Sunday, June 4, 2023

ಅಜ್ಜಿ ಮನೆಗೆ ಬಿಡುತ್ತೇನೆಂದು ಹೇಳಿ ಬಾಲಕನ ಮೇಲೆರಗಿದ ವಿಕೃತ ಕಾಮಿ

ಪುತ್ತೂರು: ಅಜ್ಜಿ ಮನೆಗೆ ಬಿಡುತ್ತೇನೆಂದು ಹೇಳಿ ಬಾಲಕನನ್ನು ದಾರಿ ಮಧ್ಯೆ ಅಪರಿಚಿತ ವ್ಯಕ್ತಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ.

ಕಾಸರಗೋಡು ಜಿಲ್ಲೆಯ ನೆಕ್ರಾಜೆ ನಿವಾಸಿ ಶ್ರೀಜಿತ್ (27) ಬಂಧಿತ ಆರೋಪಿ.


ಎಪ್ರಿಲ್ 22ರಂದು 9 ವರ್ಷದ ಬಾಲಕ ಹಾಲು ತರಲೆಂದು ಹೋದಾಗ ಅಪರಿಚಿತ ವ್ಯಕ್ತಿಯೊಬ್ಬ ಪರಿಚಯಸ್ಥನಂತೆ ನಟಿಸಿ ಬಾಲಕನನ್ನು ಅಜ್ಜಿ ಮನೆಗೆ ಬಿಡುತ್ತೇನೆಂದು ಬೈಕ್‌ನಲ್ಲಿ ಕೂರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದ.

ಈ ಕುರಿತು ಬಾಲಕನ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದರು.

ಇದೀಗ ತಲೆಮರೆಸಿಕೊಂಡಿದ್ದ ಆರೋಪಿ ವಿರುದ್ಧ ಪೊಲೀಸರು ಪೊಕ್ಸೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here

Hot Topics