Connect with us

  LATEST NEWS

  ‘ಆಕ್ಯುಪಂಕ್ಚರ್’​ ಚಿಕಿತ್ಸೆ ನೆಪದಲ್ಲಿ ‘ಲೈಂಗಿಕ ದೌರ್ಜನ್ಯ’..! ಬೆಂಗಳೂರಿನ ‘ನಕಲಿ ವೈದ್ಯ’ನ ಜಾತಕ ಬಿಡಿಸಿದ ಸಿಸಿಬಿ..!

  Published

  on

  ನಗರದಲ್ಲಿ ಆಕ್ಯುಪಂಕ್ಚರ್​​ ಕ್ಲಿನಿಕ್​ ತೆಗೆದು ಚಿಕಿತ್ಸೆ ಕೊಡುವ ನೆಪದಲ್ಲಿ ಬಾಲಕಿಯರು, ಯುವತಿಯರು, ಮಹಿಳೆಯರಿಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ಜಾತಕ ಬಿಡಿಸಿದ್ದಾರೆ.

  ಬೆಂಗಳೂರು: ನಗರದಲ್ಲಿ ಆಕ್ಯುಪಂಕ್ಚರ್​​ ಕ್ಲಿನಿಕ್​ ತೆಗೆದು ಚಿಕಿತ್ಸೆ ಕೊಡುವ ನೆಪದಲ್ಲಿ ಬಾಲಕಿಯರು, ಯುವತಿಯರು, ಮಹಿಳೆಯರಿಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ಜಾತಕ ಬಿಡಿಸಿದ್ದಾರೆ. ವೆಂಕಟರಮಣ್​(57) ಬಂಧಿತ ಆರೋಪಿಯಾಗಿದ್ದಾನೆ.

  ವೈದ್ಯನೇ ಅಲ್ಲದ ಆಂಧ್ರ ಮೂಲದ ವೆಂಕಟರಮಣ್ ತನ್ನ ಮನೆ ಬಳಿಯೇ 4 ವರ್ಷದ ಹಿಂದೆ ನ್ಯಾಚುರೋಪಥಿ ಮತ್ತು ಆಕ್ಯುಪಂಕ್ಚರ್​ ಕ್ಲಿನಿಕ್​ ತೆರೆದು ಚಿಕಿತ್ಸೆ ನೀಡುವ ಹೆಸರಿನಲ್ಲಿ ಮಹಿಳೆಯರ ಅಂಗಾಗಗಳನ್ನು ಮುಟ್ಟುತಿದ್ದ ಮತ್ತು ಅವರಿಗೆ ಗೊತ್ತಿಲ್ಲದೇ ವಿಡಿಯೋಗಳನ್ನು ಮಾಡುತ್ತಿದ್ದ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.

  ಯಶವಂತಪುರ, ಬಸವನಗುಡಿ ಮತ್ತು ಸಿಇಎನ್​ ಠಾಣೆಯಲ್ಲಿ ಆರೋಪಿಯ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ.

  ಆಂಧ್ರಪ್ರದೇಶದ ಗುತ್ತಿ ಮೂಲದ ವೆಂಕಟರಮಣ್​ ಅಲಿಯಾಸ್​ ವೆಂಕಟ್, ಜಾಲಹಳ್ಳಿಯ ಬಿಇಎಲ್​ ಶಾಲೆ ಮತ್ತು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿ ಮಾರತ್​ಹಳ್ಳಿಯ ಪಿಟಿಲೆಟ್​ ಇಂಡಸ್ಟ್ರೀಟ್​ ಕಂಪನಿಯಲ್ಲಿ 10 ವರ್ಷ ವಾಣಿಜ್ಯ ವಿಭಾಗದ ವ್ಯವಸ್ಥಾಪಕ ಆಗಿದ್ದ.

  ಇದರ ನಡುವೆ ವೈದ್ಯರೊಬ್ಬರ ಸಹಾಯದಿಂದ ಮೆಜೆಸ್ಟಿಕ್​ನಲ್ಲಿನ ಆರ್ಯುರ್ವೇದ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ವೆಂಕಟರಮಣ್​ ಭಾಗವಹಿಸಿದ್ದ.

  ಆರೋಪಿ ವೆಂಕಟರಮಣ್​ ಅಲಿಯಾಸ್​ ವೆಂಕಟ್

  ಈ ವೇಳೆ ಜಯನಗರ 4ನೇ ಹಂತದಲ್ಲಿ ಆಕ್ಯೂಪೈ ಇ.ಎಂ. ಇನ್​ಸ್ಟಿಟ್ಯೂಟ್​ ಬಗ್ಗೆ ಮಾಹಿತಿ ಪಡೆದು ಅಲ್ಲಿ 2 ವರ್ಷ ಕಾಲ ತರಬೇತಿ ಪಡೆದಿದ್ದ.

  ಇದರ ಆಧಾರದ ಮೇಲೆ ಮನೆಯ ಬಳಿ 2018ರಲ್ಲಿ ಆಕ್ಯುಪಂಕ್ಚರ್​ ಕ್ಲಿನಿಕ್​ ತೆರೆದು ಚಿಕಿತ್ಸೆ ನೀಡಲು ಶುರು ಮಾಡಿದ್ದ.

  ಕ್ಲಿನಿಕ್​ಗೆ ಬರುತ್ತಿದ್ದ ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಅವರ ಬಟ್ಟೆಗಳನ್ನು ತೆಗೆಸಿ ಅಂಗಾಂಗಗಳನ್ನು ಮುಟ್ಟುತ್ತಿದ್ದ ಮತ್ತು ಅಸಭ್ಯವಾಗಿ ವರ್ತಿಸುತ್ತಿದ್ದ.

  ಈ ಬಗ್ಗೆ ರೋಗಿಗಳು ಪ್ರಶ್ನಿಸಿದರೆ ಚಿಕಿತ್ಸೆ ನೀಡುವುದು ಇದೇ ರೀತಿ ಎಂದು ಸಬೂಬು ಹೇಳಿ ಸುಮ್ಮನಾಗಿಸುತ್ತಿದ್ದ.

  ರೋಗಿಗಳ ಅರೆನಗ್ನ ವಿಡಿಯೋ, ಫೋಟೋಗಳನ್ನು ಅವರಿಗೇ ಗೊತ್ತಿಲ್ಲದಂತೆ ತನ್ನ ಮೊಬೈಲ್​ನಲ್ಲಿ ರಹಸ್ಯವಾಗಿ ಸೆರೆ ಹಿಡಿದುಕೊಂಡು ವಿಕೃತಿ ಮೆರೆಯುತ್ತಿದ್ದ.

  ಚಿಕಿತ್ಸೆಗೆ ಬಂದ 12 ವರ್ಷದ ಬಾಲಕಿಗೂ ವೆಂಕಟರಮಣ್​, ಚಿಕಿತ್ಸೆ ನೀಡುವ ನೆಪದಲ್ಲಿ ಆಕೆಯ ಬಟ್ಟೆ ತೆಗೆಸಿ ಅರೆನಗ್ನ ವಿಡಿಯೋ ಮತ್ತು ಫೋಟೋಗಳನ್ನು ತೆಗೆದುಕೊಂಡಿದ್ದ.

  ಈ ಬಗ್ಗೆ ನೊಂದ ಪಾಲಕರು, ಬಸವನಗುಡಿ ಮಹಿಳಾ ಠಾಣೆಗೆ ದೂರು ನೀಡಿದ್ದರು.

  ಎಂಟು ತಿಂಗಳ ಹಿಂದೆ ಮಹಿಳೆಯೊಬ್ಬರು ಬಲಗಾಲು ಊದಿಕೊಂಡಿದ್ದ ಕಾರಣ ಚಿಕಿತ್ಸೆಗೆಂದು ವೆಂಕಟರಮಣ್​ ಕ್ಲಿನಿಕ್​ಗೆ ಹೋಗಿದ್ದರು.

  20 ಬಾರಿ ಚಿಕಿತ್ಸೆ ಪಡೆದಿದ್ದರು. ಇದರಲ್ಲಿ ಐದು ಬಾರಿ ಕ್ಲಿನಿಕ್​ಗೆ ಮಹಿಳೆಯ ಪತಿ ಹೋಗಿರಲಿಲ್ಲ. ಈ ವೇಳೆ ಕಾಲಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಅವರ ಬಟ್ಟೆ ತೆಗೆಸಿ ಚಿಕಿತ್ಸೆ ಕೊಡಲು ಮುಂದಾದಾಗ ಮಹಿಳೆ ಪ್ರಶ್ನಿಸಿದ್ದರು.

  ಅದಕ್ಕೆ ನಿಮ್ಮ ಪತಿಗೆ ವಿಷಯ ತಿಳಿಸಿದ್ದೇನೆ ಎಂದು ಸುಳ್ಳು ಹೇಳಿ ಅವರ ಅರೆನಗ್ನ ವಿಡಿಯೋ ಮಾಡಿಕೊಂಡಿದ್ದ.

  ಇದಾದ ಕೆಲ ತಿಂಗಳ ಬಳಿಕ ಮತ್ತೊಬ್ಬ ಮಹಿಳೆ ಹೋದಾಗ ಅವರಿಗೆ ಸಬೂಬು ಹೇಳಿ ಬಟ್ಟೆ ತೆಗೆಸಿ ಚಿಕಿತ್ಸೆ ನೀಡುವ ನೆಪದಲ್ಲಿ ಅರೆನಗ್ನ ವಿಡಿಯೋ ಮಾಡುತ್ತಿದ್ದಾಗ ಸಂತ್ರಸ್ತೆ ನೋಡಿದ್ದಾರೆ.

  ತಕ್ಷಣ ವೆಂಕಟರಮಣ್​ನ ಮೊಬೈಲ್​ ತೆಗೆದುಕೊಂಡು ಪರಿಶೀಲನೆ ನಡೆಸಿದಾಗ ಹಲವು ಅಶ್ಲೀಲ ವಿಡಿಯೋ ಇರುವುದು ಗೊತ್ತಾಗಿದೆ.

  ಬಂಧನ ಭೀತಿಯಲ್ಲಿದ್ದ ಆತ ಆಂಧ್ರ ಪ್ರದೇಶಕ್ಕೆ ಪರಾರಿಯಾಗಿ ತಲೆ ಮರೆಸಿಕೊಂಡಿದ್ದ. ಸಿಸಿಬಿಯ ಮಹಿಳಾ ಸಂರಕ್ಷಣಾ ದಳ ಕಾರ್ಯಾಚರಣೆ ನಡೆಸಿ ಆಂಧ್ರಪ್ರದೇಶದ ಗುತ್ತಿ ಬಳಿ ಆರೋಪಿಯನ್ನು ಬಂಧಿಸಿ ಬೆಂಗಳೂರಿಗೆ ಕರೆ ತಂದಿದ್ದಾರೆ.

  LATEST NEWS

  PHOTOS: ರಾಧಿಕಾ ಮರ್ಚೆಂಟ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನಂತ್ ಅಂಬಾನಿ; ಯಾರೆಲ್ಲ ಭಾಗಿಯಾಗಿದ್ರು ಗೊತ್ತಾ?

  Published

  on

  ಮಂಗಳೂರು/ಮುಂಬೈ : ಉದ್ಯಮಿ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ತಮ್ಮ ಬಾಲ್ಯದ ಗೆಳತಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ಶುಕ್ರವಾರ ರಾತ್ರಿ ದಾಂಪತ್ಯ ಜೀವನಕ್ಕೆ ಪಾದರ್ಪಣೆ ಮಾಡಿದರು.


  ಮುಂಬೈನ ಜಿಯೋ ವರ್ಲ್ಡ್ ಡ್ರೈವ್‌ನಲ್ಲಿರುವ ಅಂಬಾನಿ ಒಡೆತನದ ಕನ್ವೆನ್ಷನ್ ಸೆಂಟರ್ ನಲ್ಲಿ ಅನಂತ್ ಅಂಬಾನಿ ಭಾರತೀಯ ಫಾರ್ಮಾ ಉದ್ಯಮಿಗಳಾದ ವೀರೇನ್ ಮತ್ತು ಶೈಲಾ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಜೊತೆ ಹಸೆಮಣೆ ಏರಿದ್ದಾರೆ.


  ಈ ಅದ್ಧೂರಿ ಮದುವೆಗೆ ಸೆಲೆಬ್ರಿಟಿಗಳು, ರಾಜಕಾರಣಿಗಳು, ಗಣ್ಯರು ಸಾಕ್ಷಿಯಾದರು.

   

      

   

  Continue Reading

  DAKSHINA KANNADA

  ಅಂಗಡಿ ಕಳ್ಳರ ಬಂಧನ..! ಕೃತ್ಯ ನಡೆಸಿ ಗಂಟೆಗಳಲ್ಲಿ ಕಾರ್ಯಾಚರಣೆ..!

  Published

  on

  ಮಂಗಳೂರು : ಮಂಗಳೂರಿನ ಉರ್ವದ ಕೋಟೆಕಣಿಯ ದರೋಡೆ ಪ್ರಕರಣವನ್ನು ಐದು ಘಂಟೆಯಲ್ಲಿ ಬೇಧಿಸಿರುವ ಮಂಗಳೂರು ನಗರ ಪೊಲೀಸರು ಮತ್ತೊಂದು ಸಾಧನೆ ಮಾಡಿದ್ದಾರೆ. ಉರ್ವ ಮನೆ ದರೋಡೆ ನಡೆದ ದಿನದಂದೇ ವೆಲೆನ್ಸಿಯಾದಲ್ಲಿ ನಡೆದಿದ್ದ ಅಂಗಡಿ ಕಳ್ಳತನ ಪ್ರಕರಣದ ಆರೋಪಿಗಳನ್ನೂ ರಾತ್ರಿಯೊಳಗೆ ಬಂಧಿಸಿದ್ದಾರೆ.

  ಉರ್ವದ ದರೋಡೆ ಪ್ರಕರಣದಿಂದ ಮಂಗಳೂರು ನಗರದ ಜನ ಬೆಚ್ಚಿ ಬಿದ್ದಿರುವಾಗಲೇ ನಗರದ ವೆಲೆನ್ಸಿಯಾದಲ್ಲಿ ಅಂಗಡಿ ಕಳ್ಳತನ ನಡೆದಿತ್ತು. ಅಂಗಡಿಯ ಶಟರ್ ಮುರಿದ ಕಳ್ಳರು ಅಂಗಡಿಯ ಒಳಗಿಟ್ಟಿದ್ದ 10 ಲಕ್ಷ ನಗದು ಕದ್ದೊಯ್ದಿದ್ದರು. ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣದ ಬೆನ್ನತ್ತಿದ್ದ ಇನ್ಸ್‌ಪೆಕ್ಟರ್ ಎ.ಡಿ.ನಾಗರಾಜ್‌ ಅವರು ಕೇವಲ ನಾಲ್ಕು ಗಂಟೆಯಲ್ಲಿ ಕಳ್ಳರ ಜಾಡು ಪತ್ತೆ ಹಚ್ಚಿ ರಾತ್ರಿಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
  ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಗೆ ಇಳಿದ ಇನ್ಸ್‌ಪೆಕ್ಟರ್ ಎ.ಡಿ.ನಾಗರಾಜ್‌ ಅಂಗಡಿಯ ಸಿಸಿ ಟಿವಿ ಮೂಲಕ ಇಬ್ಬರು ಕಳ್ಳರ ಕೃತ್ಯ ಅನ್ನೋದನ್ನು ಸ್ಪಷ್ಟ ಪಡಿಸಿಕೊಂಡಿದ್ದಾರೆ. ಬಳಿಕ ಸ್ಥಳೀಯವಾಗಿ ಮಾಹಿತಿ ಸಂಗ್ರಹಿಸಿ ಅಟೋ ಚಾಲಕನ ಮೂಲಕ ಕಳ್ಳರು ರೈಲ್ವೇ ಸ್ಟೇಷನ್‌ಗೆ ಹೋಗುತ್ತಿರುವ ಹಾಗೂ ಹಿಂದಿ ಮಾತನಾಡುತ್ತಿರುವ ವಿಚಾರ ಸಂಗ್ರಹಿಸಿದ್ದಾರೆ. ಬಳಿಕ ರೈಲ್ವೇ ಸ್ಟೇಷನ್‌ನ ಸಿಸಿ ಟಿವಿ ಪರಿಶೀಲಿಸಿ ಅಂಗಡಿಯ ಸಿಸಿ ಟಿವಿಯಲ್ಲಿ ಕಾಣಿಸಿದ ವ್ಯಕ್ತಿಗಳ ಹೋಲಿಕೆಯ ವ್ಯಕ್ತಿಗಳಿಗಾಗಿ ಹುಡುಕಾಡಿದ್ದಾರೆ. ಈ ವೇಳೆ ಅದೇ ಸಾಮ್ಯತೆಯ ಇಬ್ಬರು ಎರ್ನಾಕುಲಂ ನಿಂದ ಪೂನಾ ಹೋಗುವ ರೈಲು ಹತ್ತಿರುವುದು ಪತ್ತೆ ಹಚ್ಚಿದ್ದಾರೆ.


  ಈ ಎಲ್ಲಾ ಪ್ರಕ್ರಿಯೆ ಕೇವಲ ನಾಲ್ಕು ಗಂಟೆಯಲ್ಲಿ ಮುಗಿದಿದ್ದು, ಬಳಿಕ ಪೂನಾ ರೈಲ್ವೇ ಪೊಲೀಸರ ಸಹಾಯ ಪಡೆದು ಆರೋಪಿಗಳನ್ನು ಬಂಧಿಸಲಾಗಿದೆ. ರೈಲು ಕರ್ನಾಟಕದ ಗಡಿ ದಾಟಿ ಸತ್ತಾರ ದಾಟಿದ್ದ ಕಾರಣ ಯಾವುದೇ ಕಾರಣಕ್ಕೂ ಆರೋಪಿಗಳನ್ನು ಬಿಡಬಾರದು ಎಂದು ತಕ್ಷಣ ಮಂಗಳೂರು ಪೊಲೀಸರು ಕಾರ್ಯಪ್ರವೃತ್ತರಾದ ಕಾರಣ ಈ ಆರೋಪಿಗಳ ಬಂಧನ ಸಾಧ್ಯವಾಗಿದೆ.
  ಇಬ್ಬರೂ ಆರೋಪಿಗಳು ಉತ್ತರ ಪ್ರದೇಶ ಮೂಲದವರಾಗಿದ್ದು, ಮಂಗಳೂರಿನಲ್ಲಿನ ಚಿನ್ನದ ಅಂಗಡಿ ಹಾಗೂ ಪ್ರಾವಿಜನ್ ಸ್ಟೋರ್‌ ಮಾಹಿತಿ ಪಡೆದು ಬಂದಿದ್ದಾರೆ. ಇಲ್ಲೇ ಕೆಲಸ ಹುಡುಕುವಂತೆ ಮಾಡಿ ಅಂಗಡಿಗಳನ್ನು ಗಮನಿಸಿದ್ದು, ಕಪಿತಾನಿಯೋದ ಅಂಗಡಿಯನ್ನು ಕೊಳ್ಳೆ ಹೊಡೆದು ಪರಾರಿಯಾಗಿದ್ದರು.

  Continue Reading

  LATEST NEWS

  ಕೀರ್ತಿ ಚಕ್ರ ಪಡೆದ ಹುತಾ*ತ್ಮನ ಮನೆಯಲ್ಲಿ ಬಿರುಕು..! ಪೋಷಕರು ಅತಂತ್ರ..!

  Published

  on

  ಮಂಗಳೂರು/ನವದೆಹಲಿ : ಕಳೆದ ವರ್ಷ ಸಿಯಾಚಿನ್‌ನಲ್ಲಿ ಹುತಾತ್ಮರಾದ ಅಂಶುಮಾನ್ ಸಿಂಗ್ ಅವರಿಗೆ ಜುಲೈ 5 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮರ*ಣೋತ್ತರವಾಗಿ ಕೀರ್ತಿ ಚಕ್ರವನ್ನು ನೀಡಿ ಗೌರವಿಸಿದ್ದರು. ಹುತಾ*ತ್ಮ ಯೋಧ ಅಂಶುಮಾನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್ ಮತ್ತು ಅವರ ತಾಯಿ ಮಂಜು ದೇವಿ ಈ ಗೌರವವನ್ನು ಸ್ವೀಕರಿಸಿದ್ದರು. ಆದ್ರೆ, ಹು*ತಾತ್ಮ ಮಗನ ನೆನಪಿನ ಜೊತೆ ಸೊಸೆ ಎಲ್ಲವನ್ನೂ ನಮ್ಮಿಂದ ಕಿತ್ತುಕೊಂಡಿದ್ದಾಳೆ ಅಂತ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪೋಷಕರು ಮಾಧ್ಯಮದ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.


  “ತಮ್ಮ ಮಗ ಹು*ತಾತ್ಮನಾಗಿದ್ದರೂ ಏನೂ ಸಿಗಲಿಲ್ಲ. ಸೊಸೆ ಗೌರವ ಮತ್ತು ಪರಿಹಾರದ ಮೊತ್ತ ಎರಡನ್ನೂ ತೆಗೆದುಕೊಂಡಿದ್ದಾಳೆ. ಮಗನೂ ಹೊರಟುಹೋದ, ಸೊಸೆಯೂ ಹೊರಟುಹೋದಳು. ಅಷ್ಟೇ ಅಲ್ಲದೆ, ತನ್ನ ವಿಳಾಸ ಕೂಡ ಬದಲಾಯಿಸಿಕೊಂಡಿದ್ದಾಳೆ. ಈಗ ನಮ್ಮ ಮಗನ ನೆನಪಿಗಾಗಿ ಆಕೆ ಏನೂ ಉಳಿಸಿಲ್ಲ” ಎಂದು ಮಾಧ್ಯಮದ ಮುಂದೆ ನೋವು ತೋಡಿಕೊಂಡಿದ್ದಾರೆ.

  ಜುಲೈ 19, 2023 ರಂದು ಮಗ ಹುತಾತ್ಮನಾದ ಬಳಿಕ ಸ್ಮೃತಿಯ ತಂದೆಗೆ ನಾನು ಆಕೆಯನ್ನು ನನ್ನ ಮಗಳಂತೆ ನೋಡಿಕೊಳ್ಳುವ ಭರವಸೆ ನೀಡಿದ್ದೆ. ಅಷ್ಟೇ ಅಲ್ಲದೆ ಆಕೆ ಮರು ಮದುವೆಯ ಮನಸ್ಸು ಮಾಡಿದ್ರೆ ಆಕೆಗೆ ನನ್ನ ಮಗಳಂತೆ ಮದುವೆ ಮಾಡಿಸುವುದಾಗಿಯೂ ಹೇಳಿದ್ದೆ. ಆದರೆ ಮಗನ ಹದಿಮೂರನೇ ದಿನದ ಕಾರ್ಯ ಮುಗಿದ ಬಳಿಕ ತಾಯಿ ಜೊತೆ ಹೋದ ಸ್ಮೃತಿ ಬಳಿಕ ನೊಯ್ಡಾದ ಮನೆಯನ್ನೇ ಖಾಲಿ ಮಾಡಿ ಹೋಗಿದ್ದಳು.

  ಕೀರ್ತಿ ಚಕ್ರ ತೆಗೆದುಕೊಳ್ಳಲು ಹುತಾತ್ಮನ ಯೋಧನ ಪತ್ನಿ ಹಾಗೂ ತಾಯಿ ರಾಷ್ಟ್ರಪತಿಗಳ ಮುಂದೆ ಹೋಗುವುದು ನಿಯಮ. ಹಾಗಾಗಿ ಹೋಗಿದ್ದೇವೆಯೇ ಹೊರತು ಕೀರ್ತಿ ಚಕ್ರವನ್ನು ಸರಿಯಾಗಿ ಕೈಯಲ್ಲಿ ಮುಟ್ಟುವ ಸೌಭಾಗ್ಯ ಕೂಡ ಸಿಕ್ಕಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ. ಸೇನಾಧಿಕಾರಿಗಳು ಫೋಟೋ ಕ್ಲಿಕ್ಕಿಸುವ ಸಮಯದಲ್ಲಷ್ಟೇ ಅದು ನಮ್ಮ ಕೈಗೆ ಬಂದಿತ್ತು ಎಂದಿದ್ದಾರೆ.

  ಇದನ್ನೂ ಓದಿ : ಆಂಧ್ರ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧ ಕೊ*ಲೆ ಯತ್ನ ಪ್ರಕರಣ ದಾಖಲು

  ದೇಶಕ್ಕಾಗಿ ತಮ್ಮ ಮಕ್ಕಳನ್ನು ಸಮರ್ಪಿಸಿದ ಅನೇಕ ಹೆತ್ತವರು ಇಂತಹ ಪರಿಸ್ಥಿತಿ ಎದುರಿಸುತ್ತಾರೆ. ಹೀಗಾಗಿ ಸೇನಾ ಪರಿಹಾರದ ನಿಯಮದ ವಿಚಾರದಲ್ಲಿ ಬದಲಾವಣೆ ಮಾಡಬೇಕು. ಕೆಡೆಟ್ ಅಥವಾ ಅಧಿಕಾರಿ ಸೈನ್ಯಕ್ಕೆ ಸೇರಿದಾಗ, ಅವನ ಪೋಷಕರ ಹೆಸರುಗಳನ್ನು NOK ನಲ್ಲಿ ದಾಖಲಿಸಲಾಗುತ್ತದೆ. ಆದ್ರೆ ವಿವಾಹವಾದಾಗ, ಸೇನಾ ನಿಯಮಗಳ ಅಡಿಯಲ್ಲಿ ಪೋಷಕರನ್ನು ತೆಗೆದು ಸಂಗಾತಿಯ ಹೆಸರನ್ನು ದಾಖಲಿಸಲಾಗುತ್ತದೆ. ಹೀಗಾಗಿ, ಈ ನಿಯಮಕ್ಕೆ ತಿದ್ದುಪಡಿ ತರಬೇಕು ಎಂದು ರಕ್ಷಣಾ ಸಚಿವರಲ್ಲಿ ಮನವಿ ಮಾಡುವುದಾಗಿ ಅಂಶುಮಾನ್ ಸಿಂಗ್ ಅವರ ತಂದೆ ಹೇಳಿದ್ದಾರೆ.

  Continue Reading

  LATEST NEWS

  Trending