ಮುಂಬೈ: ತಾವು ಚಿತ್ರೀಕರಿಸಿದ ಬ್ಲೂ ಫಿಲಂ ಅನ್ನು ಪತ್ನಿ ಶಿಲ್ಪಾ ಶೆಟ್ಟಿಗೂ ತೋರಿಸುವುದಾಗಿ ಕುಂದ್ರಾ ನನ್ನ ಬಳಿ ಹೇಳಿಕೊಂಡಿದ್ದಾರೆ ಎಂದು ನಟಿ, ಮಾಡೆಲ್ ಶೆರ್ಲಿನ್ ಚೋಪ್ರಾ ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ.
ನೀಲಿ ಚಿತ್ರ ಹಗರಣದಲ್ಲಿ ಸಿಲುಕಿರುವ ಉದ್ಯಮಿ, ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಕುರಿತಂತೆ ದಿನದಿಂದ ದಿನಕ್ಕೆ ಹಲವು ಮಾಹಿತಿಗಳು ಪೊಲೀಸರಿಗೆ ಲಭ್ಯವಾಗುತ್ತಾ ಹೋಗುತ್ತಿದೆ.
ಈ ನಡುವೆಯೇ ಈ ನೀಲಿಚಿತ್ರ ಶೂಟಿಂಗ್‌ನಲ್ಲಿ ಭಾಗಿಯಾಗಿರುವ ಆರೋಪ ಹೊತ್ತ ನಟಿ, ಮಾಡೆಲ್ ಶೆರ್ಲಿನ್ ಚೋಪ್ರಾರನ್ನು ಕರೆಸಿಕೊಂಡಿರುವ ಪೊಲೀಸರು ಕೆಲ ದಿನಗಳಿಂದ ಅವರ ವಿಚಾರಣೆ ಮಾಡುತ್ತಿದ್ದಾರೆ. ಇದೀಗ ನಟಿ ಭಯಾನಕ ಎನ್ನುವಂಥ ಕೆಲವು ವಿಚಾರಗಳನ್ನು ಪೊಲೀಸರ ಮುಂದೆ ಇಟ್ಟಿದ್ದಾರೆ.
ರಾಜ್ ಕುಂದ್ರಾ ನನ್ನಿಂದ ಬೋಲ್ಡ್ ಎನಿಸುವ ಕೆಲವು ದೃಶ್ಯಗಳನ್ನು ಮಾಡಿಸಿಕೊಂಡಿದ್ದಾರೆ. ‘ರಾಜ್ ಕುಂದ್ರಾ ಅವರು ತಮ್ಮ ಕಂಪನಿಯಾಗಿರುವ ಆರ್ಮ್ಸ್‌ಪ್ರೈಮ್ ಜೊತೆಗಿನ ಒಪ್ಪಂದದ ಬಗ್ಗೆ ನನ್ನ ಬಳಿ ಮಾತನಾಡುತ್ತಾ ಕೆಲವೊಂದು ದೃಶ್ಯಗಳನ್ನು ಮಾಡಲು ಹೇಳಿದ್ದರು. ನಾನು ಒಪ್ಪಂದ ಮಾಡಿಕೊಂಡಿದ್ದೆ. ಅದರ ಅಂಗವಾಗಿ ಕಾಮಪ್ರಚೋದಕ, ಅರೆ ನಗ್ನ ಮತ್ತು ನಗ್ನ ವಿಷಯವನ್ನು ಚಿತ್ರೀಕರಿಸುತ್ತಿದ್ದರು.
ಅವುಗಳನ್ನು ತಮ್ಮ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ’ಈ ವಿಡಿಯೋಗಳನ್ನು ತಾವು ಪತ್ನಿ ಶಿಲ್ಪಾ ಶೆಟ್ಟಿಗೂ ತೋರಿಸುವುದಾಗಿ ಕುಂದ್ರಾ ನನ್ನ ಬಳಿ ಹೇಳಿಕೊಂಡಿದ್ದಾರೆ. ಇದನ್ನು ಶಿಲ್ಪಾ ಕೂಡ ಇಷ್ಟಪಡುತ್ತಿದ್ದರಂತೆ. ಇದನ್ನು ಕೇಳಿ ನನಗೆ ಸಂತೋಷವಾಗುತ್ತಿತ್ತು. ಶಿಲ್ಪಾ ಶೆಟ್ಟಿ ಮತ್ತು ಆಕೆಯ ಸಹೋದರಿ ಶಮಿತಾ ಶೆಟ್ಟಿ ಕೂಡ ಈ ಕಂಪನಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಸಂಭಾಷಣೆಯ ಸಮಯದಲ್ಲಿ ರಾಜ್ ಕುಂದ್ರಾ ಹೇಳಿದ್ದರು’ ಎಂದು ಪೊಲೀಸರಿಗೆ ಶೆರ್ಲಿನ್ ವಿವರಿಸಿದ್ದಾರೆ.
ಆದರೆ ಕೆಲವು ವಿಡಿಯೋಗೆ ನನಗೆ ಸರಿಯಾದ ಸಂಭಾವನೆ ಸಿಕ್ಕಿರಲಿಲ್ಲ. ಆದ್ದರಿಂದ ನಾನು ಒಪ್ಪಂದ ಮುರಿಯುವುದಾಗಿ ಹೇಳಿದೆ. ಆದರೆ ರಾಜ್ ಕುಂದ್ರಾ ಅದನ್ನು ನಿರಾಕರಿಸಿದರು. ಅನೇಕ ಸಲ ಅವರು ನನ್ನನ್ನು ದೈಹಿಕವಾಗಿ ಬಳಸಿಕೊಳ್ಳಲು ನೋಡಿದ್ದರು. ಶಿಲ್ಪಾ ಜತೆ ನನ್ನ ಸಂಬಂಧ ಚೆನ್ನಾಗಿಲ್ಲ ಎಂದು ಹೇಳಿ ನನ್ನನ್ನು ಬಳಸಿಕೊಳ್ಳಲು ಮುಂದಾಗಿದ್ದರು. ಆದರೆ ನಾನು ಅದನ್ನು ನಿರಾಕರಿಸಿದ್ದೆ. ಇವೆಲ್ಲಾ ಕಾರಣಗಳಿಂದ ನಾನು ಒಪ್ಪಂದ ಮುರಿಯಲು ನೋಡಿದರೂ ಅವರು ಕೇಳಲಿಲ್ಲ. ನಂತರ ವಿಡಿಯೋಗಳನ್ನು ಪೋರ್ನ್ ವೆಬ್‌ಸೈಟ್‌ಗಳಿಗೆ ಹಾಕಬಹುದು ಎಂಬ ಭಯದಿಂದ ನಾನು ಸುಮ್ಮನಾದೆ’ ಎಂದಿದ್ದಾರೆ ಶೆರ್ಲಿನ್.
ಒಪ್ಪಂದವಿಲ್ಲದೆ ಮಾಡಿದ ಈ ಮೂರು ವಿಡಿಯೋಗಳಿಗೆ ರಾಜ್ ಕುಂದ್ರಾ ತನ್ನ ಹಣವನ್ನು ಇನ್ನೂ ನೀಡಿಲ್ಲ. ಆಗ ನಾನೇ ಶಿಲ್ಪಾ ಶೆಟ್ಟಿಗೆ ಹಣ ನೀಡಲು ಮನವಿ ಮಾಡಿಕೊಂಡಿದ್ದೆ. ಈಗ ವಿವಾದಕ್ಕೆ ಒಳಗಾಗಿರುವ ಪೋರ್ನ್ ಆ್ಯಪ್ ಹಾಟ್‌ಶಾಟ್‌ಗಳಿಗಾಗಿ ವೀಡಿಯೊಗಳನ್ನು ಮಾಡಲು ರಾಜ್ ಕುಂದ್ರಾ ಆಫರ್ ನೀಡಿದ್ದರೂ ತನಗೆ ಹಲವಾರು ಬಾರಿ ಆಫರ್ ನೀಡಿದ್ದರೂ ನಾನು ಅದಕ್ಕೆ ಕೆಲಸ ಮಾಡಲಿಲ್ಲ ಎಂದು ಪೊಲೀಸರಿಗೆ ವಿವರಿಸಿದ್ದಾರೆ ಶೆರ್ಲಿನ್, ವಿಚಾರಣೆ ಮುಂದುವರೆದಿದೆ.
ಮಂಗಳೂರು/ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ನಿಧ*ನ ಹೊಂದಿದ್ದಾರೆ. ಅವರು ಕನ್ನಡ ಸಿನಿಮಾ, ಧಾರವಾಹಿ ಹಾಗೂ ರಂಗಭೂಮಿಯಲ್ಲಿ ನಟಿಸಿದ್ದರು.
ಸರಿಗಮ ವಿಜಿ ಅವರ ಮೂಲ ಹೆಸರು ವಿಜಯ್ ಕುಮಾರ್. ಆದರೆ ಅವರ ಹೆಸರಿನ ಮುಂದೆ ‘ಸರಿಗಮ’ ಸೇರಿಕೊಂಡಿದ್ದು ಹೇಗೆ ಎನ್ನುವ ಕುತೂಹಲ ಹಲವರಲ್ಲಿ ಇದೆ.
‘ಸರಿಗಮ ವಿಜಿ’ ಎಂದೇ ಕರೆಯಲ್ಪಡುವ ನಟ ವಿಜಯ್ ಕುಮಾರ್ (76) ಅವರು ಬುಧವಾರ (ಜ.15) ನಿಧ*ನರಾದರು. ಅವರಿಗೆ ಇಬ್ಬರು ಪುತ್ರರು ಇದ್ದಾರೆ. ಶ್ವಾಸಕೋಶದ ಸೋಂಕು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ವಾರದ ಹಿಂದೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಿಗ್ಗೆ 9:45ರ ಸುಮಾರಿಗೆ ಅವರು ನಿಧ*ನ ಹೊಂದಿದ್ದಾರೆ.
ಬೆಂಗಳೂರಿನ ವಿಮಾನಪುರದಲ್ಲಿ (ಎಚ್ಎಎಲ್ ಪ್ರದೇಶ) ಜನಿಸಿದ ವಿಜಯ್ ಕುಮಾರ್, ನಾಟಕದ ನಂಟು ಇಟ್ಟುಕೊಂಡು ಸಿನಿಮಾಲೋಕ ಪ್ರವೇಶಿಸಿದವರು. ‘ಬೆಳುವಲದ ಮಡಿಲಲ್ಲಿ’ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ, ನಟನಾಗಿ ಮೊದಲ ಹೆಜ್ಜೆ ಇಟ್ಟ ಅವರು ಎನ್ ಜಿಇಎಫ್ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ದುಡಿದವರು. ಈ ಅವಧಿಯಲ್ಲೇ ಅವರು ‘ಸಂಸಾರದಲ್ಲಿ ಸರಿಗಮ’ ಎಂಬ ನಾಟಕ ಬರೆದರು.
ಇದು ಕರ್ನಾಟಕದ ಹಲವು ಜಿಲ್ಲೆಗಳು ಸೇರಿದಂತೆ, ಹೈದರಾಬಾದ್, ಚೆನ್ನೈ, ದೆಹಲಿಗಳಲ್ಲಿಯೂ ಆ ನಾಟಕ ಪ್ರದರ್ಶನವಾಗಿತ್ತು. ಸುಮಾರು 1390 ಪ್ರದರ್ಶನಗಳಲ್ಲಿ ‘ಸಂಸಾರದಲ್ಲಿ ಸರಿಗಮ’ ನಾಟಕ ಕಂಡಿತ್ತು. ಇದೇ ಕಾರಣಕ್ಕೆ ವಿಜಿ ಅವರ ಹೆಸರಿನ ಮುಂದೆ ‘ಸರಿಗಮ’ ಸೇರಿಕೊಂಡು ಸರಿಗಮ ವಿಜಿ ಎಂದೇ ಜನಪ್ರಿಯರಾದರು.
ಹಲವು ದಿಗ್ಗಜ ನಟರ ಜೊತೆ ತೆರೆಹಂಚಿಕೊಂಡಿದ್ದ ವಿಜಿ ಅವರು, ಹಾಸ್ಯ ಪಾತ್ರಗಳಲ್ಲಿ ಮಿಂಚಿದ್ದರು. ಹಲವು ಧಾರವಾಹಿಗಳಲ್ಲೂ ಅವರು ಬಣ್ಣಹಚ್ಚಿದ್ದಾರೆ. 400ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅವರು 100ಕ್ಕೂ ಅಧಿಕ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಮಂಗಳೂರು/ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರೋಬ್ಬರಿ 7 ತಿಂಗಳ ನಂತರ ತಮ್ಮ ಅಭಿಮಾನಿಗಳಿಗೆ, ಜನತೆಗೆ ಜಾಲತಾಣದ ಮೂಲಕ ಸಂದೇಶವೊಂದನ್ನು ಹಂಚಿಕೊಂಡಿದ್ದು, ಫೋಟೊ ಫುಲ್ ವೈರಲ್ ಆಗುತ್ತಿದೆ.
2024 ರ ಜೂನ್ ತಿಂಗಳಿನಿಂದ ಕೊಲೆ ಆರೋಪದ ಮೇಲೆ ಜೈಲು ಸೇರಿದ್ದ ದರ್ಶನ್ ಕೊನೆಗೂ ತಮ್ಮ ಅಭಿಮಾನಿಗಳಿಗೆ ಇನ್‌ಸ್ಟಾಗ್ರಾಂ ಮೂಲಕ ಸಂಕ್ರಾಂತಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.
‘ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ನಿಮ್ಮ ಜೀವನದಲ್ಲಿ ಸಂತೋಷವೆಂಬ ಗಾಳಿಪಟಗಳು ಎತ್ತರಕ್ಕೆ ಹಾರಲಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ. ಎಳ್ಳು-ಬೆಲ್ಲ ಹಂಚಿ ಹೊಸ ಭರವಸೆಯೊಂದಿಗೆ ಮಕರ ಸಂಕ್ರಾಂತಿ ಯನ್ನು ಬರಮಾಡಿಕೊಳ್ಳೋಣ’ ಎಂದು ಬರೆದುಕೊಂಡಿದ್ದು, ಕುದುರೆಯೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಮಾಡಿದ ಕೆಲವೇ ಗಂಟೆಯಲ್ಲಿ 4.66 ಲಕ್ಷಕ್ಕೂ ಅಧಿಕ ಲೈಕ್, 27 ಸಾವಿರಕ್ಕೂ ಅಧಿಕ ಕಮೆಂಟ್ಸ್ ಪಡೆಯಿತು.
ನಟ ದರ್ಶನ್ ಪ್ರತಿ ವರ್ಷವೂ ಕೂಡ ಫಾರಂ ಹೌಸ್‌ನಲ್ಲಿ ತನ್ನ ಸಾಕು ಪ್ರಾಣಿಗಳೊಂದಿಗೆ ಸಂಕ್ರಾತಿ ಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ. ಈ ಬಾರಿಯೂ ನೆಚ್ಚಿನ ಸ್ಥಳದಲ್ಲೇ ಸಂಕ್ರಾಂತಿ ಆಚರಿಸಿಕೊಂಡಿದ್ದಾರೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ನೆಚ್ಚಿನ ನಟನ ಪೋಸ್ಟ್ ಕಂಡು ಅಭಿಮಾನಿಗಳು ಖುಷಿಯಾಗಿದ್ದಾರೆ. ದರ್ಶನ್ ಪೋಸ್ಟ್ ಮಾಡುತ್ತಿದ್ದಂತೆ, ಅಭಿಮಾನಿಗಳು ‘ಜೈ ಡಿ ಬಾಸ್’ ಎಂದು ಕಮೆಂಟ್ ಮಾಡಿದ್ದಾರೆ.
ಮಂಗಳೂರು/ಮೈಸೂರು : ಪ್ರತೀ ವರ್ಷ ನಟ ದರ್ಶನ್ ತಮ್ಮ ಫಾರ್ಮ್ ಹೌಸ್‌ನಲ್ಲಿ ಸಂಕ್ರಾಂತಿ ಹಬ್ಬ ಆಚರಿಸುತ್ತಾರೆ. ಎತ್ತುಗಳು, ಹಸುಗಳನ್ನು ಸ್ನಾನ ಮಾಡಿಸಿ, ಅಲಂಕಾರ ಮಾಡಿ ಕಿಚ್ಚು ಹಾಯಿಸುತ್ತಾರೆ. ಆದರೆ, ಈ ವರ್ಷ ದರ್ಶನ್ ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ಇತ್ತು. ರೇಣುಕಾ ಸ್ವಾಮಿ ಕೊ*ಲೆ ಪ್ರಕರಣದಿಂದ ಜಾಮೀನು ಪಡೆದಿರುವ ದರ್ಶನ್ ಈ ಬಾರಿ ಸಂಕ್ರಾಂತಿ ಆಚರಿಸಿದ್ದಾರಾ ಎಂಬ ಕುತೂಹಲ ಮನೆ ಮಾಡಿತ್ತು.
ಈ ಕುತೂಹಲವನ್ನು ದರ್ಶನ್ ಪತ್ನಿ ವಿಜಯಲಕ್ಷ್ಮಿ ತಣಿಸಿದ್ದಾರೆ. ತನ್ನ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಅವರು ಸ್ಟೋರಿ ಹಾಕಿದ್ದಾರೆ. ಈ ಮೂಲಕ ಫಾರ್ಮ್ ಹೌಸ್‌ನಲ್ಲಿ ದರ್ಶನ್ ಜೊತೆ ಸಂಕ್ರಾಂತಿ ಆಚರಿಸುತ್ತಿದ್ದಾರೆ ಅನ್ನೋದು ಕನ್ಫಮ್ ಆಗಿದೆ.
ಸದ್ಯ ಈ ಫೋಟೋ ವೈರಲ್ ಆಗಿದೆ. ದರ್ಶನ್ ಹಾಗೂ ವಿಜಯಲಕ್ಷ್ಮಿ ಮೈಸೂರಿನ ತಮ್ಮ ಫಾರ್ಮ್ ಹೌಸ್‌ನಲ್ಲಿದ್ದಾರೆ. ಅಲ್ಲಿ ಪ್ರಾಣಿಗಳ ಆರೈಕೆ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.
ಈ ಫೋಟೋದಲ್ಲಿ ಇಬ್ಬರೂ ಮುಖ ತೋರಿಸಿಲ್ಲ. ಪ್ರಾಣಿಗಳತ್ತ ನೋಡುತ್ತಿರುವಂತೆ ಫೋಟೋ ಕ್ಲಿಕ್ಕಿಸಲಾಗಿದೆ. ಬೆನ್ನಿನ ಭಾಗ ಮಾತ್ರ ತೋರಿಸಲಾಗಿದೆ ವಿಜಯಲಕ್ಷ್ಮಿ ತನ್ನ ಮುದ್ದಿನ ನಾಯಿಯನ್ನು ಫಾರ್ಮ್ ಹೌಸ್‌ಗೆ ಕೊಂಡೊಯ್ದಿದ್ದು, ಈ ಫೋಟೋದಲ್ಲಿ ನಾಯಿಯೂ ಇರುವುದನ್ನು ಕಾಣಬಹುದು.