Connect with us

LATEST NEWS

ಮುಲ್ಕಿ: ಚಪ್ಪಲಿ ತೋರಿಸುತ್ತೇನೆಂದು ಲೈಂಗಿಕ ಕಿರುಕುಳ ನೀಡಿದ ಅಂಗಡಿ ಮಾಲಕ- ಬಂಧನ

Published

on

ಮಂಗಳೂರು: ನಗರದ ಮುಲ್ಕಿ ಠಾಣಾ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಕಿನ್ನಿಗೋಳಿಯಲ್ಲಿನ ಪಾದರಕ್ಷೆ ಮಳಿಗೆಯೊಂದರ

ಮಾಲೀಕ ಗ್ರಾಹಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.


ಪಾದರಕ್ಷೆ ಮಳಿಗೆಯ ಮಾಲೀಕ ಸಂಶುದ್ದೀನ್(42) ಬಂಧಿತ ಆರೋಪಿ.

ಕಿನ್ನಿಗೋಳಿಯಲ್ಲಿರುವ ಸಂಶುದ್ದೀನ್ ಪಾದರಕ್ಷೆ ಮಳಿಗೆಗೆ ಗ್ರಾಹಕಿಯೋರ್ವರು ಚಪ್ಪಲಿ ಖರೀದಿಸಲೆಂದು ಹೋಗಿದ್ದರು.

ಆಗ ಮಳಿಗೆಯ ಮಾಲಕ ಸಂಶುದ್ದೀನ್ ಗ್ರಾಹಕಿಗೆ ವಿವಿಧ ಚಪ್ಪಲಿಗಳನ್ನು ತೋರಿಸಿದ್ದಾನೆ. ಆದರೆ ಅವರಿಗೆ ಯಾವ ಪಾದರಕ್ಷೆಯೂ ಇಷ್ಟವಾಗಲಿಲ್ಲ.

ನಂತರ ಸಂಶುದ್ದೀನ್​ ಮಹಿಳೆಗೆ ಬೇರೆ ಚಪ್ಪಲಿಗಳನ್ನು ತೋರಿಸುವುದಾಗಿ ಹೇಳಿ ಅಂಗಡಿಯ ಒಳಗಿದ್ದ ಇನ್ನೊಂದು ಕಂಪಾರ್ಟ್ ಮೆಂಟ್​ಗೆ ಕರೆದೊಯ್ದಿದ್ದ ಎನ್ನಲಾಗ್ತಿದೆ.

ನಂತರ ತನ್ನ ಭುಜ ಹಾಗೂ ಎದೆಯ ಭಾಗಕ್ಕೆ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಮುಲ್ಕಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LATEST NEWS

ಮದುವೆ ತಯಾರಿ ನಡೆಯುತ್ತಿರುವಾಗಲೇ ಅ*ಪಘಾ*ತ; ಇಂಜಿನಿಯರ್ ವಧು ವಿ*ಧಿವಶ

Published

on

ಮಂಗಳೂರು/ಮಂಡ್ಯ: ಎರಡು ಬೈಕ್​ಗಳು ಪರಸ್ಪರ ಡಿಕ್ಕಿಯಾಗಿ ನರೇಗಾ ಮಹಿಳಾ ಇಂಜಿನಿಯರ್ ಸಾ*ವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬಸಾಪುರ ಗೇಟ್ ಬಳಿ ನಡೆದಿದೆ.

 ಮೃ*ತ ಯುವತಿಯನ್ನು ಶರಣ್ಯ ಗೌಡ (25) ಎಂದು ಗುರುತಿಸಲಾಗಿದೆ.

ಮೂಲತಃ ಮಂಡ್ಯದ ಮಳವಳ್ಳಿ ತಾಲೂಕಿನ ಬಳೆಹೊನ್ನಿಗನ ಗ್ರಾಮದ ಶರಣ್ಯ ನರೇಗಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆದ್ರೆ, ಕೆಲಸ ಮುಗಿಸಿ ಸ್ವಗ್ರಾಮ ಬಳೆಹೊನ್ನಿಗನದಿಂದ ಹಲಗೂರಿಗೆ ಹೋಗುತ್ತಿದ್ದಾಗ ಈ ದು*ರ್ಘಟನೆ ಸಂಭವಿಸಿದೆ. ಇನ್ನೊಂದು ನೋ*ವಿನ ವಿಚಾರ ಅಂದ್ರೆ ಶರಣ್ಯ ಗೌಡಗೆ ಮುಂದಿನ ತಿಂಗಳು ಫೆಬ್ರವರಿ 16ರಂದು ಮದುವೆ ನಿಶ್ಚಿಯವಾಗಿತ್ತು. ಆದರೆ ದಾಂಪತ್ಯ ಜೀವನಕ್ಕೆ ಕಾಲಿಡುವ ಮೊದಲೇ ದು*ರಂತ ಅಂ*ತ್ಯ ಕಂಡಿದ್ದಾರೆ.

 

ಇದನ್ನೂ ಓದಿ : ಕಾರಿಗೆ ದಿಢೀರ್ ಬೆಂ*ಕಿ; ಹಸೆಮಣೆ ಏರಬೇಕಿದ್ದ ವರ ಸು*ಟ್ಟು ಬೂ*ದಿ

 

ಕಳೆದ ಒಂದು ವರ್ಷದಿಂದ ಕನಕಪುರ ತಾಲೂಕಿನ ಸಾತನೂರು ಪಂಚಾಯತಿಯಲ್ಲಿ ನರೇಗಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.  ನಿನ್ನೆ ಸ್ವಗ್ರಾಮದಿಂದ ಹಲಗೂರಿಗೆ ಹೋಗ್ತಿದ್ದಾಗ ಬೈಕ್ ಗಳ ನಡುವೆ ಮುಖಾಮುಖಿ ಡಿ*ಕ್ಕಿಯಾಗಿದೆ. ಈ ದುರ್ಘಟನೆಯಲ್ಲಿ ತೀವ್ರ ರ*ಸ್ತಸ್ರಾವದಿಂದ ಶರಣ್ಯ ಸ್ಥಳದಲ್ಲೇ ಪ್ರಾ*ಣ ಬಿಟ್ಟಿದ್ದಾಳೆ. ಈ ಬಗ್ಗೆ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

ಟಿಕ್ ಟಾಕ್‌ಗೆ ಶಾಕ್ ನೀಡಿದ ಅಮೆರಿಕ !

Published

on

ಮಂಗಳೂರು/ವಾಷಿಂಗ್ಟನ್ : ಭಾರತದಲ್ಲಿ, ಚೀನಾ ಮೂಲದ ಮೊಬೈಲ್ ಅಪ್ಲಿಕೇಶನ್ ಟಿಕ್ ಟಾಕ್ ಗೆ 2020ರಲ್ಲಿ ನಿಷೇಧ ಹೇರಿತ್ತು. ಭಾರತದ ನಂತರ ಅಮೆರಿಕದಲ್ಲೂ ಟಿಕ್ ಟಾಕ್ ಆ್ಯಪ್ ನಿಷೇಧಿಸಲಾಗಿದೆ.

ಭಾನುವಾರ ಆ್ಯಪಲ್ ಮತ್ತು ಗೂಗಲ್ ಪ್ಲೇಸ್ಟೋರ್‌ನಿಂದ ಆ್ಯಪ್ ಕಾಣೆಯಾಗಿದೆ. ಅಮೆರಿಕದಲ್ಲಿ ಸುಮಾರು 170 ಮಿಲಿಯನ್ ಜನರು ಟಿಕ್ ಟಾಕ್ ಆ್ಯಪ್ ಬಳಕೆ ಮಾಡುತ್ತಿದ್ದರು.

ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಅಧಿಕಾರವಹಿಸಿಕೊಳ್ಳಲಿದ್ದು, ನಿಷೇಧಗೊಂಡ ಟಿಕ್ ಟಾಕ್ ಆ್ಯಪ್ 90 ದಿನಗಳವರೆಗೆ ಬಳಕೆಗೆ ಸಿಗುವಂತೆ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ರಾಷ್ಟ್ರೀಯ ಭದ್ರತೆಗೆ ಟಿಕ್ ಟಾಕ್ ಆ್ಯಪ್ ಧಕ್ಕೆಯುಂಟು ಮಾಡುತ್ತಿದೆ ಎಂದು ಭದ್ರತಾ ಏಜೆನ್ಸಿಗಳು ಹೇಳಿದೆ. ಹೀಗಾಗಿ ಆ್ಯಪ್ ಬಳಕೆಗೆ ನಿಷೇಧ ಹೇರಲಾಗಿದೆ.

ಇದನ್ನೂ ಓದಿ: ಪೆಟ್ರೋಲ್ ಟ್ಯಾಂಕರ್ ಸ್ಪೋ*ಟ: 70 ಮಂದಿ ಸಾ*ವು

ಶನಿವಾರ ರಾತ್ರಿ ಹೊತ್ತಿಗೆ ಟಿಕ್ ಟಾಕ್ ಆ್ಯಪ್ ತೆರೆದಾಗ ‘ದುರದೃಷ್ಟವಶಾತ್ ಅಮೆರಿಕದಲ್ಲಿ ಟಿಕ್ ಟಾಕ್ ಅನ್ನು ನಿಷೇಧಿಸುವ ಕಾನೂನನ್ನು ಜಾರಿಗೊಳಿಸಲಾಗಿದೆ, ಇದರರ್ಥ ನೀವು ಸದ್ಯಕ್ಕೆ ಟಿಕ್ ಟಾಕ್ ಅನ್ನು ಬಳಸಲಾಗುವುದಿಲ್ಲ. ಟಿಕ್ ಟಾಕ್ ಅನ್ನು ಮರುಸ್ಥಾಪಿಸಲು ನಮ್ಮೊಂದಿಗೆ ಕೆಲಸ ಮಾಡುವುದಾಗಿ ಅಧ್ಯಕ್ಷ ಟ್ರಂಪ್ ಸೂಚಿಸಿದ್ದಾರೆ. ಅವರು ಅಧಿಕಾರ ವಹಿಸಿಕೊಂಡ ನಂತರ ದಯವಿಟ್ಟು ಟ್ಯೂನ್ ಮಾಡಿ’ ಎನ್ನುವ ಸಂದೇಶ ಬಳಕೆದಾರರಿಗೆ ಕಾಣಿಸಿದೆ.

Continue Reading

LATEST NEWS

ಕಾರಿಗೆ ದಿಢೀರ್ ಬೆಂ*ಕಿ; ಹಸೆಮಣೆ ಏರಬೇಕಿದ್ದ ವರ ಸು*ಟ್ಟು ಬೂ*ದಿ

Published

on

ಮಂಗಳೂರು/ದೆಹಲಿ : ಜೀವನದ ಅದ್ಭುತ ಕ್ಷಣಗಳಲ್ಲಿ ಮದುವೆಯೂ ಒಂದು, ಆ ಕ್ಷಣಕ್ಕೆ ಎಲ್ಲರೂ ಸಾಕ್ಷಿಯಾಗಿ ಎಂದು ಕೇಳಲು ಲಗ್ನ ಪತ್ರಿಕೆ ಹಿಡಿದು ಹೋಗುತ್ತಿದ್ದಾಗ ಕಾರಿಗೆ ಬೆಂ*ಕಿ ತಗುಲಿ ಯು*ವಕ ಸು*ಟ್ಟು ಕ*ರಕಲಾಗಿರುವ ಘಟನೆ ನಿನ್ನೆ (ಜ.19) ತಡರಾತ್ರಿ ದೆಹಲಿಯ ಗಾಜಿಪುರ ಪ್ರದೇಶದ ಬಾಬಾ ಬ್ಯಾಂಕ್ವೆಟ್‌ನಲ್ಲಿ ನಡೆದಿದೆ.

ಮೃ*ತ ವ್ಯಕ್ತಿಯನ್ನು ಗ್ರೇಟರ್ ನೋಯ್ಡಾದ ನಾವಡಾ ನಿವಾಸಿ ಅನಿಲ್ ಎಂದು ಗುರುತಿಸಲಾಗಿದೆ.

 

ಇದನ್ನೂ ಓದಿ : ಭೀಕರ ರಸ್ತೆ ಅ*ಪಘಾತ; ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಕುಟುಂಬಕ್ಕೆ ಆ*ಘಾತ

 

ಅನಿಲ್ ಇದ್ದ ವ್ಯಾಗನ್​ಆರ್ ಸಂಪೂರ್ಣವಾಗಿ *ಸುಟ್ಟು ಹೋಗಿದ್ದು, ಆತ ಕಾರಿನೊಳಗೆ ಉ*ಸಿರು ಚೆ*ಲ್ಲಿದ್ದಾನೆ. ಫೆಬ್ರವರಿ 14 ರಂದು ಮದುವೆಯಾಗಬೇಕಿದ್ದ ಅನಿಲ್ ಲಗ್ನಪತ್ರಿಕೆ ಹಂಚಲು ಹೋದ ಸಮಯ ಘಟನೆ ಸಂಭವಿಸಿದೆ. ಮಧ್ಯಾಹ್ನ ತನ್ನ ಮದುವೆಯ ಮನೆಯಿಂದ ಹೋದ ಅನಿಲ್ ತಡರಾತ್ರಿಯವರೆಗೆ ಹಿಂತಿರುಗಿ ಬಾರದ ಹಿನ್ನಲೆ ಮನೆಯವರು ತುಂಬಾ ಬಾರಿ ಕರೆ ಮಾಡಿದ್ದರು. ಆದರೆ ಸ್ವಿಚ್ಡ್​ ಮೊಬೈಲ್ ಆಫ್ ಬರುತಿತ್ತು. ನಂತರ ‘ರಾತ್ರಿ 11.30ರ ನಡುವೆ ಅಪಘಾತ ಸಂಭವಿಸಿದೆ’ ಎಂದು ಪೊಲೀಸರು ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಮೃ*ತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹೇಗೆ ಬೆಂ*ಕಿ ಹೊ*ತ್ತಿಕೊಂಡಿದೆ ಎಂಬುವುದು ಸ್ಪಷ್ಟವಾಗಿಲ್ಲ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Continue Reading

LATEST NEWS

Trending

Exit mobile version