Connect with us

LATEST NEWS

ಭ್ರಷ್ಟಾಚಾರದ ಆಸ್ತಿ ಸಂಪಾದಿಸಿದ ಬಿಜೆಪಿಗರ ಆಸ್ತಿ ಮುಟ್ಟುಗೋಲು ಹಾಕಿ: ಶಾಸಕ ಭರತ್‌ ಶೆಟ್ಟಿಗೆ ಎಸ್‌ಡಿಪಿಐ ಸವಾಲು

Published

on

ಮಂಗಳೂರು: ಗೋ ಹತ್ಯೆ ಮಾಡಿದರೆ ಆಸ್ತಿ ಮುಟ್ಟುಗೋಲು ಹಾಕಲಾಗುವುದು ಎಂಬ ಶಾಸಕ ಭರತ್ ಶೆಟ್ಟಿ ಹೇಳಿಕೆಗೆ ಎಸ್‌ಡಿಪಿಐ ಪ್ರತಿಕ್ರಿಯಿಸಿದ್ದು,

ಮೊದಲು ಬ್ರಹ್ಮಾಂಡ ಭ್ರಷ್ಟಾಚಾರದ ಮೂಲಕ ಅಕ್ರಮ ಆಸ್ತಿ ಸಂಪಾದಿಸಿದ ಬಿಜೆಪಿ ನಾಯಕರ ಹಾಗೂ ಕದ್ದು ಮುಚ್ಚಿ ಗೋ ಮಾಂಸ ತಿನ್ನುವ ಮತ್ತು ವ್ಯಾಪಾರ ಮಾಡುವ ಸಂಘಪರಿವಾರದವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿ ನಿಮ್ಮ ತಾಕತ್ತನ್ನು ಪ್ರದರ್ಶಿಸಿ ಎಂದು ಎಸ್‌ಡಿಪಿಐ ದ.ಕ ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಕುಳಾಯಿ ಸವಾಲೆಸೆದಿದ್ದಾರೆ.


ಶಾಸಕ ಭರತ್ ಶೆಟ್ಟಿ ಕ್ಷೇತ್ರದಲ್ಲಿ ಅಭಿವೃದ್ಧಿ ತೀವ್ರ ಕುಂಠಿತಗೊಂಡಿದ್ದು,ಈಗ ನಿರಂತರವಾಗಿ ಸುರಿಯುತ್ತಿರುವ ಬಾರಿ ಮಳೆಗೆ ಅಲ್ಲಲ್ಲಿ ಗುಡ್ಡೆ ಕುಸಿತ, ಚರಂಡಿ ವ್ಯವಸ್ಥೆ ಸರಿ ಇಲ್ಲದೆ ಮಾರ್ಗದಲ್ಲಿ ಕೊಳಚೆ ನೀರು ಹೋಗುತ್ತಿದ್ದು, ಹಾಗೂ ಹಲವು ಕಡೆ ಪ್ರಾಕೃತಿಕ ವಿಕೋಪ ಸಂಭವಿಸಿದ್ದರು ಶಾಸಕರು ಅಂತಹ ಸ್ಥಳಗಳಿಗೆ ಭೇಟಿ ನೀಡಿ ಸ್ಥಳ ವೀಕ್ಷಣೆ ನಡೆಸಿ ಪರಿಹಾರ ಕಾರ್ಯ ಮಾಡದೇ ಇರುವುದರಿಂದ ಕ್ಷೇತ್ರದ ಜನತೆ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದರಿಂದ ಕಂಗೆಟ್ಟಿರುವ ಶಾಸಕ ಭರತ್ ಶೆಟ್ಟಿ ಜನರ ದಿಕ್ಕು ತಪ್ಪಿಸುವ ಸಲುವಾಗಿ ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತಂದು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಬಿಜೆಪಿ ಸಂಘಪರಿವಾರದ ಹಲವಾರು ನಾಯಕರು 40% ಕಮಿಷನ್ ದಂದೆ, ಪಿಎಸೈ ಹಗರಣ, ಬಿಡಿಎ ಹಗರಣ ಸೇರಿದಂತೆ ಹಲವಾರು ಹಗರಣಗಳ ಸರಮಾಲೆಯನ್ನೆ ನಡೆಸಿದವರು ಇದ್ದಾರೆ.

ಶಾಸಕ ಭರತ್ ಶೆಟ್ಟಿಗೆ ತಾಕತ್ತಿದ್ದರೆ ಮೊದಲು ಅಂತಹ ಬಿಜೆಪಿ ಸಂಘಪರಿವಾರ ನಾಯಕರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಸವಾಲೆಸಿದಿದ್ದಾರೆ.

ಅದೇ ರೀತಿ ವಿದೇಶಕ್ಕೆ ಬೀಫ್ ಸರಬರಾಜಿನಲ್ಲಿ ವಿಶ್ವದಲ್ಲೇ ಬಿಜೆಪಿ ಆಡಳಿತ ಸರ್ಕಾರ ಇರುವ ಭಾರತ ಮೊದಲನೇ ಸ್ಥಾನದಲ್ಲಿ ಇದೆ. ಬಿಜೆಪಿ ಶಾಸಕ ಸಂಗೀತ್ ಸೋಮ್,

ಸಂಸದ ರಾಜೀವ್ ಚಂದ್ರಶೇಖರ ಸೇರಿದಂತೆ ಹಲವು ಬಿಜೆಪಿ ನಾಯಕರ ಒಡೆತನದಲ್ಲಿ ಇರುವ ಫ್ಯಾಕ್ಟರಿಗಳೇ ಭಾರತದಿಂದ ಬೀಫ್ ರಪ್ತು ಮಾಡುವ ಪ್ರಮುಖ ಕಂಪನಿಗಳಾಗಿದೆ. ಹಾಗಾಗಿ ಜನ ಸಾಮಾನ್ಯರು ಬಿಜೆಪಿಯ ಭಾವನಾತ್ಮಕ ವಿಚಾರಗಳಿಗೆ ಬಲಿ ಬೀಳಬಾರದೆಂದು ಆಗ್ರಹಿಸಿದ್ದಾರೆ.

ಅದಲ್ಲದೇ ಸ್ವತಃ ಭರತ್ ಶೆಟ್ಟಿಯೆ ಶಾಸಕನಾದ ನಂತರ ಕೋಟಿಗಟ್ಟಲೆ ಅಕ್ರಮ ಬೇನಾಮಿ ಹೆಸರಿನಲ್ಲಿ ಆಸ್ತಿ ಸಂಪಾದಿಸಿದ ಬಗ್ಗೆ ಜನ ಸಾಮಾನ್ಯರೆಡೆಯಲ್ಲಿ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ.

ಹಾಗಾಗಿ ಶಾಸಕರು ತಮ್ಮ ಆಸ್ತಿಯ ಬಗ್ಗೆ ಸಂಬಂಧಪಟ್ಟ ಇಲಾಖೆಯ ನಿಷ್ಪಕ್ಷಪಾತ ಅಧಿಕಾರಿಗಳಿಂದ ತನಿಖೆಗೆ ಆದೇಶಿಸಲಿ ಅದು ಬಿಟ್ಟು ಉತ್ತರ ಪ್ರದೇಶದ ರೀತಿಯಲ್ಲಿ ದಕ್ಷಿಣ ಕನ್ನಡದಲ್ಲಿ ಕ್ರೌರ್ಯ ನಡೆಸಬಹುದು ಎಂಬ ಕನಸು ನನಸಾಗದು ಎಂದು ಅವರು ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

LATEST NEWS

ಭಾರತೀಯರಿಗೆ ಬಿಗ್ ಶಾ*ಕ್; ಸೌದಿ ಅರೇಬಿಯಾದಲ್ಲಿ ಹೊಸ ವೀಸಾ ನಿಯಮಗಳು ಜಾರಿ

Published

on

ಮಂಗಳೂರು/ ನವದೆಹಲಿ : ಸೌದಿ ಅರೇಬಿಯಾ ಸರಕಾರವು ದೇಶದಲ್ಲಿ ವಿದೇಶಿ ಉದ್ಯೋಗಿಗಳಿಗೆ ವೀಸಾ ನಿಯಮಗಳನ್ನು ಬಿಗಿಗೊಳಿಸಿದೆ. ಅದರಲ್ಲೂ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡಲು ಹೋಗುವ ಭಾರತೀಯರಿಗೆ ಶೈಕ್ಷಣಿಕ ಮತ್ತು ವೃತ್ತಿಪರ ಅರ್ಹತೆಗಳ ಪರಿಶೀಲನೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ಸೌದಿ ಸರ್ಕಾರವು ತನ್ನ ‘ವಿಷನ್ 2030’ ಅನ್ನು ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ನೇತೃತ್ವದಲ್ಲಿ ನಡೆಸುತ್ತಿದೆ. ಇದು ತನ್ನ ನಾಗರಿಕರಿಗೆ ಹೆಚ್ಚಿನ ಉದ್ಯೋಗವಕಾಶ ಕಲ್ಪಿಸುವತ್ತ ಗಮನ ಹರಿಸುತ್ತಿದ್ದು, ಸೌದಿ ಕಾರ್ಮಿಕ ವಲಯದಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ.

ನಿಯಮಗಳ ಪ್ರಕಾರ,  ಎಲ್ಲಾ ಭಾರತೀಯ ಕಾರ್ಮಿಕರು ತಮ್ಮ ಉದ್ಯೋಗದ ಪ್ರಾಮಾಣಿಕತೆ ಹಾಗೂ ಅರ್ಹತೆಯನ್ನು ದೃಢೀಕರಿಸಲು ಕೆಲವು ಹೊಸ ದಾಖಲೆ ಪ್ರಕ್ರಿಯೆ ಅನುಸರಿಸಬೇಕು. ಈ ಕ್ರಮ ದೇಶದಲ್ಲಿ ಕಾರ್ಮಿಕ ನಿಯಮಗಳನ್ನು ಸುಧಾರಿಸಲು ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಪಾರದರ್ಶಕತೆಯನ್ನು ಖಾತ್ರಿಪಡಿಸಲು ರಚಿಸಲಾಗಿದೆ.  ಈ ಹೊಸ ನೀತಿಯು ಭಾರತೀಯ ಕಾರ್ಮಿಕರ ಕೆಲಸದ ಪರಿಸ್ಥಿತಿಯನ್ನು  ಸುಧಾರಿಸುವಲ್ಲಿ ಮಹತ್ವದ  ಪಾತ್ರ ವಹಿಸುತ್ತದೆ ಎಂದು ಸೌದಿ ಸರ್ಕಾರ ತಿಳಿಸಿದೆ.

ಇದನ್ನೂ ಓದಿ : WATCH : ಆ ಒಂದು ರೀಲ್ಸ್‌ನಿಂದ ಗಿನ್ನಿಸ್ ದಾಖಲೆ ಬರೆದ ಕೇರಳದ ಯುವಕ

ಸೌದಿ ಅರೇಬಿಯಾ ವಿದೇಶಿ ಕಾರ್ಮಿಕರ ನಿವಾಸ ಪರವಾನಗಿ ನವೀಕರಣ ಮತ್ತು ನಿರ್ಗಮನ – ಪುನಃಪ್ರವೇಶ ವೀಸಾದ ಅವಧಿ ವಿಸ್ತರಣೆಗೆ ಸಂಬಂಧಿಸಿದ ನಿಯಮಗಳನ್ನು ತಿದ್ದುಪಡಿ ಮಾಡಿದೆ. ಸೌದಿ ಅರೇಬಿಯಾದಲ್ಲಿ ಕೆಲಸ ವೀಸಾ ಪಡೆಯಲು ಭಾರತೀಯ ನಾಗರಿಕರು ಈಗ ತಮ್ಮ ವೃತ್ತಿ ಮತ್ತು ಶೈಕ್ಷಣಿಕ ಅರ್ಹತೆಗಳ ಪೂರ್ವಪರಿಶೀಲನೆ ಪ್ರಕ್ರಿಯೆ ಮೂಲಕ ಹೋದರೆ ಮಾತ್ರ ಸಾಧ್ಯ.

Continue Reading

LATEST NEWS

ಅಮೆರಿಕ ಗಡಗಡ… ಒಳಾಂಗಣದಲ್ಲಿ ಟ್ರಂಪ್ ಪ್ರಮಾಣವಚನ

Published

on

ಮಂಗಳೂರು/ವಾಷಿಂಗ್ಟನ್ : ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಸೋಮವಾರ (ಜನವರಿ 20ರಂದು) ಕ್ಯಾಪಿಟಲ್ ಕಟ್ಟಡದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಮೆರಿಕ ಅಧ್ಯಕ್ಷರ ಪದಗ್ರಹಣವು ಈ ರೀತಿ ಒಳಾಂಗಣದಲ್ಲಿ ಆಗುತ್ತಿರುವುದು 40 ವರ್ಷಗಳಲ್ಲಿ ಇದೇ ಮೊದಲು.

ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆಯಿಂದಾಗಿ ಟ್ರಂಪ್ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸ್ಥಳ ಬದಲಾಗಿದೆ. ಹೊರಾಂಗಣದಲ್ಲಿ ನಡೆಯಬೇಕಿದ್ದ ಪ್ರಮಾಣವಚನ ಕಾರ್ಯಕ್ರಮವು US ಕ್ಯಾಪಿಟಲ್ ಒಳಗೆ ನಡೆಯಲಿದೆ. ಅದಕ್ಕೆ ಕಾರಣ ವಿಪರೀತ ಚಳಿ. 40 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವ್ಯತ್ಯಾಸ ಆಗಿದೆ. ಈ ಸಮಾರಂಭವು ಸಾಂಪ್ರದಾಯಿಕವಾಗಿ ಯುಎಸ್ ಕ್ಯಾಪಿಟಲ್‌ನ ಹೊರಗಿನ ನ್ಯಾಷನಲ್ ಮಾಲ್‌ನಲ್ಲಿ ನಡೆಯುತ್ತಿತ್ತು.

ಇದನ್ನೂ ಓದಿ:WATCH : ಆ ಒಂದು ರೀಲ್ಸ್‌ನಿಂದ ಗಿನ್ನಿಸ್ ದಾಖಲೆ ಬರೆದ ಕೇರಳದ ಯುವಕ

‘ಆರ್ಕ್ಟಿಕ್ ಸ್ಪೋಟದಿಂದಾಗಿ ತೀವ್ರ ಚಳಿಗಾಳಿ ಬೀಸುತ್ತಿದ್ದು, ಜನರು ಪರಿತಪಿಸುತ್ತಿದ್ದಾರೆ. ನಾಗರಿಕರು ಸಂಕಷ್ಟ ಅನುಭವಿಸುವುದನ್ನು ನೋಡಲಾರೆ. ಹಾಗಾಗಿ, ಪ್ರಮಾಣವಚನ, ಪ್ರಾರ್ಥನೆ ಮತ್ತು ಇತರ ಭಾಷಣ ಕಾರ್ಯಕ್ರಮಗಳನ್ನು ಯುಎಸ್ ಕ್ಯಾಪಿಟಲ್‌ಗೆ ಸ್ಥಳಾಂತರಿಸುವಂತೆ ಆದೇಶಿಸಿದ್ದೇನೆ’ ಎಂದು ಸಾಮಾಜಿಕ ಮಾಧ್ಯಮ ವೇದಿಕೆ ‘ಟ್ರುತ್’ನಲ್ಲಿ ಟ್ರಂಪ್ ಹೇಳಿದ್ದಾರೆ.

ಜನವರಿ 20ರಂದು ಟ್ರಂಪ್ ಪ್ರಮಾಣವಚನ ನಡೆಯುವ ಸಮಯಕ್ಕೆ ವಾಷಿಂಗ್ಟನ್‌ನ ತಾಪಮಾನವು-7 ಡಿಗ್ರಿ ಸೆಲ್ಸಿಯಸ್ ಇರಲಿದೆ. ಆದರೆ, ತಂಪು ಗಾಳಿ ಬೀಸುವುದರಿಂದ ವಿಪರೀತ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

40 ವರ್ಷಗಳ ಹಿಂದೆ ಇದೇ ರೀತಿ ಆಗಿತ್ತು
ಅಮೆರಿಕದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಕೂಡ ಚಳಿಯಿಂದಾಗಿ ಪ್ರಮಾಣ ವಚನ ಸಮಾರಂಭದ ಸ್ಥಳ ಬದಲಾಯಿಸಿದ್ದರು. 1985ರಲ್ಲೂ ಇದೇ ರೀತಿ ಆಗಿತ್ತು. ರಿಪಬ್ಲಿಕನ್ ಪಕ್ಷದಿಂದ ಚುನಾಯಿತರಾಗಿದ್ದ ರೊನಾಲ್ಡ್ ರೇಗನ್ ಅವರು ತೀವ್ರ ಚಳಿಯಿಂದಾಗಿ ಪದಗ್ರಹಣ ಕಾರ್ಯಕ್ರಮವನ್ನು ರೋಟುಂಡಾದಲ್ಲಿ ನಡೆಸಿದ್ದರು. ಆಗ, ತಾಪಮಾನವು-23 ಡಿಗ್ರಿ ಸೆಲ್ಸಿಯಸ್‌ನಿಂದ-29 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿತ್ತು.

Continue Reading

LATEST NEWS

ಸುಖ ದಾಂಪತ್ಯ ಜೀವನಕ್ಕೆ ಸರಳ ಸೂತ್ರಗಳು ಇಲ್ಲಿದೆ

Published

on

ವೈವಾಹಿಕ ಜೀವನ ಎಂದ ಮೇಲೆ ಸಮಸ್ಯೆಗಳು ಸಾಮಾನ್ಯ. ಆದರೆ ಅದನ್ನೆಲ್ಲಾ ಸಹಿಸಿಕೊಂಡು ಹೊಂದಿಕೊಂಡು ಹೋಗಬೇಕು. ಕೋಪ ಇದ್ದರೂ ತಾಳ್ಮೆ ಮಾತ್ರ ಬೆಟ್ಟದಷ್ಠಿರಬೇಕು. ಮದುವೆಯ ನಂತರ ಜೀವನ ಚೆನ್ನಾಗಿರಲು ನಮ್ಮಲ್ಲಿಯೇ ಕೆಲವೊಂದು ಬದಲಾವಣೆಗಳು ಅಗತ್ಯ. ಆ ಕೆಲವೊಂದು ಸರಳ ನಿಯಮಗಳನ್ನು ನಾವು ಪಾಲಿಸಿದ್ದೇ ಆದಲ್ಲಿ ವೈವಾಹಿಕ ಜೀವನ ಬಹಳ ಸುಂದರವಾಗಿರುತ್ತದೆ.

ಎಲ್ಲಾ ವಿಷಯದಲ್ಲೂ ಪರಸ್ಪರ ಬೆಂಬಲಿಸಿ ಒಬ್ಬರಿಗೊಬ್ಬರು ಸಲಹೆ ನೀಡುತ್ತಾ ಇರಬೇಕು. ಉತ್ತಮ ಕೇಳುಗರಾಗಿ ಮತ್ತು ಉತ್ತಮ ಮಾತುಗಾರರಾಗಿ ಇರಬೇಕು. ಅಂದರೆ, ಬೇಸರದ ಸಮಯದಲ್ಲೂ, ಸಂತೋಷದ ಸಮಯದಲ್ಲೂ ಒಬ್ಬರಿಗೊಬ್ಬರು ಸಾಥ್ ನೀಡಿ ಬೆನ್ನೆಲುಬಂತಿರಬೇಕು. ಸಂಗಾತಿ ಜೊತೆ ಏನಾದರೂ ಭಿನ್ನಾಭಿಪ್ರಾಯ ಉಂಟಾದಲ್ಲಿ ಅದನ್ನು ತುಂಬಾ ದಿನಗಳವರೆಗೆ ಮುಂದುವರೆಸಿಕೊಂಡು ಹೋಗದೆ ಅಂದೇ ಮರೆತು ಮುಂದುವರೆಯಬೇಕು, ಜೀವನದಲ್ಲಿ ಏರಿಳಿತಗಳು ಸಾಮಾನ್ಯ. ಇದರ ಹೊರತಾಗಿಯೂ ಸಂಬಂಧದಲ್ಲಿ ಬದ್ಧರಾಗಿದ್ದು ಜೀವನದ ಪರೀಕ್ಷೆಯಲ್ಲಿ ಗೆಲ್ಲೋದಕ್ಕೆ ಪ್ರಯತ್ನ ಪಡುತ್ತಿರಬೇಕು. ಸಂಗಾತಿ ಜೊತೆ ವ್ಯವಹಾರ, ಕೆಲಸ, ಸಂಬಳದ ಬಗ್ಗೆ ಮುಕ್ತವಾಗಿ ಮಾತನಾಡಬೇಕು. ಉಳಿತಾಯ, ಹೂಡಿಕೆ, ಖರ್ಚು ಇವೆಲ್ಲವುಗಳ ಬಗ್ಗೆ ಮಾತನಾಡಿದ್ದೇ ಆದಲ್ಲಿ ಅನಗತ್ಯ ಒತ್ತಡದಿಂದ ಪಾರಾಗಬಹುದು.

ಮದುವೆಯೊಂದಿಗೆ ಬರುವ ಜವಾಬ್ದಾರಿಗಳು ಪ್ರೀತಿಯನ್ನು ಕಡಿಮೆ ಮಾಡುವಂತೆ ಇರಬಾರದು. ಅವಾಗವಾಗ ಸಣ್ಣ ಸಣ್ಣ ಸರ್ಪ್ರೈಸ್ ನೀಡುತ್ತಾ ಕಿಸ್, ಡೇಟ್ ನೈಟ್, ಸಣ್ಣ ಟ್ರಿಪ್ ಮಾಡುತ್ತಿರಬೇಕು. ಸಂಬಂಧ ಗಟ್ಟಿಯಾಗಿರಬೇಕು ಅಂದರೆ ಅದರಲ್ಲಿ ನಗುವಿಗೂ ಜಾಗಬೇಕು. ಹಾಗಾಗಿ ಒಬ್ಬರನ್ನೊಬ್ಬರು ಕಾಲೆಳೆಯುತ್ತಾ, ಜೋಕ್ಸ್ ಮಾಡಿ ನಗುತ್ತಾ ಇದ್ದರೆ ಜೀವನದಲ್ಲಿ ತುಂಬಾನೆ ಖುಷಿಯಾಗಿರಬಹುದು. ಪ್ರತೀ ಕ್ಷಣ ಮಾತನಾಡುವಾಗ ಸಭ್ಯ ಭಾಷೆ ಬಳಸಿ ಗೌರವಯುತವಾಗಿರಿಸಿಕೊಳ್ಳುವುದು ಸಂಬಂಧದಲ್ಲಿ ತುಂಬಾನೆ ಮುಖ್ಯ. ಒಬ್ಬರನ್ನು ಅವಮಾನಿಸಿದರೆ ಅಥವಾ ನೋಯಸಿದರೆ ಸಂಬಂಧ ಹಳಸಿ ಹೋಗಬಹುದು. ಹಾಗೆಯೇ ಜಗಳವಾಡಿದ ನಂತರ ಅಥವಾ ಪರಸ್ಪರ ವಾದಿಸಿದ ನಂತರ ಕೋಪದಲ್ಲಿ ಮಲಗಬಾರದು. ವಿಷಯಗಳನ್ನು ಆರಾಮವಾಗಿ ಕೂತು ಚರ್ಚಿಸಿ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಸ್ವಾರಿ ಕೇಳಿ ಮಲಗಬೇಕು, ಇದರಿಂದ ಸಂಬಂಧ ಮತ್ತೂ ಗಟ್ಟಿಯಾಗಿರುತ್ತದೆ.

Continue Reading

LATEST NEWS

Trending

Exit mobile version