ಪುತ್ತೂರು: ಟಿಪ್ಪು ನಿಮ್ಮ ಅಪ್ಪನ, ಚಿಕ್ಕಪ್ಪನ, ದೊಡ್ಡಪನಾ? ಎಂದು ವಿಎಚ್‌ಪಿಯ ವಿಭಾಗೀಯ ಸಂಚಾಲಕ ಶರಣ್ ಪಂಪ್‌ವೆಲ್ ಎಸ್‌ಡಿಪಿಐ ಸಂಘಟನೆಗೆ ಪ್ರಶ್ನೆ ಮಾಡಿದ್ದಾರೆ.
ನಿನ್ನೆ 75ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಕಬಕ ಗ್ರಾಪಂ ವತಿಯಿಂದ ನಡೆದ ಸ್ವಾತಂತ್ರ್ಯ ರಥಯಾತ್ರೆಗೆ ಅಡ್ಡಿಪಡಿಸಿದ ಎಸ್‌ಪಿಐ ವಿರುದ್ಧ ಇಂದು ಪುತ್ತೂರು ಹೊರವಲಯದ ಕಬಕ ಜಂಕ್ಷನ್ ಶ್ರೀ ಮಹಾದೇವಿ ದೇವಸ್ಥಾನದ ದ್ವಾರದ ಎದುರು ಪ್ರತಿಭಟನೆ ನಡೆಯಿತು.
ಈ ವೇಳೆ ಮಾತನಾಡಿದ ಶರಣ್ ಪಂಪ್‌ವೆಲ್, ರಥಯಾತ್ರೆಯಲ್ಲಿದ್ದ ವೀರ ಸಾವರ್ಕರ್ ಫೊಟೋ ತೆಗೆದು ಟಿಪ್ಪುವಿನ ಭಾವಚಿತ್ರ ಹಾಕುವಂತೆ ಒತ್ತಡ ಹೇರಿದ್ದಾರೆ. ಟಿಪ್ಪು ಓರ್ವ ಹಿಂದೂ ವಿರೋಧಿ, ರಾಷ್ಟ್ರವಿರೋಧಿ, ಎಸ್‌ಡಿಪಿಐ ಸಹ ರಾಷ್ಟ್ರವಿರೋಧಿ ಸಂಘಟನೆ ಮತ್ತು ಪಕ್ಷ. ಅದನ್ನು ನಿಷೇಧಿಸಬೇಕೆಂದು ರಾಜ್ಯ, ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದು ಹೇಳಿದರು.
ಈ ವೇಳೆ ಬಜರಂಗದಳ ದಕ್ಷಿಣ ಪ್ರಾಂತ ವಿಭಾಗ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ, ಕಬಕ ಪಂಚಾಯ್‌ನಿಂದ ಆರಂಭವಾದ ಯಾತ್ರೆಯನ್ನು ತಡೆಹಿಡಿಯುತ್ತಾರೆ. ಜಗತ್ತಿನಲ್ಲಿ 42 ವರ್ಷ ಕರಿನೀರಿನ ಶಿಕ್ಷೆ ಅನುಭವಿಸಿದ ಏಕೈಕ ವ್ಯಕ್ತಿ ವೀರ ಸಾವರ್ಕರ್. ಆ ಮಹಾನ್ ವ್ಯಕ್ತಿಯ ಭಾವಚಿತ್ರವನ್ನು ತೆಗೆಯಲು ಹೇಳುತ್ತಾರೆ. ರಥಯಾತ್ರೆ ನಿಲ್ಲಿಸಿದವರಿಗೆ ಸರಿಯಾಗಿ ವೀರ ಸಾವರ್ಕರ್ ಉಚ್ಛಾರ ಮಾಡಲು ಬರುವುದಿಲ್ಲ, ಅಂತವರು ರಥಯಾತ್ರೆ ನಿಲ್ಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಪೊಲೀಸರನ್ನು ಪ್ರಶ್ನಿಸಿದ ಶರಣ್
ನಿನ್ನೆ ಹಿಂದೂ ಸಂಘಟನೆಯವರು ದೂರು ಕೊಡಲು ಹೋದಾಗ ಅಲ್ಲಿನ ಪೊಲೀಸ್ ಸಿಬ್ಬಂದಿ ಹೇಳುತ್ತಾರಂತೆ, ಅವರಿಗೆ ಶಿಕ್ಷಣದ ಜ್ಞಾನ ಇಲ್ಲ. ಅವರಿಗೆ ಸ್ವಾತಂತ್ರ್ಯ ಹೋರಾಟ ಮಾಡಿದವರು ಯಾರು ಗೊತ್ತಿಲ್ಲ. ಅವರು ನಾಲ್ಕನೆ ಕ್ಲಾಸು ಕಲಿತವರು ಅವರ ಮೇಲೆ ದೇಶದ್ರೋಹದ ಕೇಸು ದಾಖಲಿಸಲು ಆಗಲ್ಲ ಬದಲಿಗೆ ರಥಯಾತ್ರೆ ತಡೆದ ಬಗ್ಗೆ ಕೇಸು ದಾಖಲಿಸಬಹುದು ಎಂದು ಹೇಳಿದ್ದಾರೆ. ರೀ ಸ್ವಾಮಿ ಅವರು ಅನಕ್ಷರಸ್ಥರು ನೀವು ಉನ್ನತ ಶಿಕ್ಷಣ ಪಡೆದು ಇಲಾಖೆಗೆ ಸೇರಿದ್ದೀರಾ ನಿಮಗೆ ಗೊತ್ತಿಲ್ಲವೇ ಎಂದು ಪೊಲೀಸರನ್ನು ಪ್ರಶ್ನಿಸಿದರು.
ಇದೇ ವೇಳೆ ಆ.17 ರಂದು ಪುತ್ತೂರಿನಲ್ಲಿ ವೀರ ಸಾವರ್ಕರ್ ರಥ ಯಾತ್ರೆಯನ್ನು ನಾವು ಮಾಡಲಿದ್ದು ಮುಂದಿನ ದಿನ ದೇಶ ವ್ಯಾಪಿಯಾಗಿ ರಥ ಯಾತ್ರೆ ಕೈಗೊಳ್ಳಲಾವುದು ತಾಕತ್ತಿದ್ದರೆ ಎಸ್ ಡಿ ಪಿ ಐ ರಥ ಯಾತ್ರೆಯನ್ನು ತಡೆಯಲಿ ಎಂದು ಪ್ರತಿಭಟನಾಕಾರರು ಸವಾಲು ಹಾಕಿದರು.
ವಿಎಚ್‌ಪಿಯ ವಿಭಾಗೀಯ ಸಂಚಾಲಕ ಶರಣ್ ಪಂಪ್‌ವೆಲ್, ಗಣರಾಜ ಭಟ್ ಕೆದಿಲ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಅಳ್ವ ಪ್ರತಿಭಟನೆಯಲ್ಲಿ ಮಾತನಾಡಿದರು.
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ನಡೆಯುತ್ತಿರುವ ಕರಾವಳಿ ಉತ್ಸವದ ಅಂಗವಾಗಿ ಬಹು ನಿರೀಕ್ಷಿತ ಬೀಚ್ ಉತ್ಸವ ಇಂದು ಆರಂಭವಾಗಲಿದೆ.
ಇಂದು ಮತ್ತು ನಾಳೆ ಎರಡು ದಿನಗಳ ಕಾಲ ತಣ್ಣೀರು ಬಾವಿ ಬೀಚ್ ನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಂಜೆ 6 ಗಂಟೆಗೆ ನೃತ್ಯೋತ್ಸವ ಹಾಗೂ ರಾತ್ರಿ 7.30 ಕ್ಕೆ ಕದ್ರಿ ಮಣಿಕಾಂತ್ ಲೈವ್ ಕಾರ್ಯಕ್ರಮ ನಡೆಯಲಿದೆ.
ಇನ್ನುಮಂಗಳಾ ಕ್ರೀಡಾಂಗಣ ಬಳಿಯ ಕರಾವಳಿ ಉತ್ಸವ ವಸ್ತು ಪ್ರದರ್ಶನ ವೇದಿಕೆಯಲ್ಲಿ ಇಂದು ಸಂಜೆ 6 ರಿಂದ ಮಂಗಳೂರು ಬಾಯ್‍ಝೋನ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ಫಿಲ್ಮಿ ಡ್ಯಾನ್ಸ್ ಹಾಗೂ ರಾತ್ರಿ 7.30 ರಿಂದ ಮಂಗಳೂರು ಪತ್ರಕರ್ತರ ಯಕ್ಷ ಮಾಧ್ಯಮದಿಂದ ಯಕ್ಷ ವೈವಿಧ್ಯ ನಡೆಯಲಿದೆ.
ಇದಲ್ಲದೆ ಕದ್ರಿ ಪಾರ್ಕಿನಲ್ಲಿ ಕಲಾಪರ್ಬ ಚಿತ್ರ ಶಿಲ್ಪ ನೃತ್ಯ ಮೇಳ ಹಾಗೂ ಮಕ್ಕಳ ಚಿತ್ರ ಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಪುತ್ತೂರು : ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕೋಲಾರ ಜಿಲ್ಲೆಯ ಕೆಜಿಎಫ್ ಪ್ರೌಢ ಶಾಲೆಯಲ್ಲಿ ಜ. 8 ಮತ್ತು 9 ರಂದು ನಡೆದ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದ ತ್ರೋಬಾಲ್ ಪಂದ್ಯಾಟದಲ್ಲಿ ಪುತ್ತೂರು ದರ್ಬೆಯ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ತಂಡದಲ್ಲಿ ಆದ್ಯ ಕೆ, ಶಾನ್ವಿ ಪ್ರೀಷ್ಮ, ಫಾತಿಮಾತ್ ಮುನವರ, ಫಾತಿಮಾತ್ ಝುಲ್ಫ, ನಿರೀಕ್ಷಾ H ಶೆಟ್ಟಿ, ಸ್ನಿಗ್ಧ, ಆಯಿಷಾತ್ ಹಿಬಾ ಉತ್ತಮ ಪ್ರದರ್ಶನವನ್ನು ನೀಡಿ ಗೆಲುವಿಗೆ ಕಾರಣೀಭೂತರಾದರು. ಹಿಬಾ ಉತ್ತಮ ಆಟಗಾರ್ತಿಯಾಗಿ ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡರು.
ತಂಡಕ್ಕೆ ದೈಹಿಕ ಶಿಕ್ಷಕರಾದ ನಿರಂಜನ್ ಹಾಗೂ ಅಕ್ಷಯ್ ತರಬೇತಿಯನ್ನು ನೀಡಿದ್ದಾರೆ. ತಂಡದ ವ್ಯವಸ್ಥಾಪಕಿಯಾಗಿ ಅನಿತಾಸಿಯ ಗೋನ್ಸಲ್ವಸ್ ಇವರು ತಂಡವನ್ನು ಮುನ್ನಡೆಸಿದರು ಎಂಬುದಾಗಿ ಶಾಲಾ ಮುಖ್ಯ ಶಿಕ್ಷಕಿ ಭಗಿಣಿ ಸೆಲಿನ್ ಪೇತ್ರ ಮಾಹಿತಿ ನೀಡಿದ್ದಾರೆ.
ಮಂಗಳೂರು : ಮೆದುಳು ನಿಷ್ಕ್ರಿಯಗೊಂಡಿದ್ದ ಶಿವಮೊಗ್ಗದ ಮಹಿಳೆಯ ಅಂಗಾಂಗ ದಾನ ಪ್ರಕ್ರಿಯೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆಯಿತು.
ಮೈಸೂರಿನ ಅಪೋಲೋ ಆಸ್ಪತ್ರೆಗೆ ರೇಖಾ ಯಕೃತ್, ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಕಣ್ಣುಗಳ ಕಾರ್ನಿಯಾವನ್ನು ಝೀರೋ ಟ್ರಾಫಿಕ್ ಮೂಲಕ ಕೊಂಡೊಯ್ಯಲಾಯಿತು.
ಶಿವಮೊಗ್ಗ ರಾಗಿಗುಡ್ಡ ನಿವಾಸಿ, ರೇಖಾ (41) ಅಂಗಾಂಗ ದಾನ ಮಾಡಿರುವ ಮಹಿಳೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ರೇಖಾ ಅಸ್ವಸ್ಥಗೊಂಡಿದ್ದರು. ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಜ.6 ರಂದು ದಾಖಲಿಸಲಾಗಿತ್ತು. ಆದರೆ, ಬ್ರೈನ್ ಡೆಡ್ ಆದ ಹಿನ್ನೆಲೆ ಅವರ ಕುಟುಂಬಸ್ಥರು ಅಂಗಾಂಗ ದಾನ ಮಾಡಲು ನಿರ್ಧರಿಸಿದರು.