Connect with us

    LATEST NEWS

      ಕರಾವಳಿಯಲ್ಲಿ ಎಳ್ಳು ಬೆಲ್ಲದ ಸವಿ  ಸಂಕ್ರಾಂತಿ..!

    Published

    on

      ಕರಾವಳಿಯಲ್ಲಿ ಎಳ್ಳು ಬೆಲ್ಲದ ಸವಿ  ಸಂಕ್ರಾಂತಿ..! 

    ಮಂಗಳೂರು: ಸಂಕ್ರಾಂತಿ ಸಮೃದ್ಧಿಯ ಸಂಕೇತ. ಸೂರ್ಯನು ತನ್ನ ಪಥವನ್ನು ಬದಲಿಸುವ ಕ್ರಮಕ್ಕೆ ಅಥವಾ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸುವ ಕ್ರಮವನ್ನು ಅಥವಾ ಚಲನೆಯನ್ನು ಮಕರ ಸಂಕ್ರಮಣ ಎನ್ನುತ್ತಾರೆ.ದಕ್ಷಿಣ ಅಕ್ಷಾಂಶದತ್ತ ಚಲಿಸುತ್ತಿದ್ದ ಸೂರ್ಯ ಪಥ ಬದಲಿಸಿ ಉತ್ತರ ಅಕ್ಷಾಂಶದತ್ತ ಚಲಿಸುವುದೇ ಮಕರ ಸಂಕ್ರಮಣ.  ಮಕರ ಸಂಕ್ರಾಂತಿ ಅಂದರೆ ದಕ್ಷಿಣಾಯನದ ನಂತರ  ಉತ್ತರಾಯಣ ಎಂದೂ ಕರೆಯುತ್ತಾರೆ.ದಕ್ಷಿಣ ಭಾರತದ ಹಲವರು ಈ ಸಂಕ್ರಾಂತಿಯನ್ನು ಬಹಳ ವಿಶೇಷವಾಗಿ ಆಚರಿಸುತ್ತಾರೆ.  ದೇವಿ ದೇವಾಲಯಗಳಲ್ಲಿ ಇಂದಿಗೆ 15 ದಿನಕ್ಕೂ ಮುನ್ನ ಧನುರ್ಮಾಸದಲ್ಲಿ ವಿಶೇಷ ಪೂಜೆ ಬೆಳ್ಳಂಬೆಳಗ್ಗೆ ಅಂದ್ರೆ 6ಗಂಟೆಗೆ ಶುರುವಾಗುತ್ತದೆ.

    ಈ ಧನುರ್ಮಾಸದ ಕೊನೆಯ ಪೂಜೆ ಮಕರ ಸಂಕ್ರಮಣದಂದು ಬಹಳ ವಿಜ್ರಂಭಣೆಯಿಂದ ಮುಕ್ತಾಯಗೊಳ್ಳುತ್ತದೆ. ಇನ್ಕೆಲವರು ಎಳ್ಳು, ಬೆಲ್ಲ, ಕಬ್ಬು ಮಿಶ್ರಣವನ್ನು ಹಂಚಿ ಸಂಭ್ರಮಿಸುತ್ತಾರೆ.

    ಮುಖ್ಯವಾಗಿ ಶಬರಿ ಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನದಲ್ಲಿ ಸಂಜೆ 6ಗಂಟೆ ಸುಮಾರಿಗೆ ಅಯ್ಯಪ್ಪ ಜ್ಯೋತಿ ದರ್ಶನಕ್ಕೆ ಲಕ್ಷಾಂತರ ಭಕ್ತರು ಕಾಯುತ್ತಿರುತ್ತಾರೆ.

    ಚಳಿಗಾಲ ಮುಗಿಯುವ ಸಮಯವಾದುದರಿಂದ ಮನುಷ್ಯ ದೇಹದಲ್ಲಿ ಚಳಿಯಿಂದ ಚರ್ಮದಲ್ಲಿ ಎಣ್ಣೆ ಅಂಶ ಕಡಿಮೆಯಾಗುತ್ತದೆ ಅದಕ್ಕೆ ಎಣ್ಣೆ  ಅಂಶ ಇರುವ ಎಳ್ಳು ತಿನ್ನಿ ಅನ್ನೋದು ಎಳ್ಳು ಬೆಲ್ಲ ನೀಡುವ ಮಹತ್ವವೆಂದು ಸಾಬೀತಾಗಿದೆ.

    LATEST NEWS

    ಮಂಗಳೂರು: ಹಿಟ್ ಆ್ಯಂಡ್ ರನ್; 3ನೇ ತರಗತಿ ವಿದ್ಯಾರ್ಥಿಗೆ ಗಂಭೀರ ಗಾಯ

    Published

    on

    ಮಂಗಳೂರು: ಶಾಲೆಯಿಂದ ಮನೆಗೆ ಬರುತ್ತಿದ್ದ ಬಾಲಕನಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕನಿಗೆ ತೀವ್ರ ಗಾಯವಾಗಿದ್ದು, ಚಾಲಕ ಪರಾರಿಯಾದ ಘಟನೆ ಹರೇಕಳದಲ್ಲಿ ಬುಧವಾರ ನಡೆದಿದೆ.

    ಹರೇಕಳ ಗ್ರಾಮ ಪಂಚಾಯಿತಿ ಬಳಿಯ ನಿವಾಸಿ ಅಬ್ದುಲ್ ಕಲಾಂ ಎಂಬವರ ಪುತ್ರ ಮುಹಮ್ಮದ್ ಶಯಾನ್(8) ಗಾಯಾಳು.

    ಬಾಲಕ ಹರೇಕಳ ಪಾವೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 3ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಬುಧವಾರ ಸಂಜೆ ಶಾಲೆ ಬಿಟ್ಟು ಮನೆಗೆ ಬರುತ್ತಿದ್ದ ಬಾಲಕನಿಗೆ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದೆ. ಘಟನೆಯಲ್ಲಿ ಬಾಲಕನಿಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅಪಘಾತದ ಸಮಪೂರ್ಣ ದೃಶ್ಯ ಗ್ರಾಮ ಪಂಚಾಯಿತಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆ ದೃಶ್ಯಾವಳಿಗಳ ಆಧಾರದ ಮೇರೆಗೆ ಕಾರನ್ನ ಪತ್ತೆ ಹಚ್ಚಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಈ ಬಗ್ಗೆ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    ಮೊಬೈಲ್ ಜಾಸ್ತಿ ಬಳಸಬೇಡ ಎಂದಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

    Published

    on

    ಬೆಂಗಳೂರು: ಮೊಬೈಲ್ ಜಾಸ್ತಿ ಬಳಸಬೇಡ, ಓದು ಎಂದು ತಾಯಿ ಬುದ್ದಿ ಮಾತು ಹೇಳಿದ್ದಕ್ಕೆ ಬೇಸರಗೊಂಡ ಮಗ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಅರಿಶಿನಕುಂಟೆ ಗ್ರಾಮದಲ್ಲಿ ನಡೆದಿದೆ.

    ಶಶಾಂಕ ಮೃತ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಮನೆಯಲ್ಲಿ ಈತ ಖಾಸಗಿ ಕಾಲೇಜೊಂದರಲ್ಲಿ ದ್ವಿತೀಯ ಬಿಕಾಂ ವ್ಯಾಸಂಗ ಮಾಡುತ್ತಿದ್ದನು.

    ಜಾಸ್ತಿ ಮೊಬೈಲ್ ಬಳಸಬೇಡ ಎಂದು ತಾಯಿ ಹೇಳಿದ್ದಕ್ಕೆ ಕೋಪಗೊಂಡ ಶಶಾಂಕ್ ದುಡುಕಿನ ನಿರ್ಧಾರ ಕೈಗೊಂಡಿದ್ದಾನೆ. ರೂಮ್ ಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೋಷಕರು ಬುದ್ದಿವಾದ ಹೇಳಿದ್ದಕ್ಕೆ ಮಗ ಇಂತಹ ನಿರ್ಧಾರ ಕೈಗೊಂಡಿರುವುದು ದುರಂತವೇ ಸರಿ.

    Continue Reading

    LATEST NEWS

    ಕಾಪು : ಪರಿಸರ ಮಾಲಿನ್ಯದ ಆರೋಪ; ಫಿಶ್ ಫ್ಯಾಕ್ಟರಿಗೆ ಬೀಗ

    Published

    on

    ಕಾಪು : ಪರಿಸರ ಮಾಲಿನ್ಯ ಉಂಟು ಮಾಡುತ್ತಿದ್ದ ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಪಡು ಗ್ರಾಮದ ತವಕ್ಕಲ್ ಫಿಶ್ ಫ್ಯಾಕ್ಟರಿಗೆ ಬೀಗ ಜಡಿಯಲಾಗಿದೆ. ಹಲವು ವರ್ಷಗಳಿಂದ ಪರಿಸರ ಮಾಲಿನ್ಯದ ಆರೋಪ ಈ ಕಾರ್ಖಾನೆ ವಿರುದ್ಧ ಕೇಳಿ ಬರುತ್ತಿತ್ತು. ಸಾರ್ವನಿಕರ ವ್ಯಾಪಕ ದೂರಿನ ಹಿನ್ನೆಲೆಯಲ್ಲಿ ಕಾರ್ಖಾನೆಯನ್ನು ತಹಶೀಲ್ದಾರ್ ಪ್ರತಿಭಾ ಅವರು ಮುಟ್ಟುಗೋಲು ಹಾಕಿದ್ದಾರೆ.

    ಪರಿಸರ ಮಾಲಿನ್ಯ ತಡೆಗಟ್ಟಲು ಕೈಗೊಳ್ಳಬೇಕಾದ ಯಾವುದೇ ಕ್ರಮಗಳನ್ನು ಈ ಕಾರ್ಖಾನೆ ಕೈಗೊಂಡಿಲ್ಲ. ಅತಿಯಾದ ದುರ್ನಾತ ಬೀರಿ ಗ್ರಾಮಸ್ಥರಿಗೆ ನಿತ್ಯ ನರಕಯಾತನೆ ಆಗಿತ್ತು. ಈ ಹಿನ್ನೆಲೆಯಲ್ಲಿ ಪರಿಸರ ಇಲಾಖೆಯಿಂದ ಮುಟ್ಟುಗೋಲು ಹಾಕಿಕೊಳ್ಳಲು ಶಿಫಾರಸು ಮಾಡಲಾಗಿತ್ತು. ಕಾರ್ಖಾನೆಯನ್ನು ಪರಿಶೀಲಿಸಿ ಅವ್ಯವಸ್ಥೆಯನ್ನು ಮನಗಂಡ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತವಕ್ಕಲ್ ಫಿಶ್ ಫ್ಯಾಕ್ಟರಿಯನ್ನು ಮುಟ್ಟುಗೋಲು ಹಾಕಲು ಆದೇಶ ಮಾಡಿದ್ದರು.

    ಇದನ್ನೂ ಓದಿ : VIDEO : ಕಾಂತಾರ ‘ಪಂಜುರ್ಲಿ’ ದೈವದ ಅಣಕು ಪ್ರದರ್ಶನ; ಜಮೀರ್ ಅಹ್ಮದ್ ಕೈ ಹಿಡಿದು ನರ್ತಿಸಿದ ವೇಷಧಾರಿಗಳು

    ಈ ಹಿನ್ನೆಲೆಯಲ್ಲಿ  ಪರಿಸರ ವಿರೋಧಿಯಾಗಿ ಕಾರ್ಯಾಚರಿಸುತ್ತಿರುವ ಕಾರ್ಖಾನೆಗಳಿಗೆ ಎಚ್ಚರಿಕೆ ನೀಡಿದ ತಹಶೀಲ್ದಾರ್ ಪ್ರತಿಭಾ ಇದೀಗ ಫ್ಯಾಕ್ಟರಿಗೆ ಬೀಗ ಜಡಿದಿದ್ದಾರೆ. ಈ ಮೂಲಕ ಇದೀಗ ಪುರಸಭಾ ವ್ಯಾಪ್ತಿಯ ಪಡು ಗ್ರಾಮದ ಜನತೆ ನಿರಾಳರಾಗಿದ್ದಾರೆ.

    Continue Reading

    LATEST NEWS

    Trending