ಹದಿನಾರರ ಹರೆಯದ ಮೂಕ ಬಾಲಕಿಯನ್ನು ಕಟ್ಟಿ ಹಾಕಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಅಪರಾಧಿಗೆ ಕಠಿಣ ಜೀವಾವಧಿ ಸಜೆ ವಿಧಿಸಿ ಕಾಸರಗೋಡು ಜಿಲ್ಲಾ ಹೆಚ್ಚುವರಿ ಪೋಕ್ಸೋ ನ್ಯಾಯಾಲಯ ಮಹತ್ವದ ತೀರ್ಫು ನೀಡಿದೆ.
ಕಾಸರಗೋಡು: ಹದಿನಾರರ ಹರೆಯದ ಮೂಕ ಬಾಲಕಿಯನ್ನು ಕಟ್ಟಿ ಹಾಕಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಅಪರಾಧಿಗೆ ಕಠಿಣ ಜೀವಾವಧಿ ಸಜೆ ವಿಧಿಸಿ ಕಾಸರಗೋಡು ಜಿಲ್ಲಾ ಹೆಚ್ಚುವರಿ ಪೋಕ್ಸೋ ನ್ಯಾಯಾಲಯ ಮಹತ್ವದ ತೀರ್ಫು ನೀಡಿದೆ.
ಜೀವಾವಧಿ ಸಜೆ ಅಲ್ಲದೆ ಹೆಚ್ಚುವರಿಯಾಗಿ ಹತ್ತು ವರ್ಷ ಸಜೆ ನೀಡಿ ತೀರ್ಫು ನೀಡಿದೆ . ದಂಡ ಪಾವತಿಸದಿದ್ದಲ್ಲಿ 8 ವರ್ಷ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕು ಮತ್ತು ಸಂತ್ರಸ್ತೆ ಬಾಲಕಿಗೆ ನಷ್ಟ ಪರಿಹಾರನೂ ನೀಡಬೇಕೆಂದು ನ್ಯಾಯಾಲಯ ನಿರ್ದೇಶನ ನೀಡಿದೆ.
ಉಪ್ಪಳ ಮಣಿಮುಂಡದ ಸುರೇಶ್ (45) ಶಿಕ್ಷೆಗೆ ಗುರಿಯಾದ ಆರೋಪಿಯಾಗಿದ್ದಾನೆ. ಕಾಸರಗೋಡು ಜಿಲ್ಲಾ ಹೆಚ್ಚುವರಿ ಸೆಷನ್ಸ್ (ಒಂದು) ನ್ಯಾಯಾಲಯದ ನ್ಯಾಯಾಧೀಶ ಎ ಮನೋಜ್ ಶಿಕ್ಷೆ ವಿಧಿಸಿದ್ದಾರೆ.
ಈ ಹಿಂದೆ ನ್ಯಾಯಾಲಯ ಸುರೇಶ್ ಅವರನ್ನು ದೋಷಿ ಎಂದು ತೀರ್ಪು ನೀಡಿತ್ತು.
2015 ರ ಸೆಪ್ಟಂಬರ್ 22 ರಂದು ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿತ್ತು.
ತಂದೆ ತಾಯಿ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಕುಡಿಯಲು ನೀರು ಕೇಳಿಕೊಂಡು ಮನೆಗೆ ಬಂದಿದ್ದ ಈತ ಬಾಲಕಿ ನೀರು ತರಲು ಒಳಗಡೆ ತೆರಳಿದ್ದ ಸಂದರ್ಭದಲ್ಲಿ ಅಕ್ರಮವಾಗಿ ಮನೆ ಪ್ರವೇಶಿಸಿದ್ದ ಆರೋಪಿ ಅಪ್ರಾಪ್ತೆಯನ್ನು ಕಟ್ಟಿ ಹಾಕಿ ಹೀನ ಕೃತ್ಯ ನಡೆಸಿದ್ದನು.
ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಅಕ್ಟೋಬರ್ 13 ರಂದು ಕ್ರೈಮ್ ಬ್ರಾಂಚ್ ಪೊಲೀಸರು ಮಂಗಳೂರಿನಿಂದ ಬಂಧಿಸಿದ್ದರು.
ಪ್ರಾಸಿಕ್ಯೂಷನ್ ಪರ ಸ್ಪೆಷಲ್ ಪ್ರಾಸಿಕ್ಯೂಟರ್ ಪ್ರಕಾಶ್ ಅಮ್ಮಣ್ಣಾಯ ಹಾಜರಾದರು. ಒಟ್ಟು 34 ಸಾಕ್ಷಿಗಳಲ್ಲಿ 25 ಸಾಕ್ಷಿಗಳನ್ನು ವಿಚಾರಣೆ ನಡೆಸಿ ಅಂತಿಮ ತೀರ್ಪನ್ನು ಪ್ರಕಟಿಸಿತ್ತು.