ಬಂಟ್ವಾಳ: ಕೇರಳ ಗಡಿಯಲ್ಲಿ ಹೆಚ್ಚಿನ ಭದ್ರತೆ ಜೊತೆಗೆ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲಾಗುವುದು ಎಂದು ಮೇಲ್ದರ್ಜೆಗೇರಿದ ವಿಟ್ಲ ಪೊಲೀಸ್ ಠಾಣೆಯ ಪ್ರಥಮ ಪೊಲೀಸ್ ಇನ್ಸ್ಪೆಕ್ಟ್ಟರ್ ನಾಗರಾಜ್ ಎಚ್.ಇ ಹೇಳಿದ್ದಾರೆ.
ಶುಕ್ರವಾರ ಅಧಿಕಾರ ಸ್ವೀಕರಿಸಿದ ಅವರು, ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ವಿಟ್ಲ ಠಾಣೆಯಲ್ಲಿ ಈ ಹಿಂದೆ ಕೆಲಸ ಮಾಡಿದ ಅನುಭವ ಇದೆ. ಜೊತೆಗೆ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕೇರಳ ಗಡಿಯುದ್ದಕ್ಕೂ ಭದ್ರತೆ ಹೆಚ್ಚಿಸಲಾಗುವುದು. ಸಿಬ್ಬಂದಿ ಕೊರತೆ ಇದ್ದು, ಅದನ್ನು ನೀಗಿಸುವ ಕೆಲಸಕ್ಕೆ ಪ್ರಯತ್ನ ಮಾಡಲಾಗುವುದು. ಇದೇ ವೇಳೆ ಸಾರ್ವಜನಿಕರಿಗೆ ಅಕ್ರಮ ಚಟುವಟಿಕೆ ಬಗ್ಗೆ ಮಾಹಿತಿ ಇದ್ದರೆ ಹಂಚಿಕೊಳ್ಳಿ ಎಂದು ಮನವಿ ಮಾಡಿದರು. ಹೊಸದಾಗಿ ನೇಮಕವಾದ ಪೊಲೀಸ್ ಇನ್ಸ್ಪೆಕ್ಟ್ಟರ್ ನಾಗರಾಜ್ ಎಚ್.ಇ ಅವರಿಗೆ ವಿಟ್ಲ ನಾಗರಿಕರು ಹೂ ನೀಡಿ ಸ್ವಾಗತಿಸಿದರು.