Wednesday, October 5, 2022

ಟಿಪ್ಪು ನಿಮ್ಮ ಅಪ್ಪನ, ಚಿಕ್ಕಪ್ಪ, ದೊಡ್ಡಪನೇ?: ಎಸ್‌ಡಿಪಿಐಗೆ ಶರಣ್‌ ಪಂಪ್‌ವೆಲ್‌ ಪ್ರಶ್ನೆ

ಪುತ್ತೂರು: ಟಿಪ್ಪು ನಿಮ್ಮ ಅಪ್ಪನ, ಚಿಕ್ಕಪ್ಪನ, ದೊಡ್ಡಪನಾ? ಎಂದು ವಿಎಚ್‌ಪಿಯ ವಿಭಾಗೀಯ ಸಂಚಾಲಕ ಶರಣ್‌ ಪಂಪ್‌ವೆಲ್‌ ಎಸ್‌ಡಿಪಿಐ ಸಂಘಟನೆಗೆ ಪ್ರಶ್ನೆ ಮಾಡಿದ್ದಾರೆ.


ನಿನ್ನೆ 75ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಕಬಕ ಗ್ರಾಪಂ ವತಿಯಿಂದ ನಡೆದ ಸ್ವಾತಂತ್ರ್ಯ ರಥಯಾತ್ರೆಗೆ ಅಡ್ಡಿಪಡಿಸಿದ ಎಸ್‌ಪಿಐ ವಿರುದ್ಧ ಇಂದು ಪುತ್ತೂರು ಹೊರವಲಯದ ಕಬಕ ಜಂಕ್ಷನ್ ಶ್ರೀ ಮಹಾದೇವಿ ದೇವಸ್ಥಾನದ ದ್ವಾರದ ಎದುರು ಪ್ರತಿಭಟನೆ ನಡೆಯಿತು.
ಈ ವೇಳೆ ಮಾತನಾಡಿದ ಶರಣ್‌ ಪಂಪ್‌ವೆಲ್‌, ರಥಯಾತ್ರೆಯಲ್ಲಿದ್ದ ವೀರ ಸಾವರ್ಕರ್‌ ಫೊಟೋ ತೆಗೆದು ಟಿಪ್ಪುವಿನ ಭಾವಚಿತ್ರ ಹಾಕುವಂತೆ ಒತ್ತಡ ಹೇರಿದ್ದಾರೆ. ಟಿಪ್ಪು ಓರ್ವ ಹಿಂದೂ ವಿರೋಧಿ, ರಾಷ್ಟ್ರವಿರೋಧಿ, ಎಸ್‌ಡಿಪಿಐ ಸಹ ರಾಷ್ಟ್ರವಿರೋಧಿ ಸಂಘಟನೆ ಮತ್ತು ಪಕ್ಷ. ಅದನ್ನು ನಿಷೇಧಿಸಬೇಕೆಂದು ರಾಜ್ಯ, ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದು ಹೇಳಿದರು.


ಈ ವೇಳೆ ಬಜರಂಗದಳ ದಕ್ಷಿಣ ಪ್ರಾಂತ ವಿಭಾಗ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ, ಕಬಕ ಪಂಚಾಯ್‌ನಿಂದ ಆರಂಭವಾದ ಯಾತ್ರೆಯನ್ನು ತಡೆಹಿಡಿಯುತ್ತಾರೆ. ಜಗತ್ತಿನಲ್ಲಿ 42 ವರ್ಷ ಕರಿನೀರಿನ ಶಿಕ್ಷೆ ಅನುಭವಿಸಿದ ಏಕೈಕ ವ್ಯಕ್ತಿ ವೀರ ಸಾವರ್ಕರ್‌. ಆ ಮಹಾನ್‌ ವ್ಯಕ್ತಿಯ ಭಾವಚಿತ್ರವನ್ನು ತೆಗೆಯಲು ಹೇಳುತ್ತಾರೆ. ರಥಯಾತ್ರೆ ನಿಲ್ಲಿಸಿದವರಿಗೆ ಸರಿಯಾಗಿ ವೀರ ಸಾವರ್ಕರ್‌ ಉಚ್ಛಾರ ಮಾಡಲು ಬರುವುದಿಲ್ಲ, ಅಂತವರು ರಥಯಾತ್ರೆ ನಿಲ್ಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಪೊಲೀಸರನ್ನು ಪ್ರಶ್ನಿಸಿದ ಶರಣ್‌
ನಿನ್ನೆ ಹಿಂದೂ ಸಂಘಟನೆಯವರು ದೂರು ಕೊಡಲು ಹೋದಾಗ ಅಲ್ಲಿನ ಪೊಲೀಸ್‌ ಸಿಬ್ಬಂದಿ ಹೇಳುತ್ತಾರಂತೆ, ಅವರಿಗೆ ಶಿಕ್ಷಣದ ಜ್ಞಾನ ಇಲ್ಲ. ಅವರಿಗೆ ಸ್ವಾತಂತ್ರ್ಯ ಹೋರಾಟ ಮಾಡಿದವರು ಯಾರು ಗೊತ್ತಿಲ್ಲ. ಅವರು ನಾಲ್ಕನೆ ಕ್ಲಾಸು ಕಲಿತವರು ಅವರ ಮೇಲೆ ದೇಶದ್ರೋಹದ ಕೇಸು ದಾಖಲಿಸಲು ಆಗಲ್ಲ ಬದಲಿಗೆ ರಥಯಾತ್ರೆ ತಡೆದ ಬಗ್ಗೆ ಕೇಸು ದಾಖಲಿಸಬಹುದು ಎಂದು ಹೇಳಿದ್ದಾರೆ. ರೀ ಸ್ವಾಮಿ ಅವರು ಅನಕ್ಷರಸ್ಥರು ನೀವು ಉನ್ನತ ಶಿಕ್ಷಣ ಪಡೆದು ಇಲಾಖೆಗೆ ಸೇರಿದ್ದೀರಾ ನಿಮಗೆ ಗೊತ್ತಿಲ್ಲವೇ ಎಂದು ಪೊಲೀಸರನ್ನು ಪ್ರಶ್ನಿಸಿದರು.
ಇದೇ ವೇಳೆ ಆ.17 ರಂದು ಪುತ್ತೂರಿನಲ್ಲಿ ವೀರ ಸಾವರ್ಕರ್ ರಥ ಯಾತ್ರೆಯನ್ನು ನಾವು ಮಾಡಲಿದ್ದು ಮುಂದಿನ ದಿನ ದೇಶ ವ್ಯಾಪಿಯಾಗಿ ರಥ ಯಾತ್ರೆ ಕೈಗೊಳ್ಳಲಾವುದು ತಾಕತ್ತಿದ್ದರೆ ಎಸ್ ಡಿ ಪಿ ಐ ರಥ ಯಾತ್ರೆಯನ್ನು ತಡೆಯಲಿ ಎಂದು ಪ್ರತಿಭಟನಾಕಾರರು ಸವಾಲು ಹಾಕಿದರು.
ವಿಎಚ್‌ಪಿಯ ವಿಭಾಗೀಯ ಸಂಚಾಲಕ ಶರಣ್‌ ಪಂಪ್‌ವೆಲ್‌, ಗಣರಾಜ ಭಟ್ ಕೆದಿಲ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಅಳ್ವ ಪ್ರತಿಭಟನೆಯಲ್ಲಿ ಮಾತನಾಡಿದರು.

LEAVE A REPLY

Please enter your comment!
Please enter your name here

Hot Topics

ಮಹಾನವಮಿ ಸಂಭ್ರಮ: ಕಟೀಲು ಕ್ಷೇತ್ರದಲ್ಲಿ ಮಹಾ ರಂಗ ಪೂಜೆ

ಮಂಗಳೂರು: ಪುರಾಣ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಹಾನವಮಿ ಪ್ರಯುಕ್ತ ಮಹಾ ರಂಗ ಪೂಜೆ ನಡೆಯಿತು. ಆರು ನೂರಕ್ಕೂ ಹೆಚ್ಚು ವಿಶಿಷ್ಟ ಆರತಿಗಳಿಂದ ಸುಮಾರು ಒಂದೂಕಾಲು ಗಂಟೆಗಳ ಕಾಲ ನಡೆದ ಮಹಾಪೂಜೆಯನ್ನು...

ಎಲ್‌ಇಡಿ ಟಿ.ವಿ ಬ್ಲಾಸ್ಟ್‌..! : ಬಾಲಕ ಸಾವು-ಮನೆ ಗೋಡೆ ಕುಸಿತ

ಲಕ್ನೋ: ಎಲ್‌ಇಡಿ ಟಿ.ವಿ ಸ್ಪೋಟಗೊಂಡ ಪರಿಣಾಮ ಬಾಲಕನೊಬ್ಬ ಸಾವನಪ್ಪಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.ಮೃತ ಬಾಲಕನನ್ನು ಓಮೇಂದ್ರ (16) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಟಿವಿ ನೋಡುತ್ತಿದ್ದ ಸಂದರ್ಭ ಎಲ್ ಐಡಿ ಟಿವಿ...

ಅರಬ್‌ ನಾಡಲ್ಲಿ ನೂತನ ಹಿಂದೂ ದೇವಾಲಯ: ಉದ್ಘಾಟಿಸಿದ UAE ಸಚಿವ ಶೇಖ್ ನಹ್ಯಾನ್

ದುಬೈ(ಯುಎಇ): ಅರಬ್‌ ನಾಡಲ್ಲಿ ಮೊಟ್ಟ ಮೊದಲ ಸ್ವತಂತ್ರ ಹಿಂದೂ ದೇವಾಲಯ ನಿರ್ಮಾಣಗೊಂಡಿದ್ದು, ನಿನ್ನೆ ಉದ್ಘಾಟನೆಗೊಂಡಿದೆ.ಯುಎಇಯ ಜೆಬೆಲ್‌ ಆಲಿಯಲ್ಲಿರುವ ಆರಾಧನಾ ಗ್ರಾಮದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ. ಈ ಮೂಲಕ ಭಾರತೀಯರ ದಶಕದ ಕನಸು ಈಡೇರಿದೆ.ಯುಎಇಯ...