ಉಪ್ಪಿನಂಗಡಿ: ಆಟೋ ಚಾಲಕನೊಬ್ಬ ಅಪ್ರಾಪ್ತ ಬಾಲಕಿ ಜತೆ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದಲ್ಲದೆ, ಆಕೆಯ ನಗ್ನಚಿತ್ರವನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದು ಮತ್ತೆ ಮತ್ತೆ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ ಪ್ರಕರಣ ಜಿಲ್ಲೆಯ ನೆಲ್ಯಾಡಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ನೌಫಲ್ ಎಂದು ಗುರುತಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿಯ ಆಟೋ ಚಾಲಕ ನೌಫಲ್ ಎಂಬಾತನ ಕಿರುಕುಳ ಸಹಿಸಲಾಗದೆ ತನ್ನ ತಂದೆ-ತಾಯಿ ಬಳಿ ತಾನು ಅನುಭವಿಸಿದ ನರಕಯಾತನೆಯನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಬಳಿಕ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಮೂರು ವರ್ಷದ ಹಿಂದೆ ಬಾಲಕಿ ಶಾಕೆಗೆ ಹೋಗುತ್ತಿದ್ದ ಸಂದರ್ಭ ಪರಿಚಯವಾದ ಅಟೋ ಚಾಲಕ ನೌಫಲ್ ನಂತರ ಮೊಬೈಲ್ ನಂಬರ್ ಪಡೆದಿದ್ದ, ನಂತರ ಆಕೆಯನ್ನ ಪುಸಲಾಯಿಸಿ ಕರೆದೊಯ್ದು ಮನೆಯಲ್ಲಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ.
ಈ ವೇಳೆ ಮೊಬೈಲ್‌ನಲ್ಲಿ ಆತನೇ ಈ ಕೃತ್ಯವನ್ನು ಸೆರೆಹಿಡಿದಿದ್ದಾನೆ. ನಂತರ ಅದೇ ವಿಡಿಯೋವನ್ನು ಮತ್ತೆ ಮತ್ತೆ ತೋರಿಸಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ಇದರಿಂದ ರೋಸಿಹೋದ ಬಾಲಕಿ ತಾಯಿಗೆ ವಿಷಯ ತಿಳಿಸಿದ್ದಾಳೆ.
ಬಳಿಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪೋಕ್ಸೋ ಕಾಯ್ದೆಯಡಿ ಆರೋಪಿ ನೌಫಲ್ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.