Saturday, July 2, 2022

ಶೀನಾ ಬೋರಾ ಕೊಲೆ ಪ್ರಕರಣ: ತಾಯಿ ಇಂದ್ರಾಣಿ ಮುಖರ್ಜಿಗೆ ಜಾಮೀನು

ಹೊಸದಿಲ್ಲಿ: ಮಗಳು ಶೀನಾ ಬೋರಾ ಎಂಬವರನ್ನು ಕೊಲೆಗೈದು 2015ರಲ್ಲಿ ಜೈಲಿಗೆ ಸೇರಿದ್ದ ಮಾಜಿ ಮಾಧ್ಯಮ ಕಾರ್ಯನಿರ್ವಾಹಕಿ ಇಂದ್ರಾಣಿ ಮುಖರ್ಜಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದೆ.

ಈ ಬಗ್ಗೆ ತೀರ್ಪು ನೀಡಿರುವ ಸುಪ್ರೀಂಕೋರ್ಟ್ “ಮಗಳನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರಾಣಿ ಮುಖರ್ಜಿ ಅವರಿಗೆ ಜಾಮೀನು ನೀಡುತ್ತಿದ್ದೇವೆ.

ಏಕೆಂದರೆ ಅವರು 6 ವರ್ಷ 5 ತಿಂಗಳ ಸುದೀರ್ಘ ಅವಧಿಯ ಸಮಯವನ್ನು ಜೈಲಿನಲ್ಲಿ ಕಳೆದಿದ್ದರು. ಆದ್ದರಿಂದ ಜಾಮೀನು ಪಡೆಯಲು ಇವರು ಯೋಗ್ಯರಾಗಿದ್ದಾರೆ.

ನಾವು ವಿಚಾರಣೆಯ ಮೇಲೆ ಪ್ರಭಾವ ಬೀರಬಹುದಾದ ಪ್ರಕರಣದ ಅರ್ಹತೆಯ ಬಗ್ಗೆ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ” ಎಂದು ಹೇಳಿದೆ.

ಅದೇ ರೀತಿ ವಿಚಾರಣೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದಿಲ್ಲ. ಹಾಗೂ 50 ರಷ್ಟು ಸಾಕ್ಷಿಗಳ ಹೇಳಿಕೆಯನ್ನುಇನ್ನೂ ದಾಖಲಿಸಲಾಗಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

 

LEAVE A REPLY

Please enter your comment!
Please enter your name here

Hot Topics

ವಿಟ್ಲ: ಅಕ್ರಮ ಗಾಂಜಾ ಸಾಗಾಟ-ಮೂವರ ಬಂಧನ

ವಿಟ್ಲ: ಮಾದಕ ವಸ್ತುಗಳಾದ ಎಂಡಿಎಮ್ಎ, ಗಾಂಜಾವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ವಿಟ್ಲದಲ್ಲಿ ನಡೆದಿದೆ.ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನೆಲ್ಲಿಗುಡ್ಡೆ ನಿವಾಸಿ...

ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಭೂಕುಸಿತ: ವಾಹನ ಸವಾರರ ಪರದಾಟ

ಸುಳ್ಯ: ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತವಾಗಿದ್ದು, ಇದರಿಂದ ಹೆದ್ದಾರಿಯಲ್ಲಿ ಸ್ವಲ್ಪ ಪ್ರಮಾಣದ ಟ್ರಾಫಿಕ್‌ ಜಾಂ ಉಂಟಾಗಿದೆ. ವಾಹನ ಸವಾರರು ಪರದಾಡುತ್ತಿದ್ದಾರೆ. ಮಡಿಕೇರಿ ತಾಲೂಕಿನ ಮದೆನಾಡು-ಜೋಡುಪಾಲ ನಡುವೆ ರಸ್ತೆಗೆ ಮಣ್ಣು ಕುಸಿದಿದೆ.ಚರಂಡಿಗೆ ಮಣ್ಣು ಬಿದ್ದಿದ್ದರಿಂದ...

ಸುಳ್ಯ: ವಿದ್ಯುತ್ ಶಾಕ್ ಹೊಡೆದು ನಾಲ್ಕು ವರ್ಷದ ಮಗು ಕೊನೆಯುಸಿರು

ಪುತ್ತೂರು: ವಿದ್ಯುತ್ ಶಾಕ್ ಹೊಡೆದು 4 ವರ್ಷದ ಮಗುವೊಂದು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಇಂದು ನಡೆದಿದೆ.ಕೆದಂಬಾಡಿ ಗ್ರಾಮದ ಗಟ್ಟಮನೆ ನಿವಾಸಿ ಅಲಿ ಎಂಬವರ ನಾಲ್ಕು ವರ್ಷದ ಮಗು ವಿದ್ಯುತ್ ಶಾಕ್‌ನಿಂದ...