Connect with us

LATEST NEWS

VIDEO: ದೇಶೀಯ, ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ‘ಶಿಖರ್ ಧವನ್’..!

Published

on

ದೆಹಲಿ/ಮಂಗಳೂರು: 38 ವರ್ಷ ವಯಸ್ಸಿನ ಧವನ್ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಹಂಚಿಕೊಳ್ಳುವ ಮೂಲಕ ತಮ್ಮ ನಿವೃತ್ತಿ ನಿರ್ಧಾರವನ್ನು ತಿಳಿಸಿದ್ದು, ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್ ಬೈ ಹೇಳುತ್ತಿರುವುದಾಗಿ ಹೇಳಿದ್ದಾರೆ.

38 ವರ್ಷದ ಶಿಖರ್​ ಧವನ್​​ ಕೊನೆಯದಾಗಿ 2022ರಲ್ಲಿ ಬಾಂಗ್ಲಾದೇಶದ ವಿರುದ್ಧ ODI ಸರಣಿಯಲ್ಲಿ ಆಡಿದ್ದರು. ಆ ಬಳಿಕ ಅವರ ಸ್ಥಾನವನ್ನು 2022ರಲ್ಲಿ ಶೂಭ್ಮನ್​ ಗಿಲ್​ ಕಸಿದುಕೊಂಡರು. ಇದೀಗ ಶಿಖರ್​ ಧವನ್​ ದೇಶೀಯ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ವೃತ್ತಿ ಜೀವನದ ಉದ್ದಕ್ಕೂ ಪ್ರೋತ್ಸಾಹ ಮತ್ತು ಪ್ರೀತಿ ನೀಡಿದ್ದಕ್ಕಾಗಿ ಧನ್ಯವಾದ ಹೇಳಿದ್ದಾರೆ.

ಇನ್ಮುಂದೆ ಥಿಯೇಟರ್‌ನಲ್ಲಿ ಕಾಣಸಿಗುವುದಿಲ್ಲ’ಎಲ್ಲವೂ ಚೆನ್ನಾಗಿಯೇ ಇತ್ತು’ ತಂಬಾಕು ಜಾಹೀರಾತು; ಸುನೀತಾ ಬದಲಿಗೆ ಓಂ ಪ್ರಕಾಶ್

ಶಿಖರ್​ ಧವನ್​ ದೆಹಲಿ ಮೂಲದವರಾಗಿದ್ದು, ವಿಶಾಖಪಟ್ಟಣಂನಲ್ಲಿ ನಡೆದ ODI ಸಂದರ್ಭದಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಪ್ರವೇಶ ಮಾಡಿದರು. ಆದರೆ ಎರಡು ಎಸೆತಗಳ ಡಕ್​​ಗೆ ಔಟ್​ ಆಗುವ ಮೂಲಕ ವೃತ್ತಿ ಜೀವನದಲ್ಲಿ ಉತ್ತಮ ಆಟವನ್ನು ತೋರಿಸಿರಲಿಲ್ಲ. ಆರಂಭಿಕ ವೈಫಲ್ಯದ ಅನುಭವಿಸುತ್ತಿದ್ದ ಶಿಖರ್​ 2013ರಲ್ಲಿ ಟೀಂ ಇಂಡಿಯಾಗೆ ಮರಳಿದರು. ಮೂರು ಸ್ವರೂಪದಲ್ಲಿ ಗುರುತಿಸಿಕೊಂಡರು.

ಶಿಖರ್‌ ಧವನ್ ಹೇಳಿದ್ದು ಹೀಗೆ..;
ಶಿಖರ್​ ತನ್ನ ನಿವೃತ್ತಿ ವಿಚಾರವಾಗಿ ವಿಡಿಯೋ ಹಂಚಿಕೊಂಡಿದ್ದು, ‘ನಾನು ಭಾರತಕ್ಕಾಗಿ ಆಡುವ ಗುರಿಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೆ. ನಾನು ಅದನ್ನು ಸಾಧಿಸಿದ್ದೇನೆ. ಬಹಳಷ್ಟು ಜನರಿಗೆ ನನ್ನ ಧನ್ಯವಾದಗಳು. ಮೊದಲನೆಯದಾಗಿ ನನ್ನ ಕುಟುಂಬ, ನನ್ನ ಬಾಲ್ಯದ ಕೋಚ್ ತಾರಕ್ ಸಿನ್ಹಾ ಮತ್ತು ಮದನ್ ಶರ್ಮಾ ಅವರ ಮಾರ್ಗದರ್ಶನದಲ್ಲಿ ನಾನು ಕ್ರಿಕೆಟ್ ಕಲಿತೆ. ನಂತರ ನಾನು ವರ್ಷಗಳ ಕಾಲ ಆಡಿದ ನನ್ನ ಇಡೀ ತಂಡಕ್ಕೆ ಧನ್ಯವಾದಗಳು. ಇದು ನನ್ನ ಮತ್ತೊಂದು ಕುಟುಂಬ. ಇಲ್ಲಿ ನನಗೆ ಖ್ಯಾತಿ ಮತ್ತು ಎಲ್ಲರ ಪ್ರೀತಿ ಮತ್ತು ಬೆಂಬಲ ಸಿಕ್ಕಿತು. ಕಥೆಯಲ್ಲಿ ಮುಂದುವರಿಯಲು ನೀವು ಪುಟಗಳನ್ನು ತಿರುಗಿಸಬೇಕು ಎಂದು ಹೇಳಲಾಗುತ್ತದೆ. ಹಾಗಾಗಿ, ನಾನು ಸಹ ಅದನ್ನು ಮಾಡುತ್ತಿದ್ದೇನೆ, ನಾನು ಅಂತರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.

ದೇಶಕ್ಕಾಗಿ ಆಡಿರುವ ತೃಪ್ತಿ ನನಗಿದೆ ಎಂದ ಧವನ್
ನಂತರ ಮಾತು ಮುಂದುವರೆಸಿದ ಅವರು, ‘ಈಗ ನಾನು ನನ್ನ ಕ್ರಿಕೆಟ್ ಪಯಣಕ್ಕೆ ವಿದಾಯ ಹೇಳುತ್ತಿದ್ದೇನೆ. ನನ್ನ ದೇಶಕ್ಕಾಗಿ ನಾನು ಸಾಕಷ್ಟು ಆಡಿದ್ದೇನೆ ಎಂಬ ತೃಪ್ತಿ ನನಗಿದೆ. ನನಗೆ ಈ ಅವಕಾಶವನ್ನು ನೀಡಿದ ಬಿಸಿಸಿಐ, ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ ಮತ್ತು ಅವರ ಪ್ರೀತಿ ಮತ್ತು ಬೆಂಬಲಕ್ಕಾಗಿ ನನ್ನ ಎಲ್ಲಾ ಅಭಿಮಾನಿಗಳಿಗೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ’ ಎಂದು ಶಿಖರ್​ ಧವನ್​​ ಹೇಳಿದ್ದಾರೆ.

LATEST NEWS

ಬಂಟ್ವಾಳ: ಬ್ಯಾಂಕ್‌ಗೆ ಹೋಗಿ ಹಣ ಪಡೆದು ಮನೆಗೆ ಬಂದ ವ್ಯಕ್ತಿ ಕಾಣೆ; ದೂರು ದಾಖಲು

Published

on

ಬಂಟ್ವಾಳ: ಬ್ಯಾಂಕ್‌ಗೆ ಹೋಗಿ ಹಣ ಪಡೆದುಕೊಂಡು ಮನೆಗೆ ಬಂದ ವ್ಯಕ್ತಿಯೋರ್ವರು ವಿಚಿತ್ರವಾಗಿ ಕಾಣೆಯಾದ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಜೀಪಮುನ್ನೂರು ಗ್ರಾಮದ ನಾಗವಳಚ್ಚಿಲ್ ನಿವಾಸಿಯಾಗಿರುವ ಉಗ್ಗಪ್ಪ (70) ಎಂಬವರು ಕಾಣೆಯಾದ ವ್ಯಕ್ತಿ.

ಪಾಣೆಮಂಗಳೂರು ಯೂನಿಯನ್ ಬ್ಯಾಂಕ್‌ಗೆ ಹೋಗಿ ವೃದ್ಧಾಪ್ಯ ವೇತನ ಪಡೆದುಕೊಂಡು ವಾಪಸ್ಸು ಮನೆಗೆ ಬಂದವರು ತನ್ನ ಸೊಸೆಗೆ ಮೊಬೈಲ್ ನಲ್ಲಿ ಕರೆ ಮಾಡಿ ಏನು ವಿಷಯವನ್ನು ತಿಳಿಸಿದಂತೆ ಕರೆಯನ್ನು ಕಟ್ ಮಾಡಿದ್ದಾರೆ. ನಂತರ ಸೊಸೆ ತಿರುಗಿ ಪೋನ್ ಮಾಡಿದಾಗ ಪೋನ್ ರಿಸೀವ್ ಮಾಡಿರಲಿಲ್ಲ.

ಉಗ್ಗಪ್ಪ ಪೂಜಾರಿ ಅವರು ಮೊಬೈಲ್ ನ್ನು ಮನೆಯಲ್ಲಿಯೇ ಬಿಟ್ಟು ಮನೆಯಿಂದ ಹೋಗಿರುವ ವಿಚಾರ ಬಳಿಕ ಗಮನಕ್ಕೆ ಬಂದಿದೆ. ನಂತರ ಇವರ ಮಗ ಅನಿಲ್ ಕುಮಾರ್ ಅವರು ಎಲ್ಲೆಡೆ ಹುಡುಕಾಟ ಮಾಡಿದರೂ ಪತ್ತೆಯಾಗದ ಹಿನ್ನೆಲೆ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.

Continue Reading

LATEST NEWS

ಹೆರಿಗೆ ಬಳಿಕ ಯೋ*ನಿಯೊಳಗೆ ಬಾಕಿಯಾದ ಸೂಜಿ; 20 ವರ್ಷಗಳ ಬಳಿಕ ಗೊತ್ತಾಯ್ತು ನರ್ಸ್ ಎಡವಟ್ಟು!

Published

on

ಮಂಗಳೂರು/ಥೈಲ್ಯಾಂಡ್‌ : ಹೆರಿಗೆಯ ಸಮಯದಲ್ಲಿ ನರ್ಸ್‌ವೊಬ್ಬಳು ಮಹಿಳೆಯೋರ್ವಳ ಯೋ*ನಿಯಲ್ಲಿ ಶಸ್ತ್ರಚಿಕಿತ್ಸಾ ಸೂಜಿಯನ್ನು ಬಿಟ್ಟಿದ್ದು, ಸುಮಾರು ಎರಡು ದಶಕಗಳ ನಿರಂತರ ನೋವಿನಿಂದ ಬಳಲುತ್ತಿದ್ದ ಇದೀಗ ನೋವು ಹೆಚ್ಚಾದ ಕಾರಣ ಎಕ್ಸರೇ ತೆಗೆದಾಗ ಸೂಜಿ ಇರುವುದು ಪತ್ತೆಯಾಗಿರುವ ಘಟನೆ ಥೈಲ್ಯಾಂಡ್‌ನಲ್ಲಿ ನಡೆದಿದೆ.

ಕಳೆದ ವರ್ಷದವರೆಗೂ ಸೂಜಿ ಯೋ*ನಿಯೊಳಗೆ ಇರುವುದರ ಕುರಿತು ಮಹಿಳೆಗೆ ಯಾವುದೇ ಕಲ್ಪನೆಯೂ ಇರಲಿಲ್ಲ. ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಸರ್ಕಾರಿ ಆಸ್ಪತ್ರೆಯಲ್ಲಿ ಎಕ್ಸ್-ರೇ ಮಾಡಿದಾಗ ಆಕೆಯ ಖಾ*ಸಗಿ ಭಾಗದಲ್ಲಿ ಸೂಜಿ ಇರುವುದು ಕಂಡು ಬಂದಿದೆ. ಹೆರಿಗೆ ಸಮಯದಲ್ಲಿ 36 ವರ್ಷದ ಮಹಿಳೆ ಥಾಯ್ಲೆಡ್‌ನ ನಾರಾಥಿವಾಟ್‌ ಪ್ರಾಂತ್ಯದ ನಿವಾಸಿ ಪಾವೆನ್‌ ಫೌಂಡೇಶನ್‌ ಫಾರ್‌ ಚಿಲ್ಡ್ರನ್‌ ಆಂಡ್‌ ವುಮೆನ್‌ ಬಳಿ ಈ ಮಹಿಳೆ ಸಹಾಯವನ್ನು ಕೇಳಿದಾಗ ಈ ಮಾಹಿತಿ ಹೊರಬಿದ್ದಿದೆ.

’18 ವರ್ಷಗಳ ಹಿಂದೆ ಹೆರಿಗೆ ನೋವಿನ ಕಾರಣ ಅಪರೇಷನ್‌ಗೆ ಒಳಗಾಗಿದ್ದ ಮಹಿಳೆ, ಮಗು ಜನಿಸಿದ ಮೇಲೆ ಹೊಲಿಗೆ ಹಾಕುವ ವೇಳೆ ನರ್ಸ್‌ ಸೂಜಿಯನ್ನು ಯೋ*ನಿಯೆಲ್ಲಿಯೇ ಬಿಟ್ಟಿದ್ದಳು. ನಂತರ ವೈದ್ಯರು ತಮ್ಮ ಬೆರಳುಗಳ ಮೂಲಕ ಸೂಜಿಯನ್ನು ಹೊರತೆಗೆಯುವ ಪ್ರಯತ್ನ ಪಟ್ಟರೂ ಅದು ಹೊರಬಂದಿರಲಿಲ್ಲ. ಆಮೇಲೆ ಅತಿಯಾದ ರಕ್ತಸ್ರಾವ ಉಂಟಾಗಿ, ಸೂಜಿಯು ಯೋ*ನಿಯೊಳಗೆ ಉಳಿದಿದ್ದು, ವೈದ್ಯರು ತಮ್ಮ ಕೆಲಸ ಅಲ್ಲಿಗೇ ಮುಗಿಸಿದರು’ ಎಂದು ಮಹಿಳೆ ನೆನಪು ಮಾಡಿ ಹೇಳಿದ್ದಾರೆ.

ಅಂದಿನಿಂದ ಇಲ್ಲಿಯವರೆಗೆ ಮಹಿಳೆಗೆ ಆಗಾಗ ತೀವ್ರವಾದ ಕೆಳಹೊಟ್ಟೆ ನೋವು ಉಂಟಾಗುತ್ತಿತ್ತು. ಇದೀಗ ಸೂಜಿಯನ್ನು ಹೊರತೆಗೆಯಲು ಮಹಿಳೆಗೆ ಇನ್ನೊಂದು ಸರ್ಜರಿ ಮಾಡಬೇಕು. ಆದರೆ ದೇಹದಲ್ಲಿ ಸೂಜಿ ಅತ್ತಿತ್ತ ಹೋಗುತ್ತಿದ್ದ ಕಾರಣ ಸರ್ಜರಿ ವಿಳಂಬವಾಗಿದೆ ಎನ್ನಲಾಗಿದೆ.

ಮಹಿಳೆ ತಿಂಗಳಿಗೆ ನಾಲ್ಕು ಬಾರಿ ಆಸ್ಪತ್ರೆಗೆ ಹೋಗಬೇಕಾಗುತ್ತದೆ. ವೈದ್ಯಕೀಯ ವಿಮೆಯು ಆಕೆಯ ಹೆಚ್ಚಿನ ಚಿಕಿತ್ಸೆಯನ್ನು ಒಳಗೊಂಡಿರುತ್ತದೆಯಾದರೂ, ಸಾರಿಗೆ ವೆಚ್ಚಗಳು ಆರ್ಥಕವಾಗಿ ಆಕೆಯ ಮೇಲೆ ಹೊರೆಯಾಗಿದೆ. ಇನ್ನು ಸೂಜಿಯನ್ನು ಯಾವಾಗ ಹೊರತೆಗೆಯಲಾಗುತ್ತದೆ ಎನ್ನುವುದು ಇನ್ನು ಕೂಡಾ ನಿಶ್ಚಯವಾಗಿಲ್ಲ. ಈ ಕುರಿತು ಆಸ್ಪತ್ರೆ ಯಾವುದೇ ಪ್ರತಿಕ್ರಿಯೆಯೂ ನೀಡದ ಕಾರಣ, ಕಾನೂನು ಕ್ರಮ, ಪರಿಹಾರವೇನಾದರೂ ದೊರಕುತ್ತದೆಯೇ ಎಂಬುವುದೂ ತಿಳಿಯದೆ ಕುಟುಂಬ ಕಂಗಲಾಗಿದೆ.

Continue Reading

LATEST NEWS

ಪುತ್ತೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ವಸ್ತ್ರ, ಸಂಹಿತೆ ಜಾರಿ

Published

on

ಮಂಗಳೂರು: ಪುತ್ತೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ವಸ್ತ್ರ, ಸಂಹಿತೆ ಜಾರಿಗೊಳಿಸಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರು ವಸ್ತ್ರ ಸಂಹಿತೆ ಪಾಲಿಸುವಂತೆ ಪ್ರವೇಶ ದ್ವಾರದ ಬಳಿ ಸೂಚನಾ ಫಲಕ ಅಳವಡಿಸಲಾಗಿದೆ.

ದೇವರ ದರ್ಶನಕ್ಕೆ ಬರುವಾಗ ಸ್ವಚ್ಛ, ಶುಭ್ರ ಮತ್ತು ಸಭ್ಯ ಉಡುಪುಗಳನ್ನು ಧರಿಸಿ ಬರುವಂತೆ ಸೂಚಿಸಲಾಗಿದೆ. ಪುರುಷರು ಪ್ಯಾಂಟ್- ಅಂಗಿ ಅಥವಾ ಲುಂಗಿ – ಅಂಗಿ, ಮಹಿಳೆಯರು ಸೀರೆ ಅಥವಾ ಚೂಡಿದಾರ್ ಧರಿಸಿ ದೇವರ ದರ್ಶನ ಪಡೆಯುವಂತೆ ತಿಳಿಸಲಾಗಿದೆ.

ದೇವಸ್ಥಾನಕ್ಕೆ ಬರುವಾಗ ಭಕ್ತರು ಧರಿಸಬಹುದಾದ ವಸ್ತ್ರಗಳ ಮಾದರಿಯನ್ನು ಚಿತ್ರದ ಮೂಲಕ ಸೂಚನಾ ಫಲಕದಲ್ಲಿ ಹಾಕಲಾಗಿದೆ. ಅನೇಕ ವರ್ಷಗಳಿಂದ ಭಕ್ತರು ಮತ್ತು ಹಿಂದೂ ಪರ ಸಂಘಟನೆಗಳು ವಸ್ತ್ರ ಸಂಹಿತೆ ಜಾರಿಗೆ ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ದೇವಾಲಯ ವ್ಯವಸ್ಥಾಪನಾ ಸಮಿತಿಯವರು ವಸ್ತ್ರ ಸಂಹಿತೆ ಪಾಲಿಸುವಂತೆ ಸೂಚನಾ ಫಲಕ ಅಳವಡಿಸಿದ್ದಾರೆ.

Continue Reading

LATEST NEWS

Trending

Exit mobile version