Connect with us

    LATEST NEWS

    ವಿಜಯ್ ಮಲ್ಯಗೆ ಶಾಕ್ ಕೊಟ್ಟ ಸೆಬಿ; 3 ವರ್ಷಗಳ ಕಾಲ ಸೆಕ್ಯುರಿಟೀಸ್ ಮಾರುಕಟ್ಟೆಯಿಂದ ನಿಷೇಧ

    Published

    on

    ಮಂಗಳೂರು/ ನವದೆಹಲಿ : ಭಾರತದ ಬ್ಯಾಂಕ್ ಗಳಿಗೆ ವಂಚಿಸಿ ಪರಾರಿಯಾಗಿರುವ ವಿಜಯ್​​​ ಮಲ್ಯಗೆ ಭಾರತದ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿಯು (Securities and Exchange Board of India) ದೊಡ್ಡ ಆಘಾ*ತ ನೀಡಿದೆ. ಮೂರು ವರ್ಷಗಳ ಕಾಲ ಸೆಬಿ, ಸೆಕ್ಯುರಿಟೀಸ್ ಮಾರುಕಟ್ಟೆಯಿಂದ ನಿರ್ಬಂಧಿಸಿದೆ. ಮೂರು ವರ್ಷಗಳವರೆಗೆ ಸೆಬಿ ಪಟ್ಟಿ ಮಾಡಿರುವ ಸಂಸ್ಥೆಯೊಂದಿಗೆ ಯಾವುದೇ ವ್ಯವಹಾರ ನಡೆಸಬಾರದು ಎಂದು ಹೇಳಲಾಗಿದೆ. ಇದರಿಂದಾಗಿ ಭಾರತದ ಸೆಕ್ಯುರಿಟೀಸ್‌ ಮಾರುಕಟ್ಟೆಯಲ್ಲಿ ವಿಜಯ್‌ ಮಲ್ಯ ಯಾವುದೇ ವಹಿವಾಟು ಮಾಡುವಂತಿಲ್ಲ.


    ಈಗಾಗಲೇ ಕಿಂಗ್‌ಫಿಷರ್ ಏರ್‌ಲೈನ್ಸ್‌ ವಂಚನೆ ಆರೋಪವನ್ನು ಹೊತ್ತಿರುವ ಮಲ್ಯ ಭಾರತದಿಂದ ಪರಾರಿಯಾಗಿ ಯುಕೆಯಲ್ಲಿ ನೆಲೆಸಿದ್ದಾರೆ. ಅವರನ್ನು ಯುಕೆಯಿಂದ ಗಡಿಪಾರು ಮಾಡುವಂತೆ ಭಾರತ ಸರ್ಕಾರ ಯುಕೆ ಸರ್ಕಾರಕ್ಕೆ ಮನವಿ ಮಾಡಿದೆ. 2016 ರಿಂದ ಮಲ್ಯ ಅವರು ಯುಕೆಯಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ ವಿಜಯ್‌ ಮಲ್ಯ ಪುತ್ರ ಸಿದ್ಧಾರ್ಥ್‌ ಮಲ್ಯ ಅವರ ಮದುವೆಯು ಅದ್ಧೂರಿಯಾಗಿ ನೆರವೇರಿತ್ತು.

    ಜನವರಿ 2006 ರಿಂದ ಮಾರ್ಚ್ 2008 ರವರೆಗೆ ಸೆಬಿ ನಡೆಸಿದ ತನಿಖೆಯಲ್ಲಿ ಮಲ್ಯ ಅವರು ಮ್ಯಾಟರ್‌ಹಾರ್ನ್ ವೆಂಚರ್ಸ್, ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಗೆ ತಮ್ಮ ಕಂಪನಿಗಳಾದ ಹರ್ಬರ್ಟ್‌ಸನ್ಸ್ ಲಿಮಿಟೆಡ್ ಮತ್ತು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಗಳ ಷೇರುಗಳನ್ನು ರಹಸ್ಯವಾಗಿ ವ್ಯಾಪಾರ ಮಾಡಲು ಮುಂದಾಗಿದ್ದರು ಎಂದು ಸೆಬಿ ಹೇಳಿದೆ.

    UBS AG ಯ ವಿವಿಧ ಖಾತೆಗಳ ಮೂಲಕ ಮ್ಯಾಟರ್‌ಹಾರ್ನ್ ವೆಂಚರ್ಸ್ ಅನ್ನು ಬಳಸಿಕೊಂಡು ಭಾರತೀಯ ಸೆಕ್ಯುರಿಟೀಸ್ ಮಾರುಕಟ್ಟೆಗೆ ಹಣವನ್ನು ರವಾನಿಸಿದರು. ಇದಕ್ಕಾಗಿ ತಮ್ಮ ಹೆಸರನ್ನು ಮರೆಮಾಚಿ ಬೇರೆ ಬೇರೆ ಖಾತೆಗಳಿಂದ ಹಣವನ್ನು ರವಾನಿಸಿದ್ದಾರೆ ಎಂದು ಹೇಳಿದೆ. ಮ್ಯಾಟರ್‌ಹಾರ್ನ್ ವೆಂಚರ್ಸ್ ಕಂಪನಿಯನ್ನು ಸಾರ್ವಜನಿಕ ಷೇರುದಾರ ಎಂದು ತಪ್ಪಾಗಿ ಗುರುತಿಸಲಾಗಿದೆ. ಆದರೂ ಅದರ 9.98 ಶೇಕಡಾ ಷೇರುಗಳು ಪ್ರವರ್ತಕ ವರ್ಗಕ್ಕೆ ಸೇರಿದೆ ಎಂಬುದನ್ನು ಸೆಬಿ ತನಿಖೆಯಲ್ಲಿ ಹೇಳಿದೆ.

    ನೋಟೀಸ್ ನೀಡಿದ ಸೆಬಿ :

    ಸೆಬಿ ತನ್ನ 37 ಪುಟಗಳ ತನಿಖಾ ವರದಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಇದೀಗ ಸೆಬಿ ಮುಖ್ಯ ಜನರಲ್ ಮ್ಯಾನೇಜರ್ ಅನಿತಾ ಅನೂಪ್ ಅವರು ಮಲ್ಯ ಅವರಿಗೆ ನೋಟಿಸ್ ನೀಡಿದ್ದಾರೆ. ಈ ನೋಟೀಸ್​​​ನಲ್ಲಿ ತಮ್ಮ ವಹಿವಾಟುಗಳು / ನಿಧಿಯ ಹರಿವಿನ ಅಕ್ರಮವಾಗಿದ್ದು, ಷೇರುಗಳಲ್ಲಿ ಪರೋಕ್ಷವಾಗಿ ವ್ಯಾಪಾರ ಮಾಡುವ ಯೋಜನೆ ಹಾಕಿದ್ದು , ನಮ್ಮ ಮಾನದಂಡಗಳನ್ನು ಧಿಕ್ಕರಿಸಿ ಭಾರತೀಯ ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿ ಅಕ್ರಮವಾಗಿ ವ್ಯಾಪಾರ ಮಾಡಲು ಮುಂದಾಗಿದ್ದೀರಾ. ಈ ಕೃತ್ಯಗಳು ಮೋಸ ಮತ್ತು ವಂಚನೆ ಮಾತ್ರವಲ್ಲದೆ ಸೆಕ್ಯುರಿಟೀಸ್ ಮಾರುಕಟ್ಟೆಯ ಸಮಗ್ರತೆಗೆ ಬೆದರಿಕೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ : ಒಲಿಂಪಿಕ್ಸ್‌ ಗೇಮ್‌ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರ ಇದು..!
    ಇದಕ್ಕಾಗಿ ಮಲ್ಯ ಅವರನ್ನು ಸೆಬಿಯು ಸೆಕ್ಯುರಿಟೀಸ್ ಮಾರುಕಟ್ಟೆಯನ್ನು ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ ಹಾಗೂ ಸೆಕ್ಯುರಿಟಿಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಖರೀದಿಸುವುದು, ಮಾರಾಟ ಮಾಡುವುದು ಅಥವಾ ಇತರ ರೀತಿಯಲ್ಲಿ ವ್ಯವಹಾರ ನಡೆಸುವುದು ಹಾಗೂ ಯಾವುದೇ ರೀತಿಯಲ್ಲಿ ಸೆಕ್ಯುರಿಟೀಸ್ ಮಾರುಕಟ್ಟೆಗೆ ಪ್ರವೇಶ ನಡೆಸದಂತೆ ನಿರ್ಬಂಧಿಸಲಾಗಿದೆ. ಇದರ ಜತೆಗೆ ಮಲ್ಯ ಅವರನ್ನು ತನಿಖೆ ಒಳಪಡಿಸುವಂತೆ ಆದೇಶ ನೀಡಲಾಗಿದೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಬಂಟ್ವಾಳ :ನವದಂಪತಿ ಪ್ರಯಾಣಿಸುತ್ತಿದ್ದ ಕಾರು ಅಪಘಾ*ತ; ಪತ್ನಿ ಸಾ*ವು; ಪತಿ ಗಂಭೀ*ರ

    Published

    on

    ಬಂಟ್ವಾಳ : ನವದಂಪತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ ಸಂಭವಿಸಿ ಪತ್ನಿ ಸಾ*ವನ್ನಪ್ಪಿದ್ದು, ಪತಿ ಗಂ*ಭೀರವಾಗಿ ಗಾ*ಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ ಮಂಗಳೂರು-ಬೆಂಗಳೂರು ರಸ್ತೆಯ ಬಂಟ್ವಾಳದ ತಲಪಾಡಿ ಎಂಬಲ್ಲಿ ನಡೆದಿದೆ. ಪೆರ್ನೆ ಸಮೀಪದ ಒಡ್ಯದಗಯ ನಿವಾಸಿ ಅನಿಶ್ ಕೃಷ್ಣ ಎಂಬವರ ಪತ್ನಿ ಮಾನಸ ಸಾ*ವನ್ನಪ್ಪಿದ ನವವಿವಾಹಿತೆ. ಘಟನೆಯಿಂದ ಅನಿಶ್ ಕೃಷ್ಣ ಗಂಭೀ*ರವಾಗಿ ಗಾ*ಯಗೊಂಡಿದ್ದಾರೆ.

    ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಸಿರೋಡಿನ ಕಡೆಯಿಂದ ‌ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ನವದಂಪತಿಯ ಆಲ್ಟೋ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯಿಂದ ಡಿವೈಡರ್ ಮೇಲಿನಿಂದ ಇನ್ನೊಂದು ಬದಿಗೆ ಹಾರಿದೆ. ಬಳಿಕ ಮಂಗಳೂರು ಕಡೆಯಿಂದ ಬಿಸಿರೋಡಿನ ಕಡೆಗೆ ಬರುತ್ತಿದ್ದ ಕೆ.ಎಸ್.ಆರ್‌ಟಿ.ಸಿ ಬಸ್ ಗೆ ಡಿ*ಕ್ಕಿ ಹೊಡೆದಿದೆ.

    ಡಿ*ಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಘಟನೆಯಿಂದ ಹೆದ್ದಾರಿಯಲ್ಲಿ ಕೆಲಹೊತ್ತು ಸಂಚಾರಕ್ಕೆ ಅಡಚಣೆ ಉಂಟಾಯಿತು.

    ಎರಡು ದಿನದ ಹಿಂದಷ್ಟೇ ಮದುವೆ : 

    ಸೆ.5 ರಂದು ದೇಂತಡ್ಕ ದೇವಸ್ಥಾನದಲ್ಲಿ ಮಾನಸ ಹಾಗೂ ಅನಿಶ್ ಕೃಷ್ಣ  ಮದುವೆ ನಡೆದಿತ್ತು. ಮದುವೆ ಕಾರ್ಯಕ್ರಮದ ವಿಚಾರವಾಗಿ ಇಂದು ಅಲ್ಲಿನ ಕೆಲವೊಂದು ಲೆಕ್ಕಾಚಾರ ಮಾಡಲು ದೇಂತಡ್ಕ ದೇವಸ್ಥಾನಕ್ಕೆ ಬಂದು ವಾಪಸ್ ಮಾವನ ಮನೆಗೆ ಹೋಗುವ ವೇಳೆ ಈ ‌ಘ‌ಟನೆ ನಡೆದಿದೆ ಎನ್ನಲಾಗಿದೆ. ಇಬ್ಬರು ಮಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ. ಸ್ಥಳಕ್ಕೆ ಮೆಲ್ಕಾರ್ ‌ಟ್ರಾಫಿಕ್ ಪೊಲೀಸರು ಭೇಟಿ ನೀಡಿದ್ದು,  ಪ್ರಕರಣ ದಾಖಲಿಸಿಕೊಂಡಿದ್ದಾರೆ

    Continue Reading

    LATEST NEWS

    ಲಿಫ್ಟ್ ಕೊಡುವ ಮುನ್ನ ಎಚ್ಚರ: ಡ್ರಾಪ್ ಕೇಳಿ ಚಾಕು ಇರಿದ ದು*ಷ್ಕರ್ಮಿ

    Published

    on

    ಮಂಗಳೂರು/ಬೆಂಗಳೂರು : ಇತ್ತೀಚಿಗೆ ಕ್ರೈಂ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಕೊ*ಲೆ ಮಾಡೋದಕ್ಕಂತೂ ಕಾರಣವೇ ಬೇಡ. ಕ್ಷುಲ್ಲಕ ಕಾರಣಕ್ಕಾಗಿ ಒಬ್ಬ ವ್ಯಕ್ತಿಯನ್ನು ಹ*ತ್ಯೆ ಮಾಡಲು ಹೇಸುವುದಿಲ್ಲ. ಅಂತಹುದೇ ಕೃ*ತ್ಯ ಬೆಂಗಳೂರಿನಲ್ಲಿ ನಡೆದಿದೆ. ಬೈಕ್ ನಲ್ಲಿ ಲಿಫ್ಟ್ ಕೊಟ್ಟಾತನಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ.

    ಖಾಸಗಿ ಬ್ಯಾಂಕ್ ಉದ್ಯೋಗಿ ಪಿ.ಈಶ್ವರಗೌಡ(38) ಚೂ*ರಿ ಇರಿತಕ್ಕೊಳಗಾದವರು. ರೋಹಿತ್ ಗೌಡ (24) ಚೂ*ರಿ ಇರಿದಾತ. ಈಶ್ವರಗೌಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ರೋಹಿತ್ ಗೌಡನನ್ನು ಬಂಧಿಸಲಾಗಿದೆ.

    ಅವಮಾನಕ್ಕೆ ಪ್ರತೀಕಾರ :

    ಸಾಲ ವಸೂಲಾತಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪಿ.ಈಶ್ವರಗೌಡ ಕ್ರಿಕೆಟ್ ಟೂರ್ನಮೆಂಟ್ ವೇಳೆ ರೋಹಿತ್ ಗೌಡನನ್ನು ಸಾರ್ವಜನಿಕವಾಗಿ ಅವಮಾನಿಸಿದ್ದ ಎನ್ನಲಾಗಿದೆ. ಇದಕ್ಕೆ ಪ್ರತೀಕಾರವಾಗಿ ಆರೋಪಿ ಆತನನ್ನು ಕೊ*ಲ್ಲಲು ಸಂಚು ರೂಪಿಸಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.

    ಈಶ್ವರಗೌಡ ತನ್ನ ಸ್ನೇಹಿತನೊಂದಿಗೆ ಢಾಬಾವೊಂದಕ್ಕೆ ಊಟಕ್ಕೆ ಹೋಗಿದ್ದರು. ಅವರು ಢಾಬಾದಿಂದ ಹೊರಬಂದ ನಂತರ, ಗೇಟ್‌ನಲ್ಲಿದ್ದ ಆರೋಪಿ ಡ್ರಾಪ್ ನೀಡುವಂತೆ ವಿನಂತಿಸಿದ್ದ. ಈಶ್ವರ್ ಕೂಡ ಅದೇ ದಾರಿಯಲ್ಲಿ ಹೋಗುತ್ತಿದ್ದರಿಂದ ಅವನು ಡ್ರಾಪ್ ನೀಡಲು ಒಪ್ಪಿದರು. ಸ್ವಲ್ಪ ಹೊತ್ತು ಬೈಕ್ ಹಿಂದೆ ಕುಳಿತು ಸವಾರಿ ಮಾಡಿದ ರೋಹಿತ್, ಸ್ಮಶಾನದ ಬಳಿ ನಿರ್ಜನ ಪ್ರದೇಶದಲ್ಲಿ ತಾನು ತಂದಿದ್ದ ಚಾಕುವಿನಿಂದ ಈಶ್ವರ್ ಗೆ ಇ*ರಿದಿದ್ದಾನೆ.

    ಈ ವೇಳೆ ಬೈಕ್ ಚಲಾಯಿಸುತ್ತಿದ್ದ ಈಶ್ವರ್ ರ ನಿಯಂತ್ರಣ ತಪ್ಪಿದ್ದು,  ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಚಾಕು ಇ*ರಿತದಿಂದ ಈಶ್ವರ್ ಗೆ ಗಾ*ಯವಾಗಿದೆ. ಆದರೂ ರೋಹಿತ್‌ನಿಂದ ಹರಸಾಹಸ ಮಾಡಿ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಆದರೂ ಬಿಡದ ರೋಹಿತ್ ಬೆನ್ನತ್ತಿ ಇ*ರಿದಿದ್ದಾನೆ.

    ಇದನ್ನೂ ಓದಿ : ಗಣೇಶ ವಿಗ್ರಹ ತರಲು ತೆರಳುತ್ತಿದ್ದ ಟಾಟಾ ಏಸ್ ಪಲ್ಟಿ, ಇಬ್ಬರು ಸಾ*ವು

    ಈ ವೇಳೆ ಈಶ್ವರ್ ತಪ್ಪಿಸಿಕೊಂಡು ಮುಖ್ಯರಸ್ತೆಗೆ ಬಂದು ಸಹಾಯಕ್ಕಾಗಿ ತನ್ನ ಸಹೋದರನನ್ನು ಕರೆದಿದ್ದು, ಆತನ ಸಹೋದರ ಆತನನ್ನು ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಸೇರಿಸಿದರು. ಅಷ್ಟು ಹೊತ್ತಿಗಾಗಲೇ ಆರೋಪಿ ರೋಹಿತ್ ಬೈಕ್ ನಲ್ಲಿ ಪರಾರಿಯಾಗಿದ್ದ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    ಉಡುಪಿ : ಲಲಿತಾ ಕಲ್ಕೂರ ವಿಧಿವಶ

    Published

    on

    ಉಡುಪಿ : ದಿವಂಗತ ಪ್ರೊ. ಮಂಜುನಾಥ ಕಲ್ಕೂರ ಅವರ ಪತ್ನಿ ಲಲಿತಾ ಕಲ್ಕೂರ (83) ವಿ*ಧಿವಶರಾಗಿದ್ದಾರೆ.  ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ(ಸೆ.7) ಉಡುಪಿಯ ಸ್ವಗೃಹದಲ್ಲಿ ನಿಧ*ನ ಹೊಂದಿದರು.

    ಮೃತರು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಸಹಿತ 3ಮಂದಿ ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

    Continue Reading

    LATEST NEWS

    Trending