Tuesday, March 28, 2023

ಅಪ್ಪ ಅಮ್ಮನ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಅನಿವಾಸಿ ಭಾರತೀಯ ಯುವಕ ಶೀಲ್..!

ಮಂಗಳೂರು: ಮಂಗಳೂರು ಮೂಲದ ದಂಪತಿಯನ್ನು ಅವರ ಮಗನೇ ಚೂರಿಯಿಂದ ಇರಿದು ಭೀಕರವಾಗಿ ಕೊಲೆಗೈದ ಘಟನೆ ನ್ಯೂಜಿಲಂಡ್ ದೇಶದ ಆಕ್ಲೆಂಡ್ ನಗರದಲ್ಲಿ ನಡೆದಿದೆ. ಮೂಲತಃ ಮಂಗಳೂರಿನ ಬಲ್ಮಠ ನಿವಾಸಿಗಳಾಗಿದ್ದ ಕ್ರಿಶ್ಚಿಯನ್ ದಂಪತಿ ಎಲ್ಸಿ ಬಂಗೇರ ಮತ್ತು ಆಕೆಯ ಪತಿ ಹರ್ಮನ್ ಬಂಗೇರ ಕೊಲೆಯಾದವರು. 23 ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ ಪುತ್ರ ಶೀಲ್ ಎಂಬಾತ ತನ್ನ ಮನೆಯಲ್ಲೇ ಕೊಲೆ ಮಾಡಿದ್ದಾನೆ. ಐದು ದಿನಗಳ ಹಿಂದೆ ಘಟನೆ ನಡೆದಿದ್ದು ಹೆತ್ತವರಿಗೆ ಚೂರಿಯಿಂದ ಇರಿದ ಬಳಿಕ ತಾನು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಳಿಕ ಸ್ಥಳೀಯರು ಗಮನಿಸಿ, ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.ಎಲ್ಸಿ ಮತ್ತು ಹರ್ಮನ್ ಮಂಗಳೂರಿನವರು. ಎಲ್ಸಿಯ ತಂದೆ ಎಡ್ವರ್ಡ್ ಅಮ್ಮನ್ನ ಬಲ್ಮಠದ ಶಾಂತಿ ಕೆಥಡ್ರಲ್ ನಲ್ಲಿ ಸಂಡೇ ಸ್ಕೂಲ್ ನಲ್ಲಿ ಶಿಕ್ಷಕರಾಗಿದ್ದರು.

ಮರ್ಕೆರಾ ಹಿಲ್ ಚರ್ಚ್ ನಲ್ಲಿ ಹಿರಿಯರಾಗಿ ಗೌರವ ಹೊಂದಿದ್ದರು.‌ಹರ್ಮನ್ ಮುಂಬೈನ ಶಾಲೆ ಒಂದರಲ್ಲಿ ಆಡಳಿತಾಧಿಕಾರಿ ಆಗಿದ್ದರು. ಮುಂಬೈನಲ್ಲಿ ಗೋದ್ರೆಜ್ ಕಂಪನಿಯಲ್ಲಿ ಉದ್ಯೋಗ ಹೊದಿದ್ದ ಎಲ್ಸೀ ಬಳಿಕ ಮದುವೆಯಾಗಿದ್ದರು.

ಆನಂತರ ದಂಪತಿ ಗೋವಾದಲ್ಲಿ ನೆಲೆಸಿದ್ದರು. ಮಗನ ಉನ್ನತ ಮತ್ತು ಉತ್ತಮ ವಿದ್ಯಾಭ್ಯಾಸಕ್ಕಾಗಿ ದಂಪತಿ 2007ರಲ್ಲಿ ನ್ಯೂಜಿಲ್ಯಾಂಡ್ ತೆರಳಿದ್ದರು.

2014ರಲ್ಲಿ ಮಗ ಪದವಿ ಪಡೆದಾಗ ತೆಗೆಸ್ಕೊಂಡಿದ್ದ ಚಿತ್ರವನ್ನು ತಂದೆ ಹರ್ಮನ್ ಇತ್ತೀಚೆಗಷ್ಟೇ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು.

ಆದರೆ, ಮಗ ಇತ್ತೀಚಿನ ದಿನಗಳಲ್ಲಿ ಹೆತ್ತವರಿಂದ ದೂರವಿರಲು ಬಯಸಿದ್ದ. ಜೊತೆಗೆ ತನ್ನಿಚ್ಚೆಗೆ ಸರಿ ಕಂಡಂತೆ ವರ್ತಿಸುತ್ತಿದ್ದ. ಇದೇ ಕಾರಣಕ್ಕೆ ಹೆತ್ತವರ ಜೊತೆ ಜಗಳವಾಗುತ್ತಿತ್ತು.ಎನ್ನಲಾಗಿದೆ.

ಇದೇ ವಿಚಾರದಲ್ಲಿ ಕಳೆದ ಶುಕ್ರವಾರ ಜಗಳ ನಡೆದಿದ್ದು, ಕ್ರುದ್ಧಗೊಂಡ ಶೀಲ್ ಹೆತ್ತವರ ಮೇಲೆ ಚೂರಿಯಿಂದ ಇರಿದಿದ್ದ. ಹೆತ್ತವರು ಸತ್ತರೆಂದು ಗೊತ್ತಾಗಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈಗ ಆಕ್ಲೆಂಡ್‌ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಸೌದಿ ಅರೇಬಿಯಾದಲ್ಲಿ ಭೀಕರ ರಸ್ತೆ ಅಪಘಾತ-20 ಉಮ್ರಾ ಯಾತ್ರಾರ್ಥಿಗಳ ದಾರುಣ ಮೃತ್ಯು..!

ಸೌದಿ ಅರೇಬಿಯಾದಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಕನಿಷ್ಠ 20 ಉಮ್ರಾ ಯಾತ್ರಿಕರು ಸಾವನ್ನಪ್ಪಿದ್ದಾರೆ ಮತ್ತು 29 ಮಂದಿ ಗಾಯಗೊಂಡಿದ್ದಾರೆ.ಜಿದ್ದಾ: ಸೌದಿ ಅರೇಬಿಯಾದಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಕನಿಷ್ಠ 20 ಉಮ್ರಾ...

ಪತ್ನಿ ಆತ್ಮಹತ್ಯೆ ಬಗ್ಗೆ ಸಂಶಯ- ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ಠಾಣೆ ಮೆಟ್ಟಲೇರಿದ ಪತಿ..!

ತನ್ನ ಪತ್ನಿ ಆತ್ಮಹತ್ಯೆ ಮಾಡಿದ ಬಗ್ಗೆ ಸಂಶಯವಿದ್ದು, ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಪತಿ ಜಿಲ್ಲಾ ಪೋಲೀಸ್ ವರಿಷ್ಢಾಧಿಕಾರಿಗೆ ಮನವಿ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ...

ಸೌದಿ ರಸ್ತೆ ಅಪಘಾತದಲ್ಲಿ ಉಸಿರು ಚೆಲ್ಲಿದ ಮಂಗಳೂರು ಮಲ್ಲೂರಿನ ಸುಲೇಮಾನ್..!

ಸೌದಿ ಅರೇಬಿಯಾದ ಜುಬೈಲ್ ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಂಗಳೂರು ತಾಲೂಕಿನ ಮಲ್ಲೂರು ನಿವಾಸಿ ಮೃತಪಟ್ಟಿದ್ದಾರೆ.ಮಂಗಳೂರು : ಸೌದಿ ಅರೇಬಿಯಾದ ಜುಬೈಲ್ ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಂಗಳೂರು ತಾಲೂಕಿನ ಮಲ್ಲೂರು...