ಉಳ್ಳಾಲ : ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತಿದ್ದ ಆರೋಪಿಗೆ ಸಾರ್ವಜನಿಕ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ತಲಪಾಡಿ ಪರಿಸರದಲ್ಲಿ ನಡೆದಿದೆ.
ಬಂಧಿತನನ್ನು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಹೊಸಬೆಟ್ಟು ನಿವಾಸಿ ಮುಸ್ತಫ(18) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿ ಮುಸ್ತಫ ಕೂಡಾ ಸ್ಕೂಟರಿನಲ್ಲಿ ಬಂದು ತಲಪಾಡಿ ಶ್ರೀ ರಾಮ ಭಜನಾ ಮಂದಿರದ ಬಳಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಲು ಯತ್ನಿಸಿದನೆನ್ನಲಾಗಿದೆ. ಈ ವೇಳೆ ಸ್ಥಳೀಯರು ಆತನನ್ನು ಹಿಡಿದು ಥಳಿಸಿ ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಇದಕ್ಕೂ ಮೊದಲು ಕಳೆದ ವಾರ ಇದೇ ಕಾಮುಕ ತಲಪಾಡಿಯ ದೇವಿಪುರಕ್ಕೆ ತೆರಳುವ ಒಳ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ. ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದ ಸ್ಥಳೀಯರು ಆರೋ ಪಿಯ ಚಹರೆಯನ್ನು ಪತ್ತೆಹಚ್ಚಿದ್ದರು.
ಕಳೆದೊಂದು ವಾರದಲ್ಲಿ ನಡೆದ ಈ ಎರಡು ಕಿರುಕುಳ ಕೃತ್ಯವನ್ನು ಆರೋಪಿ ಮುಸ್ತಫ ಎಸಗಿದ್ದನೆನ್ನಲಾಗಿದ್ದು, ಈ ಬಗ್ಗೆ ಸಂತ್ರಸ್ತೆ ಯುವತಿಯರು ನೀಡಿದ ದೂರಿನಂತೆ ಉಳ್ಳಾಲ ಪೊಲೀಸರು ಪೊಕ್ಸೋ ಸಹಿತ ಎರಡು ಪ್ರಕರಣಗಳು ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಒಳರಸ್ತೆಯಲ್ಲಿ ಪೊಲೀಸ್ ರಕ್ಷಣೆಗೆ ಒತ್ತಾಯ: ತಲಪಾಡಿ ಒಳರಸ್ತೆಯಲ್ಲಿ ಯುವತಿಯರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಇತ್ತೀಚೆಗೆ ಹೈಸ್ಕೂಲ್ ವಿದ್ಯಾರ್ಥಿನಿ ಗೆ ಕಿರುಕುಳ ನೀಡಿದ ಆರೋಪಿಯನ್ನು ಬಂಧಿಸಲಾಗಿತ್ತು. ಶೀಘ್ರವೇ ಒಳರಸ್ತೆಗಳಲ್ಲಿ ಪೊಲೀದರನ್ನು ರಕ್ಷಣೆಗೆ ನಿಯೋಜಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
ಕೇರಳಿಗರಿಂದ ಮಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಅಪರಾಧ ಕೃತ್ಯಗಳು:
ನೆರೆಯ ಕಾಸರಗೋಡು, ಕೇರಳದಿಂದ ಶಿಕ್ಷಣದ ಹೆಸರಿನಲ್ಲಿ ಮಂಗಳೂರಿಗೆ ನೂರಾರು ಯುವಕರು, ವಿದ್ಯಾರ್ಥಿಗಳು ಮಂಗಳೂರಿನೆ ಆಗಮಿಸಿ ಇಲ್ಲಿ ಪಿಜಿಗಳಲ್ಲಿ ಉಳಕೊಳ್ಳುತ್ತಿದ್ದು ಇಂತವರ ಮಧ್ಯೆ ಡ್ರಗ್ಸ್, ಪುಂಡಾಟಿಕೆ, ಸ್ಥಳೀಯ ಹೆಣ್ಮಕ್ಕಳಿಗೆ ಚುಡಾವಣೆಯಂತಹ ದುಷ್ಕೃತ್ಯಗಳು ಹೆಚ್ಚಾಗುತ್ತಿದೆ. ಮಂಗಳೂರಿನಲ್ಲಿ ಅವರು ಸಂಚರಿಸುವ ದ್ವಿಚಕ್ರ ವಾಹನಗಳಿಗೆ ನಂಬರ್ ಪ್ಲೇಟ್ ಗಳೇ ಇರಲ್ಲ,ತ್ರಿಬಲ್ ರೈಡ್, ಮಿತಿ ಮೀರಿದ ಅಜಾಗೃತೆಯ ವಾಹನ ಚಾಲನೆಗಳು ಇರಲ್ಲಿ ಮಾಮೂಲಾಗಿದೆ. ಈ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಂದ ಮಂಗಳೂರು ನಗರಕ್ಕೆ ಬರುವವರ ಮೇಲೆ ನಿಗಾ ಇಡುವ ಕಠಿಣ ನಿಯಮಾವಳಿಗಳನ್ನು ಪೊಲೀಸ್ ಇಲಾಖೆ ರೂಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ