ನ ಹಳೇ ಪೆಟ್ರೋಲ್ ಬಂಕ್ ಪಕ್ಕದಲ್ಲಿ ನ ಸಿಮೆಂಟ್ ಕಾಂಪೌಂಡ್ ಹಾಗೂ ಭೋವಿ ಕಾಲೋನಿ ಗೆ ಹೋಗುವ ರಸ್ತೆಯಲ್ಲಿರುವ ವಿದ್ಯುತ್ ಕಂಬ, ದೊಡ್ಡ ಬೇಡರ ಕೇರಿಗೆ ಹೋಗುವ ಕ್ರಾಸ್ ಬಳಿ ಇರುವ ಸಿಮೆಂಟ್ ಬೋರ್ಡ್ ಮೇಲೆ ಚಂದ್ರಪ್ಪ ರವರ ಮನೆಯ ಕ್ರಾಸ್ ಹತ್ತಿರ ವಿದ್ಯುತ್ ಕಂಬದ ಮೇಲೆ ಬಿಲಾಲ್ ಮನೆಯ ಕ್ರಾಸ್ ಹತ್ತಿರ ಇರುವ ಗ್ಯಾರೇಜ್ ನ ಗೋಡೆಯ ಮೇಲೆ, ದೊಡ್ಡಬ್ಯಾಡರ ಕೇರಿಯಿಂದ ಮಠದ ಗತ್ತಿಗೆ ಹೋಗುವ ರಸ್ತೆಯಲ್ಲಿನ ಗೋಡೆಯ ಮೇಲೆ, ಬಿಲಾಲ್ ಮಸೀದಿಯ ಪಕ್ಕದಲ್ಲಿರುವ ಮನೆಯ ಗೋಡೆಯ ಮೇಲೆ ಮತ್ತು ಫಾರೂಕ್ ಮಸೀದಿಯ ಪಕ್ಕದಲ್ಲಿರುವ ಮನೆಯ ಗೋಡೆಯ ಮೇಲೆ ಜಾಯಿನ್ ಸಿ ಎಫ್ ಐ ಎಂದು ಬರೆಯಲಾಗಿದೆ.
ನೀಲಿ ಮತ್ತು ಕೆಂಪು ಬಣ್ಣದ ಸ್ಪ್ರೇ ಪೇಂಟ್ ನಿಂದ ಬರೆದಿರುವುದರ ಜೊತೆಗೆ ಸ್ಟಾರ್ ಚಿತ್ರ ಬಿಡಿಸಿರುವುದು ಕಂಡುಬಂದಿರುತ್ತೆ.
ಭಾರತ ಸರ್ಕಾರವು ಪಿಎಫ್ ಐ ಹಾಗೂ ಅದರ ಅಂಗ ಸಂಸ್ಥೆಗಳಲ್ಲಿ ಒಂದಾದ ಸಿ ಎಫ್ ಐ ಸಂಘಟನೆಯನ್ನ ಐದು ವರ್ಷಗಳ ಅವಧಿಗೆ ನಿಷೇಧ ಮಾಡಿದೆ.
ಈ ಆದೇಶದ ನಂತರ ಇದನ್ನ ಯಾರೋ ಉಲ್ಲಂಘಿಸಿ, ಭಾರತೀಯ ಧರ್ಮ, ಭಾಷೆ ಆಧಾರದ ಮೇಲೆ ವೈರತ್ವ ಉದ್ದೇಶದಿಂದ ಹಾಗೂ ಪರಸ್ಪರ ಸೌಹಾರ್ದತೆಗೆ ಭಂಗ ಉಂಟು ಮಾಡುವ ಉದ್ದೇಶದಿಂದ ಬರೆಯಲಾಗಿದೆ.
ಸದ್ಯ ಗೋಡೆ ಬರಹ ಬರೆದ ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದೆ.