DAKSHINA KANNADA
ಪುತ್ತೂರು : ಅಪ್ರಾಪ್ತೆ ಮತ್ತು ಕಾಲೇಜ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ -ಆರೋಪಿ ನಿತೀಶ್ ರೈ ವಿರುದ್ದ ದೂರು ದಾಖಲು..!
Published
2 years agoon
By
Adminಪುತ್ತೂರು: ವಿದ್ಯಾರ್ಥಿನಿಯಾಗಿರುವ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿರುವ ಮತ್ತು ಕಾಲೇಜೊಂದರ ವಿದ್ಯಾರ್ಥಿನಿಯಾಗಿರುವ ಯುವತಿಗೆ ಕಿರುಕುಳ ನೀಡಿ ಬೆದರಿಕೆಯೊಡ್ಡಿರುವ ಆರೋಪದಲ್ಲಿ ಯುವಕನೊಬ್ಬನ ವಿರುದ್ಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪೊಕ್ಸೋ ಬೆದರಿಕೆಯ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಮಡ್ಯಂಗಳ ನಿವಾಸಿ ಭುಜಂಗ ರೈ ಅವರ ಪುತ್ರ ನಿತೀಶ್ ರೈ ಆರೋಪಿಯಾಗಿದ್ದಾನೆ.
ನಿತಿನ್ ರೈ 2020 ರ ಜನವರಿ ತಿಂಗಳಲ್ಲಿ ಅಪ್ರಾಪ್ತ ವಯಸ್ಸಿನವಳಾಗಿದ್ದ ಬಾಲಕಿಯೊಬ್ಬಳನ್ನು ಪ್ರೀತಿ ಮಾಡುವಂತೆ ಒತ್ತಾಯಿಸಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.
ಪದೇ ಪದೇ ಆಕೆಗೆ ಮೊಬೈಲ್‍ಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದಲ್ಲದೆ, ನಿನ್ನ ಕುರಿತು ಅಪಪ್ರಚಾರ ಮಾಡುತ್ತೇನೆ ಎಂದು ಬ್ಲಾಕ್‍ಮೇಲ್ ಮಾಡಿದ್ದಾನೆ.
ಈ ವಿಚಾರವನ್ನು ಯಾರಲ್ಲಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.
ಕಿರುಕುಳ ನೀಡಿದ ಸಂದರ್ಭದಲ್ಲಿ ಅಪ್ರಾಪ್ತೆಯಾಗಿದ್ದ ಬಾಲಕಿ ಇದೀಗ ಪ್ರಾಪ್ತ ವಯಸ್ಸಿಗೆ ಬಂದ ಬಳಿಕ ತಡವಾಗಿ ದೂರು ನೀಡಿದ್ದಾರೆ.
ಪೊಲೀಸರು ಆಕೆಯ ದೂರಿನಂತೆ ಆರೋಪಿಯ ವಿರುದ್ಧ ಪೋಕ್ಸೋ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆದರಿಕೆ ಪ್ರಕರಣ:
ಪೊಕ್ಸೋ ಪ್ರಕರಣದ ಜತೆಗೆ ಆರೋಪಿ ನಿತೀಶ್ ರೈ ಅವರ ವಿರುದ್ಧ ಮತ್ತೊಂದು ಬೆದರಿಕೆ ಪ್ರಕರಣವೂ ದಾಖಲಾಗಿದೆ.
ಪುತ್ತೂರಿನ ಕಾಲೇಜೊಂದರಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯೊಬ್ಬಳ ಮೊಬೈಲ್‍ಗೆ ಕರೆ ಮಾಡಿ ಪದೇ ಪದೇ ಪ್ರೀತಿಸುವಂತೆ ಒತ್ತಾಯ ಮಾಡುತ್ತಿರುವುದಲ್ಲದೆ, ಕಳೆದ ಡಿ.29ರಂದು ವಿದ್ಯಾರ್ಥಿನಿಯ ಮನೆಯ ಬಳಿಗೆ ಬಂದು ಬೆದರಿಕೆಯೊಡ್ಡಿರುವ ಕುರಿತು ಆಕೆ ಸಂಪ್ಯ ಠಾಣೆಗೆ ದೂರು ನೀಡಿದ್ದಾರೆ.
ಸಂಪ್ಯ ಪೊಲೀಸರು ಆರೋಪಿಯ ವಿರುದ್ಧ ಪ್ರತ್ಯೇಕ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಇನ್ನೊಬ್ಬ ಯುವಕನ ವಿರುದ್ದವೂ ಕೇಸು…
ನಿತೇಶ್ ರೈ ವಿರುದ್ದ ದೂರು ನೀಡಿರುವವ ಪೈಕಿ, ಪ್ರಕರಣದ ಸಂದರ್ಭದಲ್ಲಿ ಅಪ್ರಾಪ್ತೆಯಾಗಿದ್ದ ಬಾಲಕಿ ಮತ್ತೊಬ್ಬಾತನ ವಿರುದ್ದವೂ ದೂರು ನೀಡಿದ್ದಾರೆ.
ಪ್ರಸ್ತುತ ಪ್ರಾಪ್ತ ವಯಸ್ಕಳಾಗಿರುವ ಆಕೆ ನೀಡಿದ ದೂರಿನಂತೆ ಕೋಡಿಯಡ್ಕ ನಿವಾಸಿ ಬೆಳಿಯಪ್ಪ ಗೌಡ ಅವರ ಪುತ್ರ, ಪುತ್ತೂರಿನ ಪರ್ಲಡ್ಕದಲ್ಲಿ ಕೋಳಿ ಫಾರ್ಮ್ ಹೊಂದಿರುವ ರಾಹುಲ್ ಎಂಬಾತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
ದೂರು ನೀಡಿರುವ ವಿದ್ಯಾರ್ಥಿನಿ ಅಪ್ರಾಪ್ತ ವಯಸ್ಸಿನವಳಾಗಿದ್ದ ಸಂದರ್ಭದಲ್ಲಿ ಆರೋಪಿ ರಾಹುಲ್ ಆಕೆಗೆ ಕೋಳಿ ಫಾರ್ಮ್‍ನಲ್ಲಿ ಲೈಂಗಿಕ ಕಿರುಕುಳ ನೀಡಿ, ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿರುವುದಾಗಿ ಆರೋಪಿಸಲಾಗಿದೆ.
ಇದೀಗ ರಾಹುಲ್ ಚರಿತ್ರೆ ಹಾಳು ಮಾಡುವುದಾಗಿ ಬೆದರಿಕೆಯೊಡ್ಡಿರುವ ಮಾಹಿತಿ ಲಭ್ಯವಾದ ಹಿನ್ನಲೆಯಲ್ಲಿ ತಡವಾಗಿ ದೂರು ನೀಡುತ್ತಿರುವುದಾಗಿ ಆಕೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
DAKSHINA KANNADA
ನರಿಂಗಾನ ಜೋಡುಕರೆ ಕಂಬಳ ಕಣ್ತುಂಬಿಕೊಂಡ ಶಾನ್ವಿ ಶ್ರೀವಾಸ್ತವ್
Published
17 hours agoon
12/01/2025By
NEWS DESK3ಉಳ್ಳಾಲ : ಕೊಣಾಜೆ ದೇರಳಕಟ್ಟೆ ಸಮೀಪದಲ್ಲಿ ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ಅವರ ಮುಂದಾಳತ್ವದಲ್ಲಿ ನಡೆಯುತ್ತಿರುವ ಲವ- ಕುಶ ಜೋಡುಕರೆ ನರಿಂಗಾನ ಜೋಡುಕರೆ ಕಂಬಳೋತ್ಸವಕ್ಕೆ ಶನಿವಾರ ಚಾಲನೆ ದೊರಕಿದ್ದು, ಸಂಜೆಯ ಸಭಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಭಾಗವಹಿಸಿದ್ದರು.
ಸಿಎಂ ಅವರನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡು ಆರತಿ ಬೆಳಗಿ ಸ್ವಾಗತಿಸಲಾಯಿತು. ಸ್ಪೀಕರ್ ಯು ಟಿ ಖಾದರ್ ಸಿಎಂ ಅವರನ್ನು ವೇದಿಕೆಗೆ ಕರೆದುಕೊಂಡು ಬಂದರು. ಸಭಾ ಕಾರ್ಯಕ್ರಮವನ್ನು ಸಿಎಂ ಅವರು ಉದ್ಘಾಟಿಸಿದರು.
ಇದನ್ನೂ ಓದಿ: ನರಿಂಗಾನ ಕಂಬಳದಲ್ಲಿ ಭಾಗಿಯಾದ ಸಿಎಂ ಸಿದ್ದರಾಮಯ್ಯ; ತುಳುವಿಗೆ ಎರಡನೇ ರಾಜ್ಯಭಾಷೆ ಸ್ಥಾನಮಾನದ ಭರವಸೆ
ಇಂದಿನ ಕಂಬಳ ಕಾರ್ಯಕ್ರಮಕ್ಕೆ ಬಂದಿದ್ದ ನಟಿ ಶಾನ್ವಿ ಶ್ರೀವಾಸ್ತವ್, ಕಂಬಳದ ಓಟವನ್ನು ಬೆರಗುಗಣ್ಣಿನಿಂದ ವೀಕ್ಷಣೆ ಮಾಡಿದರು. ಮಾತ್ರವಲ್ಲದೆ ಕಂಬಳದ ಓಟವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದುಕೊಂಡರು.
ಬೆಂಗಳೂರು: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ತೆಂಗಿನಕಾಯಿ ದರ ಭಾರಿ ಏರಿಕೆಯಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ಎಳನೀರು ಭರ್ಜರಿ ಮಾರಾಟವಾದ ಹಿನ್ನೆಲೆ ತೆಂಗಿನಕಾಯಿ ಕಡಿಮೆಯಾಗಿದ್ದು, ಈ ಹಿನ್ನೆಲೆ ದರ ಏರಿಕೆಯಾಗಿದೆ.
ಈ ಮೊದಲು ಒಂದು ತೆಂಗಿನಕಾಯಿಗೆ 20, 25, 30 ರೂ. ದರ ಇತ್ತು. ಈಗ 65 ರೂ.ವರೆಗೆ ಮಾರಾಟವಾಗುತ್ತಿದೆ. ಕೆಜಿಗೆ 32-33 ಗೆ ಮಾರಾಟವಾಗುತ್ತಿದ್ದ ತೆಂಗಿನಕಾಯಿ ಈಗ 60 ರೂ.ಗೆ ತಲುಪಿದೆ. ತೆಂಗಿನ ಇಳುವರಿ ಕಡಿಮೆಯಾಗಿದ್ದು, ಎಳನೀರಿಗೂ ಭಾರಿ ಪ್ರಮಾಣದಲ್ಲಿ ಕೊಯ್ದು ಮಾಡುವುದರಿಂದ ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನಲಾಗಿದೆ.
Ancient Mangaluru
ಕಾಸರಗೋಡು: ಗಲ್ಫ್ ನಿಂದ ಅಪ್ಪ ತಂದ ಪಿಸ್ತಾದ ಸಿಪ್ಪೆ ಗಂಟಲಲ್ಲಿ ಸಿಲುಕಿ 2 ವರ್ಷದ ಮಗು ಸಾವು
Published
17 hours agoon
12/01/2025By
NEWS DESK2ಕಾಸರಗೋಡು: ಗಲ್ಫ್ ನಿಂದ ಅಪ್ಪ ತಂದ ಪಿಸ್ತಾದ ಸಿಪ್ಪೆ ಗಂಟಲಲ್ಲಿ ಸಿಲುಕಿ 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಕುಂಬಳೆಯಲ್ಲಿ ಶನಿವಾರ ಸಂಜೆ ನಡೆದಿದೆ.
ಕುಂಬಳೆ ಭಾಸ್ಕರ ನಗರದ ಅನ್ವರ್ ಮೆಹರೂಫಾ ದಂಪತಿ ಪುತ್ರ ಅನಾಸ್ ಮೃತಪಟ್ಟ ಮಗು. ಅನಾಸ್ ಪಿಸ್ತಾವನ್ನು ತಿನ್ನುತ್ತಿದ್ದಾಗ ಸಿಪ್ಪೆ ಗಂಟಲಲ್ಲಿ ಸಿಲುಕಿದ್ದು, ಮನೆಯವರು ಸಿಪ್ಪೆಯ ಒಂದು ತುಂಡನ್ನು ಹೊರ ತೆಗೆದಿದ್ದಾರೆ. ಬಳಿಕ ಕಂದಮ್ಮನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ವೈದ್ಯರು ತಪಾಸಣೆ ನಡೆಸಿದಾಗ ಗಂಟಲಲ್ಲಿ ಯಾವುದೇ ವಸ್ತುಗಳು ಸಿಲುಕಿಲ್ಲ ಎಂದು ತಿಳಿಸಿದ್ದರಿಂದ ಮನೆಗೆ ಕರೆದುಕೊಂಡು ಬರಲಾಯಿತು.
ಆದಿತ್ಯವಾರ ಬೆಳಿಗ್ಗೆ ಬಾಲಕನಿಗೆ ಉಸಿರಾಟದ ತೊಂದರೆ ಉಂಟಾಗಿದ್ದು, ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿದು ಬಂದಿದೆ. ಊರಿಗೆ ಬಂದಿದ್ದ ತಂದೆ ಅನ್ವರ್ ಒಂದು ವಾರದ ಹಿಂದೆಯಷ್ಟೇ ಗಲ್ಫ್ ಗೆ ತೆರಳಿದ್ದರು. ಸುದ್ದಿ ತಿಳಿದು ತಂದೆ ಊರಿಗೆ ಮರಳಿದ್ದಾರೆ ಎನ್ನಲಾಗಿದೆ.
LATEST NEWS
ನರಿಂಗಾನ ಜೋಡುಕರೆ ಕಂಬಳ ಕಣ್ತುಂಬಿಕೊಂಡ ಶಾನ್ವಿ ಶ್ರೀವಾಸ್ತವ್
60 ರೂ. ಗಡಿ ದಾಟಿದ ತೆಂಗಿನಕಾಯಿ ಬೆಲೆ
ಕಾಸರಗೋಡು: ಗಲ್ಫ್ ನಿಂದ ಅಪ್ಪ ತಂದ ಪಿಸ್ತಾದ ಸಿಪ್ಪೆ ಗಂಟಲಲ್ಲಿ ಸಿಲುಕಿ 2 ವರ್ಷದ ಮಗು ಸಾವು
ಪಿಲಿಕುಳ ಕಂಬಳ ವಿಚಾರಣೆ ಜನವರಿ 21 ಕ್ಕೆ ಮುಂದೂಡಿಕೆ
ಈ ವಾರ ಬಿಗ್ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿ ಇವರೇ..!
ಮಂಗಳೂರು: ಜ. 31 ರಿಂದ ಫೆ. 2 ರ ತನಕ ತಣ್ಣೀರುಬಾವಿ ಬೀಚ್ ಫೆಸ್ಟಿವಲ್
Trending
- FILM7 days ago
ಸುದೀಪ್ ಮಗಳು ಸಾನ್ವಿ ಬಗ್ಗೆ ಯಾಕಿಷ್ಟು ಟ್ರೋಲ್? ಅವರು ಮಾಡಿದ ತಪ್ಪೇನು?
- BIG BOSS2 days ago
BBK11: ಐವರು ನಾಮಿನೇಟ್, ಕಿಚ್ಚನ ಪಂಚಾಯ್ತಿಯಲ್ಲಿ ಗೇಟ್ಪಾಸ್ ಯಾರಿಗೆ..?
- FILM5 days ago
ಗೋವಾದಲ್ಲಿ ಕೇಕ್ ಕತ್ತರಿಸಿ ಯಶ್ ಬರ್ತ್ಡೇ ಸಂಭ್ರಮ
- LATEST NEWS3 days ago
ಹಲ್ಲು ಹುಳುಕಾಗಿದ್ಯಾ.? ಈ ಮನೆಮದ್ದು ಪ್ರಯತ್ನಿಸಿ, ತಕ್ಷಣ ಎಲ್ಲಾ ಹಲ್ಲಲ್ಲಿರುವ ಹುಳುಗಳು ಹೊರ ಬರುತ್ತವೆ.!
Pingback: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಶಿಕ್ಷಕ ಜೈಲಿಗೆ - NAMMAKUDLA NEWS - ನಮ್ಮಕುಡ್ಲ ನ್ಯೂಸ್