ಮಹಿಳೆಯರ ನೈಟ್ ಪಾರ್ಟಿ ನಡೆಯುತ್ತಿದ್ದ ಹೊಟೇಲ್ ಮೇಲೆ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿ, ಪಾರ್ಟಿ ನಿಲ್ಲಿಸುವಂತೆ ಎಚ್ಚರಿಕೆ ನೀಡಿ, ಮಹಿಳೆಯರನ್ನ ಹೊಟೇಲ್ ನಿಂದ ಹೊರಗೆ ಕಳುಹಿಸಿರುವ ಘಟನೆ ಶಿವಮೊಗ್ಗದಲ್ಲಿ ವರದಿಯಾಗಿದೆ.
ಶಿವಮೊಗ್ಗ: ಮಹಿಳೆಯರ ನೈಟ್ ಪಾರ್ಟಿ ನಡೆಯುತ್ತಿದ್ದ ಹೊಟೇಲ್ ಮೇಲೆ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿ, ಪಾರ್ಟಿ ನಿಲ್ಲಿಸುವಂತೆ ಎಚ್ಚರಿಕೆ ನೀಡಿ, ಮಹಿಳೆಯರನ್ನ ಹೊಟೇಲ್ ನಿಂದ ಹೊರಗೆ ಕಳುಹಿಸಿರುವ ಘಟನೆ ಶಿವಮೊಗ್ಗದಲ್ಲಿ ವರದಿಯಾಗಿದೆ.
ಶುಕ್ರವಾರ ತಡರಾತ್ರಿ ನಡೆದಿದೆ ಎನ್ನಲಾದ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈವೆರಗೆ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.
ಕುವೆಂಪು ರಸ್ತೆಯ ಹೊಟೇಲ್ ಒಂದರಲ್ಲಿ ಶುಕ್ರವಾರ ತಡರಾತ್ರಿ ಲೇಡಿಸ್ ಪಾರ್ಟಿ ನಡೆಯುತ್ತಿತ್ತು.
ಈ ಕುರಿತು ಬಜರಂಗದಳ ಕಾರ್ಯಕರ್ತರಿಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರ ಜೊತೆಗೆ ಹೊಟೇಲ್ ಗೆ ಆಗಮಿಸಿದ ಬಜರಂಗದಳ ಕಾರ್ಯಕರ್ತರು ಪಾರ್ಟಿ ನಿಲ್ಲಿಸುವಂತೆ ಎಚ್ಚರಿಕೆ ನೀಡಿ, ಮಹಿಳೆಯರನ್ನು ಹೋಟೆಲ್‌ನಿಂದ ಹೊರಗೆ ಕಳುಹಿಸಿದ್ದಾರೆ.