Saturday, November 27, 2021

30 ವರ್ಷದ ಹುಡುಗಿಯ ಮದುವೆ ವಿಷಯ ಬಿಡಿ, 55 ವರ್ಷವಾದರೂ ಮದುವೆಯಾಗದ ಶೋಭಾ ಕುರಿತು ಚೈತ್ರಾ ಕುಂದಾಪುರ ಯಾಕೆ ಪ್ರಶ್ನೆ ಎತ್ತುತ್ತಿಲ್ಲ: ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಪ್ರಶ್ನೆ

ಮಂಗಳೂರು: 30 ವರ್ಷದ ಹುಡುಗಿ ಕುರಿತು ಮದುವೆ ವಿಚಾರವಾಗಿ ಮಾತನಾಡುವ ಚೈತ್ರಾ ಕುಂದಾಪುರ ಅವರೇ, ನಿಮ್ಮದೇ ಕ್ಷೇತ್ರದ ಸಂಸದೆ ಜೊತೆಗೆ ನನ್ನ ಊರಿನ ಹೆಣ್ಣು ಮಗಳು ಶೋಭಾ ಕರಂದ್ಲಾಜೆಗೆ 55 ವರ್ಷ ಪ್ರಾಯ ಆದ್ರೂ ಮದುವೆ ಆಗದ ಕುರಿತು ನೀವು ಯಾಕೆ ಪ್ರಶ್ನೆ ಎತ್ತಿಲ್ಲ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದ್ದಾರೆ.


ಈ ಬಗ್ಗೆ ನಗರದ ಕಾಂಗ್ರೆಸ್‌ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದೂ ಸಮಾಜದಲ್ಲಿ ಮದುವೆಯಾದ ಮೇಲೆ ಗಂಡನ ಹೆಸರು ಸೇರಿಸುವುದು ಸಂಸ್ಕೃತಿ. ಸಂಸದೆ ಶೋಭಾ ಯಾರ ಹೆಸರನ್ನೂ ತನ್ನ ಹೆಸರ ಜೊತೆ ಸೇರಿಸಿಲ್ಲ ಆದ ಕಾರಣ ಅವರಿಗೆ ಗೌರವ ನೀಡುತ್ತಿದ್ದೇವೆ. ಆಕೆ ಬಂಟ ಸಮುದಾಯದ ಹುಡುಗಿಯ ಬಗ್ಗೆ ಹೇಳಿದ್ದಾಳೆ.

ಆಕೆ ಹೇಳುವ ಹಿಂದುತ್ವ ಪಕ್ಷ ರಾಜ್ಯಾಧ್ಯಕ್ಷ ಬಂಟ ಸಮುದಾಯವರು. ಆಕೆ ಮಾತನಾಡಿರುವ ಕ್ಷೇತ್ರದ ಹಾಲಿ ಶಾಸಕರು ಬಂಟ ಸಮುದಾಯವರು. ಬಂಟ ನಾಯಕತ್ವದ ಅಡಿಯಲ್ಲಿ ಬಂಟ ಸಮುದಾಯದ ಹೆಣ್ಣಿನ ಬಗ್ಗೆ ಹೇಳಬೇಕಿದ್ದರೆ ನಾನು ಚೈತ್ರಾ ಅವರಿಗೆ ಪ್ರಶ್ನೆ ಮಾಡುತ್ತೇನೆ.

ನೀವು ಸರಿ ಇದ್ದೀರಾ ಆದರೆ ಆ ಹುಡುಗಿಯನ್ನು ಪ್ರೀತಿಸುವ ಮುಸ್ಲಿಂ ಯಾರು ಅಂತ ತಿಳಿಸಿಕೊಡಿ ಇಲ್ಲಾ ಸಾರ್ವಜನಿಕವಾಗಿ ಹೆಣ್ಣುಮಕ್ಕಳ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದರು.

ಒಂದು ಕಾಲದಲ್ಲಿ ಈ ಜಿಲ್ಲೆಯಲ್ಲಿ ಹೆಣ್ಣುಮಕ್ಕಳು ವರದಕ್ಷಿಣೆ ಕೊಡಲಾರದೇ ಮದುವೆಯಾಗದೇ ಉಳಿದು ಬಿಟ್ಟಿದ್ದಾರೆ. ಅವರಿಗೆ ನೀವು ಅವಹೇಳನ ಮಾಡಿದಂತೆ ಎಂದರು. ನೀವೂ ಒಂದು ಹೆಣ್ಣು ನೀವು ಯಾವಾಗ ಮದುವೆಯಾಗುತ್ತೀರಾ ಹೇಳಿ.

ನಿಮ್ಮ ಮದುವೆಗೆ ನಾವೆಲ್ಲ ಬರುತ್ತೇವೆ. ನೀವು ಯಾರನ್ನು, ಯಾವಾಗ ಎಷ್ಟು ವರ್ಷದ ಒಳಗೆ ಮದುವೆಯಾಗುತ್ತೀರಿ ಎಂದು ಘೋಷಿಸಿ ಬಿಡಿ. ಅದು ಬಿಟ್ಟು ಇನ್ನೊಬ್ಬರ ಮಕ್ಕಳಿಗೆ ನೀವು ಬೆಲೆ ಕಟ್ಟುವ ಅಗತ್ಯ ಇಲ್ಲ ಎಂದರು.

ನಿಮ್ಮ, ಹತ್ತಿರ ಯಾರು ಈ ಮಾತನ್ನು ಹೇಳಿಸಿದ್ದಾರೋ ಅವರ ಹೆಸರು ಹೇಳಿದರು ಅವರ ಹಣೆಬರಹವೂ ಗೊತ್ತಾಗುತ್ತಿತ್ತು ಎಂದರು.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...