Connect with us

LATEST NEWS

ಉಳ್ಳಾಲ: ಮಹಿಳೆಗೆ ಕಿರುಕುಳ-ಪ್ರಕರಣ ದಾಖಲು

Published

on

ಉಳ್ಳಾಲ: ಮಹಿಳೆಯೋರ್ವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮುನ್ನೂರು ಗ್ರಾಪಂ ಸದಸ್ಯನ ವಿರುದ್ಧ ನಿನ್ನೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುನ್ನೂರು ಗ್ರಾಪಂ ಸದಸ್ಯ ಬಾಬು ಶೆಟ್ಟಿ ಪ್ರಕರಣದ ಆರೋಪಿ ಎಂದು ತಿಳಿದು ಬಂದಿದೆ.

ಘಟನೆ ವಿವರ
ನಿವೇಶನ ರಹಿತ ಮಹಿಳೆಯೊಬ್ಬರು ಸೆ.18ರಂದು ಸೈಟ್‌ಗೆ ಅರ್ಜಿ ನೀಡಲೆಂದು ಮುನ್ನೂರು ಗ್ರಾಪಂಗೆ ತೆರಳಿದ್ದರು. ಈ ವೇಳೆ ಪಂಚಾಯಿತಿ ಸದಸ್ಯ ಆರೋಪಿ ಬಾಬು ಶೆಟ್ಟಿ ಮಹಿಳೆಯನ್ನು ಅಧ್ಯಕ್ಷರ ಕೊಠಡಿಗೆ ಕರೆದುಕೊಂಡು ಹೋಗಿದ್ದನು.

ಹಾಗೂ ಮಹಿಳೆಯ ಜೊತೆಗೆ ಬಂದ ಮಕ್ಕಳನ್ನು ಹೊರಗೆ ಕಳುಹಿಸಿ, ಅಧ್ಯಕ್ಷರು ಕೊಠಡಿಗೆ ಬರುವವರೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಕುರಿತ ದೃಶ್ಯಾವಳಿ ಸಿಸಿಟಿವಿಯಲ್ಲಿ ದಾಖಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಬಗ್ಗೆ ತನಿಖೆ ನಡೆಸುವಂತೆ ಡಿವೈಎಫ್‌ಐ ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಒತ್ತಾಯಿಸಿತ್ತು.
ಈ ಹಿನ್ನೆಲೆಯಲ್ಲಿ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

LATEST NEWS

45 ಮಂದಿ ರೌಡಿ ಶೀಟರ್ ಗಳನ್ನು ವಿವಿಧ ಜಿಲ್ಲೆಗಳಿಗೆ ಗಡಿಪಾರು !

Published

on

ಮಂಗಳೂರು/ಹುಬ್ಬಳ್ಳಿ : ಹುಬ್ಬಳ್ಳಿ- ಧಾರವಾಡದ 45 ಮಂದಿ ಅಪರಾಧಿಗಳನ್ನು ವಿವಿಧ ಜಿಲ್ಲೆಗೆ ಆರು ತಿಂಗಳ ಕಾಲ ಗಡೀಪಾರು ಮಾಡಿ ಪೊಲೀಸ್ ಆಯುಕ್ತ ಎನ್‌. ಶಶಿಕುಮಾರ್ ಆದೇಶಿಸಿದ್ದಾರೆ.

ಕೊಲೆ, ಕೊಲೆಯತ್ನ, ಸುಲಿಗೆ, ದರೋಡೆ, ಕಳ್ಳತನ, ಹಲ್ಲೆ, ದೊಂಬಿ, ಮಾನಭಂಗ ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದವರನ್ನು ಗುರುತಿಸಿ 45 ಜನರನ್ನು ಬೀದರ್, ಕಲಬುರಗಿ, ಯಾದಗಿರಿ, ಚಾಮರಾಜನಗರ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಗಡಿಪಾರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿದರೆ ಹೆಚ್ಚು ಲಾಭ ಆಮಿಷ; ಇಬ್ಬರು ಆರೋಪಿಗಳ ಸೆರೆ

ಹುಬ್ಬಳ್ಳಿ-ಧಾರವಾಡ ಜಿಲ್ಲೆಯನ್ನು ಅಪರಾಧ ಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ಇನ್ನೂ ಹಲವರನ್ನು ಗಡಿಪಾರು ಮಾಡಲು ಯೋಜಿಸಲಾಗಿದೆ. ಕೆಲವರು ನ್ಯಾಯಾಂಗ ವಶದಲ್ಲಿದ್ದು, ಇನ್ನು ಕೆಲವರು ತಲೆಮರೆಸಿಕೊಂಡಿದ್ದಾರೆ. ಅವರನ್ನು ಪತ್ತೆ ಮಾಡಿ ಪಟ್ಟಿ ಸಿದ್ದಪಡಿಸಲಾಗುವುದು. ಕೆಲವರ ಮೇಲೆ ಗೂಂಡಾ ಕಾಯ್ದೆ ಪ್ರಕರಣ ದಾಖಲಿಸಲು ಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಹಿಂದೆ ಎನ್. ಶಶಿಕುಮಾರ್ ಮಂಗಳೂರು ಪೊಲೀಸ್ ಆಯುಕ್ತರಾಗಿ ಕೆಲಸ ಮಾಡಿದ್ದರು.

Continue Reading

DAKSHINA KANNADA

ಕರಾವಳಿ ಉತ್ಸವ : ಸಂಗೀತ ರಸಮಂಜರಿ, ಮುಖ್ಯಮಂತ್ರಿ ಆಗಮನ

Published

on

ಮಂಗಳೂರು : ಕರಾವಳಿ ಉತ್ಸವ ವಸ್ತುಪ್ರದರ್ಶನ ವೇದಿಕೆಯಲ್ಲಿ ಇಂದು (ಜ.16) ಸಂಜೆ 6 ಗಂಟೆಯಿಂದ ಸ್ಟಾರ್ ಸಿಂಗರ್ಸ್,ಮಂಗಳೂರು ತುಳು ಚಲನಚಿತ್ರ ಕಲಾವಿದರಿಂದ ‘ಸಂಗೀತ ರಸಮಂಜರಿ’ ಕಾರ್ಯಕ್ರಮ ನೆರವೇರಲಿದೆ.

ಮುಖ್ಯಮಂತ್ರಿ ಪ್ರವಾಸ :

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 17 ರಂದು ಜಿಲ್ಲೆಗೆ ಆಗಮಿಸಲಿದ್ದಾರೆ. ನಾಳೆ ಬೆಳಗ್ಗೆ 11:30 – ಮಂಗಳೂರು ವಿಮಾನ ನಿಲ್ದಾಣ ಆಗಂಇಸಲಿದ್ದಾರೆ. ನಂತರ ಮೇರಿಹಿಲ್ನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಮಂಗಳೂರು ಪ್ರಾದೇಶಿಕ ಕಚೇರಿ ಕಟ್ಟಡ ಶಿಲಾನ್ಯಾಸ ಭೇಟಿ ನೀಡಲಿದ್ದು, ಮಧ್ಯಾಹ್ನ 12:15 – ಪುರಭವನದಲ್ಲಿ ಬಹುಸಂಸ್ಕೃತಿ ಉತ್ಸವ – ಕರ್ನಾಟಕ ಸುವರ್ಣ ಸಂಭ್ರಮ 50 ಉದ್ಘಾಟನೆ ಮಾಡಲಿದ್ದಾರೆ.

 

ಇದನ್ನೂ ಓದಿ : ನಾಗಾಸಾಧುಗಳ ಬಗ್ಗೆ ನಿಮಗೆ ಗೊತ್ತಿಲ್ಲದ ಸತ್ಯಾಂಶಗಳು : ಭಾಗ – 2

 

ಸಂಜೆ 5 ಗಂಟೆಗೆ ಮಂಗಳಾ ಕ್ರೀಡಾಂಗಣದಲ್ಲಿ ಕರ್ನಾಟಕ ಕ್ರೀಡಾಕೂಟ 2025 ಉದ್ಘಾಟನೆ ಮಾಡಿ, ರಾತ್ರಿ 8 ಗಂಟೆಗೆ ವಿಮಾನದ ಮೂಲಕ ಮುಖ್ಯಮಂತ್ರಿಗಳು ಬೆಂಗಳೂರಿಗೆ ಹಿಂದಿರುಗಲಿದ್ದಾರೆ.

Continue Reading

LATEST NEWS

ಬಾಲಿವುಡ್‌ ನಟ ಸುದೀಪ್ ಪಾಂಡೆ ವಿಧಿವಶ

Published

on

ಮಂಗಳೂರು/ಮುಂಬಯಿ : ಭೋಜ್‌ಪುರಿ ಚಿತ್ರರಂಗದ ನಟ ಸುದೀಪ್‌ ಪಾಂಡೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸುದೀಪ್‌ ಪಾಂಡೆ ತೀವ್ರ ಎದೆನೋವಿನಿಂದ ಬಳಲಿದ್ದ ಕಾರಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಸುದೀಪ್‌ ಪಾಂಡೆ ಭೋಜಪುರಿ ಸಿನಿಮಾರಂಗ ಮಾತ್ರವಲ್ಲದೇ, ಹಿಂದಿ ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ನಟನಾಗಿ, ನಿರ್ದೇಶಕರಾಗಿ ಕೂಡಾ ಕೆಲಸ ಮಾಡಿದ್ದಾರೆ.

ಖೂನಿದಂಗಲ್‌, ಭೋಜ್‌ಪುರಿ ಭಯ್ಯಾ, ಬಹಿನಿಯಾ ಸೇರಿ ಹಲವು ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಸಿನಿ ರಂಗಕ್ಕೆ ಎಂಟ್ರಿ ನೀಡುವ ಮೊದಲು ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದರು.

Continue Reading

LATEST NEWS

Trending

Exit mobile version