ಮಂಗಳೂರು/ದೆಹಲಿ: ಪೂರ್ವ ದೆಹಲಿಯ ಶಕರ್‌ಪುರ ಪ್ರದೇಶದ ಬಾಡಿಗೆ ಮನೆಯಲ್ಲಿ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಬಂಧಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಕೆಲವು ತಿಂಗಳುಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಒಂಟಿ ಮಹಿಳೆಯ ಮಲಗುವ ಕೋಣೆ ಹಾಗೂ ಬಾತ್ ರೂಮ್‌ನಲ್ಲಿ ಕರಣ್ ರಹಸ್ಯ ಕ್ಯಾಮರ ಅಳವಡಿಸಿರುವುದು ತಿಳಿದು ಬಂದಿದೆ.
ಯುವತಿ ಹೊರಗೆ ಹೋಗುವಾಗ ಅವರ ಮನೆಯ ಕೀಯನ್ನು ಓನರ್ ಮಗ ಕರಣ್ ಕೈಯಲ್ಲಿ ಕೊಟ್ಟು ಹೋಗುತ್ತಿದ್ದಳು. ಇದನ್ನೇ ಬಂಡವಾಳ ಮಾಡಿಕೊoಡ ಕಿರಾತಕ ಅವಳ ರೂಮ್‌ನಲ್ಲಿ ಸಿಸಿ ಕ್ಯಾಮರಾವನ್ನು ಬಲ್ಬ್‌ನ ಹೋಲ್ಡರ್‌ನಲ್ಲಿ ಅಳವಡಿಸಿ ಇಟ್ಟಿದ್ದಾನೆ. ಯುವತಿಗೆ ವಾಟ್ಸಾಪ್‌ನಲ್ಲಿ ಕೆಲವು ಅಶ್ಲೀಲ ಫೋಟೋ, ವಿಡಿಯೋಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಯುವತಿ ಪೊಲೀಸ್ ಉಪ ಕಮಿಷನರ್ ಅಪೂರ್ವ ಗುಪ್ತಾ ಗೆ ಮಾಹಿತಿ ನೀಡಿದ್ದಾಳೆ. ನಂತರ ದೂರಿನ ಅನ್ವಯ ಪೊಲೀಸ್ ತಂಡವು ಸಂಪೂರ್ಣ ಹುಡುಕಾಟ ನಡೆಸಿದಾಗ, ಯುವತಿ ಮಲಗುವ ಕೋಣೆಯ ಬಲ್ಬ್ ಹೋಲ್ಡರ್‌ನಲ್ಲಿ ಹಾಗೂ ಬಾತ್ ರೂಮ್‌ನಲ್ಲಿ ಅಳವಡಿಸಿದ್ದ ಕ್ಯಾಮರಾಗಳು ಪತ್ತೆಯಾಗಿವೆ.
ವಿಚಾರಣೆ ವೇಳೆ ಕರಣ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ತಿಳಿಸಿದ್ದಾರೆ. ಆರೋಪಿ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಮೂರು ಸ್ಪೈ ಕ್ಯಾಮೆರಾಗಳನ್ನು ಖರೀದಿಸಿ, ಅವುಗಳಲ್ಲಿ ಒಂದನ್ನು ಯುವತಿಯ ಮಲಗುವ ಕೋಣೆಯಲ್ಲಿ ಮತ್ತು ಇನ್ನೊಂದನ್ನು ಬಾತ್‌ರೂಮ್‌ನಲ್ಲಿ ಇಟ್ಟಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಕರಣ್ ಕೈಯಲ್ಲಿದ್ದ ಮತ್ತೊಂದು ಸ್ಪೈ ಕ್ಯಾಮೆರಾವನ್ನು ಹಾಗೂ ರೆಕಾರ್ಡ್ ಮಾಡಿದ ವೀಡಿಯೊಗಳ ಸಂಗ್ರಹಕ್ಕೆ ಬಳಸಿದ ಎರಡು ಲ್ಯಾಪ್‌ಟಾಪ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಿಎನ್‌ಎಸ್‌ನ ಸೆಕ್ಷನ್ 77 ಅಡಿಯಲ್ಲಿ ಶಕರ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪದವೀಧರನಾಗಿದ್ದು, ಕಳೆದ ಏಳು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.
ಮಂಗಳೂರು/ದೆಹಲಿ: ಇತ್ತೀಚೆಗೆ ಆತ್ಮ*ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳು ಸಾ*ವಿಗೆ ಶರಣಾಗುವುದನ್ನು ಹೆಚ್ಚಾಗಿ ಕಾಣುತ್ತಿದ್ದೇವೆ. ಇದೀಗ 19 ವರ್ಷದ ವಿದ್ಯಾರ್ಥಿನಿ ಕಟ್ಟಡದ 5ನೇ ಮಹಡಿಯಿಂದ ಹಾ*ರಿ ಆ*ತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ದೆಹಲಿಯ ಸಂಗಮ್ ವಿಹಾರ್ ಪ್ರದೇಶದಲ್ಲಿ ನಿನ್ನೆ (ಸೆ.28) ಮಧ್ಯಾಹ್ನ ನಡೆದಿದೆ.
ಅವಳ ಯಾವುದೇ ಸೂ*ಸೈಡ್ ನೋಟ್ ಪತ್ತೆಯಾಗಿಲ್ಲ. ಕೇವಲ ಸಿಸಿಟಿವಿ ದೃಶ್ಯಾವಳಿಯಲ್ಲಿ ಆಕೆ ಆರು ಅಂತಸ್ತಿನ ಕಟ್ಟಡದ ಐದನೇ ಮಹಡಿಯಲ್ಲಿ ನಿಂತಿರುವುದು ಕಂಡುಬಂದಿದೆ.
ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿನಿಯನ್ನು ಬಾತ್ರಾ ಆಸ್ಪತ್ರೆಗೆ ಕರೆದೊಯ್ದು ನಂತರ ಮಜೀದಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ವೇಳೆ ಆಕೆ ಸಾವ*ನ್ನಪ್ಪಿದ್ದಾಳೆ.ಘಟನಾ ಸ್ಥಳದಲ್ಲಿ ಕ್ರೈಂ ತಂಡ ಪರಿಶೀಲನೆ ನಡೆಸಿದ್ದು, ಮೃ*ತದೇಹವನ್ನು ಮರ*ಣೋತ್ತರ ಪರೀಕ್ಷೆಗಾಗಿ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರ*ಕರಣ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಂಗಳೂರು/ನವದೆಹಲಿ: ಮುಂಜಾನೆಯೇ ನವದೆಹಲಿಯಲ್ಲಿ ದು*ರ್ಘನೆಯೊಂದು ಸಂಭವಿಸಿದೆ. ಬಾಡಿಗೆ ಮನೆಯಲ್ಲಿದ್ದ ತಂದೆ ಹಾಗೂ ನಾಲ್ಕು ಹೆಣ್ಣು ಮಕ್ಕಳ ಶ*ವ ಪತ್ತೆಯಾಗಿರುವ ಘಟನೆ ನಿನ್ನೆ (ಸೆ.27) ಬೆಳಕಿಗೆ ಬಂದಿದೆ.
ರಂಗಪುರಿ ಎಂಬ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ತಂದೆ ಹೀರಾ ಲಾಲ್ (50) ಹಾಗೂ ಪುತ್ರಿಯರಾದ ನೀತು (18), ನಿಶಿ (15), ನೀರು (10), ನಿಧಿ (8) ಎಂಬುವುದಾಗಿ ಗುರುತಿಸಲಾಗಿದೆ.
ಕಾರ್ಪೆಂಡರ್ ವೃತ್ತಿ ಮಾಡುತ್ತಿದ್ದ ಹೀರಾ ಲಾಲ್ ಅವರ ಹೆಂಡತಿ ಕಳೆದ ಒಂದು ವರ್ಷದ ಹಿಂದೆ ಮರ*ಣಹೊಂದಿದ್ದು, ಬಳಕ 4 ಹೆಣ್ಣು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದರು. ನಾಲ್ವರೂ ಅಂಗವೈಕಲ್ಯದಿಂದ ಬಳಲುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಸೆ.24 ರಂದು ಹೀರಾ ಲಾಲ್ ಮನೆಗೆ ಪ್ರವೇಶಿಸಿರಿವುದು ಸಿಸಿ ಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಅದಾದ ಬಳಿಕ ಯಾರೂ ಒಳಗೆ ಪ್ರವೇಶಿಸಲಿಲ್ಲ ಹಾಗೂ ಯಾರೂ ಹೊರಗೆ ಹೊಗಿರಲಿಲ್ಲ ಎಂಬುವುದು ತನಿಖೆಯಲ್ಲಿ ತಿಳಿದು ಬಂದಿದೆ.
ದುರ್ವಾಸನೆ ಬರುತ್ತಿದ್ದ ಹಿನ್ನಲೆಯಲ್ಲಿ ನೆರೆಮನೆಯವರು ದೂರು ನೀಡಿದ್ದು, ಪೊಲೀಸರು ತಪಾಸಣೆ ನಡೆಸಿದ ವೇಳೆ ನಾಲ್ವರು ಪುತ್ರಿಯರ ಜೊತೆ ತಂದೆ ಮೃತ*ಪಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹೊಸದಿಲ್ಲಿ/ಮಂಗಳೂರು: ಹುಟ್ಟುಹಬ್ಬ ಅಂದ್ರೆ ಎಲ್ಲರಿಗೂ ಸಂಭ್ರಮದ ದಿನ. ಅದರಲ್ಲೂ ಕಛೇರಿಯಲ್ಲಿ ಹುಟ್ಟುಹಬ್ಬದ ದಿನದಂದು ರಜೆ ಕೊಟ್ಟರೆ..? ಅದು ಕೂಡಾ ಒಂದು ದಿನವಲ್ಲ ಎರಡು ದಿನ.. ಹುಟ್ಟುಹಬ್ಬದ ದಿನ ಹಾಗೂ ಮರುದಿನ ಕಂಪೆನಿಯೊಂದು ಸಿಬಂದಿಗಳಿಗೆ ರಜೆ ನೀಡುತ್ತೇ ಅಂದ್ರೆ ನಂಬುತ್ತೀರಾ?
ಹೌದು, ಇಲ್ಲೊಂದು ಕಂಪೆನಿ ಎಲ್ಲಾ ಸಿಬ್ಬಂದಿಗಳಿಗೆ ಹುಟ್ಟು ಹಬ್ಬದ ದಿನದಂದು ಹಾಗೂ ಅದರ ಮರುದಿನ ರಜೆಯನ್ನು ಕಡ್ಡಾಯವಾಗಿ ಘೋಷಣೆ ಮಾಡಿದೆ. ಇಂತಹದೊಂದು ಅಪರೂಪದ ರಜೆ ಘೋಷಣೆ ಮಾಡಿರುವುದು ‘ಎಕ್ಸ್‌ಪೆಡಿಫೈ’ ಎಂಬ ಕಂಪೆನಿ. ಇದು ಅಚ್ಚರಿ ಎನಿಸಿದ್ರೂ ನಿಜವಾದ ಸಂಗತಿ. ಇಂತಹ ನೀತಿಯನ್ನು ರೂಪಿಸಿದ ವಿಶ್ವದ ಮೊದಲ ಕಂಪೆನಿ ಎಂಬ ಹೆಗ್ಗಳಿಕೆಗೆ ‘ಎಕ್ಸ್‌ಪೆಡಿಫೈ’ ಕಂಪೆನಿ ಪಾತ್ರವಾಗಿದೆ.
ಕಂಪೆನಿ ಸಿಇಒ ಅಭಿಜಿತ್ ಚಕ್ರವರ್ತಿ
ಜನ್ಮದಿನ ಹಾಗೂ ಮರುದಿನ ದೊರೆಯುವ ರಜೆಗೆ ‘ಬರ್ತ್ ಡೇ ಪ್ಲಸ್ ಒನ್’ ಎಂದು ಹೆಸರಿಸಲಾಗಿದೆ. ಈ ರಜೆಗೆ ಪ್ರಮುಖ ಕಾರಣವೆಂದರೆ ‘ಎಕ್ಸ್‌ಪೆಡಿಫೈ’ ಕಂಪೆನಿಯ ಸಿಇಒ ಆದ ಅಭಿಜಿತ್ ಚಕ್ರವರ್ತಿ. ಇವರು ಸಾಮಾನ್ಯ ಉದ್ಯೋಗಿಯಾಗಿದ್ದ ವೇಳೆ ಅವರಿಗಾದ ಕಹಿ ಅನುಭವದಿಂದಾಗಿ ಅವರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ಈ ಹಿಂದೆ ಅಭಿಜಿತ್ ರವರು ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅವರ ಬಾಸ್ ಜೊತೆ ಬರ್ತ್‌ಡೇ ಸೆಲೆಬ್ರೇಷನ್‌ಗಾಗಿ ರಜೆ ಕೊಡುವಂತೆ ಕೇಳಿಕೊಂಡಿದ್ದಾರೆ. ‘ನಿಮಗೆ ರಜೆ ಯಾಕೆ ಬೇಕು?’ ಎಂದು ನನ್ನ ಹಳೆಯ ಬಾಸ್ ಕೇಳಿದ್ದರು. ನಾನು ಹುಟ್ಟುಹಬ್ಬ ಆಸಚರಿಸಲು ಎಂದು ಹೇಳಿದಾಗ ನಾನೇನೋ ಅಪರಾಧ ಮಾಡಿದೇ ಎಂಬ ರೀತಿಯಲ್ಲಿ ವಿಚಿತ್ರವಾಗಿ ನನ್ನತ್ತ ತಿರುಗಿ ನೋಡಿದ್ದರು ಎಂದು ಅಭಿಜಿತ್ ಚಕ್ರವರ್ತಿ ತಮ್ಮ ಹಿಂದಿನ ದಿನಗಳನ್ನು ಮೆಲಕು ಹಾಕಿದ್ದಾರೆ.
ಆ ದಿನವೇ ಅಭಿಜಿತ್ ರವರು ಮುಂದೊಂದುದಿನ ನಾನು ಕಂಪೆನಿ ತೆರೆದಾಗ ಎಲ್ಲಾ ಸಿಬಂದಿಗಳಿಗೂ ಹುಟ್ಟುಹಬ್ಬ ದಿನದಂದು ಮಾತ್ರವಲ್ಲದೇ ಅದರ ಮರುದಿನವೂ ರಜೆಯನ್ನು ನೀಡಲು ನಿರ್ಧರಿಸಿದ್ದರಂತೆ.
ರಜೆಯೇ ಗಿಫ್ಟ್:
ಸಿಬಂದಿಗಳು ಹುಟ್ಟುಹಬ್ಬದ ಅವರಿಗೆ ಉಡುಗೊರೆ ನೀಡಬೇಕೆ ಹೊರತು ರಜೆ ಮಾಡಿದಕ್ಕಾಗಿ ಅಗಿ ಸಂಬಳ ಕಟ್ ಮಾಡುವುರ ಮೂಲಕ ಟೆಂಶನ್ ಕೊಡುವುದಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಇನ್ನು ಮುಂದಿನ ದಿನಗಳಲ್ಲಿ ಕಂಪೆನಿ ಬೆಳೆದಂತೆ ರಜೆಯನ್ನು ಎರಡು ದಿನಗಳಿಂದ ಮೂರು ದಿನಗಳಿಗೆ ವಿಸ್ತರಿಸಿ ‘ಬರ್ತ್‌ಡೇ ಪ್ಲಸ್ ಟೂ’ ಎಂದು ಹೆಸರಿಸಲಾಗುತ್ತದೆ ಎಂದು ಅಭಿಜಿತ್ ಚಕ್ರವರ್ತಿಯವರು ಲಿಂಕ್ಡ್‌ಇನ್‌ನಲ್ಲಿ ತಮ್ಮ ಕಂಪೆನಿಗೆ ನೀಡುವ ರಜೆ ವೃತ್ತಾಂತದ ಬಗ್ಗೆ ವಿವರಿಸಿದ್ದಾರೆ.
ಎಕ್ಸ್‌ಪೆಡಿಫೈ ಕಂಪೆನಿ ಸಿಇಒ ಅಭಿಜಿತ್ ಚಕ್ರವರ್ತಿ ಯವರ ಈ ಕಾರ್ಯಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇದ್ದರೆ ನಿಮ್ಮಂಥ ಬಾಸ್ ಇರಬೇಕು ಎಂದು ಹಾಡಿ ಹೊಗಳಿದ್ದಾರೆ.