Connect with us

LATEST NEWS

ವಿಚ್ಛೇದನ ನೀಡದೆ ಎರಡನೇ ಮದುವೆ; ಮಂಟಪದಲ್ಲೇ ಮೊದಲ ಪತ್ನಿ ಕೈಗೆ ಸಿಕ್ಕಿಬಿದ್ದ ಪತಿ

Published

on

ಮಂಗಳೂರು/ಬಿಹಾರ : ವಿವಾಹಿತ ಪುರುಷನೊಬ್ಬ ವಿಚ್ಛೇದನ ನೀಡುವ ಮೊದಲೇ ಗುಟ್ಟಾಗಿ ಎರಡನೇ ಮದುವೆಯಾಗಲು ಹೋಗಿ ಮೊದಲ ಪತ್ನಿಯ ಕೈಲಿ ತಗ್ಲಾಕೊಂಡ ಘಟನೆ ಬಿಹಾರದ ಭಾಗಲ್ಪುರದಲ್ಲಿ ನಡೆದಿದೆ.ಗಂಡ ಎರಡನೇ ಮದುವೆ ಆಗ್ತಿದ್ದಾನೆ ಎಂಬ ವಿಚಾರ ತಿಳಿದು ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟ ಮೊದಲ ಪತ್ನಿ ಹೈ ಡ್ರಾಮವನ್ನೇ ಸೃಷ್ಟಿಸಿ ಮದುವೆಯನ್ನು ನಿಲ್ಲಿಸಿದ್ದಾಳೆ.

 

 

ಭಾರತದಲ್ಲಿ ಬಹುಪತ್ನಿತ್ವಕ್ಕೆ ನಿಷೇಧವಿದೆ. ಮೊದಲ ಪತ್ನಿ/ಪತಿಗೆ ಡಿವೋರ್ಸ್‌ ಕೊಡುವ ಮುಂಚೆ ಮತ್ತೊಂದು ಮದುವೆಯಾಗುವಂತಿಲ್ಲ ಎಂಬ ಕಾನೂನು ಇದ್ದರೂ ಕೆಲವರು ಗುಟ್ಟಾಗಿ ಎರಡು, ಮೂರು ಮದುವೆಯಾಗುವವರು ಇದ್ದಾರೆ. ಈಗ ನಡೆದಿರುವ ಘಟನೆಯೂ ಅಂತಹದ್ಧೇ ಆಗಿದೆ. ಮನೋಜ್ ಪಂಡಿತ್ ಎಂಬ ವ್ಯಕ್ತಿ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡುವ ಮುಂಚೆಯೇ ಇನ್ನೊಂದು ಮದುವೆಯಾಗಲು ಹೊರಟಿರುವ ಸುದ್ಧಿಯನ್ನು ತಿಳಿದ ಮೊದಲ ಪತ್ನಿ ಮದುವೆ ಮಂಟಪಕ್ಕೆ ಬಂದು ಮದುವೆ ನಿಲ್ಲಿಸಿದ ಸುದ್ಧಿ ಫುಲ್ ವೈರಲ್ ಆಗುತ್ತಿದೆ.

ಘಟನೆ ವಿವರ : 

ಮನೋಜ್ ಪಂಡಿತ್ ಎಂಬಾತ ಜಾರ್ಖಂಡ್ ನಿವಾಸಿಯಾಗಿದ್ದು, ಸೇಖಾ ದೇವಿಯನ್ನು ಪ್ರೀತಿಸಿ ಮದುವೆಯಾಗಿದ್ದನು. ಕೆಲ ಸಮಯಗಳ ಬಳಿಕ ಈ ದಂಪತಿಗಳ ನಡುವೆ ಕೆಲವೊಂದಿಷ್ಟು ಮನಸ್ತಾಪಗಳು ಹುಟ್ಟಿಕೊಂಡವು. ರಾಜಿ ಸಂದಾನದ ಮೂಲಕ ಹಿರಿಯರು ಇದನ್ನು ಸರಿಪಡಿಸಲು ಯತ್ನಿಸಿದರು ಇದು ಸಾಧ್ಯವಾಗಲಿಲ್ಲ. ಕೊನೆಗೆ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಲಯದಲ್ಲಿ ಇವರಿಬ್ಬರ ಡಿವೋರ್ಸ್‌ ಪ್ರಕರಣ ನಡೆಯುತ್ತಿರುವಾಗಲೇ ಮನೋಜ್ ತಂದೆ ಬಸುಕಿ ಪಂಡಿತ್ ಮತ್ತು ಕುಟುಂಬ ಸದಸ್ಯರು ಆತನಿಗೆ ಎರಡನೇ ಮದುವೆಯನ್ನು ಏರ್ಪಡಿಸಿದ್ದಾರೆ. ಈ ವಿಷಯ ತಿಳಿದ ಸೇಖಾದೇವಿ ತನ್ನ ತಾಯಿಯೊಂದಿಗೆ ಮದುವೆ ಮನೆಗೆ ನುಗ್ಗಿ ಆಗಬೇಕಿದ್ದ ಮದುವೆಯನ್ನೇ ನಿಲ್ಲಿಸಿದ್ದಾಳೆ.

ಮನೋಜ್ ಕುಟುಂಬಸ್ಥರು ಮೊದಲನೇ ಮದುವೆಯ ಕಥೆಯನ್ನು ವಧುವಿನ ಕುಟುಂಬಸ್ಥರಿಂದ ಮುಚ್ಚಿಟ್ಟು ಗುಟ್ಟಾಗಿ ಮತ್ತೊಂದು ಮದುವೆ ಮಾಡಲು ಹೊರಟಿದ್ದರು. ಡಿಸೆಂಬರ್‌ 10 ರಂದು ಮದುವೆ ನಿಶ್ಚಯವಾಗಿತ್ತು. ಅರಶಿನ ಶಾಸ್ತ್ರ, ಮೆಹಂದಿ ಸೇರಿದಂತೆ ವಿವಾಹ ಪೂರ್ವ ವಿಧಿವಿಧಾನಗಳು ನಡೆಯುತ್ತಿರುವಾಗಲೇ ಮದುವೆ ಮನೆಗೆ ಎಂಟ್ರಿ ಕೊಟ್ಟ ಸೇಖಾ ದೇವಿ ದೊಡ್ಡ ರಂಪಾಟವನ್ನೇ ನಡೆಸಿದ್ದಾಳೆ. ಹೀಗೆ ರಂಪಾಟದಲ್ಲಿ ಮನೋಜ್‌ನ ಮೊದಲ ಮದುವೆಯ ವಿಷಯ ತಿಳಿದ ವಧುವಿನ ಮನೆಯವರು ಆಘಾತಕ್ಕೊಳಗಾದರು ಮತ್ತು ಇದು ಇದು ಈತನಿಗೆ ಎರಡನೇ ಮದುವೆಯೆಂದು ತಿಳಿದು ತಕ್ಷಣವೇ ಆಗಬೇಕಿದ್ದ ಮದುವೆಯನ್ನು ರದ್ದುಗೊಳಿಸಿದ್ದಾರೆ.

LATEST NEWS

ಎಸ್ಎಂ ಕೃಷ್ಣಗೆ ‘ಕರ್ನಾಟಕ ರತ್ನ’ ನೀಡುವಂತೆ ಮನವಿ ಮಾಡಿದ ವಿಪಕ್ಷ ನಾಯಕ

Published

on

ಮಂಗಳೂರು/ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಅಜಾತ ಶತ್ರು, ಸರಳ ಸಜ್ಜನಿಕೆಯ ರಾಜಕಾರಣಿ ಎಸ್.ಎಂ.ಕೃಷ್ಣ ವಿಧಿವಶರಾಗಿದ್ದಾರೆ. ತಮ್ಮ 92 ವಯಸ್ಸಿಗೆ ತಮ್ಮ ಸುದೀರ್ಘ ಬಾಳಪಯಣವನ್ನು ಕೊನೆಗೊಳಿಸಿದ್ದಾರೆ.
ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದ ಧೀಮಂತ ನಾಯಕರೆನಿಸಿಕೊಂಡಿದ್ದ ಎಸ್ಎಂ ಕೃಷ್ಣ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ವಿಪಕ್ಷ ನಾಯಕ ಆರ್. ಅಶೋಕ್ ಮನವಿ ಮಾಡಿದ್ದಾರೆ.

ಆರ್. ಅಶೋಕ್ ಟ್ವೀಟ್

ಈ ಬಗ್ಗೆ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಆರ್. ಅಶೋಕ್ “ಕರ್ನಾಟಕ ರತ್ನ “ಎಸ್.ಎಂ.ಕೃಷ್ಣ”

ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದ ಧೀಮಂತ ನಾಯಕರು, ಮಾಜಿ ಮುಖ್ಯಮಂತ್ರಿ ಶ್ರೀ ಎಸ್‌.ಎಂ.ಕೃಷ್ಣ ಅವರ ನಿಧನದಿಂದ ಇಡೀ ಕರ್ನಾಟಕ ಶೋಕತಪ್ತವಾಗಿದ್ದು, ನಾಡಿನುದ್ದಕ್ಕೂ ಜನಸಾಮಾನ್ಯರು ಕಂಬನಿ ಮಿಡಿಯುತ್ತಿದ್ದಾರೆ.
ಶಾಸಕ, ಸಚಿವ, ಸ್ಪೀಕರ್‌, ಉಪಮುಖ್ಯಮಂತ್ರಿ, ಮುಖ್ಯಮಂತ್ರಿ, ಹೀಗೆ ನಾನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಜೊತೆಗೆ, ಜನರ ಬದುಕಿನ ಸುಧಾರಣೆಗಾಗಿ, ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಅವರು ಅಪಾರವಾಗಿ ಶ್ರಮಿಸಿದ್ದರು. ರಾಜಧಾನಿ ಬೆಂಗಳೂರಿಗೆ ಸಿಲಿಕಾನ್‌ ವ್ಯಾಲಿ ಹಾಗೂ ಐಟಿ ಕೇಂದ್ರದ ಸ್ಥಾನಮಾನ ನೀಡುವಲ್ಲಿ ಅವರ ಪಾತ್ರ ಗಣನೀಯ. ವಿದೇಶಾಂಗ ಸಚಿವರಾಗಿ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲೂ ಸೇವೆ ಸಲ್ಲಿಸಿ ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

ಇದನ್ನೂ ಓದಿ: ಎಸ್.ಎಂ.ಕೃಷ್ಣ ಅಂತಿಮ ಯಾತ್ರೆ: ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ, ಸಿಎಂ ಸಿದ್ದರಾಮಯ್ಯ ಭಾಗಿ

ಶ್ರೀ ಎಸ್‌.ಎಂ.ಕೃಷ್ಣ ಅವರು ನಾಡಿನ ಪ್ರಗತಿಗೆ ನೀಡಿದ ಕೊಡುಗೆಯನ್ನು ಗುರುತಿಸಿ, ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ʼಕರ್ನಾಟಕ ರತ್ನʼ (ಮರಣೋತ್ತರ) ನೀಡುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯ. ಆದ್ದರಿಂದ ತಾವು ಈ ಸಲಹೆಯನ್ನು ಪರಿಗಣಿಸಿ ಶ್ರೀಯುತರಿಗೆ ʼಕರ್ನಾಟಕ ರತ್ನʼ ನೀಡಿ ಗೌರವ ಸಲ್ಲಿಸಬೇಕೆಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡುತ್ತಿದ್ದೇನೆ ಎಂದಿದ್ದಾರೆ.

ಹುಟ್ಟೂರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಎಸ್.ಎಂ.ಕೃಷ್ಣ ಅವರ ಅಂತ್ಯಕ್ರಿಯೆ ನೆರವೆರಿದೆ.

 

Continue Reading

International news

ಭ್ರಷ್ಟಾಚಾರ ಪ್ರಕರಣ: ವಿಚಾರಣೆಗೆ ಹಾಜರಾದ ಇಸ್ರೇಲ್ ಪ್ರಧಾನಿ

Published

on

ಮಂಗಳೂರು/ಟೆಲ್ ಅವೀವ್: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮೊದಲ ಬಾರಿಗೆ ಟೆಲ್ ಅವೀವ್ ನ ನ್ಯಾಯಾಲಯವೊಂದರಲ್ಲಿ ಮಂಗಳವಾರ ವಿಚಾರಣೆಗೆ ಹಾಜರಾದರು.

ಈ ಮೂಲಕ ಅಧಿಕಾರದಲ್ಲಿರುವಾಗಲೇ ಅಪರಾಧ ಪ್ರಕರಣ ಎದುರಿಸುತ್ತಿರುವ ಮೊದಲ ಪ್ರಧಾನಿ ಎಂದೆನಿಸಿದ್ದಾರೆ.ನ್ಯಾಯಧೀಶರಲ್ಲೊಬ್ಬರು ನೆತನ್ಯಾಹು ಅವರಿಗೆ ಕಟಕಟೆಯೊಳಗೆ ಕುಳಿತುಕೊಳ್ಳುವ ಇಲ್ಲವೇ ನಿಲ್ಲಲು ಅವಕಾಶವಿರುವುದಾಗಿ ತಿಳಿಸಿದರು. ನೆತನ್ಯಾಹು ಪದೇಪದೇ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದರು. ವಂಚನೆ, ಭ್ರಷ್ಟಾಚಾರ ಮತ್ತು ನಂಬಿಕೆ ದ್ರೋಹ ಆರೋಪಗಳಿಗೆ ಸಂಬಂಧಿಸಿದಂತೆ ಅವರ ವಿರುದ್ದ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.

ಇದನ್ನೂ ಓದಿ:ದಂಡ ತಪ್ಪಿಸಿಕೊಳ್ಳಲು ವಾಹನ ಸವಾರರ ಹೊಸ ಪ್ಲಾನ್: ಸ್ಪೂನ್ ಅಸ್ತ್ರ ! 

ಇದು ಅಲ್ಲದೆ ತನ್ನ ಹಾಗೂ ಕುಟುಂಬವನ್ನು ಓಲೈಸುವಂತೆ ವರದಿಗಳನ್ನು ಪ್ರಕಟಿಸುವುದಕ್ಕೆ ಪ್ರತಿಫಲವಾಗಿ ಮಾಧ್ಯಮ ಮಾಲಕರಿಗೆ ಅನುಕೂಲಕರವಾಗುವಂತಹ ಕಾನೂನು, ನಿಯಮಗಳನ್ನು ಜಾರಿಗೊಳಿಸಿದ ಆರೋಪವನ್ನು ಕೂಡಾ ಅವರು ಎದುರಿಸುತ್ತಿದ್ದಾರೆ.

ರಾಜಕೀಯ ಲಾಭ ಮಾಡಿಕೊಟ್ಟಿರುವುದಕ್ಕೆ ಪ್ರತಿಯಾಗಿ ಶ್ರೀಮಂತರಿಂದ ಬೆಲೆಬಾಳುವ ವಸ್ತುಗಳನ್ನು ಪಡೆದಿರುವ ಪ್ರಕರಣದಲ್ಲಿ ನೆತನ್ಯಾಹು ಮತ್ತು ಅವರ ಪತ್ನಿ ಸಾರಾ ಆರೋಪಿಗಳಾಗಿದ್ದಾರೆ.

2020 ಮೇ ನಲ್ಲಿ ಆರಂಭವಾಗಿದ್ದ ವಿಚಾರಣೆಯು ಪದೇ ಪದೇ ಮುಂದೂಡಲ್ಪಟ್ಟಿತ್ತು. ಮೇಲ್ಮನವಿ ಪ್ರಕ್ರಿಯೆಯ ಕಾರಣದಿಂದ ವಿಚಾರಣೆ ವಿಳಂಬವಾಗಿತ್ತು. ಗಾಜಾ ಮತ್ತು ಲೆಬೆನಾನ್ ಜೊತೆಗಿನ ಯುದ್ದದ ಕಾರಣಕ್ಕೆ ವಿಚಾರಣೆ ಎದುರಿಸಲು ಸಾಧ್ಯವಾಗುತ್ತಿಲ್ಲ ಎಂದು ನೆತಾನ್ಯಾಹು ಹಲವಾರು ಬಾರಿ ಮನವಿ ಮಾಡಿದ್ದರು.

ಈ ಬಗ್ಗೆ ಮಾತನಾಡಿರುವ ನೆತನ್ಯಾಹು ‘ಈ ದಿನಕ್ಕಾಗಿ ನಾನು ಎಂಟು ವರ್ಷಗಳಿಂದ ಕಾಯುತ್ತಿದ್ದೆ. ನನ್ನ ವಿರುದ್ದದ ಆಧಾರರಹಿತ ಮತ್ತು ಸುಳ್ಳು ಆರೋಪಗಳಿಗೆ ಉತ್ತರ ನೀಡಲು ಮತ್ತು ಸತ್ಯವನ್ನು ಹೇಳಲು ಕಾತರನಾಗಿದ್ದೆ’ ಎಂದು ಹೇಳಿದ್ದಾರೆ.

Continue Reading

DAKSHINA KANNADA

ತುಳುವರ ಬದುಕು, ಸಂಸ್ಕೃತಿ, ಸಂಘರ್ಷದ ಕಥಾನಕದ ದಸ್ಕತ್‌ ಚಲನಚಿತ್ರ ತೆರೆಗೆ !!

Published

on

ಉಡುಪಿ: ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಅರ್ಪಿಸುವ ತುಳು ಚಲನಚಿತ್ರ ‘ದಸ್ಕತ್’ ಡಿಸೆಂಬರ್ 13ರಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಕಾಮಿಡಿ ಕಿಲಾಡಿಗಳು ಖ್ಯಾತಿಯ ಅನೀಶ್ ಪೂಜಾರಿ ವೇಣೂರು ತಿಳಿಸಿದ್ದಾರೆ.

ಉಡುಪಿ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ತುಳುವರ ಬದುಕು, ಸಂಸ್ಕೃತಿ, ಸಂಘರ್ಷದ ಕಥಾನಕವನ್ನು ಚಿತ್ರಿಸುವ ‘ದಸ್ಕತ್’ ನೈಜ ಘಟನೆಯನ್ನಾಧರಿಸಿದ ಚಿತ್ರವಾಗಿದ್ದು, ಬೆಳ್ತಂಗಡಿ ತಾಲೂಕಿನ ವೇಣೂರು, ನಾರಾವಿ, ಅಂಡಿಂಜೆ, ಕೊಕ್ರಾಡಿ ಮುಂತಾದ ಪ್ರದೇಶಗಳಲ್ಲಿ ಚಿತ್ರಿತವಾಗಿದೆ ಎಂದು ಚಿತ್ರಕಥೆಯನ್ನು ಬರೆದಿರುವ ಅನೀಶ್ ಪೂಜಾರಿ ತಿಳಿಸಿದರು. ರಾಘವೇಂದ್ರ ಕುಡ್ವ ಚಿತ್ರದ ನಿರ್ಮಾಪಕರಾಗಿದ್ದು, ಸಂತೋಷ್ ಆಚಾರ್ಯ ಗುಂಪಲಾಜಿ ಅವರ ಛಾಯಾಗ್ರಹಣವಿದೆ. ಸಮರ್ಥನ ಎಸ್.ರಾವ್ ಚಿತ್ರದ ಸಂಗೀತ ನಿರ್ದೇಶಕರಾಗಿದ್ದಾರೆ.

ಚಿತ್ರದ ತಾರಾಗಣದಲ್ಲಿ ದೀಕ್ಷಿತ್ ಕೆ.ಅಂಡಿಂಜೆ, ನೀರಜ್ ಕುಂಜರ್ಪ, ಮೋಹನ್ ಶೇಣಿ, ಮಿಥುನ್ ರಾಜ್, ಭವ್ಯ ಪೂಜಾರಿ, ಚಂದ್ರಹಾಸ ಉಲ್ಲಾಳ್, ನವೀನ್ ಬೋಂದೇಲ್, ಯೋಗೀಶ್ ಶೆಟ್ಟಿ ಚೇತನ್ ಪೀಲಾರ್, ತಿಮ್ಮಪ್ಪ ಕುಲಾಲ್ ಮುಂತಾದವರು ನಟಿಸಿದ್ದಾರೆ ಎಂದರು. ಡಿ.13ರಂದು ಉಡುಪಿ, ಮಂಗಳೂರು, ಪುತ್ತೂರು, ಕಾರ್ಕಳ, ಬೆಳ್ತಂಗಡಿಗಳ ಸುಮಾರು 15 ಸಿಂಗಲ್ ಥಿಯೇಟರ್ ಹಾಗೂ ಮಲ್ಟಿಫ್ಲೆಕ್ಸ್ ಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ನಟ ಅರ್ಜುನ್ ಕಾಪಿಕಾಡ್, ಚಿತ್ರ ವಿತರಕ ಸಚಿನ್ ಉಪ್ಪಿನಂಗಡಿ, ನಿರ್ಮಾಫಕ ರಾಘವೇಂದ್ರ ಪುತ್ರ ರಾಹುಲ್ ಕುಡ್ವ, ನಟ ದೀಕ್ಷಿತ್‌ , ನಟಿ ಭವ್ಯಾ ಪೂಜಾರಿ, ಕಾರ್ಯಕಾರಿ ನಿರ್ಮಾಪಕ ಪ್ರಜ್ಞೇಶ್‌ ಶೆಟ್ಟಿ ಮೊದಲಾದವರಿದ್ದರು.

Continue Reading

LATEST NEWS

Trending

Exit mobile version