Home ಕರ್ನಾಟಕ ವಾರ್ತೆ ದಕ್ಷಿಣ ಕನ್ನಡದಲ್ಲಿ ಸೆಕ್ಷನ್ 144 ಜಾರಿ; ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ

ದಕ್ಷಿಣ ಕನ್ನಡದಲ್ಲಿ ಸೆಕ್ಷನ್ 144 ಜಾರಿ; ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ

ದಕ್ಷಿಣ ಕನ್ನಡದಲ್ಲಿ ಸೆಕ್ಷನ್‌ 144 ಜಾರಿ; ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ

ಮಂಗಳೂರು: ಜಾಗತಿಕವಾಗಿ ಕೊರೋನಾ ಸೋಂಕು ಇನ್ನಿಲ್ಲದಂತೆ ಕಾಡುತ್ತಿದ್ದು, ಭಾರತಕ್ಕೂ ನುಗ್ಗಿ ಇನ್ನಿಲ್ಲದ ಸಂಕಷ್ಟಕ್ಕೆ ಜನತೆಯನ್ನು ಗುರಿ ಮಾಡಿದೆ.

ವಿದೇಶದಲ್ಲಿ ಸಾಕಷ್ಟು ವೈದ್ಯಕೀಯ ವ್ಯವಸ್ಥೆಗಳಿದ್ದರೂ ತೀವ್ರ ಗತಿಯಲ್ಲಿ ಸೋಂಕು ಹಬ್ಬಿದೆ. ಕರ್ನಾಟಕ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕು ಹರಡದಂತೆ ಸಾಕಷ್ಟು ವ್ಯವಸ್ಥೇ ಮಾಡಲಾಗಿದೆ.

ಇದೀಗ ಜಿಲ್ಲಾಧಿಕಾರಿ ಸೆಕ್ಷನ್ 144 ನಿರ್ಬಂಧಕಾಜ್ಞೆ ಹೊರಡಿಸಿದ್ದಾರೆ. ಇದು ಲಘುವಾಗಿ ತೆಗೆದುಕೊಳ್ಳುವ ವಿಚಾರ ಅಲ್ಲ. ಇದು ನಮ್ಮೆಲ್ಲರ ಮೇಲೆ ಜಾರಿಯಾಗಿರುವ ಕಾನೂನಿನ ಅಂಶವಾಗಿದ್ದು, ಇದನ್ನು ಉಲ್ಲಂಘಿಸಿದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಹರ್ಷ ತಿಳಿಸಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಯಾವುದೇ ತುರ್ತು ಸೇವೆ ಬಿಟ್ಟು ಯಾರೂ ಕೂಡಾ ಮನೆಯಿಂದ ಹೊರಬರುವ ಅಗತ್ಯವಿಲ್ಲ. ಮನೆಯಿಂದ ಅಗತ್ಯವಿದ್ದಲ್ಲಿ ಮಾತ್ರ ಹೊರಬನ್ನಿ. ಮಂದಿರ, ಮಸೀದಿಗಳಲ್ಲಿ ಪ್ರಾರ್ಥನೆ ಬಂದ್ ಮಾಡಲಾಗಿದೆ.

ಖಾಸಗಿ, ಸರಕಾರಿ ವಾಹನ ಸಂಚಾರ ಇಲ್ಲ. ಸಾರ್ವಜನಿಕರ ಸುರಕ್ಷತೆಗಾಗಿ ಕರ್ಫ್ಯೂ ಆದೇಶವನ್ನು ಹೊರಡಿಸಲಾಗಿದ್ದು, ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಸರಕಾರ ಎಲ್ಲರ ಸುರಕ್ಷತೆಗೆ ಕ್ರಮ ವಹಿಸಿದೆ.

ಯಾರೂ ಕೂಡಾ ಕಾನೂನು ಉಲ್ಲಂಘಿಸದೆ ಜಿಲ್ಲಾಧಿಕಾರಿ ಹೊರಡಿಸಿದ ಆದೇಶವನ್ನು ಪಾಲನೆ ಮಾಡಬೇಕು ಎಂದು ಕಮಿಷನರ್ ಎಚ್ಚರಿಸಿದ್ದಾರೆ.

- Advertisment -

RECENT NEWS

ಕೇರಳ-ಕರ್ನಾಟಕ ಬಾರ್ಡರ್ ಸಮಸ್ಯೆ ಪರಿಹಾರಕ್ಕೆ ಪತ್ರದ ಮೂಲಕ ದೇವೇಗೌಡ ಮನವಿ

ಕೇರಳ-ಕರ್ನಾಟಕ ಬಾರ್ಡರ್ ಸಮಸ್ಯೆ ಪರಿಹಾರಕ್ಕೆ ಪತ್ರದ ಮೂಲಕ ದೇವೇಗೌಡ ಮನವಿ ಮಂಗಳೂರು: ಸದ್ಯ ಕೊರೊನಾ ವೈರಸ್ ಹಿನ್ನಲೆ ಕೇರಳ ಹಾಗೂ ಕರ್ನಾಟಕ ಗಡಿ ಸಮಸ್ಯೆ ತಾರಕಕ್ಕೇರಿದ್ದು, ಇದೀಗ ಈ ಸಮಸ್ಯೆ ಪರಿಹರಿಸಲು ಮಾಜಿ ಪ್ರಧಾನಿ...

ಎಂಅರ್ ಜಿ ಗ್ರೂಪ್ ನ‌ ಕೆ.ಪ್ರಕಾಶ್ ಶೆಟ್ಟಿಯರಿಂದ 1 ಕೋಟಿ.ರೂ.ವೆಚ್ಚದ ದಿನಸಿ ಕಿಟ್ ವಿತರಣೆ

ಎಂಅರ್ ಜಿ ಗ್ರೂಪ್ ನ‌ ಕೆ.ಪ್ರಕಾಶ್ ಶೆಟ್ಟಿಯರಿಂದ 1 ಕೋಟಿ.ರೂ.ವೆಚ್ಚದ ದಿನಸಿ ಕಿಟ್ ವಿತರಣೆ ಮಂಗಳೂರು: ಎಮ್ ರ್ ಜಿ ಗ್ರೂಪ್ ನ ಆಡಳಿತ ನಿರ್ದೇಶಕ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ ಅವರ ಉದಾರ ದಾನವಾಗಿ...

ಕೊರೊನಾ ವಿರುದ್ದದ ಸಮರಕ್ಕೆ ತನ್ನ ಪಾಕೆಟ್‌ ಮನಿಯನ್ನೇ ದೇಣಿಗೆ ನೀಡಿದ 5 ವರ್ಷದ ಬಾಲಕ..!

ಕೊರೊನಾ ವಿರುದ್ದದ ಸಮರಕ್ಕೆ ತನ್ನ ಪಾಕೆಟ್‌ ಮನಿಯನ್ನೇ ದೇಣಿಗೆ ನೀಡಿದ 5 ವರ್ಷದ ಬಾಲಕ..! ಮಂಗಳೂರು : ಇಂದು ಐದು ವರ್ಷದ ಬಾಲಕನೊಬ್ಬ ಸಿಎಂ ಪರಿಹಾರ ನಿಧಿಗೆ ತನ್ನ ಪಾಕೆಟ್ ಮನಿಯನ್ನೇ ದೇಣಿಗೆ ನೀಡಿ...

ದೆಹಲಿ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 11 ಮಂದಿಗೆ ಕೊರೊನಾ ಪಾಸಿಟಿವ್

ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 11 ಮಂದಿಗೆ ಕೊರೊನಾ ಪಾಸಿಟಿವ್ ಬೀದರ್: ಬೀದರ್‌ನಲ್ಲಿ 11 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ 11 ಮಂದಿಯೂ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಾಗಿದ್ದಾರೆ. ಬೀದರ್‌ನಿಂದ ದೆಹಲಿಗೆ ತೆರಳಿದ್ದ...